ಚಂದಗಾಲು ಗ್ರಾಮದಲ್ಲಿ ಶಾಲೆ ವಾಕ್ಫ್ ಬೋರ್ಡ್ ಗೆ ಸೇರಿಸಿದ್ದನ್ನು ಖಂಡಿಸಿ ಪ್ರತಿಭಟನೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕ್ಷೇತ್ರದ ಚಂದಗಾಲು ಗ್ರಾಮದಲ್ಲಿ ಶಾಲೆಯನ್ನು ವಾಕ್ಫ್ ಬೋರ್ಡ್ ಗೆ ಸೇರಿಸಲಾಗಿದ್ದು ಇದನ್ನು ಖಂಡಿಸಿ ರಾಜ್ಯ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿರೋದ ಪಕ್ಷದ ನಾಯಕ ಆರ್. ಅಶೋಕ್, ಮೈಸೂರು ಮತ್ತು ಕೊಡಗು ಸಂಸದ ಎದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಡವಾಳು ಸಚ್ಚಿದಾನಂದ, ಮಾಜಿ ಸಚಿವ ನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.

ನಿಮಗೆ ತಾಕತ್ತು ಅನ್ನುವುದಿದ್ದರೆ ನಮ್ಮನ್ನ ಬಂಧಿಸಿ ಎಂದು ಘೊಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿ ಜಾಗದಲ್ಲೂ ಕೂಡ ವಕ್ಫ್ ಬೋರ್ಡ್ ನಾಮಫಲಕವನ್ನ ಹಾಕುತ್ತಿದ್ದಾರೆ, 2000 ಆಸೆಗೆ ಹೋಗಿ ತಮ್ಮ ಒಳಗದ್ದೆಗಳು ದೇವಸ್ಥಾನಗಳೆಲ್ಲ ವಕ್ಫ್ ಬೋರ್ಡ್ ಜಾಗ ಮಾಡಲು ಆರಂಭಿಸಿದ್ದಾರೆ ಆದ್ದರಿಂದ ಹಿಂದುಗಳು ಒಗ್ಗಟ್ಟಾಗಿ ನಮ್ಮ ಜಾಗವನ್ನು ನಾವು ಸಂರಕ್ಷಿಸಿಕೊಳ್ಳುವಬೇಕು ಎಂದು ಪ್ರತಿಭಟನಾ ನಿರತರು ಕರೆ ನೀಡಿದರು.

ನಮ್ಮ ದೇವಸ್ಥಾನವನ್ನು ಸಂರಕ್ಷಿಸಬೇಕು, ನಮ್ಮ ಸಹೋದರಿಯರನ್ನ ರಕ್ಷಿಸಬೇಕು ಇದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಈಗ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದೆ ಆದರೆ ಯಾವುದೇ ರೀತಿಯಲ್ಲೂ ಕಾಯ್ದೆ ಹಿಂಪಡೆಯುವುದಿಲ್ಲ ಒಂದು ಕೋಮನ್ನು ಒಲೈಸಲು ಸರ್ಕಾರ ಇಂತಹ ಕಾಯಿದೆಯನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದಗಾಲು ಗ್ರಾಮದಲ್ಲಿ ಶಾಲೆ ವಾಕ್ಫ್ ಬೋರ್ಡ್ ಗೆ ಸೇರಿಸಿದ್ದನ್ನು ಖಂಡಿಸಿ ಪ್ರತಿಭಟನೆ Read More

ಶ್ರೀರಂಗಪಟ್ಟಣದಲ್ಲಿ ಸಸಿ ನೆಟ್ಟು ವಿಜಯೇಂದ್ರ ಹುಟ್ಟುಹಬ್ಬ ಆಚರಣೆ

ಶ್ರೀರಂಗಪಟ್ಟಣ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಜನುಮದಿನವನ್ನು ಶ್ರೀರಂಗಪಟ್ಟಣದಲ್ಲಿ ವಿಶೇಷವಾಗಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

ಈ ಬಾರು ವಿಜಯೇಂದ್ರ ಅವರ ಅಭಿಲಾಷೆ ಯಂತೆ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಪರಿಸರ ಸಂರಕ್ಷಣೆಯನ್ನು ಮಾಡಬೇಕೆಂಬ ಉದ್ದೇಶದಿಂದ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಹುಟ್ಟು ಹಬ್ಬದ ದಿನವನ್ನ ಆಚರಿಸಿದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜೆ ಎಸ್ ಜಗದೀಶ್, ಬಿಜೆಪಿ ಮುಖಂಡರುಗಳಾದ ಅರ್ಜುನ್ ಪಾರ್ಥ, ಆಯಿರಳ್ಳಿ ವಿರೂಪಾಕ್ಷ, ಸತ್ಯಾನಂದ, ವಿಟ್ಟು, ಮಧು, ಕೆಂಚ, ಲೋಹಿತ್ ಶರ್ಮಾ, ವಿಜಯ್ ಕುಮಾರ್, ಶ್ರೀನಿವಾಸ್, ಪ್ರಸನ್ನ ಕುಮಾರ್, ಶ್ರೇಯಸ್, ಶಶಾಂಕ್ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.

