ಕಾರ್ತೀಕ‌ ಶುಕ್ರವಾರ:ದೇವಿ ಪಾರ್ವತಿ,ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ‌ಅಲಂಕಾರ

ಮೈಸೂರು: ಕಾರ್ತೀಕ‌ ಶುಕ್ರವಾರದ‌ ಪ್ರಯುಕ್ತ
ಮೈಸೂರಿನ ‌ಅಗ್ರಹಾರ‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯ ನೆರವೇರಿಸಲಾಯಿತು.

ತಾಯಿ‌ ಗುಲಾಬಿ ಮತ್ತು ಕೆಂಪು‌ ಬಣ್ಣದ ಸೀರೆ,ಮಲ್ಲಿಗೆ,ಸೇವಂತಿಗೆ,ಕನಕಾಂಬರ,ಗುಲಾಬಿ ಹೂಗಳಿಂದ ಶೋಭಿತಳಾಗಿದ್ದರೆ,
ಮೃತ್ಯುಂಜಯೇಶ್ವರ ಸ್ವಾಮಿ ಬೆಣ್ಣೆ ಅಲಂಕಾರದಲ್ಲಿ ಶೋಭಿತರಾಗಿದ್ದಾರೆ.

ತಾಯಿಯು ಕೈನಲ್ಲಿ ತ್ರಿಶೂಲ ಹಿಡಿದು ಬೆಳ್ಳಿಯ ಕೈ,ಕಾಲುಗಳಿಂದ ಅಲಂಕೃತಗೊಂಡಿದ್ದಾಳೆ,ಜೊತೆಗೆ ನಿಂಬೆಹಣ್ಣಿನ ಹಾರದಿಂದ ಕಂಗೊಳಿಸುತ್ತಿದ್ದಾಳೆ.

ಮೃತ್ಯುಂಜಯೇಶ್ವರ ಸ್ವಾಮಿಗೆ ಬೆಳ್ಳಿ ಮುಖವಾಡ ಧರಿಸಿ,ಸೇವಂತಿಗೆ ಹೂವಿನ ಹಾರದಿಂದ ಅಲಂಕರಿಸಿ ಪೂಜಿಸಲಾಯಿತು.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರು ಪೂಜಾಕಾರ್ಯ ನೆರವೇರಿಸಿದರು.

ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿ ಮತ್ತು ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು,ಭಕ್ತರ ಮನ ಸೂರೆಗೊಂಡಿತು.

ಕಾರ್ತೀಕ‌ ಶುಕ್ರವಾರ:ದೇವಿ ಪಾರ್ವತಿ,ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ‌ಅಲಂಕಾರ Read More

ಕಾರ್ತೀಕ‌ ಶುಕ್ರವಾರ:ತಾಯಿ ಪಾರ್ವತಿಗೆ‌ ವಿಶೇಷ ಅಲಂಕಾರ

ಮೈಸೂರು: ಕಾರ್ತೀಕ‌ ಶುಕ್ರವಾರದ‌ ಪ್ರಯುಕ್ತ
ಮೈಸೂರಿನ ‌ಅಗ್ರಹಾರ‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲೂ ವಿಶೇಷ ಪೂಜಾಕಾರ್ಯ ನೆರವೇರಿಸಲಾಯಿತು.

ಶುಕ್ರವಾರ ತಾಯಿ‌ ಕೆಂಪು‌ ಬಣ್ಣದಲ್ಲಿ ಕಂಗೊಳಿಸುತ್ತಿದ್ದಾಳೆ.ಮಲ್ಲಿಗೆ,ಸೇವಂತಿಗೆ,ಚೆಂಡುಹೂ,ಕನಕಾಂಬರ ಹೂಗಳಿಂದ ಶೋಭಿತಳಾಗಿದ್ದಾಳೆ.

ಕೈನಲ್ಲಿ ತ್ರಿಶೂಲ ಹಿಡಿದು ಬೆಳ್ಳಿಯ ಕೈ,ಕಾಲುಗಳಿಂದ ಅಲಂಕೃತಗೊಂಡು ಎಲ್ಲರಿಗೂ‌ ಪಾರ್ವತಿ‌ ಆಶೀರ್ವಾದ ನೀಡುತ್ತಿದ್ದಾಳೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಮನ ಸೂರೆಗೊಂಡಿದೆ.

