ಪಾರ್ಟಿ ಮಾಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿ ಗೆಳೆಯನ ಕೊಂದರು

ಮೈಸೂರು,ಏ. 2: ಕುಡಿದ ಮತ್ತಿನಲ್ಲಿ ಗೆಳೆಯರೆ ಸೇರಿಕೊಂಡು ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಹೇಯ ಘಟನೆ ಮೈಸೂರು ಜಿಲ್ಲೆ ಬನ್ನೂರಿನಲ್ಲಿ ನಡೆದಿದೆ.

ವರುಣ್ (23)ಕೊಲೆಯಾದ ಯುವಕ. ಪೋಷಕ್ ಹಾಗೂ ಇತರರು ಕೊಲೆ ಮಾಡಿದ ಆರೋಪಿಗಳು.

ವರುಣ್ ಮತ್ತು ಪೋಷಕ್ ಮತ್ತಿತರ ಸ್ನೇಹಿತರು ತಡರಾತ್ರಿ ಪಾರ್ಟಿ ಮಾಡಿದ್ದಾರೆ,ಆಗ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ಮನೆಗೆ ಹೋಗುವ ವೇಳೆ ವರುಣ್ ಗೆ ಪೋಷಕ್ ಹಾಗೂ ಆತನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಇದನ್ನೆಲ್ಲ ನೋಡಿದರೆ ಸ್ನೇಹಕ್ಕೂ ಬೆಲೆ ಇಲ್ಲ‌ ಎಂದಂತಾಯಿತು.

ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಕೊಲೆ ಮಾಡಿರುವ ನಾಲ್ಕು ಜನ ಆರೋಪಿಗಳನ್ನ ಬಂಧಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪಾರ್ಟಿ ಮಾಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿ ಗೆಳೆಯನ ಕೊಂದರು Read More