ಸಚಿವ ರಾಜಣ್ಣ ವಜಾ ಪ್ರಜಾಪ್ರಭುತ್ವಕ್ಕೆ ಅಪಮಾನ:ನಂದೀಶ್ ನಾಯಕ್

ಮೈಸೂರು: ಸಂಪುಟದಿಂದ ಸಚಿವ ರಾಜಣ್ಣ ಅವರನ್ನು ವಜಾಮಾಡಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಕೃಷ್ಣರಾಜ ಕ್ಷೇತ್ರದ ಎಸ್ ಟಿ ಮೋರ್ಚಾ ಅಧ್ಯಕ್ಷ ನಂದೀಶ್ ನಾಯಕ್ ಹೇಳಿದ್ದಾರೆ.

ಕೆ. ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುರುವ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ನಮ್ಮ ನಾಯಕ ಸಮಾಜದ ಪ್ರಭಾವಿ ನಾಯಕರಾದ ಕೆ ಎನ್ ರಾಜಣ್ಣ ನವರ ನೇರ ನಡೆ ನುಡಿಯ ಸರದಾರನೆಂದೇ ಖ್ಯಾತಿ ಗಳಿಸಿದ್ದಾರೆ, ಅವರಿಗೆ ಏಕಾಏಕಿ ಸಚಿವ ಸ್ಥಾನದಿಂದ ವಜಾ ಗೊಳಿಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಸರ್ಕಾರದ ವೈಫಲ್ಯಗಳನ್ನು ನುಡಿದ್ದದ್ದೆ ರಾಜಣ್ಣ ನವರಿಗೆ ಮುಳುವಾಗಿದೆ ಎಂದು ನಾಯಕ್‌‌ ವಿಷಾದಿಸಿದ್ದಾರೆ,

ಈ ಸರ್ಕಾರ ನಮ್ಮ ನಾಯಕ ಸಮಾಜದ ಪ್ರಭಾವಿ ನಾಯಕರನ್ನು ತುಳಿಯುತ್ತಿದೆ ಮೊದಲು ಬಳ್ಳಾರಿಯ ನಾಗೇಂದ್ರ.ದಕ್ಷ ಅಧಿಕಾರಿ ದಯಾನಂದ್, ಈಗ ರಾಜಣ್ಣ ನವರು.

ಇದೆ ರೀತಿ ಮುಂದುವರಿದರೆ ನಮ್ಮ ಸಮಾಜದ ಮುಖಂಡರು,ಸಮಾಜದ ಕಾರ್ಯಕರ್ತರು ಪಕ್ಷಾತೀತ ವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಂದೀಶ್ ಎಚ್ಚರಿಸಿದ್ದಾರೆ.

ಸಚಿವ ರಾಜಣ್ಣ ವಜಾ ಪ್ರಜಾಪ್ರಭುತ್ವಕ್ಕೆ ಅಪಮಾನ:ನಂದೀಶ್ ನಾಯಕ್ Read More

ಸಾಧಕರಿಗೆ ಬಿಜೆಪಿ ಎಸ್ ಸಿ,ಎಸ್ ಟಿ ಮೋರ್ಚಾದಿಂದ ಸನ್ಮಾನ

ಮೈಸೂರು: ‌ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಗ್ರಾಮಾಂತರ ಮಂಡಲದ ಎಸ್ ಸಿ, ಎಸ್ ಟಿ ಮೋರ್ಚಾ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಸಾಧಕರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಪೈ.ಟಿ ರವಿ. ಎನ್.ವಿ.ಫಣ್ಣಿಶ್ ಜೀ
ಕವೀಶ್ ಗೌಡ ,ಹೇಮಂತ್ ಕುಮಾರ್ ಗೌಡ, ಅನ್ವೇಷಣಾ ಟ್ರಸ್ಟ ಅಧ್ಯಕ್ಷರಾದ ಎಂ. ಜಿ. ಅರ್. ಅರಸ್, ಪರಮಾನಂದ್,ಸಮಾಜ ಸೇವಕರಾದ ಅಮರನಾಥ್ ರಾಜೇ ಅರಸ್. ನಗರ ಕಾರ್ಯದರ್ಶಿ ಮೋನಿಕಾ.ಎಂ,ಜಿ. ಎಂ ಮಹೇಶ್,ಸೋಮಸುಂದರ್ ಗುರೂರು ಶಿವಕುಮಾರ್ ಕಿರಣ್ ನಾಯ್ದು ನಾಡನಾಹಳ್ಳಿಸುರೇಶ್, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಉಮೇಶ್, ಭಾರತಿ, ಪಶುಪತಿ, ಗೋಪಾಲಗೌಡ, ಅಭಿನಂದನ್ ಅರಸ್, ಗೊರೂರು ನಂಜುಂಡಸ್ವಾಮಿ, ಗೊರೂರು ಚೇತನ್, ಋಷಬೇಂದ್ರ,ಹಂಚ್ಯ ರವಿ, ನಟರಾಜ್ ಮದಕರಿ, ಸಾಲುಂಡಿ ಯೋಗೇಶ್ ,ಮಧುರಾಜ್ ಆಲನಹಳ್ಳಿ, ಲಕ್ಷ್ಮಿ ಅಮರ್, ನವೀನ್ ಅವರನ್ನು ಸನ್ಮಾನಿಸಲಾಯಿತು.

ಸಾಧಕರಿಗೆ ಬಿಜೆಪಿ ಎಸ್ ಸಿ,ಎಸ್ ಟಿ ಮೋರ್ಚಾದಿಂದ ಸನ್ಮಾನ Read More