ಕೊಲೆಗೆ ಸುಪಾರಿ: ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ ಸಚಿವ ರಾಜಣ್ಣ ಪುತ್ರ

ತುಮಕೂರು: ನನ್ನ ಕೊಲೆಗೆ 70 ಲಕ್ಷ ರೂ ಸುಪಾರಿ ಕೊಡಲಾಗಿದೆ ಎಂದು ಆರೋಪಿಸಿ ಸಚಿವ ಕೆ.ಎನ್‌ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ್ದಾರೆ.

ತುಮಕೂರು‌ ಎಸ್ಪಿ ಕಚೇರಿಗೆ ತೆರಳಿದ ರಾಜೇಂದ್ರ ರಾಜಣ್ಣ ಅವರು ಎಸ್ಪಿ ಅಶೋಕ್‌ ಕುಮಾರ್‌ ಅವರಿಗೆ ಆಡಿಯೋ ಸಾಕ್ಷ್ಯದ ಸಹಿತ ಎರಡು ಪುಟಗಳ ದೂರು ನೀಡಿದ್ದಾರೆ. ತುಮಕೂರಿನ ಕ್ಯಾತ್ಸಂದದ ರಜತಾದ್ರಿ ನಿವಾಸದಲ್ಲಿ ಕಳೆದ ನವೆಂಬರ್‌ನಲ್ಲಿ ನನ್ನ ಹತ್ಯೆಗೆ ಯತ್ನ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ. ಅದರಲ್ಲಿ 5 ಲಕ್ಷ ಮುಂಗಡ ಪಾವತಿ ಮಾಡಿದ್ದಾರೆ. ಸೋಮ ಮತ್ತು ಭರತ್ ಅನ್ನೋರು ಇದರಲ್ಲಿದ್ದಾರೆ ಎಂದು ಹೇಳಿದರು.

ನನ್ನ ವಾಹನಕ್ಕೆ ಜಿಪಿಎಸ್ (GPS) ಅಳವಡಿಸಿ ಚಲನ ವಲನ ತಿಳಿಯಲು ಪ್ರಯತ್ನ ಪಟ್ಟಿದ್ದರು. ಹೀಗಾಗಿ ನನಗೆ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದೇನೆ. ಸುಪಾರಿ ಟೀಂ ನಲ್ಲಿ 20 ಜನ ಇದ್ದಾರೆ. 18 ನಿಮಿಷದ ಆಡಿಯೋ ಇದೆ ಎಂದು ರಾಜೇಂದ್ರ ರಾಜಣ್ಣ ತಿಳಿಸಿದರು.

ಡಿಜಿ ಅವರ ಸಲಹೆ ಮೇರೆಗೆ ಎಸ್ಪಿಗೆ ದೂರು ನೀಡಿದ್ದೇನೆ,ಹನಿಟ್ರ‍್ಯಾಪ್ ವಿಚಾರ ಎಲ್ಲೂ ಪ್ರಸ್ತಾಪ ಮಾಡಿಲ್ಲ,ನನಗೆ ಅಪರಿಚಿತರಿಂದ ಫೋನ್ ಕಾಲ್, ಮೆಸೆಜ್, ವೀಡಿಯೋ ಕಾಲ್ ಬರುತಿತ್ತು ಅಂತಾ ಅಷ್ಟೇ ಹೇಳಿದ್ದೆ. ಈಗ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದರ ಬಗ್ಗೆ ದೂರು ನೀಡಿದ್ದೇನೆ, ಎಫ್‌ಐಆರ್‌ ಮಾಡುವಂತೆ ಕೇಳಿಕೊಂಡಿದ್ದೇನೆ. ಕ್ಯಾತಸಂದ್ರ ಠಾಣೆಯಲ್ಲಿ ಎಫ್‌ಐಆರ್ ಮಾಡುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ನನ್ನ ಮೇಲೆ ಯಾರಿಗೂ ದ್ವೇಷ ಇಲ್ಲ. ನಾನೇನು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ. ಯಾಕೆ ಸುಪಾರಿ ಕೊಟ್ಟರು ಗೊತ್ತಿಲ್ಲ, ಅದನ್ನು ತನಿಖೆ ಮಾಡುವಂತೆ ಹೇಳಿದ್ದೇನೆ. ಸೋಮ ಮತ್ತು ಭರತ್ ಅನ್ನುವವರ ಹೆಸರು ಆಡಿಯೋದಲ್ಲಿ ಇದೆ. ಅವರು ಯಾರು ಅಂತಾ ಗೊತ್ತಿಲ್ಲ. ಒಬ್ಬ ಲೇಡಿ ಮತ್ತು ಹುಡುಗ 18 ನಿಮಿಷ ಆಡಿಯೋದಲ್ಲಿ ಮಾತನಾಡುತ್ತಾರೆ. ಮಗಳ ಬರ್ತ್‌ಡೇ ಹಿಂದಿನ ದಿನ ಹತ್ಯೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು. ಶಾಮಿಯಾನ ಮಾಲೀಕರು ಹೆಸರು ನಾನು ಹೇಳಲ್ಲ. ಮಾಧ್ಯಮದವರಿಂದ ಅವರಿಗೆ ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ನಾನು ಅವರ ಹೆಸರು ಹೇಳುವುದಿಲ್ಲ ಎಂದು ರಾಜೇಂದ್ರ ರಾಜಣ್ಣ ತಿಳಿಸಿದರು.

