ಸಾಂಸ್ಕೃತಿಕ ನಗರಿಯಲ್ಲಿ ಹೆಚ್ಚಿದಬೀದಿ ನಾಯಿಗಳು:ದಾಳಿಗೆ ಮುದ್ದು ಬೆಕ್ಕು ಬಲಿ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಜನ‌ ಹೊರಗೆ ಬರಲು ಹೆದರುವಂತಾಗಿದೆ.

ಸರ್ವೋಚ್ಛ ನ್ಯಾಯಾಲಯ ದೇಶಾದ್ಯoತ ಕೇಳಿರುವ ಬೀದಿ ನಾಯಿಗಳ ಭೀಕರತೆ ಅಂಕಿ ಅಂಶಕ್ಕೆ ಮೈಸೂರು ನಗರವನ್ನೂ ಸೇರಿಸುವ ಪ್ರಮೇಯ ಒದಗಿ ಬಂದಿದೆ.

ಅದರಲ್ಲೂ ಕುವೆಂಪು ನಗರ ‘ಕೆ ‘ ಬ್ಲಾಕಿನಲ್ಲಿ, ಸುಮಾರು 25 ಕ್ಕೂ ಹೆಚ್ಚು ಭೀಭತ್ಸ ಬಿದಿನಾಯಿಗಳು ರಾಜಾರೋಷವಾಗಿ ಬೊಗಳುತ್ತಾ ಅಲೆಯುತ್ತಲೇ ಇರುತ್ತವೆ.

ವೃದ್ಧರು, ಮಕ್ಕಳನ್ನು ಆಟವೆಂಬಂತೆ ಕಚ್ಚುತ್ತಾ ಹೋಗುತ್ತವೆ ಕೋಳಿ, ಬೆಕ್ಕುಗಳಿಗಂತೂ ಇವುಗಳ ದಾಳಿಯಿಂದ ಉಳಿಗಾಲ ಇಲ್ಲದಂತಾಗಿದೆ.

ಮಧ್ಯೆ ರಾತ್ರಿ ಇವುಗಳ ಸ್ಟ್ರೀಟ್ ವಾರ್ ನಿಂದಾಗಿ, ಮಕ್ಕಳು – ರೋಗಿಗಳ ನಿದ್ರೆಯೇ ಮಾಯವಾಗಿಹೋಗಿದೆ.

ಮೊನ್ನೆ ನಗರದ ಹಿರಿಯ ಸಮಾಜ ಸೇವಕರಾದ ಡಾ ಕೆ ರಘುರಾಮ್ ವಾಜಪೇಯಿ ಯವರ ಮನೆಯಲ್ಲಿ 16 ವರ್ಷಗಳಿಂದ ಪ್ರೀತಿಯ ಮುದ್ದುಮಗಳಾಗಿ ಬೆಳೆದಿದ್ದ ಕಾಳಿ ಎಂಬ ಪೂರ್ಣ ಕರಿ ವರ್ಣ ದ ಬೆಕ್ಕನ್ನು ನಾಯಿಗಳು ದಾಳಿ ನಡೆಸಿ ಕೊಂದಿವೆ.

ಕುವೆಂಪು ನಗರದಲ್ಲಿ
ನಾಯಿಗಳ ಅಟ್ಟಹಾಸಕ್ಕೆ ಬೆಕ್ಕುಗಳ ಸಂತಾನವೇ ನಿರ್ಮೂಲವಾಗುತ್ತಿದ್ದು, ಇಲಿ – ಹೆಗ್ಗಣ -ಹಾವು ಗಳ ಕಾಟ ಹೆಚ್ಚಾಗಿದೆ.

ನಾಯಿಗಳಿಗೆ ಒಂದು ವೇಳೆ ಯಾರಾದರೂ ಹೊಡೆದು ಪೆಟ್ಟಾದರೆ ತಕ್ಷಣ ಪ್ರಾಣಿಪ್ರಿಯರು ಬಂದು ಕ್ಯಾತೆ ತೆಗೆಯುತ್ತಾರೆ.ಆದರೆ ಮಕ್ಕಳು,ಬೆಕ್ಕುಗಳ ಮೇಲೆ ನಾಯಿಗಳು ಮಾರಣಾಂತಿಕ ದಾಳಿ ನಡೆಸಿದಾಗ ಏನನ್ನೂ ಕೇಳುವುದಿಲ್ಲ.

ನಾಯಿಗಳ ಹಾವಳಿ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ,ಇಡೀ ನಗರದಲ್ಲಿ ಇದೇ ಕತೆ,ವ್ಯತೆ.

ಮೈಸೂರು ನಗರಪಾಲಿಕೆ ಅಧಿಕಾರಿಗಳು ನಾಯಿಗಳ ಹಾವಳಿ ತಡೆಯಲು ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.ಕನಿಷ್ಟ ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಯನ್ನಾದರೂ ಮಾಡಿಸಿದರೆ ಅವುಗಳ ಸಂತತಿ ಕಡಿಮೆ ಯಾಗಬಹುದು.

