ಬಾಬು ಜಗಜೀವನ್ ರಾವ್ ಪ್ರತಿಮೆಗೆ ಮಾಲಾರ್ಪಣೆ

ಮೈಸೂರು: ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ್ ರಾವ್ ಅವರ 39ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಮೈಸೂರಿನ ರೈಲ್ವೆ ಸ್ಟೇಷನ್ ಮುಂಭಾಗ ಇರುವ ಬಾಬು ಜಗಜೀವನ್ ರಾವ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರ್ ನಗರ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ರೇಖಾ ಶ್ರೀನಿವಾಸ್,23ನೇ ವಾರ್ಡಿನ ಮುಖಂಡರಾದ ರವಿಚಂದ್ರ, ಪ್ರಮೋದ್, ರಫಿವುಲ್ಲಾ ಖಾನ್, ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಲೋಕೇಶ್, ಕಾಂಗ್ರೆಸ್ ವಕ್ತಾರ ರಾಜೇಶ್, ಕೃಷ್ಣಪ್ಪ ಗಂಟಯ್ಯ ಮತ್ತಿತರರು ಬಾಬು ಜಗಜೀವನ್ ರಾವ್ ಅವರಿಗೆ ನಮನ ಸಲ್ಲಿಸಿದರು.

ಬಾಬು ಜಗಜೀವನ್ ರಾವ್ ಪ್ರತಿಮೆಗೆ ಮಾಲಾರ್ಪಣೆ Read More

ಮಹಾರಾಜರ ಪ್ರಥಿಮೆ ಹತ್ತಿ ವಿಕೃತಿ ಮೆರೆದ ವ್ಯಕ್ತಿ!

ಮೈಸೂರು: ಸಾಂಸ್ಕೃತಿಕ ನಗರಿಯ ರೂವಾರಿ ಕೃಷ್ಣರಾಜ ಒಡೆಯರ್ ಅವರ ಪ್ರಥಿಮೆಯನ್ನು ವ್ಯಕ್ತಿಯೊಬ್ಬ ಏರಿ ಸಾಕಷ್ಟು ಗಲಿಬಿಲಿ ಉಂಟುಮಾಡಿದ ಪ್ರಸಂಗ ನಡೆದಿದೆ.

ಸಂಜೆ ಮೈಸೂರಿನ ಹೃದಯ ‌ಭಾಗದಲ್ಲಿರುವ ಕೆ.ಆರ್ ವೃತ್ತದಲ್ಲಿರುವ ಕೃಷ್ಣರಾಜ ಒಡೆಯರ್ ಸ್ಮಾರಕದ ಬಳಿ ಯುವಕನೊಬ್ಬ ಸುತ್ತುತ್ತಾ ಇದ್ದವನು ತಕ್ಷಣ ಪ್ರಥಿಮೆ ಏರಿದ್ದಲ್ಲದೆ ತಲೆಯ ಮೇಲೆ ಕುಳಿತು ವಿಕೃತಿ ಮೆರೆದಿದ್ದಾನೆ.

ಮೈಸೂರನ್ನು ಆಳಿದ ದೊರೆ ಕೃಷ್ಣರಾಜ ಒಡೆಯರ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಯಾವುದೋ ವ್ಯಕ್ತಿ ಅವರ ಪ್ರಥಿಮೆ ಏರಿ ವಿಕೃತಿ ಮೆರೆದರೂ ಮೈಸೂರಿಗರು ಯಾರೂ ಖಂಡಿಸದೇ ಹೋದುದು ನಿಜಕ್ಕೂ ವಿಪರ್ಯಾಸವೆ ಸರಿ.

ಆ ಮನುಷ್ಯ ಯಾತಕ್ಕಾಗಿ ಪ್ರಥಿಮೆ ಹತ್ತಿದನೊ ಗೊತ್ತಿಲ್ಲ.ಮೈಸೂರು ದೊರೆಗೆ ಇಂತಹ ಅಪಮಾನವಾದರೂ ಯಾರೂ ಮಾತನಾಡಿಯೇ ಇಲ್ಲ,ಅಚ್ಚರಿ ಎಂದರೆ ಪೊಲೀಸರು ಯಾರೂ ಗಮನಿಸಲಿಲ್ಲವೆ,ಯಾರೂ ಮಾಹಿತಿಯನ್ನು ನೀಡಲಿಲ್ಲವೆ ಎಂಬುದು ಪ್ರಶ್ನೆ.

ಆ ವ್ಯಕ್ತಿ ಒಡೆಯರ್ ಬುಜದ ಮೇಲೆ ಕೂರುತ್ತಾನೆ ತಲೆ ಮೇಲೂ ಕೂರುತ್ತಾನೆ,ಪುಣ್ಯ ಆ ಸಮಯದಲ್ಲಿ ಅಲ್ಲಿದ್ದವರು ಏ ಯಾರೊ ನೀನು ಇಳಿಯೊ ಕೆಳಗೆ ಎಂದು ಕೂಗುತ್ತಾರೆ.ಆದರೆ ಆತ ಕ್ಯಾರೆ ಅನ್ನಲಿಲ್ಲ.

ನಂತರ ತಾನೆ ಕೆಳಗಿಳಿದು ಅದೇನನ್ನೊ ತಂದು ಒಡೆಯರ್ ಖಡ್ಗದ ಬಳಿ,ಪಾದದ ಬಳಿ ಇಟ್ಟು ಮತ್ತೆ ಮೇಲೆ ಹತ್ತಿ ಪ್ರಥಿಮೆಯ ಮುಖ ಸವರುತ್ತಾನೆ.

ಈ ವಿಷಯ ಗೊತ್ತಾದ ಕೂಡಲೇ ಅರಸು ಯೂತ್ಸ್ ಬಳಗದವರು ಕೆ.ಆರ್.ವೃತ್ತದಲ್ಲಿ‌ ಸೇರಿ ಯುವಕನ ಕೃತ್ಯವನ್ನು ಖಂಡಿಸಿದ್ದಾರೆ.ಜತೆಗೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮೈಸೂರಿನ ಸಂಘ ಸಂಸ್ಥೆಗಳು ಇನ್ನೂ ತುಟಿಬಿಚ್ಚದಿರುವುದು ಅಚ್ಚರಿ ತಂದಿದೆ.

ಇದಿಷ್ಟೇ ಸಾಲದು ಇಡೀ ಮೈಸೂರಿನ ಜನತೆ ಧ್ವನಿ ಎತ್ತಬೇಕು.ಮಹಾರಾಜರ ಪ್ರಥಿಮೆಗೆ ರಕ್ಷಣೆ ನೀಡುವಂತೆ.

ಆಗ್ರಹಿಸಬೇಕು. ಸಂಘ ಸಂಸ್ಥೆಗಳು ಇದರ ಬಗ್ಗೆ ಮಾತನಾಡಬೇಕಿದೆ.

ಮಹಾರಾಜರ ಪ್ರಥಿಮೆ ಹತ್ತಿ ವಿಕೃತಿ ಮೆರೆದ ವ್ಯಕ್ತಿ! Read More