ತೆಂಗಿನಕಾಯಿ ವ್ಯಾಪಾರಿಗೆ 49.47 ಲಕ್ಷ ವಂಚನೆ

ಮೈಸೂರು: ಇಂಪೋರ್ಟ್ ಅಂಡ್ ಎಕ್ಸ್ಪೋರ್ಟ್ ಉದ್ಯಮಿಯೊಬ್ಬ ಮೈಸೂರಿನ ತೆಂಗಿನಕಾರಿ ಹೋಲ್ ಸೇಲ್ ವ್ಯಾಪಾರಿಗೆ 49,47,401ರೂ ವಂಚಿಸಿದ‌ ಘಟನೆ ನಡೆದಿದೆ.

ಈ ಸಂಬಂಧ ತೆಂಗಿನಕಾಯಿ ವ್ಯಾಪಾರಿ ಸುಬೇದ್ ಅಗರವಾಲ್ ಎಂಬುವರು ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಚೆನ್ನೈನ ಶ್ರೀವತ್ಸನ್ ಎಂಬಾತ ವಂಚಿಸಿದ ಉದ್ಯಮಿ.

ತಮಿಳುನಾಡಿನ ನಿವಾಸಿ ಶ್ರೀವತ್ಸನ್,
ಪುಟ್ಟಣ್ಣ ಇಂಪೋರ್ಟ್ಸ್ ಅಂಡ್ ಎಕ್ಸ್ಪೋರ್ಟ್ ಎಂಬ ಹೆಸರಲ್ಲಿ ಉದ್ಯಮ ನಡೆಸುತ್ತಿದ್ದಾನೆ.

ಸುಬೇದ್ ಅಗರವಾಲ್ ಅವರು ಮೈಸೂರಿನ ಮಂಡಿ ಮೊಹಲ್ಲಾದ ಅಕ್ಬರ್ ರಸ್ತೆಯಲ್ಲಿ ಸುನಿಲ್ ಕುಮಾರ್ ಅಗರವಾಲ್ ಹೆಸರಲ್ಲಿ 15 ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ ಸುಬೇದ್ ಅಗರವಾಲ್ ರನ್ನ ಶ್ರೀವತ್ಸನ್ ಸಂಪರ್ಕಿಸಿ ವ್ಯಾಪಾರ ಕುದುರಿಸಿ ಸುಮಾರು 15 ಲಕ್ಷ ಮೌಲ್ಯದ ತೆಂಗಿನಕಾಯಿ ಖರೀದಿಸಿ 10 ಲಕ್ಷ ನೀಡಿದ್ದಾರೆ.

ನಂತರ ಶ್ರೀವತ್ಸನ್ ಸೂಚನೆಯಂತೆ ವಿವಿದೆಡೆಗೆ ತೆಂಗಿನಕಾಯಿ ಲೋಡ್ ಕಳಿಸಿದ್ದಾರೆ.ತಿಂಗಳುಗಳು ಕಳೆದರೂ ತೆಂಗಿನಕಾಯಿ ಹಣ ಬಂದಿಲ್ಲ.ಶ್ರೀವತ್ಸನ್ ಅವರಿಗೆ ಸೇರಿದ ನಾಲ್ಕು ಮೊಬೈಲ್ ಗಳು ಸ್ವಿಚ್ ಆಫ್ ಆಗಿದೆ.

ಶ್ರೀವತ್ಸನ್ ರಿಂದ ಒಟ್ಟು 49,47,401ರೂ ಬಾಕಿ ಬರಬೇಕಿದೆ ಎಂದು ಸುಬೇದ್ ಅಗರವಾಲ್ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತೆಂಗಿನಕಾಯಿ ವ್ಯಾಪಾರಿಗೆ 49.47 ಲಕ್ಷ ವಂಚನೆ Read More

ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ: 35 ಮಂದಿ ದು*ರ್ಮರಣ

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ನಟ-ರಾಜಕಾರಣಿ ವಿಜಯ್ ದಳಪತಿ ಅವರ‌ ಚುನಾವಣಾ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿದಲ್ಲಿ 35 ಕ್ಕೂ‌ ಹೆಚ್ಚು ಮಂದಿ ದುರ್ಮರಣ ಹೊಂದಿದ್ದಾರೆ.

