ಸಿದ್ಧಾರ್ಥನಗರ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನವಮಿ
ಮೈಸೂರು, ಏ.6: ಮೈಸೂರಿನ ಸಿದ್ಧಾರ್ಥನಗರ,ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಸಡಗರ,ಭಕ್ತಿಯಿಂದ ಶ್ರೀರಾಮನವಮಿ ಪ್ರಾರಂಭಿಸಲಾಯಿತು.

ಬೆಳಿಗ್ಗೆ ಶ್ರೀರಾಮನವಮಿ ಪ್ರಯುಕ್ತ ಪಂಚವಟಿಯಲ್ಲಿರುವ ಎಲ್ಲಾ ದೇವರುಗಳಿಗೂ ವಿಶೇಷ ಅಭಿಷೇಕ ಮತ್ತು ಸುಗಂಧ ಭರಿತ ಪುಷ್ಪಾಲಂಕಾರ ಮಾಡಲಾಯಿತು.

ಶ್ರೀ ಸೀತಾರಾಮ ಲಕ್ಷ್ಮಣ,ಆಂಜನೇಯಸ್ವಾಮಿ, ಗಣೇಶ,ನವಗ್ರಹಗಳು,ರಾಘವೇಂದ್ರ ಸ್ವಾಮಿ,ಸತ್ಯನಾರಾಯಣ ಸ್ವಾಮಿ,ಅಮ್ಮನವರಿಗೆ ವಿಶೇಷ ಅವಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಭಕ್ತರಿಗೆ ಮಜ್ಜಿಗೆ,ಪಾನಕ ಮತ್ತಿತರ ಪ್ರಸಾದ ವಿನಿಯೋಗ ಮಾಡಲಾಯಿತು.

ಇಂದಿನಿಂದ ಏ.14ರ ವರೆಗೂ ದೇವಾಲಯದ ಆವರಣದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪೂಜಾ ಕಾರ್ಯಗಳನ್ನು ದೇವಾಲಯದ ಪುರೋಹಿತರಾದ ಅರುಣ್ ಮತ್ತು ತಂಡದವರು ನೆರವೇರಿಸಿದರು.

ಮೈಸೂರಿನ ಮಾರ್ವೆಲ್ ಪಿಯು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೂ ಹಾಗೂ ಕಾರ್ಯದರ್ಶಿ ಗಳಾದ ಡಾ.ಗಿಣಿಸ್ವಾಮಿ ಅವರು ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದರು.
ಸಿದ್ಧಾರ್ಥನಗರ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನವಮಿ Read More