ನವ ಭಾರತ ಯಾರ ಮುಂದೆಯೂ ತಲೆಬಾಗುವುದಿಲ್ಲ:ಮೋದಿ ಕಡಕ್ ಸಂದೇಶ

ಉಡುಪಿ: ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದೆ, ಯಾರ ಮುಂದೆಯೂ ತಲೆಬಾಗುವುದಿಲ್ಲ ಹಿಂಜರಿಯುವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಡಕ್ಕಾಗಿ ಹೇಳಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠ ಆಯೋಜಿಸಿದ್ದ
ಒಂದು ಲಕ್ಷ ಜನ ಶ್ರೀಮದ್ ಭಗವದ್ಗೀತೆಯನ್ನು ಪಠಿಸಿದ ಲಕ್ಷ ಕಂಠ ಗೀತಾ ಪಾರಾಯಣ”ದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ್ದ ವೇಳೆ ಮೋದಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಹಿಂದಿನ ಸರ್ಕಾರಗಳು ಭಯೋತ್ಪಾದಕ ದಾಳಿಯ ನಂತರ ಸುಮ್ಮನೆ ಕುಳಿತುಕೊಳ್ಳುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದೆ, ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಕಡಕ್ ಸಂದೇಶ ರವಾನಿಸಿದರು.

ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಸತ್ಯಕ್ಕಾಗಿ ಶ್ರಮಿಸಲು ಹಾಗೂ ದೌರ್ಜನ್ಯ ಎಸಗುವವರನ್ನು ಹತ್ತಿಕ್ಕುವ ಅಗತ್ಯವನ್ನು ಗೀತೆ ನಮಗೆ ಕಲಿಸುತ್ತದೆ. ನಾವು ವಸುಧೈವ ಕುಟುಂಬಕಂನಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ‘ಧರ್ಮೋ ರಕ್ಷತಿ ರಕ್ಷಿತಃ ಎಂದು ಪಠಿಸುತ್ತೇವೆ ಎಂದು ತಿಳಿಸಿದರು.

ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಮೃತರಲ್ಲಿ ಕರ್ನಾಟಕದ ಜನರು ಸಹ ಸೇರಿದ್ದಾರೆ ಎಂದು ಹೇಳಿದರು.

ಪಹಲ್ಗಾಮ್‌ ದಾಳಿಯ ನಂತರ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ ಭಾರತದ ಮಿಲಿಟರಿ ಕಾರ್ಯಾಚರಣೆ ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಸರ್ಕಾರದ ದೃಢಸಂಕಲ್ಪವನ್ನು ಇಡೀ ದೇಶ ನೋಡಿದೆ ಎಂದು ತಿಳಿಸಿದರು.

“ನಾವು ಕೆಂಪು ಕೋಟೆಯಿಂದ ಕೃಷ್ಣನ ಕರುಣೆಯ ಸಂದೇಶವನ್ನು ನೀಡುತ್ತೇವೆ ಮತ್ತು ಮಿಷನ್ ಸುದರ್ಶನ ಚಕ್ರವನ್ನು ಸಹ ಘೋಷಿಸುತ್ತೇವೆ ಎಂದು ಮೋದಿ ಹೇಳಿದರು.

ಉಡುಪಿ ಪಟ್ಟಣವು ಐದು ದಶಕಗಳ ಹಿಂದೆಯೇ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿತು. ಇದು ಇಂದು ಸ್ವಚ್ಛತೆ ಮತ್ತು ನೀರು ಸರಬರಾಜಿನ ಕುರಿತು ರಾಷ್ಟ್ರೀಯ ನೀತಿಗಳಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಪೇಜಾವರ ಮಠದ ಸ್ವಾಮಿ ವಿಶ್ವೇಶ ತೀರ್ಥರನ್ನು ಶ್ಲಾಘಿಸಿದ ಪ್ರಧಾನಿ ರಾಮ ಜನ್ಮಭೂಮಿ ಚಳವಳಿಯಲ್ಲಿ ಅವರ ಪಾತ್ರ ಎಷ್ಟು ದೊಡ್ಡದು ಎಂದು ಇಡೀ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.

ಮಧ್ವಾಚಾರ್ಯರರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮ‌ಕಾರ್ಯದಲ್ಲಿ ತೊಡಗಿವೆ. ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು ಎಂದು ಮೋದಿ ತಿಳಿಸಿದರು.

