ಜಾನಪದ ಧರ್ಮಾತೀತ; ಚೌಕಟ್ಟು,ಇತಿಮಿತಿಇಲ್ಲ-ಡಾ ಜಾನಪದ ಎಸ್ ಬಾಲಾಜಿ

ತರೀಕೆರೆ: ಜಾನಪದ ಧರ್ಮಾತೀತವಾದದ್ದು ಇದಕ್ಕೆ ಚೌಕಟ್ಟು, ಇತಿಮಿತಿ ಯಾವುದೂ ಇಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ತರೀಕೆರೆ ತಾಲೂಕಿನ ಬೆಟ್ಟ ತಾವರೆಕೆರೆಯ ಅಂಬೇಡ್ಕರ್ ವಸತಿ ಶಾಲೆ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಚಿಕಮಗಳೂರು ಜಿಲ್ಲಾ ಮಹಿಳಾ ಘಟಕ ಏರ್ಪಡಿಸಿದ್ದ ಜಿಲ್ಲಾ ದಶಮಾನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾಗಿದ್ದು ಎಂದಿಗೂ ಇದು ನಶಿಸುವುದಿಲ್ಲ, ಕಾಲ ಕ್ರಮೇಣ ಪರಿವರ್ತನೆಗೊಳ್ಳುವ ಶಕ್ತಿ ಜಾನಪದ ಹೊಂದಿದೆ, ಎಷ್ಟೇ ಪಾಶ್ಚಾತ್ಯ ಸಂಸ್ಕೃತಿ ಬಂದರೂ ಸಹ ಜಾನಪದದ ಸೊಗಡನ್ನು ಅಳಿಸಲು ಸಾಧ್ಯವಿಲ್ಲ ಎಂದು ದೃಢವಾಗಿ ‌ಹೇಳಿದರು.

ಜಾನಪದ ಬೆಸೆಯುವ ಶಕ್ತಿಯನ್ನು ಹೊಂದಿದೆ, ಇದನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು‌ ಹಮ್ಮಿಕೊಂಡರೆ ವಿದ್ಯಾರ್ಥಿಗಳು ಯುವಜನರಲ್ಲಿ ಜಾನಪದ ಜಾಗೃತಿಯನ್ನು ಮೂಡಿಸಿದಂತಾಗುತ್ತಿದೆ ಎಂದು ಡಾ.ಬಾಲಾಜಿ‌ ಅಭಿಪ್ರಾಯ ಪಟ್ಟರು.

ಈ ದೆಸೆಯಲ್ಲಿ ಜಿಲ್ಲಾ ಮಹಿಳಾ ಘಟಕ ಕಾರ್ಯ ಪ್ರವೃತ್ತಿಯಾಗಿದೆ ಎಂದು ತಿಳಿಸಿದರು.

