18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ:ಐದು ಮಂದಿ ಅರೆಸ್ಟ್

ಕೊಡಗು: 18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ ಮಾಡಿದ್ದ ಐದು ಮಂದಿಯನ್ನು ಕೊಡಗು ಜಿಲ್ಲೆ, ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್, ರಾಜು, ಶರತ್, ದಿನೇಶ್, ಜಿತೇಂದ್ರ ಬಂಧಿತಆರೋಪಿಗಳಾಗಿದ್ದು,ಅವರಿಂದ 6,495ಕೆಜಿ ಕಾಫಿ, ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರಿನ ಉಮಾಕಾಫಿ ವರ್ಕ್ಸ್ ನಲ್ಲಿ ಕಳ್ಳತನವಾಗಿತ್ತು.

ಐವರು ಆರೋಪಿಗಳು 18 ಲಕ್ಷ ಮೌಲ್ಯದ 70 ಕ್ವಿಂಟಲ್ ಕಾಫಿ ಕಳ್ಳತನ ಮಾಡಿದ್ದರು. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ:ಐದು ಮಂದಿ ಅರೆಸ್ಟ್ Read More

ಹುಣಸೂರು ಮೂಕನಹಳ್ಳಿ ಗ್ರಾಮದಲ್ಲಿ ಕಳವು; ನಗದು ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು: ಜಿಲ್ಲೆಯ ಹುಣಸೂರಿನ ಮೂಕನಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳರು
ಲಾಕರ್‌ನಲ್ಲಿಟ್ಟಿದ್ದ 200ಗ್ರಾಂ ಚಿನ್ನಾಭರಣ 1 ಲಕ್ಷ ನಗದು ಕಳ್ಳತನ ಮಾಡಿದ್ದಾರೆ.

ಸ್ವಾಮಿಗೌಡ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಮನೆಯಲ್ಲಿ ಯಾರೂ ಇರಲಿಲ್ಲ,ಹೊರಗಡೆ ಹೋಗಿದ್ದರು.

ಒಂದು ಚೈನ್, 4 ಉಂಗುರ, 2 ಜೊತೆ ಓಲೆ, ಕಡಗ, ಬ್ರಾಸ್ ಲೈಟ್
ಒಂದು ಲಕ್ಷರೂ ನಗದು ಕಳುವಾಗಿದೆ.
ಹುಣಸೂರು ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿ ಮನೆಯವರಿಂದ‌ ಮಾಹಿತಿ ಪಡೆದರು.

ಹುಣಸೂರು ಮೂಕನಹಳ್ಳಿ ಗ್ರಾಮದಲ್ಲಿ ಕಳವು; ನಗದು ಚಿನ್ನಾಭರಣ ದೋಚಿದ ಕಳ್ಳರು Read More

ವಿದ್ಯುತ್‌ ಕಳ್ಳತನ: 6.36 ಕೋಟಿ ದಂಡ ವಿಧಿಸಿದ ಸೆಸ್ಕ್

ಮೈಸೂರು, ಮಾ.5: ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದವರ ವಿರುದ್ಧ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ಜಾಗೃತ ದಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ವಿದ್ಯುತ್ ಕಳ್ಳತನ ಮಾಡಿದವರಿಗೆ ಸೆಸ್ಕ್ ಅಧಿಕಾರಿಗಳು 6 ಕೋಟಿ ರುಪಾಯಿಗೂ ಹೆಚ್ಚು ದಂಡ ವಿಧಿಸಿದ್ದಾರೆ.

ಸೆಸ್ಕ್‌ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸೆಸ್ಕ್ ಜಾಗೃತದಳದ ಪೊಲೀಸ್ ಅಧೀಕ್ಷಕರಾದ ಸವಿತಾ ಹೂಗಾರ ಅವರ ನೇತೃತ್ವದಲ್ಲಿ ಜಾಗೃತದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸೆಸ್ಕ್‌ ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ,ಆ ಮೂಲಕ ಅಕ್ರಮವಾಗಿ ವಿದ್ಯುತ್‌ ಕಳ್ಳತನ, ವಿದ್ಯುತ್‌ ದುರುಪಯೋಗ ಮಾಡಿದವರ ವಿರುದ್ಧ ಕ್ರಮಕೈಗೊಂಡು, ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸೆಸ್ಕ್ ಜಾಗೃತದಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಗೃಹ, ವಾಣಿಜ್ಯ, ಕೈಗಾರಿಕೆ, ತಾತ್ಕಾಲಿಕ ಸ್ಥಾವರಗಳು ಮತ್ತು ಇತರ ಕಡೆಗಳಲ್ಲಿ 5716 ಸ್ಥಾವರಗಳನ್ನು ಜಾಗೃತದಳದ ಅಧಿಕಾರಿಗಳು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ 1312 ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಪ್ರಕರಣಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಪ್ರಕರಣಗಳಿಂದ ಒಟ್ಟು 6,36,72,607 ರೂ. ದಂಡ ವಿಧಿಸಿದ್ದು, ಈ ಅವಧಿಯಲ್ಲಿ ಹಿಂದಿನ ಪ್ರಕರಣಗಳು ಸೇರಿ 5,94,89,898 ರೂ. ದಂಡ ವಸೂಲಿ ಮಾಡಲಾಗಿದೆ.