ನವ ಭಾರತ ಯಾರ ಮುಂದೆಯೂ ತಲೆಬಾಗುವುದಿಲ್ಲ:ಮೋದಿ ಕಡಕ್ ಸಂದೇಶ Read More

ನಟ ರಾಜು ತಾಳಿಕೋಟೆ ವಿಧಿವಶ

ಉಡುಪಿ: ಹಿರಿಯ ರಂಗಕರ್ಮಿ,ನಟ ರಾಜು ತಾಳಿಕೋಟೆ ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಧಾರವಾಡ ರಂಗಾಯಣ ನಿರ್ದೇಶಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಹಾಸ್ಯ ನಟನಾಗಿ, ರಂಗಕರ್ಮಿಯಾಗಿ ಅವರು ಜನಮನ ಗೆದ್ದಿದ್ದರು. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ಮೃತರಾಗಿದ್ದಾರೆ.

ನಿನ್ನೆಯಿಂದ ಮೂರು‌ ದಿನ ಶೂಟಿಂಗ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ಅವರು ನಿಧರಾಗಿದ್ದು, ಚಿತ್ರತಂಡಕ್ಕೆ ದೊಡ್ಡ ಅಘಾತ ಆಗಿದೆ.

ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲು ರಾಜು ತಾಳಿಕೋಟೆ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದಾಗ ಅ.12 ರ ರಾತ್ರಿ ಹೃದಯಾಘಾತ ಆಗಿದೆ,ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.

ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಈಗ ಒತ್ತಡ ಜಾಸ್ತಿ ಆಗಿದ್ದರಿಂದ ಮತ್ತೆ ಹಾರ್ಟ್ ಅಟ್ಯಾಕ್ ಆಗಿರಬಹುದು. ವಿಜಯಪುರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ.

ರಾಜು ತಾಳಿಕೋಟೆ ಅವರಿಗೆ
ಇಬ್ಬರು ಪತ್ನಿಯರು,ಅವರೇ ತಮ್ಮ ಪಾಲಿನ ಶಕ್ತಿ ಎಂದು ಅವರು ಹೇಳಿಕೊಳ್ಳುತ್ತಿದ್ದರು‌

ರಾಜು ತಾಳಿಕೋಟೆ ಅವರು ಮನಸಾರೆ, ಪಂಚರಂಗಿ, ಲೈಫು ಇಷ್ಟೇನೇ,ರಾಜಧಾನಿ, ಅಲೆಮಾರಿ,ಮೈನಾ,ಟೋಪಿವಾಲಾ ಮತ್ತಿತರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಿ ಜನರ ಮನ ಗೆದ್ದಿದ್ದರು.

ಭಾನುವಾರ ರಾತ್ರಿ 12 ಗಂಟೆಗೆ ರಾಜು ತಾಳಿಕೋಟೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣ ನಾನೇ ಆಸ್ಪತ್ರೆಗೆ ಕರೆದುಕೊಂಡು ಬಂದೆ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾದರು. ನಮ್ಮ ಸಿನಿಮಾದ ಶೂಟಿಂಗ್​​ನಲ್ಲಿ 2 ದಿನ ಭಾಗವಹಿಸಿದ್ದರು ಎಂದು ನಟ ಶೈನ್ ಶೆಟ್ಟಿ ಅವರು ತಿಳಿಸಿದ್ದಾರೆ.

ನಟ ರಾಜು ತಾಳಿಕೋಟೆ ವಿಧಿವಶ Read More

ಉಡುಪಿ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್

ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ದ ಸಾವಯವ ಕೃಷಿ ತಜ್ಞ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್ ಲಭಿಸಿದೆ.

ಗ್ಲೋಬಲ್ ಆಚಿವರ್ಸ್ ಕೌನ್ಸಿಲ್ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಯು ಎಸ್ ಎ ಅವರು ಚನ್ನೈ ಅಲ್ಲಿ ನಡೆಸಿದ ರಾಷ್ಟ್ರೀಯ ಗೌರವ್ ಐಕಾನ್ ಅವಾರ್ಡ್ 2025 ಜೋಸೆಫ್ ಲೋಬೋ ಅವರನ್ನು ಗೌರವ ಡಾಕ್ಟಾರೇಟ್ ನೀಡಿ ಗೌರವಿಸಿದೆ.

