ತಿಪ್ಪಗೊಂಡನಹಳ್ಳಿ ಜಲಾಶಯ:ನಾಗರಿಕರ ಸಹಭಾಗಿತ್ವದಲ್ಲಿ ತಜ್ಞರ ಸಮಿತಿ ರಚನೆಗೆ ಆಗ್ರಹ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯವನ್ನು ರಕ್ಷಿಸಿ ಬೆಂಗಳೂರನ್ನು ಉಳಿಸುವ ನಿಟ್ಟಿನಲ್ಲಿ ನಾಗರಿಕರ ಸಹಭಾಗಿತ್ವದಲ್ಲಿ ತಜ್ಞರುಗಳ ಸಮಿತಿ ರಚನೆ ಮಾಡುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ತಿಪ್ಪಗೊಂಡನಹಳ್ಳಿ ಜಲಾಶಯವನ್ನು ರಕ್ಷಿಸಿ ಬೆಂಗಳೂರನ್ನು ಉಳಿಸುವ ನಿಟ್ಟಿನಲ್ಲಿ
ಶನಿವಾರ ನಡೆದ ವಿಚಾರ ಸಂಕಿರಣ ದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ರಕ್ಷಿಸಿ ಬೆಂಗಳೂರನ್ನು ಉಳಿಸುವ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಅನೇಕ ಹೋರಾಟಗಾರರು, ತಜ್ಞರು ಈ ಕೆಳಕಂಡ ಮೂರು ಅಂಶಗಳ ನಿರ್ಣಯವನ್ನು ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಜಲಾಶಯವನ್ನು ಉಳಿಸಲು ನಾಗರಿಕರ ಸಹಭಾಗಿತ್ವದಲ್ಲಿ ತಜ್ಞರುಗಳ ಸಮಿತಿಯನ್ನು ನೇಮಿಸಬೇಕು,ಸಮಿತಿಯ ಶಿಫಾರಸಿನಂತೆ ಆಮೂಲಾಗ್ರವಾಗಿ ಜಲಾಶಯವನ್ನು ಪುನಃಸ್ಚೇತನ ಗೊಳಿಸಲು ಕಾರ್ಯತಂತ್ರ ಯೋಜನೆಯನ್ನು ಸರ್ಕಾರ ಕೂಡಲೇ ಪ್ರಕಟಿಸಿ ನಿರ್ಧಾರ ಕೈಗೊಳ್ಳಬೇಕು.

ಬೆಂಗಳೂರಿನ ನಾಗರೀಕರೆಲ್ಲರು ಪಾಲ್ಗೊಳ್ಳಲು ಜಲಾಶಯವನ್ನು ಉಳಿಸುವ ದಿಶೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಶೀಘ್ರ ಕಾರ್ಯತಂತ್ರ ಯೋಜನೆಯನ್ನು ರೂಪಿಸಲು ಒತ್ತಾಯ ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ, ತಿಪ್ಪಗೊಂಡನಹಳ್ಳಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಶಶಿಧರ್ ಆರಾಧ್ಯ, ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಸೇರಿದಂತೆ ಸಮಾಜದ ಅನೇಕ ಸಾಮಾಜಿಕ ಹೋರಾಟಗಾರರು ಹಾಗೂ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಭಾಗವಹಿಸಿದ್ದರು.

ತಿಪ್ಪಗೊಂಡನಹಳ್ಳಿ ಜಲಾಶಯ:ನಾಗರಿಕರ ಸಹಭಾಗಿತ್ವದಲ್ಲಿ ತಜ್ಞರ ಸಮಿತಿ ರಚನೆಗೆ ಆಗ್ರಹ Read More