ವೀರ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ

ಮೈಸೂರು: 8ನೇ ಶತಮಾನದಲ್ಲಿ ಸನಾತನ ಧರ್ಮ ಉನ್ನತ ಸ್ತರದಲ್ಲಿತ್ತು, ಇದನ್ನು ಪುನರುತ್ಥಾನಗೊಳಿಸಿದ ಕೀರ್ತಿ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು.

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ವೀರ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಆದಿ ಜಗದ್ಗುರು ಶಂಕರಾಚಾರ್ಯರ ಜಯಂತಿ ಅಂಗವಾಗಿ ಶೃಂಗೇರಿಯ ಶಾರದಾಂಬ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗಳಿಗೆ ಸೀರೆ ವಿತರಿಸಿ ಮಾತನಾಡಿದ ಅವರು,ಸನಾತನ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

8ನೇ ವಯಸ್ಸಿನಲ್ಲಿ ವೇದ, ಉಪನಿಷತ್ತುಗಳ ಕಂಠಪಾಠದಿಂದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ ಆಧ್ಯಾತ್ಮಿಕ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ಅದ್ವೈತ ಸಿದ್ಧಾಂತದ ಮಹಾವಾಕ್ಯಗಳಾದ ಅಯಮಾತ್ಮ ಬ್ರಹ್ಮ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ತತ್ವಮಸಿ ವಾಕ್ಯದ ವಿಶ್ಲೇಷಣೆ ನೀಡಿ ಮನುಕುಲವನ್ನು ಉದ್ದಾರಗೊಳಿಸಿದರು ಎಂದು ವಿಕ್ರಮ್ ಅಯ್ಯಂಗಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿನಯ್ ಕಣಗಾಲ್,ಶಿಕ್ಷಣ ತಜ್ಞರಾದ ದೀಪ,ಅನುಸೂಯ,ಸುಗುಣಾವತಿ, ಶಾರದಾ ಮತ್ತಿತರರು ಹಾಜರಿದ್ದರು.

ವೀರ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ Read More

ನದಿಯಲ್ಲಿ ಸೈನಿಕ,ಬಾಲಕ ಜಲ ಸಮಾಧಿ

ಬಾಗಲಕೋಟ: ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಬಾಲಕನ ರಕ್ಷಣೆಗೆ ಮುಂದಾದ ಸೈನಿಕ ಹಾಗೂ ಬಾಲಕ ಇಬ್ಬರೂ ಜಲಸಮಾಧಿಯಾದ ದಾರುಣ ಘಟನೆ ‌ಬಾಗಕಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಮಣೇರಿ ಗ್ರಾಮದ ಮಲಪ್ರಭಾ ನದಿಯಲ್ಲಿ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15) ಎಂಬಾತ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಈ ಈ ವೇಳೆ ಈಜು ಬಾರದೆ ಪರದಾಡಿದ್ದಾನೆ.

ಈ ವೇಳೆ ಅದೇ ಮಾರ್ಗದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ (25) ಸಾಗುತ್ತಿದ್ದರು. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆಂದು ನದಿಗೆ ಹಾರಿದ್ದಾರೆ.

ಆಗ ಈಜು ಬಾರದ ಶೇಖಪ್ಪ ಭಯದಿಂದ ಮಹಾಂತೇಶ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇದರಿಂದ ಮಹಾಂತೇಶಗೆ ಕೂಡ ಈಜಲು ಸಾಧ್ಯವಾಗದೇ ಇಬ್ಬರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಎರಡು ಮೃತದೇಹವನ್ನು ಹೊರ ತೆಗೆದಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನದಿಯಲ್ಲಿ ಸೈನಿಕ,ಬಾಲಕ ಜಲ ಸಮಾಧಿ Read More

ಬೆಳಗಾವಿಯಲ್ಲಿಕೆರೆಗೆ ಹಾರಿ ಯೋಧ ಆತ್ಮಹತ್ಯೆ

ಬೆಳಗಾವಿ: ರಜೆಗೆ ಊರಿಗೆ ಬಂದಿದ್ದ ಯೋಧರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಿತ್ತೂರು ತಾಲೂಕಿನ ದೇವಗಾಂವ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು,
ನರೇಶ್ ಅಗಸರ (28) ಆತ್ಮಹತ್ಯೆ ಮಾಡಿಕೊಂಡಿರುವ ಯೋಧ.

ಅವರು ಕಳೆದ 4 ವರ್ಷಗಳಿಂದ ಭಾರೀತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 20 ದಿನಗಳ ಹಿಂದೆ ನರೇಶ್ ರಜೆಯ ಮೇಲೆ ಊರಿಗೆ ಬಂದಿದ್ದರು.ಇವತ್ತು ಕರ್ತವ್ಯಕ್ಕೆ ಹೋಗಬೇಕಾಗಿತ್ತು.

ಆದರೆ ಅದೇನಾಯಿತೊ ಯೋಧ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿತ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಳಗಾವಿಯಲ್ಲಿಕೆರೆಗೆ ಹಾರಿ ಯೋಧ ಆತ್ಮಹತ್ಯೆ Read More