ಜೋಸೆಫ್ ಲೋಬೋ ಅವರು
ಪ್ರಸ್ತುತ ಕೃಷಿ ತಜ್ಞರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗಳು: ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿ ಹೈಡ್ರೋಪೋನಿಕ್ ವಿಧಾನದಲ್ಲಿ ಮಲ್ಲಿಗೆ ಕೃಷಿ.
ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ತಾರಸಿಯಲ್ಲಿ 2,70,000 ಮೌಲ್ಯದ ಮಿಯಾಜಾಕಿ ಮಾವಿನ ಹಣ್ಣಿನ ಬೆಳೆ.
ತಾರಸಿಯಲ್ಲಿ 500 ಕ್ಕೂ ಹೆಚ್ಚು ದೇಶ ವಿದೇಶಗಳ ಗಿಡಗಳ ಯಶಸ್ವಿ ಸಾಧನೆ.
ಸಾವಿರಾರು ಜನರಿಗೆ ಜೋಸೆಫ್ ಲೋಬೋ ಶಂಕರಪುರ ಎಂಬ‌ ಯು ಟ್ಯೂಬ್ ಚಾನೆಲ್ ಮೂಲಕ ಕೃಷಿ ಮಾಹಿತಿ.
ಹಲವಾರು ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ 50,000 ಕ್ಕೂ ಅಧಿಕ ಜನರಿಗೆ ಕೃಷಿ ಮಾಹಿತಿ.
ಸಾವಯವ ರೀತಿಯಲ್ಲಿಯೇ ಗಿಡಗಳ ಯಶಸ್ವಿ ಸಾಧನೆ.
ವಿವಿಧ ಶಾಲಾಮಕ್ಕಳಿಗೆ ತಮ್ಮ ತಾರಸಿ ಕೃಷಿ ವೀಕ್ಷಣೆ, ಅದರ ಬಗ್ಗೆ ಮಾಹಿತಿ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ.

ಲೋಬೊ ಅವರ ಸಾಧನೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ಗೌರವಿಸಿವೆ.

ರೋಟರಿ ಶಂಕರಪುರ,
ರೇಡಿಯೋ ಶಿವಮೊಗ್ಗ,
ಲಯನ್ಸ್ ಶಂಕರಪುರ,
ಟೆಂಪೋ ರಿಕ್ಷಾ ಚಾಲಕರ ಸಂಘ,
ರಕ್ಷಣಾಪುರ ಜವನೆರ್ ಕಾಪು,
ಕರೋಕೆ ಗಾಯನ ಉಡುಪಿ,
ಶಿವಪಾಡಿ ಉಡುಪಿ,
ಎಂಜಿಎಂ ಕಾಲೇಜು ಮಣಿಪಾಲ್ ವತಿಯಿಂದ,
ಜಿ. ಶಂಕರ್ ಮಹಿಳಾ ಕಾಲೇಜ್ ಉಡುಪಿ,
ಸಂತ ಜಾನ್ ಹೈಸ್ಕೂಲ್ ಶಂಕರಪುರ ಹಾಗೂ
ಹಲವಾರು ಚರ್ಚ್ ವತಿಯಿಂದ ಗೌರವ ಸನ್ಮಾನ ಲಭ್ಯವಾಗಿವೆ.
ಇದೆಲ್ಲದರ ಮುಕುಟಾ ಎಂಬಂತೆ ಕ್ಷೇತ್ರದ ಶಾಸಕರು ಕೂಡಾ ಸನ್ಮಾನಿಸಿದ್ದಾರೆ.

ಪ್ರಶಸ್ತಿಗಳು:
ರಾಜ್ಯ ಪ್ರಶಸ್ತಿ
ಸಂಘ ಸಂಸ್ಥೆಗಳ ಪ್ರಶಸ್ತಿ
ಪರಿಸರ ಪ್ರೇಮಿ ಪ್ರಶಸ್ತಿ
ರೈತ ರತ್ನ ರಾಷ್ಟ್ರೀಯ ಪ್ರಶಸ್ತಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿವೆ.

ಪ್ರಸ್ತುತ ಜೋಸೆಫ್ ಲೊಬೊ ಅವರು ಕೃಷಿ ಮಾಹಿತಿ ನೀಡುತ್ತಾ ತೋಟ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪತ್ನಿ ಹಾಗೂ ಮಗಳೊಂದಿಗೆ ಉಡುಪಿಯ ಶಂಕರಪುರ ಗ್ರಾಮದಲ್ಲಿ ಸುಖಿ ಸಂಸಾರ ನಡೆಸುತ್ತಿದ್ದಾರೆ.

