ಮಹಾಶಿವರಾತ್ರಿ ಪ್ರಯುಕ್ತ ಹಿಂದೂ-ಮುಸ್ಲಿಮರಿಂದ ಮಜ್ಜಿಗೆ ವಿತರಣೆ

ಮೈಸೂರು: ಮೈಸೂರಿನಲ್ಲಿ
ಮಹಾಶಿವರಾತ್ರಿ ಅಂಗವಾಗಿ ಹಿಂದೂ ಮುಸಲ್ಮಾನ್ ಬಾಂಧವರು ಜೊತೆಯಾಗಿ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿ ಸೌಹಾರ್ದತೆ ಮೆರೆದರು.

ಮೈಸೂರಿನ ಸಿದ್ಧಾರ್ಥ ನಗರದ ಬನ್ನೂರು ರಸ್ತೆಯಲ್ಲಿರುವ ಮಲೆ ಮಾದೇಶ್ವರ ದೇವಸ್ಥಾನದಲ್ಲಿ ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ಶಿವರಾತ್ರಿ ಅಂಗವಾಗಿ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಮುಸಲ್ಮಾನ್ ಬಂಧುಗಳು ಸಹ ಮಜ್ಜಿಗೆ ವಿತರಿಸಲು ಅವರ ಜೊತೆ ಕೈಜೋಡಿಸುವ ಮೂಲಕ‌ ಸೌಹಾರ್ದತೆ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ಅವರು,
ಎಲ್ಲರೂ ಪರಸ್ಪರ ಪ್ರೀತಿಸಬೇಕು ಎಂದು ಕರೆ ನೀಡಿದರು.

ಭಾರತ ಬಹುತ್ವದ ದೇಶ, ಎಲ್ಲಾ ಪ್ರಾಂತ್ಯಗಳ ಎಲ್ಲಾ ಧರ್ಮ, ಜಾತಿ, ಭಾಷೆಗಳವರು ಒಟ್ಟಾಗಿ ಬಾಳಬೇಕು ಎಂದು ಹೇಳಿದರು.

ಮನುಷ್ಯತ್ವ ಬಹಳ ದೊಡ್ಡದು, ಎಲ್ಲರೂ ಪರಸ್ಪರ ಪ್ರೀತಿಸಬೇಕು,ಪ್ರತಿಯೊಬ್ಬರೂ ಸಹಿಷ್ಣುತೆಯನ್ನು ಪಾಲಿಸಬೇಕು ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ರಾಷ್ಟ್ರ ಸಮಾಜ ಹಾಗೂ ಎಲ್ಲ ಧರ್ಮಗಳೂ ಏಳಿಗೆಯಾಗುತ್ತದೆ ಎಂದು ಬಸವರಸಜ‌ ಬಸಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಮಲೆ ಮಾದೇಶ್ವರ ಸೇವಾ ಸಂಸ್ಥೆ ಅಧ್ಯಕ್ಷರಾದ ಮಹಾನ್ ಶ್ರೇಯಸ್,
ರಫೀಕ್ ,ಸಾಹೇಬ್, ಅಬ್ದುಲ್, ಸಫಿ,
ಮುತ್ತುರಾಜ್, ಮನುಕುಮಾರ್, ಸೋಮಣ್ಣ, ನಾಗೇಂದ್ರ ಮತ್ತಿತರರು ಹಾಜರಿದ್ದರು.

ಮಹಾಶಿವರಾತ್ರಿ ಪ್ರಯುಕ್ತ ಹಿಂದೂ-ಮುಸ್ಲಿಮರಿಂದ ಮಜ್ಜಿಗೆ ವಿತರಣೆ Read More

ಸಿದ್ದಾರ್ಥನಗರದ ಫುಡ್ ಸ್ರ್ಟೀಟ್ ಬಳಿ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ಲಲಿತಮಹಲ್ ರಸ್ತೆ ಫುಡ್ ಸ್ರ್ಟೀಟ್ ವ್ಯಾಪಾರಿಗಳ ಸಂಘ,ವಿಷ್ಣುಸೇನಾ ಸಮಾನ ಮನಸ್ಕರ‌ ಗುಂಪು ಮತ್ತು
ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ಅಂಗಡಿ ಮುಂದೆ ಧ್ವಜ ಸ್ತಂಬ ನೆಟ್ಟು ತಾಯಿ ಭುವನೇಶ್ವರಿ ಭಾವಚಿತ್ರವನ್ನು ಇರಿಸಿ ಪೂಜೆ ನೆರವೇರಿಸಲಾಯಿತು.

