ಸರೋಜಿನಿ ನಾಯ್ಡು ಜನ್ಮದಿನ ಆಚರಿಸಿದದುರ್ಗಾ ಫೌಂಡೇಶನ್

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಭಾರತದ ಪ್ರಥಮ ಮಹಿಳಾ ರಾಜ್ಯಪಾಲರಾದ ಸರೋಜಿನಿ ನಾಯ್ಡು ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.

ಕೆ ಆರ್ ಮೊಹಲ್ಲಾದ ಸೀತಾರಾಮ ರಾವ್ ರಸ್ತೆ ಯಲ್ಲಿರುವ ಕಚೇರಿಯಲ್ಲಿ ಸರೋಜಿನಿ ನಾಯ್ಡು ಅವರ ಜನ್ಮ ದಿನಾಚರಣೆ ಅಂಗವಾಗಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಲಾಯಿತು.

ಸರೋಜಿನಿ ನಾಯ್ಡು ಅವರ ಜನ್ಮದಿನವನ್ನು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಕೊಡುಗೆಗಳನ್ನು ಮುಖಂಡರು ಸ್ಮರಿಸಿದರು.

ಕಾರ್ಯಕ್ರಮ ದಲ್ಲಿ‌
ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಸವಿತಾ ಘಾಟ್ಕೆ, ಸಾಮಾಜಿಕ ನ್ಯಾಯವೇದಿಕೆ ಮೈಸೂರು ವಿಭಾಗ ಸಂಚಾಲಕರಾದ ಸತೀಶ್ ಮೇತ್ರಿ, ಕಾರ್ಯದರ್ಶಿ ಪರಮಾನಂದ ಎಂ. ಎಸ್, ಮಹಾನ್ ಶ್ರೇಯಸ್, ಹೇಮಾ,
ಮತ್ತಿತರರು ಹಾಜರಿದ್ದರು.

ಸರೋಜಿನಿ ನಾಯ್ಡು ಜನ್ಮದಿನ ಆಚರಿಸಿದದುರ್ಗಾ ಫೌಂಡೇಶನ್ Read More

ಫೆ6 ಸ್ವಯಂ ಪ್ರೇರಿತ ರಕ್ತದಾನ ಶಿಬಿರ; ಎಸ್ ಇ ಗಿರೀಶ್ ಗೆ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು: ಶ್ರೀ ದುರ್ಗಾ ಪೌಂಡೇಶನ್ ಹಾಗೂ ಅರಿವು ಸಂಸ್ಥೆ ವತಿಯಿಂದ ಫೆ.6 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜನನ

20 ವರ್ಷ ನಿರಂತರ ಸಾಮಾಜಿಕ ಸೇವೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡು ಜೀವ ಧಾರೆ ಸೇವೆ ಸಲ್ಲಿಸುತ್ತಿರುವ ಎಸ್ ಇ ಗಿರೀಶ್ ರವರಿಗೆ ಜೀವರಕ್ಷಕ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕಾರ್ಯಕ್ರಮವನ್ನು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರ ಆವರಣದಲ್ಲಿ ಫೆಬ್ರವರಿ 6ರಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ ಎಂದು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರಧ್ಯಕ್ಷರಾದ ಎಲ್ ನಾಗೇಂದ್ರ, ಜಿಲ್ಲಾಧ್ಯಕ್ಷರಾದ ಮಹಾದೇವಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ,
ಎಂಸಿಸಿಐ ಅಧ್ಯಕ್ಷ ಕೆ.ಬಿ.ಲಿಂಗರಾಜು, ಮಂಡಿ ಮೊಹಲ್ಲಾ ವೃತ್ತ ನಿರೀಕ್ಷಕರಾದ ನಾಗೇಶ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಫೆ6 ಸ್ವಯಂ ಪ್ರೇರಿತ ರಕ್ತದಾನ ಶಿಬಿರ; ಎಸ್ ಇ ಗಿರೀಶ್ ಗೆ ಪ್ರಶಸ್ತಿ ಪ್ರದಾನ ಸಮಾರಂಭ Read More

ಮನಮೋಹನ್ ಸಿಂಗ್ ಶ್ರೇಷ್ಠ ಆರ್ಥಿಕ ತಜ್ಞ:ಬಸವರಾಜ್ ಬಸಪ್ಪ

ಮೈಸೂರು: ಮಾಜಿ ಪ್ರಧಾನಿ ಡಾಕ್ಟರ್ ಮನಮೋಹನ್ ಸಿಂಗ್ ಅವರು ಒಬ್ಬ ಶೇಷ್ಠ ಹಾಗೂ ಅನುಭವಿ ಆರ್ಥಿಕ ತಜ್ಞರಾಗಿದ್ದರು ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ಬಣ್ಣಿಸಿದರು.

ಮೈಸೂರಿನ ಚಾಮರಾಜಪುರಂನಲ್ಲಿರುವ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಾಜಿ ಪ್ರಧಾನ ಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಂತಾಪ ಸಲ್ಲಿಸಿ ಮಾತನಾಡಿದರು.

ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಸಚಿವರಾಗಿ ಇದೆಲ್ಲಕ್ಕೂ ಮಿಗಿಲಾಗಿ ದೇಶದ ನೆಚ್ಚಿನ ಪ್ರಧಾನಿಯಾಗಿ ಅವರು ಸಲ್ಲಿಸಿದ ಸೇವೆ ಅಪೂರ್ವ ಹಾಗೂ ಅನುಪಮ ಎಂದು ತಿಳಿಸಿದರು.

ದೇಶದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸಿದ ಶ್ರೇಯಸ್ಸು ಡಾಕ್ಟರ್ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಬಸವರಾಜ್ ಬಸಪ್ಪ ಹೇಳಿದರು.

ಈ ಸಂತಾಪ ಸಭೆಯಲ್ಲಿ ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಜಿ ರಾಘವೇಂದ್ರ,
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಲನಹಳ್ಳಿ ಎಂ ಎನ್ ಚೇತನ್ ಗೌಡ,
ಎಸ್ ಎನ್ ರಾಜೇಶ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷರಾದ ಚೇತನ್ ಕಾಂತರಾಜು, ವಿನಯ್ ಕಣಗಾಲ್, ರಾಕೇಶ್, ಚಕ್ರಪಾಣಿ, ಸಚಿಂದ್ರ, ಮಹಾನ್ ಶ್ರೇಯಸ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದು ಮನಮೋಹನ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ಮನಮೋಹನ್ ಸಿಂಗ್ ಶ್ರೇಷ್ಠ ಆರ್ಥಿಕ ತಜ್ಞ:ಬಸವರಾಜ್ ಬಸಪ್ಪ Read More