ಮೈಸೂರು ನಗರಪಾಲಿಕೆ ಸುಪ್ರೀಂ ಕೋರ್ಟ್ ಮಾರ್ಗ ದರ್ಶನವನ್ನಾದರೂ ಪಾಲಿಸಲಿ ಎಂದು ಡಾ ಕೆ ರಘುರಾಮ್ ವಾಜಪೇಯಿ ಅವರು ಮನವಿ ಮಾಡಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಹೆಚ್ಚಿದಬೀದಿ ನಾಯಿಗಳು:ದಾಳಿಗೆ ಮುದ್ದು ಬೆಕ್ಕು ಬಲಿ Read More

ಹುಣಸೂರಿನಲ್ಲಿ ಬೀದಿ ನಾಯಿಗಳ ಹಾವಳಿ!ಜನ ಸಂಚರಿಸಲೂ ಆತಂಕ

ಹುಣಸೂರು: ಹುಣಸೂರಿನ ಜೆಎಲ್‌ಬಿ ರಸ್ತೆಯಲ್ಲಿ ಬೀದಿ ನಾಯಿಗಳಿಂದಾಗಿ ಓಡಾಡುವುದೇ ದುಸ್ತರವಾಗಿಬಿಟ್ಟಿದೆ
ನಾಯಿಗಳ ಹಾವಳಿ ವಿಪರೀತವಾಗಿದೆ.

10 ರಿಂದ 15 ನಾಯಿಗಳು ಹಿಂಡು,ಹಿಂಡಾಗಿ ಸದಾ ಸುತ್ತಾಡುತ್ತಲೇ ಇರುತ್ತವೆ.ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಚಲಿಸುವಾಗ ನಾಯಿಗಳು ಅಡ್ಡ ಬರುತ್ತವೆ.

ಹೀಗೆ ಅಡ್ಡ ಬಂದು ಬಹಳಷ್ಟು ಮಂದಿ ದ್ವಿ ಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿದೆ.

ಸಣ್ಣಪುಟ್ಟ ಮಕ್ಕಳಂತೂ ಹೊರಗೆ ಬರುವಂತೆಯೇ ಇಲ್ಲ, ಅದು ಯಾವಾಗ ನಾಯಿಗಳು ಮಕ್ಕಳ ಮೇಲೆ ಎಗರಿ ಬೀಳುತ್ತವೋ ಎಂಬ ಭಯ ಪೋಷಕರನ್ನು ಕಾಡುತ್ತಿದೆ.

ನಾಯಿಗಳ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆತಂಕ ವ್ಯಕ್ತಪಡಿಸಿದ್ದು ಜನ ಓಡಾಡಲು ಭಯ ಪಡುವಂತಾಗಿದೆ ಎಂದು ವರ್ಷಿಣಿ ನ್ಯೂಸ್‌ ಗೆ ಹೇಳಿದ್ದಾರೆ.

ಹುಣಸೂರು ನಗರಸಭೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಂಡು,ಹಿಂಡು ನಾಯಿಗಳು ಒಟ್ಟೊಟ್ಟಿಗೆ ಓಡಾಡುವುದು ಕಾಣುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಯಾರಾದರೂ ಅಪರಿಚಿತರು ಸ್ವಲ್ಪ ಬಟ್ಟೆ ಹರಿದಂತವರನ್ನು ನೋಡಿದರೇ ಒಮ್ಮೆಗೇ ಓಡುತ್ತಾ ಕಿರುಚಾಡುತ್ತಾ ನಾಯಿಗಳು ಎಗರುತ್ತವೆ‌ ಆ ಸಮಯದಲ್ಲಿ ವಾಹನಗಳಿಗೆ ಅಡ್ಡ ಬಂದು ಸ್ಕಿಡ್ ಆದ ಉದಾಹರಣೆಗಳೂ ಇವೆ.

ಬೇರೆ ಊರುಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಗಂಭೀರ ಗಾಯಗೊಂಡ ಉದಾಹರಣೆ ಗಳು ಮೃತಪಟ್ಟಂತಹ ಪ್ರಕರಣಗಳು ನಡೆದಿವೆ.ಸಧ್ಯ ಇನ್ನೂ ಹುಣಸೂರಿನಲ್ಲಿ ಅಂತಹ ಘಟನೆಗಳು ನಡೆದಿಲ್ಲ, ಆದರೆ ನಾಯಿಗಳು ಸಿಟ್ಟುಗೊಂಡು ಯಾವಾಗ ಎಗರಿ ಬೀಳುತ್ತವೊ ಎಂಬ ಭಯದ ವಾತಾವರಣ ಇದೆ,ಬೆಳೆಗ್ಗೆ 7 ಗಂಟೆಯಲ್ಲೇ ಜನ ಸಂಚರಿಸಲು ಅಂಜುತ್ತಿದ್ದಾರೆ ಎಂದು ಚೆಲುವರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ನಗರಸಭೆ ಆರೋಗ್ಯ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ, ಅನಾಹುತ ಆದ ನಂತರ ಕ್ರಮ ಕೈಗೊಳ್ಳುವ ಬದಲು ಮೊದಲೇ ಎಚ್ಚೆತ್ತುಕೊಂಡು ಅವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನಾದರೂ ಮಾಡಿಸಲಿ ಇಲ್ಲವೇ ಅರಣ್ಯಕ್ಕಾದರೂ ಸಾಗಿಸಲಿ.

ಹುಣಸೂರಿನಲ್ಲಿ ಬೀದಿ ನಾಯಿಗಳ ಹಾವಳಿ!ಜನ ಸಂಚರಿಸಲೂ ಆತಂಕ Read More