ಜಾನಪದ ನೂರೊಂದು ಕೃತಿ ಬಿಡುಗಡೆ ಮಾಡಿ ತರೀಕೆರೆ ಉಪ ವಿಭಾಗದ ಉಪವಿ ಭಾಗಾಧಿಕಾರಿ ಡಾ ಕೆ ಜೆ ಕಾಂತರಾಜ್ ಮಾತನಾಡಿ, ಜನಪದ ಗೀತೆಗಳು ಮಾನವೀಯ ಮೌಲ್ಯ ಹಾಗೂ ಜೀವನ ಪಾಠವನ್ನು ಕಲಿಸುತ್ತದೆ, ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ತರೀಕೆರೆ ಕಾರ್ಯನಿರ್ವಾಹಕ ಅಧಿಕಾರಿ ದೇವೇಂದ್ರಪ್ಪ ಮಾತನಾಡಿ ತರೀಕೆರೆಯಲ್ಲಿ ಬಹಳಷ್ಟು ಜಾನಪದ ಪ್ರಕಾರಗಳಿದ್ದು ಇವುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಜಿಲ್ಲಾ ಮಹಿಳಾ ಘಟಕ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲಳ್ಳಿ ಮಾತನಾಡಿ, ಜಾನಪದ ನೂರೊಂದು ಕೃತಿಯು ಕರೋನ ಕಾಲಘಟ್ಟದಲ್ಲಿ ನಡೆದ ನೂರೊಂದು ವಿಚಾರ ಸಂಕೀರ್ಣಗಳ ಬಹಳ ಪ್ರಮುಖ ಲೇಖನಗಳಾಗಿದ್ದು, ನಾಡಿನ ಬಹುತೇಕ ವಿದ್ವಾಂಸರ ಲೇಖನಗಳನ್ನು ಕೃತಿಗಳು ಒಳಗೊಂಡಿದೆ, ಒಂದು ಆಕಾರ ಗ್ರಂಥವಾಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ವಸತಿ ಶಾಲೆ ಬೆಟ್ಟ ತಾವರೆಕೆರೆಯ ಪ್ರಾಂಶುಪಾಲೆ ಸುವರ್ಣ ಎ ನಾಯಕ ಮಾತನಾಡಿ ಜಾನಪದ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಕ್ಷಮ್ಮ ಮಾತನಾಡಿ ದಶಮಾನೋತ್ಸವದಲ್ಲಿ ಹತ್ತು ಜನ ಹಿರಿಯ ಕಲಾವಿದರಿಗೆ ದಶಮಾನೋತ್ಸವ ಪ್ರಶಸ್ತಿಯನ್ನು ನೀಡುವುದಲ್ಲದೆ ಎಲ್ಲಾ ತಾಲೂಕುಗಳನ್ನು ಸಹ ಹತ್ತತ್ತು ಕಲಾವಿದರನ್ನು ಮುಂದಿನ ದಿನಗಳಲ್ಲಿ ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಅಳಿವಿನಂಚಿನ ಕಲೆಗಳನ್ನು
ಮಹಿಳಾ ಘಟಕದ ವತಿಯಿಂದ ಸಂರಕ್ಷಣೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ, ವಿಜಯಕುಮಾರಿ,ಕಲಾ ಮಾಲ್ತೇಶ್, ಕೆ ಸಿ ಕಾಂತಪ್ಪ ಜಿಲ್ಲಾಧ್ಯಕ್ಷರು ರಾಮನಗರ ಹಾಗೂ ವಿಜಯ್ ಕೊಪ್ಪ ಜಿಲ್ಲಾಧ್ಯಕ್ಷರು ಮಂಡ್ಯ ಹಾಗೂ ರತ್ನಾಕರ್ ಜಿಲ್ಲಾಧ್ಯಕ್ಷರು ಚಿಕ್ಕಮಂಗಳೂರು ಜಿಲ್ಲೆ ಆಶಾ ಭೋಸ್ಲೆ ಅಧ್ಯಕ್ಷರು ಸೀನಿಯರ್ ಚೇಂಬರ್ ತರೀಕೆರೆ ಮತ್ತಿತರರು ಉಪಸ್ಥಿತರಿದ್ದರು.

ಜಾನಪದ ಧರ್ಮಾತೀತ; ಚೌಕಟ್ಟು,ಇತಿಮಿತಿಇಲ್ಲ-ಡಾ ಜಾನಪದ ಎಸ್ ಬಾಲಾಜಿ Read More

ತರೀಕೆರೆಯಲ್ಲಿ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಗೌರವ ಸನ್ಮಾನ

ಚಿಕ್ಕಮಗಳೂರು,ಮಾ.8: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಬಯಲು ರಂಗ ಮಂದಿರ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ ಮರಳು ಸಿದ್ದಪ್ಪ ಪಾಟೀಲ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಸರ್ವಾಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಗೌರವಿಸಲಾಯಿತು.

ಕನ್ನಡ ಭಗವಾನ್, ಮಂಸಾದ್ ಬೇಗಂ, ಇಮ್ರಾನ್ ಚಿಕ್ಕಮಗಳೂರು, ಏನ್ ಆರ್ ಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್, ತರಿಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಈ ವೇಳೆ ಉಪಸ್ಥಿತರಿದ್ದರು.

ತರೀಕೆರೆಯಲ್ಲಿ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಗೌರವ ಸನ್ಮಾನ Read More