ನಾಳೆ ಚಾತುರ್ಮಾಸ್ಯ ಧರ್ಮಪ್ರಚಾರ ಪೂರ್ವಭಾವಿ ಸಭೆ

ಮೈಸೂರು: ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಮ್ ತಲಕಾಡು ಶ್ರೀ ಮಠದ ಪೀಠಾಧಿಪತಿಗಳಾದ ಭಾಗವತೀಯ ಜಗದ್ಗುರು ಶಂಕರಾಚಾರ್ಯ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳವರ 17ನೇ ಚಾತುರ್ಮಾಸ್ಯ ಆಚರಿಸಲಾಗುತ್ತಿದೆ.

ಇದಕ್ಕೆ ಸಂಬಂಧಪಟ್ಟಂತೆ ಜಯನಗರ ಶ್ರೀರಾಮಮಂದಿರದಲ್ಲಿ ನಾಳೆ 29 ರಂದು ಸಂಜೆ 5.30ಕ್ಕೆ ಚಾತುರ್ಮಾಸ್ಯ ಧರ್ಮಪ್ರಚಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.

ಬ್ರಾಹ್ಮಣ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿಪ್ರ ಸಮುದಾಯದವರು ಆಸ್ಥಿಕ‌ ಭಕ್ತಮಹಾಶಯರು ಭಾಗವಹಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಡಿ.ಟಿ. ಪ್ರಕಾಶ್
ಮನವಿ ಮಾಡಿದ್ದಾರೆ.

ಈ ಧರ್ಮ‌ ಪ್ರಚಾರ ಸಭೆಯಲ್ಲಿ ತಲಕಾಡು ಮಠದ ಭಾಗವತೀಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು ಆಗಮಿಸಿ‌ ಆಶೀರ್ವಚನ ನೀಡಲಿದ್ದಾರೆ ಎಂದು
ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ
ರಾಜ್ಯ ಉಪಾಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ
ಬ್ರಾಹ್ಮಣ ಧರ್ಮಸಹಾಯ ಸಭಾ ನಿಕಟಪೂರ್ವ ಅಧ್ಯಕ್ಷ
ಎನ್. ಶ್ರೀನಿವಾಸ್ ತಿಳಿಸಿದ್ದಾರೆ

ನಾಳೆ ಚಾತುರ್ಮಾಸ್ಯ ಧರ್ಮಪ್ರಚಾರ ಪೂರ್ವಭಾವಿ ಸಭೆ Read More

ನಾಳೆ ಕನ್ನಡ ಸಿರಿ ಸಂಭ್ರಮ ಸಂಗೀತ ರಸಮಂಜರಿ ಕಾರ್ಯಕ್ರಮ

ಮೈಸೂರು: ಪಿ ಎಂ ಕ್ರಿಯೇಷನ್ ಪುರುಷೋತ್ತಮ್ ತಂಡದ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಚಿತ್ರಗೀತೆಗಳ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಡಿ.7 ರಂದು ಹಮ್ಮಿಕೊಳ್ಳಲಾಗಿದೆ.

ವಿದ್ಯಾರಣ್ಯಪುರಂನಲ್ಲಿರುವ ಸಾರ್ವಜನಿಕ ಹಾಸ್ಟೆಲ್ ನಲ್ಲಿ ನಾಳೆ ಸಂಜೆ 6.30ಕ್ಕೆ ಕನ್ನಡ ಸಿರಿ ಸಂಭ್ರಮ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಿ ಎಂ ಕ್ರಿಯೇಶನ್ಸ್ ತಂಡದ ಸಂಸ್ಥಾಪಕರಾದ ಪುರುಷೋತ್ತಮ್ ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಟಿ ಎಸ್ ಶ್ರೀವತ್ಸ, ವಿಧಾನಪರಿಷತ್ ಸದಸ್ಯ ವಿವೇಕಾನಂದ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಸುದರ್ಶನ್, ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ,ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮಪ್ರಸಾದ್ ಮತ್ತಿತರರು ಆಗಮಿಸಲಿದ್ದಾರೆ ಎಂದು ‌ಅವರು ಹೇಳಿದ್ದಾರೆ.

ನಾಳೆ ಕನ್ನಡ ಸಿರಿ ಸಂಭ್ರಮ ಸಂಗೀತ ರಸಮಂಜರಿ ಕಾರ್ಯಕ್ರಮ Read More