ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು
ಪಾಟ್ನಾ: ಬಿಹಾರದ ಹಲವ ಜಿಲ್ಲೆಗಳಲ್ಲಿ ಸಿಡಿಲು ಮತ್ತು ಆಲಿಕಲ್ಲು ಮಳೆಗೆ 25 ಮಂದಿ ಮೃತಪಟ್ಟಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ.
ಬಿಹಾರದ ನಳಂದದಲ್ಲಿ ಭಾರೀ ಮಳೆ ಸಿಡಿಲಿನಿಂದಾಗಿ 18 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಸಿವಾನ್‌ನಲ್ಲಿ ಇಬ್ಬರು, ಕಟಿಹಾರ್, ದರ್ಭಂಗಾ, ಬೇಗುಸರಾಯ್, ಭಾಗಲ್ಪುರ್ ಮತ್ತು ಜೆಹಾನಾಬಾದ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು Read More