ಶಾಂತವೇರಿ ಗೋಪಾಲಗೌಡರು ನಾಡು ಕಂಡ ಶ್ರೇಷ್ಠ ರಾಜಕಾರಣಿ:ಬಿ.ಸೋಮಶೇಖರ್

ಚಾಮರಾಜನಗರ: ಚಾಮರಾಜನಗರದಲ್ಲಿ ಕರ್ನಾಟಕ ಏಕೀಕರಣದ ರೂವಾರಿ ಸಮಾಜವಾದಿ ನಾಯಕ, ಆದರ್ಶ ರಾಜಕಾರಣಿ ಶ್ರೀ ಶಾಂತವೇರಿ ಗೋಪಾಲಗೌಡ ರವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಖಿಲ ಕರ್ನಾಟಕ ಕನ್ನಡ ಮಹಾ ಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವನ್ನು
ಮಾಜಿ ಸಚಿವ ಬಿ. ಸೋಮಶೇಖರ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರು ನಾಡು ಕಂಡ ಪ್ರಾಮಾಣಿಕ ಶ್ರೇಷ್ಠ ರಾಜಕಾರಣಿ ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದರು. ಇಂತಹ ಮಹನೀಯರ ವಿಚಾರಧಾರೆ ಗಳನ್ನು ನೆನೆಯುವುದು ಅನಿವಾರ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಖ್ಯಾತ ನರರೋಗ ತಜ್ಙ ಡಾ. ವಿ ಸುಶ್ರುತ ಗೌಡ ವಹಿಸಿದ್ದರು.

ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಮಾಜಿ ಶಾಸಕರಾದ ನಂಜುಂಡಸ್ವಾಮಿ, ನಿರಂಜನ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಿವ್ಯ ಸಾನಿಧ್ಯ ವನ್ನು ಹರಿವೆ ವಿರಕ್ತ ಮಠದ ಸರ್ಪ ಭೂಷಣ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾ ಸಭಾದ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ರಾಮಚಂದ್ರು, ಚಿನ್ನಮುತ್ತು, ನಂಜುಂಡಪ್ಪ, ಲತಾ ರಂಗನಾಥ್, ವರಕೂಡು ಕೃಷ್ಣೇಗೌಡ, ಪ್ರಭಾಕರ್, ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಶಾಂತವೇರಿ ಗೋಪಾಲಗೌಡರು ನಾಡು ಕಂಡ ಶ್ರೇಷ್ಠ ರಾಜಕಾರಣಿ:ಬಿ.ಸೋಮಶೇಖರ್ Read More

ವಿಷ್ಣು ಪ್ರತಿಮೆಗೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್

ಮೈಸೂರು: ಮೈಸೂರಿನ ಉದ್ಬೂರು ಸಮೀಪ ಇರುವ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವಿಷ್ಣುವರ್ಧನ್ ಪ್ರತಿಮೆಗೆ ವಿಷ್ಣು ಪತ್ನಿ, ನಟಿ ಭಾರತಿ ಪೂಜೆ ಸಲ್ಲಿಸಿದರು.

ವಿಷ್ಣು ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ನಟ‌ ಅನಿರುದ್ ಅವರೊಂದಿಗೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ಹೊರತಂದಿರುವ ವಿಷ್ಣುವರ್ಧನ್ ಅವರ ಕೋಟಿಗೊಬ್ಬ 2025 ರ
ಕ್ಯಾಲೆಂಡರ್ ಬಿಡುಗಡೆಗೊಳಿಸಿದರು

ಈ ವೇಳೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಅವರು ವಿಷ್ಣುವರ್ಧನ್ ಅಭಿಮಾನಿ ಬಳಗಕ್ಕೆ ಶುಭ ಹಾರೈಸಿದರು. ನಂತರ ಜೀವದಾರ ರಕ್ತ ನಿಧಿ ಕೇಂದ್ರ ಆಯೋಜಿಸಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.

ಈ‌ ವೇಳೆ 60ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು ಬಳಿಕ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಗೆ ಭಾರತಿ ಚಾಲನೆ ನೀಡಿದರು.

ಈ ವೇಳೆ ವಿಷ್ಣು ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಎಂ. ಡಿ ಪಾರ್ಥಸಾರಥಿ, ಆಲ್ವಿನ್,ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್, ಎಂ ಎನ್ ಚೇತನ್ ಗೌಡ, ಲಕ್ಷ್ಮಣ, ಮಹದೇವ್, ಜೀವದಾರ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಸುರೇಶ್, ಪ್ರಭು,
ಸಂತೋಷ್ ,ಸಿದ್ದಪ್ಪ, ಬಸವರಾಜು ಮತ್ತಿತರರು ಹಾಜರಿದ್ದರು.