ಮೃತಪಟ್ಟವರಲ್ಲಿ ಮೂವರು ಮಕ್ಕಳು ಮತ್ತು ವಯಸ್ಕರು ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬೆಂಬಲಿಗರೇ ಹೆಚ್ಚು,ರ‍್ಯಾಲಿಗಾಗಿ ಆರು ಗಂಟೆಗಳ ಕಾಲ ಕಾದಿದ್ದರು, ರ‍್ಯಾಲಿ ತಡವಾಗಿ ಬಂದಿದೆ ಹಾಗಾಗಿ ಹೆಚ್ಚಿನ ಜನಸಂದಣಿ ಸೇರಿದ್ದರು.ಆಗ ಕಾಲ್ತುಳಿತ ಸಂಭವಿಸಿ ಉಸಿರುಗಟ್ಟಿ‌ ಜನ ಮೃತಪಟ್ಟಿದ್ದಾರೆ.ಇನ್ನೂ 80 ಕ್ಕೂ‌ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು,ಸಾವಿನ ಸಂಖೆ ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಕರೂರಿಗೆ ಧಾವಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ತಮಿಳುನಾಡು ರ‍್ಯಾಲಿಯಲ್ಲಿ ನಡೆದ ಘೋರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ: 35 ಮಂದಿ ದು*ರ್ಮರಣ Read More

ಚಾಟಿ ಏಟು ಹಾಕಿಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದ ಅಣ್ಣಾಮಲೈ

ಚೆನ್ನೈ: ಕೊಯಮತ್ತೂರಿನ ಕಾಲಪಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟು ಕೊಟ್ಟುಕೊಂಡು ವಿಶಿಷ್ಟ ಪ್ರತಿಭಟಿಸಿದರು.

ಹಸಿರು ಧೋತಿ ಧರಿಸಿ, ಶರ್ಟ್ ಧರಿಸದೇ ಮನೆಯಿಂದ ಹೊರಬಂದ ಅಣ್ಣಾಮಲೈ, ಹಗ್ಗದಿಂದ ಮಾಡಿದ ಚಾಟಿಯಿಂದ ಚಾಟಿ ಬೀಸಿಕೊಂಡು ತಮ್ಮ ದೇಹವನ್ನೇ ದಂಡನೆಗೆ ಒಳಪಡಿಸಿದರು.

ಅನೇಕ ಬಾರಿ ಚಾಟಿ ಬೀಸಿಕೊಂಡು ತಮ್ಮ ದೇಹವನ್ನು ದಂಡನೆಗೆ ಒಳಪಡಿಸಿಕೊಂಡರು.ಮತ್ತೆ ಚಾಟಿ ಬೀಸ ಹೊರಟಾಗ ಬಿಜೆಪಿ ಸದಸ್ಯರು ತಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಮಲೈ, ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್ ಸೋರಿಕೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ಈ ಚಾಟಿ ಬೀಸುವ ಪ್ರತಿಭಟನೆಯನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಅಣ್ಣಾಮಲೈ ತಿಳಿಸಿದರು.

ನಾನು ನಿನ್ನೆ ನನ್ನ ಪಾದಗಳಿಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಹೇಳಿದ್ದೇನೆ ಅದರಂತೆ ಅವುಗಳನ್ನು ತೆಗೆದಿದ್ದೇನೆ ಎಂದು ತಿಳಿಸಿದರು.

ಡಿಎಂಕೆಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ಶೂ ಧರಿಸುವುದಿಲ್ಲ ಎಂದು ಘೊಷಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಣ್ಣಾಮಲೈ ತಿಳಿಸಿದರು.

ಚಾಟಿ ಏಟು ಹಾಕಿಕೊಂಡು ವಿಶಿಷ್ಟ ಪ್ರತಿಭಟನೆ ನಡೆಸಿದ ಅಣ್ಣಾಮಲೈ Read More