ದುಬಾರಿ ಬೆಲೆಯ ಕಾರುಗಳ ಕೂಲಿಂಗ್ ಪೇಪರ್ ತೆರವುಗೊಳಿಸಿ:ತೇಜಸ್ವಿ
ಮೈಸೂರು: ಮೈಸೂರಿನಾದ್ಯಂತ ಥಾರ್, ಇನೋವಾ ಕ್ರಿಸ್ತ ಸೇರಿದಂತೆ ದುಬಾರಿ ಬೆಲೆಯ ಕಾರುಗಳ ಕೂಲಿಂಗ್ ಪೇಪರ್ ಗಳನ್ನು ತೆರವುಗೊಳಿಸಬೇಕೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ಮೈಸೂರು ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರಿಂದ ವಾಹನ ತಪಾಸಣೆ ಕಾರ್ಯ ಆಗಾಗ ನಡೆಯುತ್ತಿರುತ್ತದೆ,ಇದು ಒಳ್ಳೆಯದು.
ಆದರೆ ಬಹುತೇಕ ಕಡೆಗಳಲ್ಲಿ ಪೋಲಿಸರು ದುಬಾರಿ ಬೆಲೆಯ ಕಾರುಗಳನ್ನು ತಡೆಯುವುದೆ ಇಲ್ಲ ಸಣ್ಣ ಪುಟ್ಟ ಕಾರುಗಳನ್ನು ರಸ್ತೆ ಮಧ್ಯಕ್ಕೆ ಬಂದು ತಡೆದು ನಿಲ್ಲಿಸಿ ತಪಾಸಣೆ ಮಾಡಿ ದಂಡ ವಿಧಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಮೈಸೂರು ಜಿಲ್ಲೆಯಲ್ಲಿ ರಿಂಗ್ ರಸ್ತೆಗಳಲ್ಲಿ ಥಾರ್, ಇನೋವಾ ಕ್ರಿಸ್ತ, ಮತ್ತು ಫಾರ್ಚುನರ್ ಕಾರುಗಳಲ್ಲಿ ಕೂಲಿಂಗ್ ಪೇಪರ್ ಅನ್ನು ಹೆಚ್ಚು ಬಳಸಿರುತ್ತಾರೆ, ಬಹುತೇಕ
ಕಾರುಗಳಲ್ಲಿ ವಾಹನ ಚಾಲನೆ ಮಾಡುತ್ತಿರುವವರು ಯಾರೆಂದು ಕೂಡ ತಿಳಿಯುವುದಿಲ್ಲ ಅಂತಹ ಕಾರುಗಳನ್ನು ಪೋಲಿಸರು ತಡೆದು ತಪಾಸಣೆ ನಡೆಸುತ್ತಿಲ್ಲ,ಇದು ಹೀಗೇ ಮುಂದುವರಿದರೆ ಸಾರ್ವಜನಿಕರು ಪೋಲಿಸರ ವಿರುದ್ಧ ಅಸಹಾಕರ ತೋರುವ ಸಂದರ್ಭ ಉಂಟಾಗುತ್ತದೆ ಎಂದು ತೇಜಸ್ವಿ ಎಚ್ಚರಿಸಿದ್ದಾರೆ.
ಪೋಲಿಸ್ ಇಲಾಖೆಯವರು ತಾರತಮ್ಯ ಮಾಡದೆ ದುಬಾರಿ ಬೆಲೆಯ ಕಾರುಗಳನ್ನು ಕೂಡಾ ತಡೆದು ತಪಾಸಣೆ ಮಾಡಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.
ಮೈಸೂರಿನ ಬಹುತೇಕ ವಾಹನಗಳಲ್ಲಿ ಕೂಲಿಂಗ್ ಪೇಪರ್ ಹೆಚ್ಚಾಗಿ ಬಳಸುತ್ತಿರುವುದು ಕಂಡು ಬಂದಿದೆ
ಇನ್ನು ಮುಂದೆ ಅಂತಹ ಕಾರುಗಳನ್ನು ಬಿಡದೆ ತಪಾಸಣೆ ಮಾಡಿ ಸ್ಥಳದಲ್ಲೇ ಕೂಲಿಂಗ್ ಪೇಪರ್ ಅನ್ನು ತೆರವುಗೊಳಿಸಿ ದಂಡ ವಿಧಿಸಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ.



