ಮೇಕೆದಾಟು ಯೋಜನೆ ಮಾಡುತ್ತೇವೆ:ಸಿಎಂ

ಮೈಸೂರು‌: ಮೇಕೆದಾಟು ಯೋಜನೆಯನ್ನು ನಾವು ಮಾಡಯೇ ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ತಕ್ಷಣ ಮೇಕೆದಾಟುವಿನಲ್ಲಿ ಕಾರ್ಯ ಶುರು ಆಗತ್ತದೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಮೇಕೆದಾಟುವಿನಲ್ಲಿ ಕಚೇರಿ ಕೂಡಾ ಮಾಡಿದ್ದೇವೆ ಎಂದು ಹೇಳಿದ ಸಿಎಂ,
ನಮ್ಮಲ್ಲಿರುವ ನಮ್ಮ ನೀರನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ,
ರಾಜ್ಯದಲ್ಲಿ ಶೇ.6 ರಷ್ಟು ನೀರಾವರಿ ನಾವು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಟ್ರಿಬ್ಯೂನಲ್ ಆರ್ಡರ್ ಪ್ರಕಾರ ತಮಿಳುನಾಡಿಗೆ ನಾವು ನೀರು ಬಿಟ್ಟಿದ್ದೇವೆ,
ಕಳೆದ ವರ್ಷ ಕೂಡಾ ಜಾಸ್ತಿ ನೀರು ಬಿಟ್ಟಿದ್ದೇವೆ
ಒಟ್ಟು 22 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಹೇಳಿದರು.

ಒಮ್ಮೊಮ್ಮೆ ಮಳೆ ಸರಿಯಾಗಿ ಆಗದಿದ್ದಾಗ ಒಂದು ವರ್ಷ ಎರಡು ವರ್ಷ ಕಡಿಮೆ ನೀರು ಕೊಟ್ಟಿದ್ದೇವೆ,ಅದು ಬಿಟ್ಟರೆ
ಮಿಕ್ಕೆಲ್ಲಾ ವರ್ಷ ನಾವು ಹೆಚ್ಚು ನೀರು ಕೊಟ್ಟಿದ್ದೇವೆ,ಸಂಕಷ್ಟದ ಸಮಯದಲ್ಲಿ ನೀರು ಹಂಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ಸರ್ಕಾರ ಬಂಡೆ ತರ:
ಸರ್ಕಾರ ಇರಲ್ಲ ಬೀಳುತ್ತೆ ಎಂಬೆಲ್ಲ ವದಂತಿ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ನಗುತ್ತಾ
ನಮ್ಮ ಸರ್ಕಾರ ಬಂಡೆ ತರ 5 ವರ್ಷ ಇರತ್ತೆ ರೀ ಎಂದು ಪ್ರತಿಕ್ರಿಯಿಸಿದರು.

ಅಲ್ಲದೆ ಪಕ್ಕದಲ್ಲೇ ಇದ್ದ ಉಪ ಮುಖ್ಯ ಮಂತ್ರಿ
ಡಿ.ಕೆ.ಶಿವಕುಮಾರ್ ಅವರ ಕೈ ಎತ್ತಿ ತೋರಿಸಿ
ಬಂಡೆ ತರ ನಮ್ಮ ಸರ್ಕಾರ ಇರುತ್ತೆ ನಾವು ಒಗ್ಗಟ್ಟಾಗಿ ಇರುತ್ತೇವೆ‌ಎಂದು ಹೇಳಿದ್ದು ಎಲ್ಲರಲ್ಲೂ ನಗು ತರಿಸಿತು.

ಸುರ್ಜೆವಲಾ ಅವರು ರಾಜ್ಯಕ್ಕೆ ಬರುತ್ತಿದ್ದಾರಲ್ಲಾ ಎಂಬ ಮತ್ತೊಂದು ಪ್ರಶ್ನೆಗೆ, ಪಕ್ಷ ಸಂಘಟನೆ ಬಲ ಪಡಿಸಲು ರಾಜ್ಯಕ್ಕೆ ಬರುತ್ತಿದ್ದಾರೆ,ಅವರ ಕೆಲ್ಸ ಅವರು ಮಾಡುತ್ತಾರೆ ಅವರು ಬರುವುದರಲ್ಲಿ ಅಂತಹ ವಿಶೇಷತೆ‌ ಇಲ್ಲ ಎಂದು ಸಿಎಂ ಉತ್ತರಿಸಿದರು.

ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದು,
ನಿಮಗೇನು ಅನ್ನಿಸುತ್ತೆ ಎಂದು ಮಾದ್ಯಮದವರನ್ನೇ ಪ್ರಶ್ನಿಸಿ
ನಾನು ದಸರಾ ಉದ್ಘಾಟನೆ ಮಾಡುತ್ತೇನೆ ಅದರಲ್ಲಿ ಸಂಶಯ ಬೇಡ ಎಂದು ಹೇಳಿದರು.

ಮೇಕೆದಾಟು ಯೋಜನೆ ಮಾಡುತ್ತೇವೆ:ಸಿಎಂ Read More

ತಮಿಳುನಾಡಿನಲ್ಲಿ ಬಂಡೆಗಳು ಕುಸಿದು 5 ಮಂದಿ ಸಾ*ವು

ತಮಿಳುನಾಡು: ತಮಿಳುನಾಡಿನ
ಶಿವಗಂಗಾ ಜಿಲ್ಲೆಯ ಕಲ್ಲು ಕ್ವಾರಿ ಸ್ಥಳದಲ್ಲಿ ಬೆಳಿಗ್ಗೆ ಇದ್ದಕ್ಕಿದ್ದಂತೆ ಬಂಡೆಗಳು ಕುಸಿದು ಐದು ಮಂದಿ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಸಿಂಗಂಪುನಾರಿ ಬಳಿಯ ಮಲ್ಲಕೊಟ್ಟೈನಲ್ಲಿರುವ ಕ್ವಾರಿ ಸ್ಥಳದಲ್ಲಿ ಸಂತ್ರಸ್ತರು, ಹೆಚ್ಚಾಗಿ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು,ರಕ್ಷಣಾ ಕಾರ್ಯ ಮುಂದುವರಿದಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಕಲ್ಲುಗಳನ್ನು ತೆರವುಗೊಳಿಸಿದ ನಂತರ ಮೂವರ ಶವಗಳನ್ನು ಹೊರತೆಗೆದಿದ್ದಾರೆ.

ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ, ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಮಧುರೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿಯಿಡೀ ಬಿದ್ದ ಮಳೆ ಅಥವಾ ಕಾರ್ಮಿಕರು ಬಳಸಿದ ಸ್ಫೋಟಕಗಳಿಂದ ಕಲ್ಲುಗಳು ಸಿಡಿದಿವೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಬಂಡೆಗಳು ಕುಸಿದು 5 ಮಂದಿ ಸಾ*ವು Read More

ವಿದ್ಯಾರ್ಥಿನಿ ಮೇಲೆ ಕಾಮುಕ ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ

ಚನ್ನೈ: ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕಾದ ದೇವರ‌ ಸ್ಥಾನದಲ್ಲಿರುವ ಗುರುಗಳೇ ಬಾಲಕಿ ಮೇಲೆ‌ ಅತ್ಯಾಚಾರ ಎಸಗಿದ ಅತ್ಯಂತ ಮೃಗೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆದ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.

13 ವರ್ಷದ ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರವೆಸಗಿದ್ದು,ಈ ಸಂಬಂಧ ಮೂವರು ಕಾಮುಕ ಶಿಕ್ಷಕರನ್ನು ಬಂಧಿಸಲಾಗಿದೆ.

ಚಿನ್ನಸ್ವಾಮಿ, ಆರಮುಗಂ, ಪ್ರಕಾಶ್ ಬಂಧಿತ ಆರೋಪಿ ಶಿಕ್ಷಕರು. ಕೆಲ ದಿನಗಳಿಂದ ವಿದ್ಯಾರ್ಥಿನಿ ಶಾಲೆಗೆ ಬಾರದಿರುವುದನ್ನು ಗಮನಿಸಿದ ಮುಖ್ಯ ಶಿಕ್ಷಕಿ ಆಕೆಯ ಮನೆಗೆ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಪೋಷಕರು ವಿಷಯ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಮುಖ್ಯಶಿಕ್ಷಕಿ ಜಿಲ್ಲಾ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.ಕೂಡಲೇ ಅಧಿಕಾರಿಗಳು ಸಂತ್ರಸ್ತ ಬಾಲಕಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು, ಬಾರ್ಕೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ನಂತರ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ವಿದ್ಯಾರ್ಥಿನಿ ಮೇಲೆ ಕಾಮುಕ ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ Read More

ಭಾರತ ಅಂಚೆ ಬ್ಯಾಡಿಂಟನ್ ಪಂದ್ಯಾವಳಿ:ತಮಿಳುನಾಡು ಪುರುಷರ ತಂಡಕ್ಕೆ ಪ್ರಶಸ್ತಿ

ಮೈಸೂರು: 38ನೇ ಅಖಿಲ ಭಾರತ ಅಂಚೆ ಬ್ಯಾಡಿಂಟನ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ತಮಿಳುನಾಡು ತಂಡವು ಕೇರಳ ತಂಡವನ್ನು 3-2 ಅಂತರದಿಂದ ಸೋಲಿಸಿ ಟೀಮ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿತು.

ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಫೈನಲ್ಸ್ ತೀವ್ರ ಪೈಪೋಟಿಯಿಂದ ಕೂಡಿತ್ತು.

ಕೊನೆಯ ಕ್ಷಣದವರೆಗೂ ಪಂದ್ಯ ರೋಚಕವಾಗಿತ್ತು. ತಮಿಳುನಾಡು ತಂಡದ ಎಸ್ ಸುಬ್ರಮಣಿಯನ್ ಮತ್ತು ಇ.ಯುವರಾಜ್ ಅವರು ಉತ್ತಮ ಪ್ರದರ್ಶನದ ನೀಡಿ ಕೇರಳ ತಂಡವನ್ನು 3-2 ಅಂತರದಿಂದ ಸೋಲಿಸಿ ಟೀಮ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡರು.

ಪಂದ್ಯಗಳ ವಿವರ :
ಪ್ರೀ ಕ್ವಾರ್ಟರ್‌ ಲೀಗ್‌ ನಲ್ಲಿ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 29 ಪಂದ್ಯಗಳು, ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ 26 ಪಂದ್ಯಗಳು, ಪುರುಷರ ಡಬಲ್ಸ್ ವಿಭಾಗದಲ್ಲಿ 11 ಪಂದ್ಯಗಳು, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 6 ಪಂದ್ಯಗಳು, ಮಿಶ್ರ ಡಬಲ್ಸ್ ವಿಭಾಗದಲ್ಲಿ 8 ಪಂದ್ಯಗಳು ಮತ್ತು 45 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 11 ಪಂದ್ಯಗಳು, 45 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ವಿಭಾಗದಲ್ಲಿ 1 ಪಂದ್ಯ ಸೇರಿದಂತೆ ಒಟ್ಟು 92 ಪಂದ್ಯಗಳು ನಡೆದಿದೆ.

ಭಾರತ ಅಂಚೆ ಬ್ಯಾಡಿಂಟನ್ ಪಂದ್ಯಾವಳಿ:ತಮಿಳುನಾಡು ಪುರುಷರ ತಂಡಕ್ಕೆ ಪ್ರಶಸ್ತಿ Read More

ಕಾರಿನಲ್ಲಿ ಒಂದೇ ಕುಟುಂಬದ ಐದು ಮಂದಿಶವ ಪತ್ತೆ

ಚನ್ನೈ: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಹೆದ್ದಾರಿಯಲ್ಲಿ ರಸ್ತೆಬದಿ ನಿಂತಿದ್ದ ಕಾರಿನಲ್ಲಿ ಒಂದೇ ಕುಟುಂಬದ ಐದು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ತಿರುಚ್ಚಿ-ಮದುರೈ ಹೆದ್ದಾರಿಯ ನವಸಮುತಿರಂ ಬಳಿ ಈ ಘಟನೆ ನಡೆದಿದ್ದು,
ವಾಚ್ ಮೆನ್ ಒಬ್ಬರು ಬಹಳ ಸಮಯದಿಂದ ಕಾರು ರಸ್ತೆ ಬದಿ ನಿಂತಿದ್ದನ್ನು ಕಂಡು ಅನುಮಾನದಿಂದ ಪರಿಶೀಲಿಸಿದಾಗ ಕಾರಿನಲ್ಲಿ ಐದು ಮಂದಿಯ ಶವ ಕಂಡು ಬಂದಿದ್ದು.

ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತರು ಸೇಲಂ ಮೂಲದ ಮಣಿಗಂದನ್, ಪತ್ನಿ ನಿತ್ಯಾ ಹಾಗೂ ಅವರ ಮನೆಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರು ಪುದುಕೊಟ್ಟೈಗೆ ಯಾಕೆ ಬಂದಿದ್ದರು ಎಂಬುದು ಗೊತ್ತಾಗಿಲ್ಲ, ವ್ಯಾಪಾರದಲ್ಲಿ ನಷ್ಟವುಂಟಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾರಿನಲ್ಲಿ ಒಂದೇ ಕುಟುಂಬದ ಐದು ಮಂದಿಶವ ಪತ್ತೆ Read More