ಯುವ ಜನತೆಗೆ ಕಿಕ್ಕೇರಿಸಿದ ಸುನಿಧಿ ಚೌಹಾಣ್

ಮೈಸೂರು: ಧೂಮ್ ಮಚಾಲೇ ಧೂಮ್ ಮಚಾಲೇ ಧೂಮ್ ಎಂದು ಹಾಡುತ್ತಾ ಸ್ಟೆಪ್ ಹಾಕುತ್ತಾ ಬಂದ ಖ್ಯತ ಗಾಯಕಿ ಸುನಿಧಿ ಚೌಹಾಣ್ ಅವರನ್ನು ಕಂಡ ಯುವ ಜನತೆ ಕಿಕ್ಕೇರಿದವರಂತೆ ಕುಣಿಯುತ್ತಾ ತೇಲಾಡಿದರು.

ನಗರದ ಹೊರವಲಯದ ಉತ್ತನಹಳ್ಳಿ ಜ್ವಾಲಾಮುಖಿ ದೇವಸ್ಥಾನದ ಬಳಿ ಆಯೋಜಿಸಿರುವ ಯುವ ದಸರಾ ಕಾರ್ಯಕ್ರಮದ ಕೊನೆಯ ದಿನ ಶನಿವಾರ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಗಾಯನಕ್ಕೆ ಸಂಗೀತ ಪ್ರಿಯರು ಫುಲ್ ಫಿದಾ ಆದರು.

ಯುವ ದಸರಾ ವೇದಿಕೆಗೆ ಆಗಮಿಸುತ್ತಲೇ ಧೂಮ್ ಚಿತ್ರದ ಹಾಡು ಹಾಡುತ್ತಲೇ ಕಿಕ್ ಏರಿಸಿದ ಸುನಿಧಿ ಅವರನ್ನು ನೋಡುತ್ತಾ ತುಂತುರು ಮಳೆಯಲ್ಲೂ ಯುವಕ ಯುವತಿಯರು ಹುಚ್ಚೆದ್ದು ಕುಣಿದರು.

ಬಾಲಿವುಡ್ ಸಿನಿಮಾಗಳ ಮೇ ಇಸ್ಕ್ ಮೇರೆ, ಐಸಾ ಮೇರಿ ಪ್ಯಾರ್ ಹೈ, ಹ್ಯಾನೀ ಹ್ಯಾನಿ ಚುಟ್ಕೆಯ, ಮೈ ಕ್ರೇಜಿ ಗರ್ಲ್ ಮೈ ಕ್ರೇಜಿ ಗರ್ಲ್, ಫನಾ ಚಿತ್ರದ ಮೇರೆ ಹಾತ್ ಮೇ , ತೇರಿ ಮೇರಿ ಇಸ್ಕು ಸೇ, ಮೇರಿ ಕಮಲಿ ಕಮಲಿ, ಪುಷ್ಪ ಚಿತ್ರದ ಸಾಮಿ ಸಾಮಿ ಹಾಡುಗಳನ್ನು ಹಾಡಿ ಯುವ ದಸರಾ ಅದ್ದೂರಿ ಸಂಭ್ರಮಕ್ಕೆ ಸಾಕ್ಷಿಯಾದರು.

ಮುಂಗಾರು ಮಳೆ ಚಿತ್ರದ ಕುಣಿದು ಕುಣಿದು ಬಾರೇ ಹಾಗೂ ಜೋಗಿ ಚಿತ್ರದ ಚಿಕು ಬುಕ್ ರೈಲು ನಿಲ್ಲೋದಿಲ್ಲ ಎಲ್ಲೂ, ರಾ ರಾ ರಾಕಮ್ಮ ಹಾಡು ಹಾಡಿಗೆ ಪ್ರೇಕ್ಷಕರು ಕೂಡಾ ಧ್ವನಿಗೂಡಿಸಿ ಶಿಳ್ಳೆ ಕೇಕೆ ಹಾಕಿ ಕುಣಿದರು.

ಯುವ ಜನತೆಗೆ ಕಿಕ್ಕೇರಿಸಿದ ಸುನಿಧಿ ಚೌಹಾಣ್ Read More