ತಾತಯ್ಯ,ರಾಧಾಕೃಷ್ಣನ್ ಜನ್ಮ ದಿನ ಆಚರಿಸಿದ ಅನಾಥಾಲಯದ ಹಳೆಯ ವಿದ್ಯಾರ್ಥಿಗಳು

ಮೈಸೂರು: ಪೂಜ್ಯ ತಾತಯ್ಯನವರ 180ನೇ ಜನ್ಮದಿನ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಅನಾಥಾಲಯದ ಹಳೆಯ ವಿದ್ಯಾರ್ಥಿಗಳ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಮುಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್,ಈ ಇಬ್ಬರು ಮಹನೀಯರು ಸಮಾಜ ಸುಧಾರಣೆ ಯಂತಹ ಸೇವೆಯನ್ನ ಮಾಡಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ ಎಂದು ಬಣ್ಣಿಸಿದರು.

ಅದರಲ್ಲೂ ರಾಜಕೀಯ, ಧಾರ್ಮಿಕ, ಶಿಕ್ಷಣ ಕ್ಷೇತ್ರ, ಪತ್ರಿಕಾರಂಗ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಾತಯ್ಯ ಅವರು ತಮ್ಮದೇ ಆದ ಚಾಪನ್ನು ಮೂಡಿಸಿರುವುದು ವಿಶೇಷ ಎಂದು ತಿಳಿಸಿದರು.

ಮರಿಮಲ್ಲಪ್ಪ, ಸದ್ವಿದ್ಯಾ, ಶಾರದಾ ವಿಲಾಸ, ಮಹಾರಾಣಿ ಕಾಲೇಜ್ ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ತಾತಯ್ಯ ಅವರು ಪ್ರಾಣಿಗಳಗೋಸ್ಕರ ಪಿಂಜರಫೋಲನ್ನು ಸ್ಥಾಪನೆ ಮಾಡಿದರು ಎಂದು ಹೇಳಿದರು.

ರಾಜ ಗುರುಗಳಾಗಿ, ರಾಜ ನೀತಿಜ್ಞರಾಗಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಸ್ಯರಾಗಿ ನ್ಯಾಯವಿದಾಯಕ ಸಭೆಯಲ್ಲಿ ಹಾಗೂ ಪುರಸಭೆ ಸದಸ್ಯರಾಗಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ರಾಜೀವ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರೊಫೆಸರ್ ಸುಂದರೇಶ್, ವಿಪ್ರ ಮುಖಂಡರಾದ ಕೆ ರಘುರಾಮ್ ವಾಜಪೇಯಿ, ಮಂಜುನಾಥ್ ಹೆಗಡೆ, ಶ್ರೀಧರ್, ರವೀಂದ್ರ, ಎಸ್ ರಂಗನಾಥ, ಪ್ರಶಾಂತ್ ಭರದ್ವಾಜ್, ವಿಕ್ರಮ ಅಯ್ಯಂಗಾರ್, ವೀಣಾ, ಲಕ್ಷ್ಮಿ, ಕುಸುಮಲತಾ ಮುಂತಾದವರು ಹಾಜರಿದ್ದರು.

ತಾತಯ್ಯ,ರಾಧಾಕೃಷ್ಣನ್ ಜನ್ಮ ದಿನ ಆಚರಿಸಿದ ಅನಾಥಾಲಯದ ಹಳೆಯ ವಿದ್ಯಾರ್ಥಿಗಳು Read More

ಪತ್ರಿಕೆಗಳ ಭೀಷ್ಮ ತಾತಯ್ಯ- ಹರೀಶ್ ಗೌಡ

ಮೈಸೂರು:ಮೈಸೂರು ಸಂಸ್ಥಾನದ ಮಹಾರಾಜರೊಂದಿಗೆ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸಿದ್ದವರು ರಾಜಗುರು ತಾಯ್ಯರವರು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.

ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯನವರ 180ನೇ ಜಯಂತಿ ಅಂಗವಾಗಿ ಮೈಸೂರು ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಗರ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾತಯ್ಯ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶಾಸಕರು ಮಾತನಾಡಿದರು.

ಪತ್ರಿಕಾ ರಂಗದ ಪ್ರೋತ್ಸಾಹ ಮತ್ತು ಪತ್ರಕರ್ತರ ಕರ್ತವ್ಯ ನಿರ್ವಹಣೆ ಪತ್ರಿಕೆ ಮುದ್ರಣದಿಂದ ಓದುಗರ ಮನೆಯಂಗಳದವರೆಗೂ ಸಾಧ್ವಿ, ವೃತ್ತಾಂತ, ಚಿಂತಾಮಣಿ, ಮೈಸೂರು ಹೆರಾಲ್ಡ್ ಮುಂತಾದ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದ ಪತ್ರಿಕಾ ಭೀಷ್ಮ ತಾಯ್ಯನವರು ಎಂದು ಬಣ್ಣಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಯುವಕರಿಗೆ ಪತ್ರಿಕೆಗಳ ಮೂಲಕ ದೇಶಪ್ರೇಮ ಜಾಗೃತಿ ಮೂಡಿಸುತ್ತಿದ್ದರು, ಸಮಾಜದಲ್ಲಿ ಅಸ್ಪೃಶ್ಯತೆ, ಜೀತ ಪದ್ದತಿ ವಿರುದ್ಧ ಜನಾಂದೋಲನ ಹೋರಾಟ ಮಾಡಿದವರು ತಾತಯ್ಯನವರು ಎಂದು ತಿಳಿಸಿದರು.

ವಲಯ ಆಯುಕ್ತರಾದ ಪ್ರಭಾ, ಹಿರಿಯ ಸಮಾಜ ಸೇವಕ ಕೆ.‌ರಘುರಂ ವಾಜಪೇಯಿ, ಅನಾಥಾಲಯ ಕಾರ್ಯದರ್ಶಿ ಸುಂದರೇಶನ್, ಹೇಮಲತಾ, ನಿರೂಪಕ ಅಜಯ್ ಶಾಸ್ತ್ರಿ, ನಂಜುಂಡಿ, ರವಿಚಂದ್ರ ನವೀನ್, ರಂಗನಾಥ್, ಇಂಜಿನಿಯರ್ ತೇಜಸ್ವನಿ, ಶಾಂತರಾಜು, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಪತ್ರಿಕೆಗಳ ಭೀಷ್ಮ ತಾತಯ್ಯ- ಹರೀಶ್ ಗೌಡ Read More