ಅಬಕಾರಿ ಅಧಿಕಾರಿಗಳ ದಾಳಿ:ರೈಲಿನಲ್ಲಿ ೧ ಕೆಜಿ ೬೯೨ ಗ್ರಾಂ ಗಾ* ವಶ

ಮೈಸೂರು: ಅಪರಿಚಿತ ವ್ಯಕ್ತಿ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ೧ ಕೆಜಿ ೬೯೨ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆ ನಿರೀಕ್ಷಕಿ ಪೂಜಾ ರಾಮು ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು,
ದರ್ಬಾಂಗ್‌ನಿಂದ ಮೈಸೂರಿಗೆ ಬಂದ ಸೂಪರ್ ಫಾಸ್ಟ್ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುವ ಮಾಹಿತಿ ತಿಳಿದು
ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಉಪನಿರೀಕ್ಷಕ ರವಿಕುಮಾರ್, ಸಿಬ್ಬಂದಿಗಳಾದ ಎನ್.ಅಜಯ್, ಸಿ.ಮಂಜುನಾಥ್ ಹಾಗೂ ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ನಡೆಸಿ ಬೋಗಿಗಳನ್ನು ತಪಾಸಣೆ ನಡೆಸಿದಾಗ ಎಸಿ ಸಾಮಾನ್ಯ ಕೋಚ್‌ನಲ್ಲಿ ವಾರಸುದಾರರು ಇಲ್ಲದ ನೀಲಿಬಣ್ಣದ ಸೂಟ್‌ಕೇಸ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ಗಾಂಜಾ ವಶಪಡಿಸಿಕೊಂಡು ಎನ್‌ಡಿಎಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ,ಆರೋಪಿ ಪತ್ತೆಗೆ ತಲಾಶಿ ಪ್ರಾರಂಭಿಸಿದ್ದಾರೆ.

ಅಬಕಾರಿ ಅಧಿಕಾರಿಗಳ ದಾಳಿ:ರೈಲಿನಲ್ಲಿ ೧ ಕೆಜಿ ೬೯೨ ಗ್ರಾಂ ಗಾ* ವಶ Read More

ರೈಲು ಹರಿದು ನಾಲ್ವರು ಕಾರ್ಮಿಕರ ದುರ್ಮರಣ

ಪಾಲಕ್ಕಾಡ್: ರೈಲು ಹರಿದು ನಾಲ್ಕು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

ಶೊರನೂರ್ ರೈಲ್ವೆ ಸ್ಟೇಷನ್ ಬಳಿ ಕೇರಳ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಾರ್ಮಿಕರು ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸುತ್ತಿದ್ದಾಗ ಏಕಾಏಕಿ ರೈಲು ಆಗಮಿಸಿದೆ.

ಈ ವೇಳೆ ರೈಲು ಕಾರ್ಮಿಕರ ಮೇಲೆ ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಮಿಳುನಾಡಿನ ವಾಲಿ,ರಾಣಿ,ಲಕ್ಷ್ಮಣ್ ಮೃತಪಟ್ಟವರು ಎಂದು ಗುರುತಿಸಲಾಗಿದ್ದು‌,ಮತ್ತೊಬ್ಬರ ದೇಹ‌ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಹರಿದು ನಾಲ್ವರು ಕಾರ್ಮಿಕರ ದುರ್ಮರಣ Read More