ಜೋಸೆಫ್ ಲೋಬೋ ಅವರ ಸಾಧನೆಯನ್ನು ಗುರುತಿಸಿ ಗ್ಲೋಬಲ್ ಆಚಿವರ್ಸ್ ಕೌನ್ಸಿಲ್ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಯು ಎಸ್ ಎ ಅವರು ಚನ್ನೈ ಅಲ್ಲಿ ನಡೆಸಿದ ರಾಷ್ಟ್ರೀಯ ಗೌರವ್ ಐಕಾನ್ ಅವಾರ್ಡ್ 2025 ಕಾರ್ಯಕ್ರಮ ದಲ್ಲಿ ಗೌರವ ಡಾಕ್ಟಾರೇಟ್ ಕೊಟ್ಟು ಗೌರವಿಸಿದೆ.

ಜೋಸೆಫ್ ಲೋಬೋ ಅವರಿಗೆ ಒಂದು ‌ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಮತ್ತಿತರರು ಅಭಿನಂದಿಸಿದ್ದಾರೆ.

ಉಡುಪಿ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್ Read More

ವಿಜೃಂಬಣೆಯಿಂದ ನಡೆದ ಇನ್ನಂಜೆ ಯುವತಿ ಮಂಡಲದ 13 ನೇ ವಾರ್ಷಿಕೋತ್ಸವ

ಉಡುಪಿ: ಉಡುಪಿ ಜಿಲ್ಲೆ ಇನ್ನಂಜೆ ಯುವತಿ ಮಂಡಲದ ಹದಿಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ವಿಜ್ರಂಭಣೆಯಿಂದ ನೆರವೇರಿತು.

ಶ್ರೀ ವಿಶ್ವತೀರ್ತವಲ್ಲಭ ಪಾದಂಗಳವರ ಆಶಿರ್ವಾದಗಳೊಂದಿಗೆ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಲಾಲಾಜಿ ಆರ್ ಮೆಂಡನ್ ,ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಕಾಪು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುನಿಲ್ ಡಿ ಬಂಗೇರ, ಉದ್ಯಮಿ ಆಶಾಲತಾ, ಯುವಕ ಮಂಡಲದ ಅಧ್ಯಕ್ಷ ಮದಸೂದನ್ ಆಚಾರ್ಯ, ಇನ್ನಂಜೆ ಯುವತಿ ಮಂಡಲ ಅಧ್ಯಕ್ಷರಾದ ಲಕ್ಷ್ಮಿ ವೈ ನಾಯಕ್, ಕಾರ್ಯದರ್ಶಿ ಪ್ರಭಾವತಿ ಆಚಾರ್ಯ, ಕೋಶಾಧಿಕಾರಿ ಭವ್ಯ ಸುರೇಶ್ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ರಾಷ್ಟ್ರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೋಸೆಫ್ ಲೋಬೋ ಶಂಕರಪುರ , ಶೈಕ್ಷಣಿಕ ವಿಭಾಗದಲ್ಲಿ ಪುಂಡರೀಕ್ಷ ಕೊಡಂಚ, ಸಮಾಜ ಸೇವಕರಾದ ಸುಧೀರ್ ಶೆಟ್ಟಿ, ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ಸುವರ್ಣ ಕಟಪಾಡಿ ಅವರಿಂದ ಸಂಗೀತ ರಸಮಂಜರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.

ವಿಜೃಂಬಣೆಯಿಂದ ನಡೆದ ಇನ್ನಂಜೆ ಯುವತಿ ಮಂಡಲದ 13 ನೇ ವಾರ್ಷಿಕೋತ್ಸವ Read More

ವಿಷಮುಕ್ತ ಕೃಷಿ, ಪರಿಸರ ವೀಕ್ಷಣೆ ಮಾಡಿದಸೈಂಟ್ ಜಾನ್ ಪ್ರೌಢಶಾಲಾ ಮಕ್ಕಳು

ಉಡುಪಿ: ಉಡುಪಿಯ ಶಂಕರಪುರದ ಸೈಂಟ್ ಜಾನ್ ಪ್ರೌಢಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಷಮುಕ್ತ ಕೃಷಿ ಹಾಗೂ ಪರಿಸರ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಒಂದು ದಿನದ ವಿಷಮುಕ್ತ ಕೃಷಿ ಹಾಗೂ ಪರಿಸರ ವೀಕ್ಷಣೆ ಕಾರ್ಯಕ್ರಮವು ಜಿಲ್ಲಾ ರಾಜ್ಯೋತ್ಸವ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಜೋಸೆಫ್ ಲೋಬೋ ಶಂಕರಪುರ ಅವರ ತೋಟದಲ್ಲಿ ನಡೆಯಿತು.