ಇದೀಗ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆಗೆ ಸುಪಾರಿ: ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ ಸಚಿವ ರಾಜಣ್ಣ ಪುತ್ರ Read More

ಬಸ್ ಮಾಲೀಕರ ಮೇಲೂ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಕೆ

ಚಾಮರಾಜನಗರ: ಶಾಲಾ ಶಿಕ್ಷಕರೊಬ್ಬರು ಬಸ್ ಚಾಲನೆ ಮಾಡಿ ಇಲಾಖಾವಾರು ವಿಚಾರಣೆ ನಡೆಸಿ ಅಮಾನತು ಮಾಡಿದ ಬೆನ್ನಲ್ಲೇ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರ ಪರ ಪ್ರತಿಭಟನೆ ನಡೆಸಿದ್ದಾರು‌.

ಇದೀಗ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬಸ್ ಮಾಲೀಕರ ಮೇಲೂ ಪ್ರಕರಣ ದಾಖಲಿಸುವಂತೆ ಚಾಮರಾಜನಗರ ವರಿಷ್ಟಾದಿಕಾರಿಗಳಿಗೆ ಕದಂಬಸೇನೆ ರಾಜ್ಯಾದ್ಯಕ್ಷ ಅಂಬರೀಶ್ ದೂರು ಸಲ್ಲಿಸಿಧ್ದಾರೆ.

ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಕೈಗೊಂಡಿದ್ದ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಖಾಸಗಿ ವಾಹನ ಸಂಖ್ಯೆ:ಕೆ.ಎಲ್.40.ಬಿ-9090 ಪಡೆದು ಶೈಕ್ಷಣಿಕ ಪ್ರವಾಸ ಕೈಗೊಂಡಿರುವುದು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಕಾಯಕ.

ಆದರೆ ಪ್ರವಾಸದಲ್ಲಿರುವಾಗ ಶಾಲೆಯ ಸಹಶಿಕ್ಷಕರಾದ ಶ್ರೀ ವೀರಭದ್ರಸ್ವಾಮಿ ಎಂಬುವವರು ಏಕಾಏಕಿ ಬಸ್ಸನ್ನು ಸ್ವತಃ ತಾವೇ ಚಾಲನೆ ಮಾಡಿರುವುದು ಸತಿಯಲ್ಲ.