ಕಾರ್ತೀಕ‌ ಶುಕ್ರವಾರ:ತಾಯಿ ಪಾರ್ವತಿಗೆ‌ ವಿಶೇಷ ಅಲಂಕಾರ Read More

ಪಿರಂಗಿ ತಾಲೀಮು: ಕೋಟೆ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಆರ್ ಸಿಬ್ಬಂದಿ

ಮೈಸೂರು: ಪಿರಂಗಿ ತಾಲೀಮು ಯಶಸ್ಸಿಗಾಗಿ ಸಿಎಆರ್ ಸಿಬ್ಬಂದಿ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಾಲೀಮು ಸಮಯದಲ್ಲಿ ಯಾವುದೇ ವಿಘ್ನಗಳು ನಡೆಯಬಾರದೆಂಬ ಕಾರಣಕ್ಕೆ ಮಾರಮ್ಮ ದೇವಿಗೆ ಹಾಲು ಮೊಸರು ಅಭಿಷೇಕ ನೆರವೇರಿಸಿ ಬೇವಿನ ಸೊಪ್ಪು ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರತಿಭಾರಿ ತಾಲೀಮು ಆರಂಭಕ್ಕೆ ಮುನ್ನ ಕೋಟೆ ಮಾರಮ್ಮನಿಗೆ ಪೂಜೆ ಸಲ್ಲಿಸುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಕೋಟೆ ಮಾರಮ್ಮನಿಗೆ ಪೂಜೆ ಅಭಿಷೇಕ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದ ನಂತರ ಕುಂಕುಮ,ಅರಿಶಿನ,ಹೂವು ಹಾಗೂ ಬೇವಿನ ಸೊಪ್ಪಿನ ಪ್ರಸಾದ ತೆಗೆದುಕೊಂಡು ಪಿರಂಗಿ ಗಾಡಿಗಳ ಮೇಲೆ ಇಟ್ಟು ಸಿಎಆರ್ ಸಿಬ್ಬಂದಿಗಳು ಪೂಜೆ ಸಲ್ಲಿಸುವುದು ವಾಡಿಕೆ.

ಶುಕ್ರವಾರ ಕೂಡಾ ತಾಲೀಮು ಪ್ರಾರಂಭಕ್ಕೆ ಮುನ್ನ ಮಾರಮ್ಮ ತಾಯಿಗೆ ಪೂಜೆ ಸಲ್ಲಿಸಿ, ವಸ್ತುಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಎರಡನೇ ಹಂತದ ತಾಲೀಮು ನಡೆಯಲಿದೆ.

ಪಿರಂಗಿ ತಾಲೀಮು: ಕೋಟೆ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಆರ್ ಸಿಬ್ಬಂದಿ Read More

ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಹೋಮ :ಶಾಸಕ ಹರೀಶ್ ಗೌಡ ಭಾಗಿ

ಮೈಸೂರು,ಜೂ.2: ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು
ನಗರದ ದಿವಾನ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ಹಮ್ಮಿಕೊಂಡರು.

ಅಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ
ವರ್ಸಸ್ ಪಂಜಾಬ್ ಫೈನಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ಜಯಗಳಿಸಲಿ ಎಂದು ಅಭಿಮಾನಿಗಳು ಆರ್ ಸಿ ಬಿ ತಂಡದ ಆಟಗಾರರಿಗೆ ದೈವಬಲ ತುಂಬಲು
ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕುಮಾರ್ ಅವರ ನೇತೃತ್ವದಲ್ಲಿ ವಿಜಯ ದುರ್ಗಾ ಹೋಮ ನೆರವೇರಿಸಿದರು.

ಆರ್ ಸಿ ಬಿ ಜರ್ಸಿ ಧರಸಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ಕೂಡಾ ಆರ್ ಸಿ ಬಿ ಜರ್ಸಿ ಧರಸಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಹರೀಶ್ ಗೌಡರು, ಈ ಬಾರಿ ಆರ್ ಸಿ ಬಿ ಗೆಲ್ಲುವ ನಿರೀಕ್ಷೆಯಲ್ಲಿದ್ದೇವೆ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಪ್ರತಿಯೊಬ್ಬ ಆಟಗಾರರು ಅತ್ಯುತ್ತಮ ಪ್ರದರ್ಶನ ಮಾಡಿದ್ದಾರೆ,
ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮೇಲೆ ಅತಿ ನಿರೀಕ್ಷೆಯಲ್ಲಿದ್ದೇವೆ, ಆರ್ ಸಿ ಬಿ ತಂಡ ಗೆಲುವು ಸಾಧಿಸಿ ಕಪ್ ತರಲಿ ಎಂದು ಶುಭ ಹಾರೈಸಿದರು.

ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಮಪ್ಪ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ , ಗುರುರಾಜ್ ಶೆಟ್ಟಿ, ನವೀನ, ರವಿಚಂದ್ರ, ಸಂದೀಪ್, ಎಸ್ ಎನ್ ರಾಜೇಶ್, ನಿತಿನ್, ಹರೀಶ್ ಗೌಡ, ರವಿಕುಮಾರ್, ಹೇಮಂತ,ಜಗದೀಶ್, ಹರ್ಷ, ಲೋಕೇಶ್, ಶ್ರೀನಿವಾಸ ಶೆಟ್ಟಿ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.

ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಹೋಮ :ಶಾಸಕ ಹರೀಶ್ ಗೌಡ ಭಾಗಿ Read More

ಯೋಧರ ಹೆಸರಿನಲ್ಲಿ ಗಾಣಿಗಾಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರೂಪ ಅಯ್ಯರ್

ಗುಲ್ಬರ್ಗ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಒಂಬತ್ತು ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಶ್ಲಾಘನೀಯ ಎಂದು ಬಿಜೆಪಿ
ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ರಾಜ್ಯ ಸಂಚಾಲಕಿ ಡಾ ರೂಪ ಅಯ್ಯರ್ ಹೇಳಿದ್ದಾರೆ.

ನಮ್ಮ ಸೇನೆ ಭಾರತ ಮಾತೆಯ ನಿಜವಾದ ಸಿಂಧೂರ ಕಾಶ್ಮೀರವನ್ನು ಭಯೋತ್ಪಾದಕರ ದಾಳಿಯಿಂದ ರಕ್ಷಿಸಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಭಾರತೀಯರ ಸಿಂಧೂರವನ್ನು ರಕ್ಷಿಸಲು ತಮ್ಮ ಜೀವ ಮತ್ತು ತಮ್ಮ ಕುಟುಂಬವನ್ನು ಲೆಕ್ಕಿಸದೆ ಆಪರೇಷನ್ ಸಿಂಧೂರ ಧರ್ಮ ಯುದ್ಧದಲ್ಲಿ ಭಾಗಿಗಳಾಗಿರುವ ಎಲ್ಲಾ ವೀರ ಯೋಧರಿಗೂ ದೈವಿಕ ಚೈತನ್ಯ ಶಕ್ತಿ ಮತ್ತು ವೀರ ಜಯ ಸಿಗಲಿ ಎಂದು ಗುಲ್ಬರ್ಗದ ಗಾಣಿಗಪುರದಲ್ಲಿ ಗುರು ದತ್ತಾತ್ರೇಯ ದೇವರಲ್ಲಿ ರೂಪಾ ಅಯ್ಯರ್ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು,
ಪಹಲ್ಗಾಮ್‌ ದಾಳಿ ನಡೆದ ದಿನದಿಂದ ಒಂದಿಲ್ಲೊಂದು ಕಠಿಣ ನಿಲುವು ಕೈಗೊಂಡ ನರೇಂದ್ರ ಮೋದಿ ಮತ್ತು ಭಾರತೀಯ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ದೇಶಕ್ಕೆ ನಿಜವಾದ ನೇತೃತ್ವ, ವ್ಯವಸ್ಥಿತ ಸೈನ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಜೊತೆಗೆ ಕ್ಯಾತೆ ತೆಗೆಯುವ ಎಲ್ಲ ನೆರೆಯ ರಾಷ್ಟ್ರಗಳಿಗೆ ಈ ದಾಳಿ ಎಚ್ಚರಿಕೆಯ ಗಂಟೆಯಾಗಲಿದೆ. ನಾವು ದೇಶಕ್ಕೆ ಆಗುವ ಚಿಕ್ಕ ಅಪಮಾನವನ್ನು ಸಹಿಸುವುದಿಲ್ಲ ಕಾರ್ಯಾಚರಣೆ ಪಾಕಿಸ್ತಾನಕ್ಕೆ ಪಾಠವಾಗಲಿದೆ ಎಂದು ರೂಪಾ ಹೇಳಿದರು.

ಯೋಧರ ಹೆಸರಿನಲ್ಲಿ ಗಾಣಿಗಾಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರೂಪ ಅಯ್ಯರ್ Read More