ಮನೆಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳ

ಮೈಸೂರು: ಮಕ್ಕಳ ಜೊತೆ ಇದ್ದ ಗೃಹಿಣಿಯ ಮನೆಗೆ ನುಗ್ಗಲು ಹೊಂಚು ಹಾಕಿದ್ದ ಕಳ್ಳನನ್ನು ಸಾರ್ವಜನಿಕರೆ ಹಿಡಿದ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಕಳನನ್ನು ಪೊಲೀಸರು ಬಂಧಿಸಿದ್ದು,ಕಂಬಿ ಎಣಿಸಿದ್ದಾನೆ.

ನಂಜನಗೂಡಿನ ಎಂ.ಎಂ.ಬಡಾವಣೆಯಲ್ಲಿ ಘಟನೆ ನಡೆದಿದ್ದು, ಹುಲ್ಲಹಳ್ಳಿಯ ನಂಜೀಪುರ ಗ್ರಾಮದ ಶಿವಪಾದ ಸಿಕ್ಕಿಬಿದ್ದ ಕಳ್ಳ.

ಬುಧವಾರ ರಾತ್ರಿ 9 ಗಂಟೆಯಲ್ಲಿ ಕಳ್ಳ ವೀರಮಣಿ ಎಂಬುವರ ಮನೆ ಕಾಂಪೌಂಡ್ ಹಾರಿ ಬಂದು ಅವಿತುಕೊಂಡು ಒಳಗೆ ನುಗ್ಗಲು ಹೊಂಚು ಹಾಕಿದ್ದ.ಅದನ್ನ ನೋಡಿದ ಗೃಹಿಣಿ ಸೆಲ್ವಿ ಅವರು ಕೂಗಿಕೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದ ನಿವಾಸಿಗಳು ಓಡಿಬಂದು ಖದೀಮನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದಾರೆ.

ಈ ಹಿಂದೆಯೂ ಇದೇ ಕಳ್ಳ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ,ನನ್ನ ಪತಿ ಬರದೇ ಇದ್ದಿದ್ದರೆ ನಾನು ಕೊಲೆ ಆಗುತ್ತಿದ್ದೆ.ಇದು ಮೊದಲನೇ ಸಲ ಅಲ್ಲ,ಹಿಂದೆಯೂ ಕುತ್ತಿಗೆಗೆ ಚಾಕು ಹಿಡಿದಿದ್ದ,ನಮಗೆ ರಕ್ಷಣೆ ಬೇಕು ಎಂದು ಸೆಲ್ವಿ ಅವರು ಮನವಿ ಮಾಡಿದ್ದಾರೆ‌

ಕಳ್ಳನ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಂ.ಎಂ.ಬಡಾವಣೆ ಜನತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಮನೆಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳ Read More

ಮನೆಕಳ್ಳನ ಬಂಧಿಸಿದ ಹುಣಸೂರು ಪೊಲೀಸರು:5.5 ಲಕ್ಷ ಮೌಲ್ಯದ‌ ವಸ್ತು ವಶ

ಮೈಸೂರು: ಮನೆಗಳ್ಳನತ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ
ಹುಣಸೂರು ಟೌನ್ ಪೊಲೀಸರು ಯಶಸ್ವಿಯಾಗಿದ್ದು,5.5 ಲಕ್ಷ ಮೌಲ್ಯದ‌ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಬೆಲವತ್ತ ಗ್ರಾಮದ ಸೈಯದ್ ಉಸ್ಮಾನ್(35) ಬಂಧಿತ ಆರೋಪಿ.

ಬಂಧಿತನಿಂದ 1.72 ಲಕ್ಷ ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಹುಣಸೂರಿನ ಬಜಾರ್ ರಸ್ತೆ,ಜೆ.ಎಲ್.ಬಿ.ರಸ್ತೆ,ಹಳೇ ಸೇತುವೆ ರಸ್ತೆಯ ಮೆಡಿಕಲ್ ಶಾಪ್ ಗಳಲ್ಲಿ ಕನ್ನ ಕಳುವು ಪ್ರಕರಣಗಳು ನಡೆದಿತ್ತು.

ಈ ಸಂಬಂಧ ಕಳ್ಳನ ಬಂಧನಕ್ಕೆ ಹುಣಸೂರು ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಜಾಲ ಬೀಸಿದ್ದರು,ಪೊಲೀಸರ ಜಾಲಕ್ಕೆ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಆರೋಪಿಯ ಬಂಧನದಿಂದ ಹುಣಸೂರು,ಮೈಸೂರು,ಬೆಂಗಳೂರು,ರಾಮನಗರ,ಮಂಡ್ಯ,ನಂಜನಗೂಡು ಸೇರಿದಂತೆ ಇತರೆಡೆ ನಡೆದ 18 ಕನ್ನಕಳುವು ಪ್ರಕರಣಗಳು ಪತ್ತೆಯಾಗಿದೆ.

ಬಂಧಿತನಿಂದ 1.72 ಲಕ್ಷ ನಗದು,10 ಗ್ರಾಂ ಚಿನ್ನಾಭರಣ,3 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಉಸ್ತುವಾರಿಯಲ್ಲಿ ಹುಣಸೂರು ಟೌನ್ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಸಂತೋಷ್ ಕಶ್ಯಪ್,ಪಿಎಸ್ಸೈ ಗಳಾದ ನಾಗಯ್ಯ ಹಾಗೂ ಜಮೀರ್ ಅಹ್ಮದ್ ರವರ ನೇತೃತ್ವದಲ್ಲಿ ಸಿಬ್ಬಂದಿ ಯೋಗೇಶ್,ಅರುಣ್,ರವೀಶ್,
ಮಹೇಂದ್ರ,ದಿಲೀಪ್,ರವಿಕುಮಾರ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮನೆಕಳ್ಳನ ಬಂಧಿಸಿದ ಹುಣಸೂರು ಪೊಲೀಸರು:5.5 ಲಕ್ಷ ಮೌಲ್ಯದ‌ ವಸ್ತು ವಶ Read More