ಜಮೀನು ವಶ: ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

ಚಾಮರಾಜನಗರ: ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಜಮೀನು ವಶ ಪಡಿಸಿಕೊಂಡ ಕಾರಣ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಡ್ಡಾಲತ್ತೂರಿನಲ್ಲಿ ಘಟನೆ ನಡೆದಿದ್ದು,ರಾಜಮ್ಮ (52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ರಾಜಮ್ಮಮ ಅವರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ಸ್ ಭೂಮಿ ಬಂದಿತ್ತು.ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿಕೊಂಡಿತ್ತು.

ಕಳೆದ ವಾರ ಇದ್ದಕ್ಕಿದ್ದ ಹಾಗೆ ಬಂದ ಕಂದಾಯ ಇಲಾಖೆ ಅಧಿಕಾರಿಗಳು 20 ಸೆಂಟ್ಸ್ ಭೂಮಿ ವಶಪಡಿಸಿಕೊಂಡಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಬೇಸರ ಪಟ್ಟುಕೊಂಡ ರಾಜಮ್ಮ ಶನುವಾರ ಮುಂಜಾನೆ ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಮೀನು ವಶ: ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ Read More

ಸಂಸದ ಡಾ.ಕೆ.ಸುಧಾಕರ್ ಹೆಸರು‌ ಬರೆದಿಟ್ಟು ಕಾರ್ ಡ್ರೈವರ್ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಮಾಜಿ ಸಚಿವ, ಸಂಸದ ಸುಧಾಕರ್‌ ಹೆಸರನ್ನು ಡೆತ್‌ ನೋಟ್‌ ನಲ್ಲಿ ಉಲ್ಲೇಖಿಸಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಬಾಬು (32) ಆತ್ಮಹತ್ಯೆ ಮಾಡಿಕೊಂಡ ಕಾರು ಚಾಲಕ.

ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕನಾಗಿದ್ದ ಬಾಬು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಸಾವಿಗೆ ಸಂಸದ ಡಾ.ಕೆ.ಸುಧಾಕರ್ ಕಾರಣ. ಚಿಕ್ಕಕಾಡಿಗಾನಹಳ್ಳಿ ನಾಗೇಶ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ರೂ ಪಡೆದು ವಂಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರ ವಿರುದ್ದವೂ ಡೆತ್‌ ನೋಟ್‌ ನಲ್ಲಿ ಬಾಬು ಹಲವು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಇನ್ನೂ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಸೂಕ್ತ ತನಿಖೆ ಆಗಲಿದೆ,ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಸ್ಪಷ್ಟವಾಗಿ ಹೇಳಿದ್ದಾರೆ.

ಸಂಸದ ಡಾ.ಕೆ.ಸುಧಾಕರ್ ಹೆಸರು‌ ಬರೆದಿಟ್ಟು ಕಾರ್ ಡ್ರೈವರ್ ಆತ್ಮಹತ್ಯೆ Read More

ಆಟೋದಲ್ಲೇ ಪ್ರೇಮಿಗಳ ಆತ್ಮ*ಹತ್ಯೆ

ಬೆಳಗಾವಿ,ಜು.1: ಪ್ರೇಮಿಗಳಿಬ್ಬರು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕು ಚಿಕ್ಕನಂದಿ ಗ್ರಾಮದ ಬಳಿ ನಡೆದಿದೆ.

ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್(28), ರಂಜೀತಾ ಚೋಬರಿ(26) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಮುನವಳ್ಳಿ ಪಟ್ಟಣದ ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಹದಿನೈದು ದಿನದ ಹಿಂದೆ ರಂಜೀತಾಳಿಗೆ ಆಕೆಗೆ ವಿರೋಧವಾಗಿ ಮನೆಯವರಯ ನಿಶ್ಚಿತಾರ್ಥ ಮಾಡಿದ್ದರು.