ಲೋಬೋ ಅವರ ತಾರಸಿ ಕೃಷಿ ಹಾಗೂ ಜೇನು ಸಾಕಾಣಿಕೆಯ ವಿಷಯವನ್ನು ವಿದ್ಯಾರ್ಥಿಗಳು ಅರಿತುಕೊಂಡರು.

ಈ ವೇಳೆ 274000 ಮೌಲ್ಯದ ಮಿಯಾ ಝಕಿ ಮಾವಿನ ಹಣ್ಣನ್ನು ಕಂಡು ವಿದ್ಯಾರ್ಥಿಗಳು ಬೆರಗಾದರು.

ಸಣ್ಣ ಜಾಗದಲ್ಲೂ ಮನೆಗೆ ಬೇಕಾದಷ್ಟು ಕೃಷಿಯನ್ನು ಮಾಡಿ ವಿಶಮುಕ್ತ ಅನ್ನದ ಬಟ್ಟಲು ನಮ್ಮದಾಗಿಸಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಅಧ್ಯಾಪಕರು ವಿದ್ಯಾರ್ಥಿಗಳು ಸೇರಿ 50 ಜನರಿಗೆ ಕೃಷಿ ಹಾಗೂ ಪರಿಸರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ವಿಷಮುಕ್ತ ಕೃಷಿ, ಪರಿಸರ ವೀಕ್ಷಣೆ ಮಾಡಿದಸೈಂಟ್ ಜಾನ್ ಪ್ರೌಢಶಾಲಾ ಮಕ್ಕಳು Read More

ಜೋಸೆಫ್ ಲೋಬೊ ತೋಟದಲ್ಲಿ‌ ಶಾಲಾ ಮಕ್ಕಳಿಗೆ ಕೃಷಿ ದರ್ಶನ

ಉಡುಪಿ: ಉಡುಪಿ ಜಿಲ್ಲೆಯ ಶಂಕರಪುರದ ಸೈಂಟ್ ಜಾನ್ ವಿದ್ಯಾಸಂಸ್ಥೆಗಳ ಮಕ್ಕಳಿಗೆ ಒಂದು ದಿನದ ಕೃಷಿ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಮೂರನೇ ತರಗತಿಯಿಂದ 8ನೇ ತರಗತಿವರೆಗಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ಒಂದು ದಿನದ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಷ ಮುಕ್ತ ಅನ್ನದ ಬಟ್ಟಲು ಎಂಬ ಶಿರೋನಾಮೆಯಡಿ ಕೃಷಿ ದರ್ಶನವನ್ನು ರಾಜ್ಯ ಹಾಗೂ ರಾಷ್ಟ್ರ ಕೃಷಿ ಪ್ರಶಸ್ತಿ ವಿಜೇತ ಜೋಸೆಫ್ ಲೋಬೊ ಶಂಕರಪುರ ಅವರಿಂದ ಕೃಷಿ ಮಾಹಿತಿಯನ್ನು ಹಮ್ಮಿಕೊಳ್ಳಲಾಗಿತ್ತು.

ವಿವಿಧ ಬಗೆಯ ತರಕಾರಿ ಹಣ್ಣು ಹಂಪಲು ಹಾಗೂ ಆಯುರ್ವೇದಿಯ ಸಸ್ಯಗಳ ಪರಿಚಯ ಮತ್ತು ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ವಿಶೇಷವಾಗಿ 2.74 ಲಕ್ಷ ಬೆಲೆಬಾಳುವ ಜಪಾನಿನ ಮಿಯಾಜಾಕಿ ಎಂಬ ತಳಿಯ ಮಾವಿನ ಹಣ್ಣನ್ನು ವೀಕ್ಷಣೆ ಮಾಡಿ ಎಲ್ಲಾ ವಿದ್ಯಾರ್ಥಿ ಹಾಗೂ ಅಧ್ಯಾಪಕರು ಕಣ್ತುಂಬಿ ಕೊಂಡರು.

ಈ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು.