ಮೀಟರ್‌ ಪರಿಶೀಲನೆ ವಿಭಾಗದಿಂದ ವಿವಿಧ ವಿಭಾಗಗಳಲ್ಲಿ ಒಟ್ಟು 23,014 ಸ್ಥಾವರಗಳ ರೇಟಿಂಗ್‌ ಮಾಡಿ, ಲೋಪಗಳಿರುವ ಕಡೆಗಳಲ್ಲಿ ಗುರುತಿಸಲಾಗದ ಪ್ರಕರಣಗಳನ್ನು ದಾಖಲಿಸಿ 12,37,56,660 ರೂ. ದಂಡವನ್ನು ವಿಧಿಸಲಾಗಿದೆ.

ವಿದ್ಯುತ್ ಕಳ್ಳತನ ಮಾಡುವುದು ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವಾಗಿದ್ದು, ವಿದ್ಯುತ್ ಕಳ್ಳತನ ಮಾಡುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ವಿದ್ಯುತ್ ಕಳ್ಳತನದ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಸಂಖ್ಯೆಗಳಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸೆಸ್ಕ್‌ ಜಾಗೃತ ದಳದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಸಿ. ಉಮೇಶ್‌ ಹಾಗೂ ಪೊಲೀಸ್‌ ಉಪ ಅಧೀಕ್ಷಕರಾದ ಆನಂದಮೂರ್ತಿ ತಿಳಿಸಿದ್ದಾರೆ.

ಅಲ್ಲದೆ, ವಿದ್ಯುತ್ ಕಳ್ಳತನ ಕಂಡುಬಂದಲ್ಲಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ.

ಸೆಸ್ಕ್‌ ಜಾಗೃತ ದಳ:
ಮೈಸೂರು ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9448994736
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) – 9448994737.

ಮಂಡ್ಯ ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9448994919
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448994863.

ಹಾಸನ ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9448994935
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448994936

ಚಾಮರಾಜನಗರ ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9449598689
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448994926

ಕೊಡಗು ಜಿಲ್ಲೆ: ಪೊಲೀಸ್‌ ಇನ್ಸ್‌ಪೆಕ್ಟರ್‌ 9449598620
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 9448499902

ವಿದ್ಯುತ್‌ ಕಳ್ಳತನ: 6.36 ಕೋಟಿ ದಂಡ ವಿಧಿಸಿದ ಸೆಸ್ಕ್ Read More

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ

ಮೈಸೂರು: ಮೈಸೂರಿನ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಸಿದ್ದಾರ್ಥ ನಗರದ ಮನೆಯೊಂದರಲ್ಲಿ ಆರೋಪಿಗಳು ಕಳುವು ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಪೊಲೀಸರು 17 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣ ಹಾಗೂ 2.5 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ನಜರಬಾದ್ ಠಾಣೆ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಪಿ ಎಸ್ ಐ ಗಳಾದ ಶ್ರೀನಿವಾಸ ಪಾಟೀಲ್, ನಟರಾಜು, ಶೇಖ್ ಫಿರೋಜ್, ಚಂದ್ರಶೇಖರ್ ರಾವ್ ಹಾಗೂ ಸಿಬ್ಬಂದಿ ಪ್ರದೀಪ್, ಪ್ರಕಾಶ್, ರಮೇಶ್, ಸತೀಶ್ ಕುಮಾರ್, ಸಂಜು, ವೆಂಕಟೇಶ್, ಮೊಹಮ್ಮದ್ ಇಸ್ಮಾಯಿಲ್, ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ Read More