ಮನೆಯಲ್ಲಿ ಪ್ರಿಯಕರನೊಂದಿಗೆ ಮದುವೆಗೆ ಒಪ್ಪದೇ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಿಯ ಮಾಡಿದ ಹಿನ್ನೆಲೆಯಲ್ಲಿ ಪ್ರಿಯತಮನ ಜತೆ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು. ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ‌

ಆಟೋದಲ್ಲೇ ಪ್ರೇಮಿಗಳ ಆತ್ಮ*ಹತ್ಯೆ Read More

ನೇಣು ಬಿಗಿದುಕೊಂಡು ಯುವತಿ ಆತ್ಮ*ತ್ಯೆ

ಮೈಸೂರು: ಡೆಕಥ್ಲಾನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ರಾಮಕೃಷ್ಣನಗರ ಹೆಚ್ ಬ್ಲಾಕ್ ನಿವಾಸಿ
ಅಧ್ವಿಕ(21) ಆತ್ಮಹತ್ಯೆ ಮಾಡಿಕೊಂಡ‌ ತರುಣಿ

ನಾನು ಯಾವತ್ತೋ ಸಾಯಬೇಕಿತ್ತು,ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಅಧ್ವಿಕ.

ಮಾತಾ ಅಮೃತಾನಂದಮಯಿ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಡೆಕಥ್ಲಾನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಳು.ಕೆಲಸ ಮುಗಿಸಿ ಮನೆಗೆ ಬಂದ ಅಧ್ವಿಕ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ.

ತಾಯಿ ಶೋಭಾ ಊಟಕ್ಕೆ ಕರೆದಾಗ ಏನೂ ಮತನಾಡಿಲ್ಲ,ಬಾಗಿಲೂ ತೆಗೆದಿಲ್ಲ.ಇದರಿಂದ ಅನುಮಾನಗೊಂಡು ಅವರು
ಪರಿಶೀಲಿಸಿದಾಗ ಕೊಠಡಿಯ ಸೀಲಿಂಗ್ ಫ್ಯಾನ್ ಗೆ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾಳೆ.

ತಕ್ಷಣ ಅಕ್ಕಪಕ್ಕದವರನ್ನು ಆಕೆ ಕೂಗಿದ್ದಾರೆ.
ಸುದ್ದಿ ತಿಳಿದು ಕುವೆಂಪುನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ನೊಇಡಿದಾಗ ಡೆತ್ ನೋಟ್ ಪತ್ತೆಯಾಗಿದೆ.

ಅಧ್ವಿಕ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಇರಬಹುದೆಂದು ಶಂಕಿಸಲಾಗಿದೆ.
ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವತಿ ಆತ್ಮ*ತ್ಯೆ Read More

ಪ್ರೀತಿಸಿದವಳು ಮದುವೆ ನಿರಾಕರಿಸಿದ್ದಕ್ಕೆ‌ ಪ್ರೇಮಿ ಆತ್ಮಹತ್ಯೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.6: ಪ್ರೀತಿಸಿದವಳು ಮದುವೆ ನಿರಾಕರಿಸಿದಳು ಎಂಬ ಕಾರಣಕ್ಕೆ ಮನನೊಂದ ಪ್ರೇಮಿಯೊಬ್ಬ ಹುಣಸೆ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಜಾಗರಿಯ ಶಿಲ್ವೈಪುರ ಗ್ರಾಮದ ಶೇಷು ರಾಜು ಅವರ ಮಗ ಜಾನ್ಸನ್ ವಿಜಿ (22) ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ.

ಈತ ಮಂಡ್ಯದ ಕಲ್ಲು ಕೋರೆಯೊಂದರಲ್ಲಿ ಕಾರ್ಮಿಕ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದ.

ಕಳೆದ ಎರಡು ವರ್ಷಗಳಿಂದ ಸಮೀಪದ ಸಿ.ಆರ್.ನಗರದ ಜಪಮಾಲೆ ಎಂಬುವರ ಮಗಳು 21 ವರ್ಷದ ಮೇರಿ ಅಂಜಲಿ ಎಂಬುವುದನ್ನು ಪ್ರೀತಿಸುತ್ತಿದ್ದ.

ಮೇರಿ ಅಂಜಲಿ ಮಂಗಳೂರಿನ ಕಾಲೇಜಲ್ಲಿ ವ್ಯಾಸಂಗ ಮಾಡಿಕೊಂಡು ಅಲ್ಲಿಯೇ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿದ್ದಳು.