ಜೋಸೆಫ್ ಲೋಬೊ ತೋಟದಲ್ಲಿ‌ ಶಾಲಾ ಮಕ್ಕಳಿಗೆ ಕೃಷಿ ದರ್ಶನ Read More

ಎಚ್ ಡಿ ಎಫ್ ಸಿ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಮಹಿಳಾ ದಿನಾಚರಣೆ

ಉಡುಪಿ,ಮಾ.8:ಉಡುಪಿ ಜಿಲ್ಲೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಎಚ್ ಡಿ ಎಫ್ ಸಿ ಲೈಫ್ ಇನ್ಸೂರೆನ್ಸ್ ಕಂಪನಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಕಂಪನಿಯ ಎಲ್ಲಾ ಮಹಿಳಾ ಸಿಬ್ಬಂದಿ ಎಲ್ಲಾ ಜಂಜಡಗಳಿಂದ ಹೊರಬಂದು ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಎಚ್ ಡಿ ಎಫ್ ಸಿ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಮಹಿಳಾ ದಿನಾಚರಣೆ Read More

ರಕ್ತದಾನ‌ ಮಾಡಿ ಜೀವ‌ ಉಳಿಸಿ-ರಕ್ತದಾನಿ ನೀಮಾ ಲೋಬೊ ಕರೆ

ಉಡುಪಿ: 18ರಿಂದ 55 ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಲ್ಲಿ ಗಂಡು ಹೆಣ್ಣು ಎಂಬ ಭೇದ ಇಲ್ಲ ಎಂದು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲಾ ಅಧ್ಯಕ್ಷೆ ರಕ್ತದಾನಿ ನೀಮಾ ಲೋಬೊ ತಿಳಿಸಿದ್ದಾರೆ.

ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಅನೇಕ ಕಾಯಿಲೆಗಳು ಬಾಧಿಸುತ್ತವೆ,ಆ ಸಂದರ್ಭದಲ್ಲಿ ಸರ್ಜರಿ ಮಾಡುವುದು ಅನಿವಾರ್ಯವಾದರೆ ದೇಹದಿಂದ ರಕ್ತ ಲಾಸ್ ಆಗುವುದು ಸಾಮಾನ್ಯ, ಅಲ್ಲದೆ ಅಘಾತವಾದಾಗ ರಕ್ತಸ್ರಾವ ಆಗುತ್ತದೆ ಹಾಗಾಗಿ ಈ ಎರಡೂ ಸಂದರ್ಭದಲ್ಲಿ ತುರ್ತು ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳು ಪ್ರತಿ ಮನೆಯಲ್ಲಿ ಸಂಭವಿಸಬಹುದು ನಮಗೇನು ಆಗುವುದಿಲ್ಲ ಎನ್ನುವುದು ಮೂರ್ಖತನ ಆದುದರಿಂದ 18ರಿಂದ 55 ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದು ಎಂದು ಹೇಳಿದ್ದಾರೆ.

ರಕ್ತದಾನ ಮಾಡುವವರು ಆರೋಗ್ಯವಂತರಾಗಿರಬೇಕು, ಗಂಡಸರು ಮೂರು ತಿಂಗಳಿಗೊಮ್ಮೆ ಹಾಗೂ ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ರಕ್ತದಾನ ಮಾಡುವಾಗ ವೈದ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೆ ರಕ್ತದಾನ ಮಾಡಬಹುದಾ ಅಥವಾ ಮಾಡಬಾರದಾ ಎಂಬಯದನ್ನು ತಿಳಿಸುತ್ತಾರೆ.

ಯಾವುದೇ ಸಂದರ್ಭಗಳಲ್ಲಿ ಯಾರಾದರೂ ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ಹೇಳಿದರೆ ದಯವಿಟ್ಟು ರಕ್ತದಾನ ಮಾಡಿ ಎಂದು ನೀಮಾ ಮನವಿ ಮಾಡಿದ್ದಾರೆ.

ಭಾರತದಲ್ಲಿ ಹೆರಿಗೆ ಸಮಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ. ಅಂತಹ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಯಾವುದೇ ಆಗಲಿ ರಕ್ತದ ಅವಶ್ಯಕತೆ ಇದೆ ಎಂದು ಕೇಳಿದಾಗ ದಯವಿಟ್ಟು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಸಲಹೆ ನೀಡಿದ್ದಾರೆ.