ವಿಷ್ಣು ಪ್ರತಿಮೆಗೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್ Read More

ಹುತಾತ್ಮರಾದ ರಾಮಸ್ವಾಮಿ ಸಂಸ್ಮರಣೆ

ಮೈಸೂರು: ಮೈಸೂರು ರಾಜ್ಯದ ಪ್ರಜಾಪ್ರಭುತ್ವಕ್ಕಾಗಿ ನಡೆದ ವಿದ್ಯಾರ್ಥ ಸಂಘಟನೆಯ ಹೋರಾಟದಲ್ಲಿ ಹುತಾತ್ಮರಾದ ರಾಮಸ್ವಾಮಿ ಅವರನ್ನು ಯುವಭಾರತ್ ಸಂಘಟನೆಯಿಂದ ಸ್ಮರಿಸಲಾಯಿತು

ಯುವಭಾರತ್ ಸಂಘಟನೆಯ ವತಿಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಹುತಾತ್ಮ ರಾಮಸ್ವಾಮಿ ದಿವಸ್ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,

ರಾಮಸ್ವಾಮಿ ಸ್ಮಾರಕಕ್ಕೆ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ಅವರು ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಇಳೈ ಆಳ್ವಾರ್ ಸ್ವಾಮೀಜಿ ಅವರು ಮಾತನಾಡಿ ಭಾರತಕ್ಕೆ‌ ಸ್ವಾತಂತ್ರ್ಯ ದೊರೆತ ನಂತರ ಮೈಸೂರು ರಾಜ್ಯಕ್ಕೆ ಪ್ರಜಾಪ್ರಭುತ್ವ ಸ್ವಾತಂತ್ರ್ಯ ನೀಡಬೇಕೆಂದು‌ ಆಗ್ರಹಿಸಿ‌ ನಡೆದ ವಿದ್ಯಾರ್ಥಿ ಚಳವಳಿಗಳಲ್ಲಿ 1947ರ ಸೆಪ್ಟಂಬರ್ 13ರಂದು ಭಾರತ ತ್ರಿವರ್ಣ ಧ್ವಜ ಹಾರಿಸಿ‌ ಮೈಸೂರು ರಾಜ್ಯದ ಕಮೀಷನರ್ ನಾಗರಾಜರಾಯರ ಗುಂಡೇಟಿಗೆ ರಾಮಸ್ವಾಮಿ ಬಲಿಯಾದರು ಎಂದು ಸ್ಮರಿಸಿದರು.

ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ ಹಾರ್ಡ್ವಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ರಾಮಸ್ವಾಮಿ ಅವರು ಅಂದಿನ ಫೈವ್ ಲೈಟ್ ವೃತ್ತದಲ್ಲಿ (ರಾಮಸ್ವಮಿ ಸರ್ಕಲ್) ಧ್ವಜವನ್ನ ಧೈರ್ಯವಾಗಿ ಹಿಡಿದು ಕಂಬವನ್ನೇರಿ ಹಾರಿಸಿ ಪ್ರಾಣಬಿಟ್ಟರು, ಅವರ ಹೋರಾಟ,ತ್ಯಾಗ ದೇಶಪ್ರೇಮವನ್ನ ಸ್ಮರಿಸಿ ಪ್ರತಿವರ್ಷ ಹುತಾತ್ಮ ದಿವಸ್ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್ ಮಾತನಾಡಿ ರಾಮಸ್ವಾಮಿ ವೃತ್ತವನ್ನ ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ರಾಮಸ್ವಾಮಿ ರವರ ಜೀವನಚರಿತ್ರೆ ಮಾಹಿತಿಯ ನಮಫಲಕ ಅಳವಡಿಸಲು ದಸರಾ ಸಂಧರ್ಭದಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು.

ಮತ್ತು ಹಳೇ ಮೈಸೂರಿನ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸಾಹಿತಿಗಳು ಕವಿಗಳು ಕಲಾವಿದರು ಸಹಕಾರಿಗಳು ಶಿಕ್ಷಣ ವಿದ್ವಾಂಸರು ಉದ್ಯಮಿಗಳು ಮೈಸೂರಿನ ಅಸ್ಮಿತೆ ಕೀರ್ತಿಯನ್ನ ಶತಮಾನದ ಹಿಂದೆಯೇ ಹಚ್ಚಿಸಿದ್ದಾರೆ ಅವರ ಇತಿಹಾಸ ಕೊಡುಗೆಯನ್ನ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಜಿಲ್ಲಾಡಳಿತ, ನಗರಪಾಲಿಕೆ ಕನ್ನಡ ಸಂಸ್ಕೃತಿ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ನಗರಪಾಲಿಕೆ ಮಾಜಿ ಸದಸ್ಯ ಮಾ. ವಿ ರಾಮಪ್ರಸಾದ್, ಯುವ ಭಾರತ್ ಸಂಘಟನೆಯ ಅಧ್ಯಕ್ಷ ಜೋಗಿ ಮಂಜು, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಮುಡ ಮಾಜಿ ಸದಸ್ಯ ನವೀನ್ ಕುಮಾರ್, ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಂ ಆರ್ ಬಾಲಕೃಷ್ಣ, ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಮಾರ್ಟ್ ಮಂಜು, ಸುದರ್ಶನ್, ಶ್ರೀನಿವಾಸ್, ಚರಣ್, ಚಕ್ರಪಾಣಿ, ಮಿರ್ಲೆ ಪಣೀಷ್, ಸುಚಿಂದ್ರ, ಎಸ್ ಎನ್ ರಾಜೇಶ್ ಮತ್ತಿತರರು ಹಾಜರಿದ್ದರು.

ಹುತಾತ್ಮರಾದ ರಾಮಸ್ವಾಮಿ ಸಂಸ್ಮರಣೆ Read More