ನಾಡು,ದೇಶ ಕಂಡ ಮಹಾನ್ ಇಂಜಿನಿಯರ್ ಸರ್.ಎಂ.ವಿ-ಸಿ.ಎನ್ ಮಂಜೇಗೌಡ

ಮೈಸೂರು: ನಮ್ಮ ನಾಡು,ದೇಶ ಕಂಡ ಮಹಾನ್ ಇಂಜಿನಿಯರ್, ತಮ್ಮ ಬುದ್ದಿವಂತಿಕೆ ಹಾಗೂ ಕೆಲಸದಿಂದಲೇ ವಿಶ್ವ ವಿಖ್ಯಾತರಾದವರು ಸರ್.ಎಂ. ವಿಶೇಶ್ವರಯ್ಯನವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ ಬಣ್ಣಿಸಿದರು.

ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಂಜೇಗೌಡರು ಮಾತನಾಡಿದರು.

ಬ್ರಿಟೀಷರಿಂದ ಸರ್ ಎಂಬ ಬಿರುದನ್ನು ಪಡೆದವರು, ಮುಂಬೈ ನಲ್ಲಿ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದ ವಿಶ್ವೇಶ್ವರಯ್ಯನವರನ್ನು ಮೈಸೂರಿಗೆ ಕರೆಯಿಸಿಕೊಂಡ ನಾಲ್ವಡಿ ಸವರು ಕನ್ನಂಬಾಡಿ ಕಟ್ಟೆಯ ಉಸ್ತುವಾರಿ ನೀಡಿ, ಕಟ್ಟೆಯನ್ನು ಅದ್ಬುತವಾಗಿ ನಿರ್ಮಾಣ ಮಾಡಿದರು ಎಂದು ಸ್ಮರಿಸಿದರು.

ಕೋಟ್ಯಂತರ ಇಂಜಿನೀಯರ್ ಗಳು ದೇಶದಲ್ಲಿ ಇದ್ದರೂ ಸರ್ ಎಂ ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನವನ್ನು ಸರ್ಕಾರ ಇಂಜಿನೀಯರ್ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದರೆ ಅವರ ಕೊಡುಗೆ, ಸಾಧನೆಗಳು ಅಪಾರ ಎಂಬುದು ಅರಿವಾಗುತ್ತದೆ ಎಂದು ಹೇಳಿದರು.

ಅವರ ಪ್ರಾಮಾಣಿಕ, ನಿಸ್ವಾರ್ಥ ಸೇವೆಯಿಂದಲೇ ಭಾರತ ರತ್ನ ಪ್ರಶಸ್ತಿ ನೀಡಿರುವುದು, ನಮಗೆ, ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಇಂತಹ ಮಹನೀಯರ ತತ್ವ, ಆದರ್ಶಗಳನ್ನು ಈಗಿನ ಇಂಜಿನೀಯರ್ ಗಳು ಅಳವಡಿಸಿಕೊಳ್ಳಬೇಕು ಎಂದು ಮಂಜೇಗೌಡ ಕರೆ ನೀಡಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಇಂಜಿನೀಯರ್ ಆಗಿ ಬಂದಂತಹ ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ಕಟ್ಟೆ ಸೇರಿದಂತೆ ಹಲವಾರು ಅಣೆಕಟ್ಟುಗಳು ಹಾಗೂ ರಸ್ತೆಗಳ ನಿರ್ಮಾಣಕ್ಕೆ ಕಾರಣರಾದರು ಎಂದು ಬಣ್ಣಿಸಿದರು.

ಮಹಾರಾಜರ ಸಹಕಾರದಿಂದ ಅನೇಕ ಕೈಗಾರಿಕೆಗಳು, ವಿದ್ಯುಚ್ಛಕ್ತಿ ಸ್ಥಾವರ,ಮೈಸೂರು ಬ್ಯಾಂಕ್ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರು. ಇಂತಹ ಮಹನೀಯರ ದಿನಾಚರಣೆಯನ್ನು ಮುಂದಿನ ವರ್ಷದಿಂದ ಸರ್ಕಾರ ಜಿಲ್ಲಾಡಳಿತದ ವತಿಯಿಂದ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

ಎಪಿಎನ್ ಪ್ರಾಪರ್ಟಿಸ್ ನ ಎ.ಪಿ. ನಾಗೇಶ್ ರವರು ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಅಧ್ಯಕ್ಷರಾದ ಸಿ.ಜಿ ಗಂಗಾಧರ್,
ಹಿರಿಯ ಸಮಾಜ ಸೇವಕರಾದ ಡಾ. ರಘುರಾಂ. ಕೆ ವಾಜಪೇಯಿ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಶಿವಲಿಂಗಯ್ಯ, ನೇಹಾ, ಪದ್ಮ, ಪ್ರಜೀಶ್, ಮನು ನಾಯಕ್, ವರಕೂಡು ಕೃಷ್ಣೇಗೌಡ, ಹನುಮಂತಯ್ಯ, ಮಂಜುಳ, ಸುಶೀಲ, ತಾಯೂರ್ ಗಣೇಶ್, ಪ್ರಭಾಕರ್, ತ್ಯಾಗರಾಜ್, ರಾಮಕೃಷ್ಣೇಗೌಡ, ಜ್ಯೋತಿ, ಕುಮಾರ್ ಗೌಡ, ನಂದಕುಮಾರ್, ರಘು ಅರಸ್, ಅಶೋಕ್ ಹನುಮಂತೇಗೌಡ, ಆನಂದ್ ಗೌಡ, ದರ್ಶನ್ ಗೌಡ, ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ನಾಡು,ದೇಶ ಕಂಡ ಮಹಾನ್ ಇಂಜಿನಿಯರ್ ಸರ್.ಎಂ.ವಿ-ಸಿ.ಎನ್ ಮಂಜೇಗೌಡ Read More