ಅಪಘಾತದಲ್ಲಿ ಮಗನ ಮೆದಳು ನಿಷ್ಕ್ರಿಯ:ಅಂಗಾಂಗ ದಾನ ಮಾಡಿದ ಪೋಷಕರು
ಮಂಡ್ಯ: ರಸ್ತೆ ಅಪಘಾತದಲ್ಲಿ ಮೆದಳು ನಿಷ್ಕ್ರಿಯವಾದ ಮಗನ ಸಾವಿನ ನೋವನ್ನು ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಬೆಳಗೊಳ ಗ್ರಾಮದ ಯುವಕ ಯಶ್ವಂತ್ (21) ಪೋಷಕರು ಮಗನ ಅಂಗಾಂಗ ದಾನ ನಿರ್ಧಾರ ಮಾಡಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಡಿ-13 ರಂದು ರಸ್ತೆಯ ಮಂಟಿ ಬಳಿ ಬೈಕ್ ಗಳ ನಡುವೆ ಅಪಘಾತ ವಾಗಿತ್ತು ಈ ಅಪಘಾತದಲ್ಲಿ ಯಶ್ವಂತ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ಯಶ್ವಂತ್ ಮೆದಳು ನಿಷ್ಕ್ರಿಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಗನ ಅಂಗಾಂಗದಿಂದ ಹಲವರಿಗೆ ಜೀವದಾನದ ಬಗ್ಗೆ ವೈದ್ಯರಿಂದ ಮಾಹಿತಿ ತಿಳಿದು, ಮಗನ ಅಂಗಾಂಗ ದಾನ ಮಾಡಿ, ಹಲವರ ಜೀವನಕ್ಕೆ ಬೆಳಕಾಗಲು ಪೋಷಕರು ನಿರ್ಧಾರಿಸಿದರು.
ಅಪೋಲೋ ಆಸ್ಪತ್ರೆಯಲ್ಲಿ ಮೃತ ಮಗನ ಹಲವು ಅಂಗಾಂಗ ದಾನ ಮಾಡಿದರು.ಮಗನ ಅಂಗಾಂಗದಿಂದ ಹಲವರ ಬಾಳು ಬೆಳಕಾಗಲೆಂದು ಯಶ್ವಂತ್ ಪೋಷಕರು ಹಾರೈಸಿದರು.
ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಪೋಷಕರ ನಿರ್ಧಾರಕ್ಕೆ ವೈದ್ಯರು ಮತ್ತು ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.