ಶಿಕ್ಷಕ ಬಸ್ ಚಾಲನೆ ಮಾಡಿದ ದೃಶ್ಯವನ್ನು ಅವರ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ಸೆರೆ ಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಾವು ಒಬ್ಬ ಶಿಕ್ಷಕನಾಗಿ ಕನಿಷ್ಠ ಕಾನೂನು ತಿಳುವಳಿಕೆಗೆ ಒತ್ತು ನೀಡದೇ, ಮೇಲಾಧಿಕಾರಿಗಳ ಗಮನಕ್ಕೂ ತಾರದೇ, ಏಕಾಏಕಿ ಬಸ್ ಚಾಲನೆ ಮಾಡಿರುವುದಲ್ಲದೇ, ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಅವರ ಪೋಷಕರು ಆತಂಕದ ಬಗ್ಗೆ ಕನಿಷ್ಠ ಕಾಳಜಿ ವಹಿಸಿಲ್ಲ, ಜೊತೆಗೆ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡಿದ್ದಾರೆ, ಅಧಿಕೃತ ಭಾರಿ ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ ಇಲ್ಲದಿದ್ದರೂ ಭಾರಿ ವಾಹನ ಚಲಾಯಿಸಿರುವುದು ಮೋಟಾರ್ ವಾಹನ ಕಾಯಿದೆ ಪ್ರಕಾರ ಅಪರಾಧವಾಗಿರುತ್ತದೆ ಎಂದು ಅಂಬರೀಶ್ ಹೇಳಿದ್ದಾರೆ.

ಮಕ್ಕಳಿಗೆ ನಾಗರೀಕತೆ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಸ್ಥಾನದಲ್ಲಿದ್ದುಕೊಂಡು ತಾವೇ ತಮ್ಮ ಶಿಷ್ಯಂದಿರ ಮುಂದೆಯೇ ಈ ರೀತಿ ಕಾನೂನು ಬಾಹಿರ ನಡೆ ಅನುಸರಿಸಿರುವುದು ಮುಂದೆ ಅವರ ಶಿಷ್ಯರಲ್ಲೂ ಇದೇ ರೀತಿಯ ವರ್ತನೆ ಬೆಳೆಯಲು ಪ್ರಚೋದನೆ ನೀಡಿದಂತಾಗಿದೆ ಎಂದು ದೂರಿದ್ದಾರೆ.

ಮಕ್ಕಳ ರಕ್ಷಣೆ, ಪ್ರಾಣಾಪಾಯದ ಬಗ್ಗೆ ನಿಗಾ ಇಡಬೇಕಾದ ಶಿಕ್ಷಕರೇ, ಮಕ್ಕಳ ಪ್ರಾಣವನ್ನು ಒತ್ತೆ ಇಟ್ಟು ವಾಹನ ಚಲಾಯಿಸಿರುವುದು ಕಾನೂನು ರೀತಿ ಅಪರಾಧ.

ಹಾಗಾಗಿ ವಾಹನ ಚಾಲಕ ತನ್ನ ಬೇಜವಾಬ್ದಾರಿತನದಿಂದ ಶಿಕ್ಷಕರಿಗೆ ವಾಹನ ಚಾಲನೆ ಮಾಡಲು ಕೊಟ್ಟಿರುವುದು ಕೂಡಾ ಅಪರಾಧವೇ ಆಗಿದೆ.

ಕೂಡಲೇ ಮೇಲ್ಕಾಣಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕಠಿಣ ಕ್ರಮ ತೆಗೆದುಕೊಂಡು, ಮುಂದೆ ಯಾವ ವ್ಯಕ್ತಿಯು ಈ ತರಹದ ಅಪಾಯಕಾರಿ ಕೆಲಸಕ್ಕೆ ಕೈ ಹಾಕದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಅಂಬರೀಶ್ ಅವರು ಮನವಿ ಮಾಡಿದ್ದಾರೆ‌

ಬೇರೆ ಬೇರೆ ಕಡೆಗಳಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಮಕ್ಕಳ ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಗಳು ಕಂಡುಬಂದಿರುವುದರಿಂದ ಶಿಕ್ಷಕ, ಚಾಲಕ ಮತ್ತು ವಾಹನದ ಮಾಲೀಕರ ಮೇಲೆ ದೂರು ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕದಂಬಸೇನೆ ರಾಜ್ಯಾದ್ಯಕ್ಷ ಅಂಬರೀಶ್ ಕೋರಿದ್ದಾರೆ.

ಬಸ್ ಮಾಲೀಕರ ಮೇಲೂ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಕೆ Read More