ಇವರಿಬ್ಬರ ಪ್ರೀತಿಗೆ ಅಂಜಲಿ ಪೋಷಕರ ತೀವ್ರ ವಿರೋಧವಿತ್ತು.

ಕಳೆದ ಒಂದುವರೆ ವರ್ಷಗಳಿಂದ ಮೇರಿ ಅಂಜಲಿ ಮಂಗಳೂರು ತೊರೆದು ಜಾನ್ಸನ್ ವಿಜಿ ಕೆಲಸ ಮಾಡುತ್ತಿದ್ದ ಮಂಡ್ಯದಲ್ಲಿ ಬಂದು ಒಟ್ಟಿಗೆ ಉಳಿದುಕೊಂಡಿದ್ದರು.

ಆರು ತಿಂಗಳಿಂದೀಚೆಗೆ ಇಬ್ಬರು ಮಂಡ್ಯ ತೊರೆದು ಸ್ವಗ್ರಾಮ ಶಿಲ್ವೈಪುರಕ್ಕೆ ಬಂದು ಬೇರೆ ಮನೆ ಮಾಡಿಕೊಂಡು ವಾಸವಿದ್ದರು.

ಇಲ್ಲಿಗೆ ಬಂದ ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಗ್ರಾಮದ ಮುಖಂಡರು ಇಬ್ಬರಿಗೂ ಒಟ್ಟಿಗೆ ಜೀವನ ಮಾಡಿಕೊಂಡು ಹೋಗುವಂತೆ ಬುದ್ಧಿವಾದ ಹೇಳಿದ್ದರು.

ಮತ್ತೆ ಇಬ್ಬರು ಜಗಳ ಮಾಡಿಕೊಂಡು ಮೇರಿ ಅಂಜಲಿ ಇದೆ ಏಪ್ರಿಲ್ 3 ರಂದು ಇಲ್ಲಿನ ಗ್ರಾಮಾಂತರ ಠಾಣೆಗೆ ಬಂದು ವಿಜಿ ವಿರುದ್ಧ ದೂರು ನೀಡಿದ್ದಳು.

ದೂರು ಸ್ವೀಕರಿಸಿದ ಗ್ರಾಮಾಂತರ ಠಾಣೆ ಎ ಎಸ್ ಐ ಮಲ್ಲಿಕಾರ್ಜುನ ಸ್ವಾಮಿ ಮುಖಂಡರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಲು ಮುಂದಾದರೂ ಮೇರಿ ಅಂಜಲಿ ಈತ ತುಂಬಾ ಕುಡಿಯುತ್ತಾನೆ ಈತನನ್ನು ಮದುವೆಯಾದರೆ ನನ್ನ ಜೀವನ ಹಾಳಾಗುತ್ತದೆ ಎಂದು ಜಾನ್ಸನ್ ವಿಜಿಯನ್ನು ಮದುವೆಯಾಗಲು ಕಡಕ್ಕಾಗೇ ನಿರಾಕರಿಸಿದ್ದಳು.

ಇದರಿಂದ ಮನನೊಂದು ಜಾನ್ಸನ್ ವಿಜಿ ಮೇರಿ ಅಂಜಲಿಯನ್ನು ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರು ಇದನ್ನು ಧಿಕ್ಕರಿಸಿ ಠಾಣೆಯಿಂದ ಹೊರ ಹೋದಳು.

ಮಾರನೆಯ ದಿನ ಮೇರಿ ಅಂಜಲಿ ಬೆಂಗಳೂರಿಗೆ ಹೊರಟು ಹೋಗಿದ್ದಳು. ಇದೆಲ್ಲದರಿಂದ ಜಿಗುಪ್ಸೆಗೊಂಡ ಜಾನ್ಸನ್ ವಿಜಿ ತಮ್ಮ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಸೀರೆಯಿಂದ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಮೃತನ ತಂದೆ ಶೇಷುರಾಜು ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೀತಿಸಿದವಳು ಮದುವೆ ನಿರಾಕರಿಸಿದ್ದಕ್ಕೆ‌ ಪ್ರೇಮಿ ಆತ್ಮಹತ್ಯೆ Read More