ಸತತವಾಗಿ 4 ವರ್ಷಗಳಿಂದ ಮೈಸೂರಿನಲ್ಲಿ ಅಧ್ಯಕ್ಷರಾದ ರಕ್ತದಾನಿ ಮಂಜು ಅವರು ಒಂದು ಹೆಜ್ಜೆ ರಕ್ತದಾನಿ ಬಳಗ ಕಟ್ಟಿ ರಕ್ತದಾನ ಮಾಡಿಸುತ್ತಾ ಮತ್ತು ಸ್ವತಃ ರಕ್ತದಾನ ಮಾಡುತ್ತಾ ಬಂದಿದ್ದಾರೆ.

ಇದೀಗ ಉಡುಪಿ ಜಿಲ್ಲೆಯಲ್ಲಿ ಒಂದು ಹೆಜ್ಜೆ ರಕ್ತದಾನ ಬಳಗವನ್ನ ಕಟ್ಟಿ ಬಳಗಕ್ಕೆ ನೀಮಾ ಲೋಬೊ ಅವರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ.ಆಕೆ ಕೂಡ ಸತತವಾಗಿ 7 ಬಾರಿ ರಕ್ತದಾನ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈ ಜವಾಬ್ದಾರಿಯನ್ನು ತೆಗೆದುಕೊಂಡು ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡಿಸುತ್ತಾ,ನಾನೂ ಸಹಾ ರಕ್ತದಾನ ಮಾಡುತ್ತಾ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರಕ್ತದಾನ ಮಾಡಲು ಬಯಸುವವರು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲಾ ಅಧ್ಯಕ್ಷೆ ರಕ್ತದಾನಿ ನೀಮಾ ಲೋಬೊ ಫೋನ್ ನಂ — 99021 75996 ಇದಕ್ಕೆ ಕರೆ ಮಾಡಬಹುದು‌

ಈ ನಂಬರಿಗೆ ಕರೆ ಮಾಡಿ ಹೆಸರು ಮತ್ತು ರಕ್ತದ ಗುಂಪನ್ನು ತಿಳಿಸಿ ನಮ್ಮ ಬಳಗಕ್ಕೆ ಸೇರಬಹುದು ಎಂದು, ರಕ್ತದ ಅವಶ್ಯಕತೆ ಇರುವವರು ಕೂಡಾ ಇದೇ ನಂಬರಿಗೆ ಕರೆ ಮಾಡಬಹುದು ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತೇವೆ, ರಕ್ತದಾನ ಮಾಡಿ ಜೀವ ಉಳಿಸಿ ನಮ್ಮ ಜೊತೆ ಕೈಜೋಡಿಸಿ ಎಂದು
ರಕ್ತದಾನಿ ನೀಮಾ ಲೋಬೊ ಕೋರಿದ್ದಾರೆ.

ರಕ್ತದಾನ‌ ಮಾಡಿ ಜೀವ‌ ಉಳಿಸಿ-ರಕ್ತದಾನಿ ನೀಮಾ ಲೋಬೊ ಕರೆ Read More

ಶಿವಪಾಡಿ ವೈಭವದಲ್ಲಿ ಸಂಭ್ರಮಿಸಿದ ಜನತೆ

ಉಡುಪಿ: ಉಡುಪಿ ಜಿಲ್ಲೆಯ ಮಣಿಪಾಲದ ಶಿವಪ್ಪಾಡಿಯಲ್ಲಿ ಶಿವಪಾಡಿ ವೈಭವ ಎಂಬ ಶೀರ್ಷಿಕೆಯಡಿ ಧರ್ಮ ಸಂಸ್ಕೃತಿ, ಬದುಕು. ಎಂಬ ಧ್ಯೇಯ ವಾಕ್ಯದೊಂದಿಗೆ ಬಹುದೊಡ್ಡ ವೇದಿಕೆಯನ್ನು ಕಲ್ಪಿಸಿದ್ದುದನ್ನು ನೂರಾರು ಮಂದಿ ಕಣ್ ತುಂಬಿಕೊಂಡರು.