ಧ್ವಜ ಸ್ತಂಭದ ಸುತ್ತ ಸ್ವಚ್ಛಪಡಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು.

ಈ ವೇಳೆ ನೂರಾರು ಕನ್ನಡಾಭಿಮಾನಿಗಳು ಆಗಮಿಸಿದ್ದರು.ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಬಾ‌ ದೇವರಾಜ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೂ ಅಭಿಮಾನಿಗಳು ನಮನ ಸಲ್ಲಿಸಿದರು.

ಇದೇ ವೇಳೆ‌ ಡಾಬಾ ದೇವರಾಜ್,ರವಿ,ವಿಜಯ್ ಕುಮಾರ್ ಮತ್ತು ದೀಪಿಕಾ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿದ್ದಾರ್ಥನಗರದ ಫುಡ್ ಸ್ರ್ಟೀಟ್ ಬಳಿ ಕನ್ನಡ ರಾಜ್ಯೋತ್ಸವ ಆಚರಣೆ Read More

ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ – ಟಿ ಎಸ್ ಶ್ರೀವತ್ಸ

ಮೈಸೂರು: ನಿಯತ್ತಿನ ಪ್ರಾಣಿಯೊಂದಿದ್ದರೆ ಅದು ಶ್ವಾನ, ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.

ಮೈಸೂರಿನ ಸಿದ್ದಾರ್ಥ ಲೇಔಟ್ ನಲ್ಲಿರುವ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಮಲೆ ಮಾದೇಶ್ವರ ಸಂಸ್ಥೆ ಹಾಗೂ ಇನ್ನರ್ ವೀಲ್ ಗೋಲ್ಡ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವಿವಿಧ ತಳಿಯ
ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.

ನಗರದ ಕೆಲವು ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚಾಗಿರುವುದರಿಂದ ಶ್ವಾನಗಳ ಅವಶ್ಯಕತೆ ಇದೆ, ಶ್ವಾನ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದರಿಂದಲೇ ಜನರು ಶ್ವಾನ ಸಾಕುವುದು ರೂಢಿಯಾಗಿದೆ ಎಂದು ಹೇಳಿದರು.

10ತಳಿಯ 30 ಶ್ವಾನಗಳು ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದವು.

ರಾಟ್ ವೀಲರ್ ಶ್ವಾನಕ್ಕೆ ಪ್ರಥಮ ಬಹುಮಾನ ದೊರೆಯಿತು, ಹಸ್ಕಿ ತಳಿಗೆ ದ್ವಿತೀಯ ಬಹುಮಾನ, ಪಿಟ್ ಬುಲ್ ತಳಿಗೆ ತೃತೀಯ ಬಹುಮಾನ ಲಭಿಸಿತು.

ಈ ಶ್ವಾನಗಳ ಮಾಲೀಕರಿಗೆ ಶಾಸಕ ಟಿ ಎಸ್ ಶ್ರೀವತ್ಸ ಬಹುಮಾನ ವಿತರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಇತರೆ ಶ್ವಾನ ಗಳ ಮಾಲೀಕರಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಈ‌ ವೇಳೆ ಕಾಂಗ್ರೆಸ್ ಮುಖಂಡರಾದ ಜಿ ಶ್ರೀನಾಥ್ ಬಾಬು, ನಟಿ ಸ್ಮಿತಾ, ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಅಚ್ಚು, ರವೀಂದ್ರ, ಪ್ರತಿಭಾ,ಆಲೂಕ್ ಜೈನ್, ಇನ್ನರ್ ವಿಲ್ ಕ್ಲಬ್ ಗೋಲ್ಡ್ ಅಧ್ಯಕ್ಷೆ ಪ್ರೇಮಾ ರವಿ, ಉಪಾಧ್ಯಕ್ಷೆ ಪ್ರತಿಭಾ, ಕಾರ್ಯದರ್ಶಿ ಅಂಶು ಅಗರ್ವಾಲ್ , ಶೀಲ, ಅಂಜಲಿ, ಚೇತನ್, ಜಿ ರಾಘವೇಂದ್ರ, ಆರ್ ಜೆ ಅವಿನಾಶ್ ಮತ್ತಿತರರು ಹಾಜರಿದ್ದರು.

ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ – ಟಿ ಎಸ್ ಶ್ರೀವತ್ಸ Read More