ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ: ಡಿ ಟಿ ಪ್ರಕಾಶ್

ಮೈಸೂರು: ಮೇರುನಟ ಡಾ ವಿಷ್ಣುವರ್ಧನ್ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಅಥವಾ ಪದ್ಮಭೂಷಣ ಪುರಸ್ಕಾರವನ್ನು
ಮರಣೋತ್ತರವಾಗಿ ನೀಡಬೇಕೆಂದು ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮನವಿ ಮಾಡಿದ್ದಾರೆ.

ನಗರದ ಉದ್ಭೂರ್ ನಲ್ಲಿರುವ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ಹಮ್ಮಿಕೊಂಡಿದ್ದ ವಿಷ್ಣು ಜನ್ಮದಿನಾಚರಣೆ ವೇಳೆ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಡಾ.ವಿಷ್ಣುವರ್ಧನ್ ಅವರ ಸಾಧನೆಯನ್ನು ಸ್ಮರಿಸಿ ಪದ್ಮಶ್ರೀ ಅಥವಾ ಪದ್ಮಭೂಷಣ ಪುರಸ್ಕಾರ ನೀಡಬೇಕೆಂದು ಕೋರಿದರು.

ಈ ವೇಳೆ 100 ಕ್ಕೂ ಹೆಚ್ಚು
ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮ ದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಶ್ರೀ ದುರ್ಗಾ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ರೇಣುಕಾ ಹೊರಕೇರಿ, ವರುಣ ಮಹಾದೇವ್, ಕಡಕೋಳ ಶಿವಲಿಂಗ, ಲೋಕೇಶ್, ವಿಷ್ಣು ಅಭಿಮಾನಿ ಸಿದ್ದಪ್ಪ, ರಶ್ಮಿ, ಸುರೇಶ್, ಪ್ರಭು ಮತ್ತಿತರರು ಹಾಜರಿದ್ದರು.

ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ: ಡಿ ಟಿ ಪ್ರಕಾಶ್ Read More