ದೇವಸ್ಥಾನದ ವಟಾರದಲ್ಲಿ ಕೃಷಿ ಸಲಕರಣೆ, ಆಟಿಕೆ ವಸ್ತು,ಗ್ರಹೋಪಕರಣ ಮುಂತಾದ ನೂರಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಿದ್ದನ್ನು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವ ಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಎಸ್ ದಿನೇಶ್ ಪ್ರಭು, ಶಿವಪಾಡಿ ವೈಭವ ಆಚರಣೆ ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್, ದಿನೇಶ್ ಪ್ರಭು, ಮಹೇಶ್ ಠಾಕೂರ್, ಪ್ರಭಾಕರ ಸಮಂತ್, ಗೋಪಾಲಕೃಷ್ಣ ಪ್ರಭು, ದಿನೇಶ್, ಶ್ರೀಹರಿ ಸಾಮಂತ್, ಪ್ರಕಾಶ್ ಕುಕ್ಕೆಹಳ್ಳಿ, ನಾಗರಾಜ್ ಕಾಮತ್, ಭುವನೇಶ್ವರಿ ಉಪನಿರ್ದೇಶಕರು ತೋಟಗಾರಿಕಾ ಇಲಾಖೆ, ಉಡುಪಿ ಕುದಿ ಶ್ರೀನಿವಾಸ್ ಭಟ್, ಎಸ್ ಆರ್ ನಾಗರಾಜ್, ಡಾ.ರೇವಣ್ಣನವರ, ಕೃಷಿ ವಿಜ್ಞಾನಿ ಬ್ರಹ್ಮಾವರ, ನಾಗರಾಜ್ ಕೆದ್ಲಾಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಜಾನ್, ಸುರೇಶ್ ಕರ್ಕೇರ, ಜೋಸೆಫ್ ಲೋಬೊ ಶಂಕರ್ ಪುರ, ಮುಂತಾದವರನ್ನು ಆಡಳಿತ ಮಂಡಳಿ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಹಾಜರಿದ್ದು ಶಿವ ಪಾಡಿ ವೈಭವದ ದರ್ಶನವನ್ನು ಕಣ್ತುಂಬಿಕೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು.

ಶಿವಪಾಡಿ ವೈಭವದಲ್ಲಿ ಸಂಭ್ರಮಿಸಿದ ಜನತೆ Read More

ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲೆಗೆ ನೀಮಾ ಲೋಬೊ ಅಧ್ಯಕ್ಷೆ

ಮೈಸೂರು: ಒಂದು ಹೆಜ್ಜೆ ರಕ್ತದಾನಿಗಳ ಬಳಗವು ಸತತ ನಾಲ್ಕು ವರ್ಷಗಳಿಂದ ರಕ್ತದಾನ ಮಾಡಿಸುತ್ತಾ ಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಒಂದು ಹೆಜ್ಜೆ ರಕ್ತದಾನಿಗಳ ಬಳಗ ಕ್ಕೆ ನೀಮಾ ಲೋಬೊ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ನೀಮಾ ಲೋಬೊ ಅವರು 7 ಬಾರಿ ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಮನಗಂಡು ಅವರಿಗೆ ಈ ಜವಾಬ್ದಾರಿಯನ್ನು ನೀಡಿದ್ದೇವೆ
ಎಂದು ಸಂಸ್ಥೆಯ ಮೈಸೂರು ಜಿಲ್ಲಾ ಅಧ್ಯಕ್ಷರಾದ ರಕ್ತದಾನಿ ಮಂಜು ತಿಳಿಸಿದ್ದಾರೆ.

ಇನ್ನು ಮುಂದೆ ಉಡುಪಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇರುವವರು ಮತ್ತು ರಕ್ತದಾನ ಮಾಡುವವರು ಇವರ ಜೊತೆ ಕೈಜೋಡಿಸಿ ಸೇವೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದ್ದಾರೆ.

ರಕ್ತದಾನ ಮಾಡುವವರು ಈ ಕೆಳಗಡೆ ಕೊಟ್ಟಿರುವ ನಂಬರಿಗೆ ಕರೆ ಮಾಡಬಹುದು ಹಾಗೂ ಬಳಗಕ್ಕೆ ಸೇರಬಹುದು ಮತ್ತು ರಕ್ತದ ಅವಶ್ಯಕತೆ ಇರುವವರು ಈ ನಂಬರಿಗೆ ಕರೆ ಮಾಡಿ ಪಡೆಯಬಹುದಾಗಿದೆ.

ಅಧ್ಯಕ್ಷರು ಉಡುಪಿ ಜಿಲ್ಲೆ ನೀಮಾ ಲೋಬೊ
ಮೊಬೈಲ್ 99021 75996 ಸಂಪರ್ಕಿಸಬಹುದು.

ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲೆಗೆ ನೀಮಾ ಲೋಬೊ ಅಧ್ಯಕ್ಷೆ Read More