ಶ್ರೀರಂಗಪಟ್ಟಣದಲ್ಲಿ ಸಸಿ ನೆಟ್ಟು ವಿಜಯೇಂದ್ರ ಹುಟ್ಟುಹಬ್ಬ ಆಚರಣೆ Read More

ಶ್ರೀರಂಗಪಟ್ಟಣದಲ್ಲಿ ಗಾಬರಿ ತಂದ ಲಕ್ಷ್ಮೀ‌ ಆನೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ದಸರಾಕ್ಕೆ ಆಗಮಿಸಿರುವ ಲಕ್ಷ್ಮಿ ಆನೆ ಇದ್ದಕ್ಕಿದ್ದಂತೆ ಮಾವುತನ ಹಿಡಿತಕ್ಕೆ ಸಿಗದೆ‌ ಓಡಾಡತೊಡಗಿ ಜನಸಾಮಾನ್ಯರು ಗಾಬರಿಗೊಳ್ಳುವಂತೆ ಮಾಡಿತು.

ಮಧ್ಯಾಹ್ನ‌ ಲಕ್ಷ್ಮಿ ಜನರಿಗೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಮಾವುತ ಬಿಗಿ ಭದ್ರತೆಯಲ್ಲಿ ಕರೆತರುತ್ತಿದ್ದರು.

ಆಗ ಅದೇನಾಯಿತೊ‌ ಏನೋ ಲಕ್ಷ್ಮೀ ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿ ಓಡತೊಡಗಿತು.ಜನ‌ ಆತಂಕಗೊಂಡು ಅತ್ತ,ಇತ್ತ ಓಡಿದರು.

ಅಂಗಡಿ ಮುಂಗಟ್ಟಿನವರು,ರಸ್ತೆ‌ ಬದಿ ವ್ಯಾಪಾರಿಗಳು,ಅಲ್ಲಿದ್ದ ಮಹಿಳೆಯರು ‌ಮತ್ತಿತರರು ಪ್ರಾಣಾಪಾಯದಿಂದ ಓಡಿ ಪಾರಾದರು.

ಲಕ್ಷ್ಮಿಯ ಮೇಲೆ ಕುಳಿತಿದ್ದ ಮಾವುತ ಸಮಾಧಾನ ಪಡಿಸಲು ಸತತ ಪ್ರಯತ್ನ ಮಾಡಿದರು.ತಕ್ಷಣ ಇತರೆ ಮಾವುತರು ಕಾವಾಡಿಗರು ಪೊಲೀಸರು ಹಿಂದೆಯೇ ಓಡಿ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ನಂತರ ಲಕ್ಷ್ಮಿ ಆನೆಯನ್ನು ಲಾರಿಗೆ ಹತ್ತಿಸಿ ಶ್ರೀರಂಗಪಟ್ಟಣದ ಬನ್ನಿಮಂಟಪಕ್ಕೆ ಕರೆದೊಯ್ದರು.

ಶ್ರೀರಂಗಪಟ್ಟಣದಲ್ಲಿ ಗಾಬರಿ ತಂದ ಲಕ್ಷ್ಮೀ‌ ಆನೆ Read More

ಶ್ರೀರಂಗಪಟ್ಟಣದ ದಸರಕ್ಕೆ ಬಂದ ಗಜರಾಜನಿಗೆ ಅದ್ದೂರಿ ಸ್ವಾಗತ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ‌ ಗಜರಾಜನನ್ನು
ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಗಜರಾಜನಿಗೆ ಮೊದಲು ಶ್ರೀರಂಗನಾಥನ ದರ್ಶನವನ್ನು ಮಾಡಿಸಿ‌ ನಂತರ ಪೂಜೆ ಪುನಸ್ಕಾರಗಳನ್ನು ಮಾಡಿಸಿ ಹಣ್ಣು,ಹಂಪಲು ಕಬ್ಬು ನೀಡಿ‌ ಸಾಮೂಹಿಕವಾಗಿ ಪೂಜೆಯನ್ನು ಸಲ್ಲಿಸಿ‌ ಬರಮಾಡಿಕೊಳ್ಳಲಾಯಿತು.

ಶ್ರೀರಂಗಪಟ್ಟಣದ ಜನತೆ ಹಾಗೂ ಕ್ಷೇತ್ರದ ಶಾಸಕರಾದ ರಮೇಶ್ ಬಾಬು ಬಡ್ಡಿ ಸಿದ್ದೇಗೌಡ ಹಾಗೂ ರಂಗನಾಥ ಸ್ವಾಮಿ ದೇವಸ್ಥಾನದ ಆಡಳಿತ ವರ್ಗದವರು ಗಜರಾಜ ರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಶ್ರೀರಂಗಪಟ್ಟಣದ ದಸರಕ್ಕೆ ಬಂದ ಗಜರಾಜನಿಗೆ ಅದ್ದೂರಿ ಸ್ವಾಗತ Read More

ಶ್ರೀರಂಗಪಟ್ಟಣದಲ್ಲಿ ಗಣಪತಿ ಬೃಹತ್ ಶೋಭಾ ಯಾತ್ರೆ

ಶ್ರೀರಂಗಪಟ್ಟಣ:‌ ಶ್ರೀರಂಗಪಟ್ಟಣದಲ್ಲಿ
ಶನಿವಾರ ಗಣಪತಿ ಬೃಹತ್ ಶೋಭಾ ಯಾತ್ರೆ
ಯಶಸ್ವಿಯಾಗಿ ನೆರವೇರಿತು.

ಯುವ ಬ್ರಿಗೇಡ್ ಅಧ್ಯಕ್ಷ ರಂಜು ಶರ್ಮಾ ಅವರ ನೇತೃತ್ವದಲ್ಲಿ ವರಸಿದ್ಧಿ ವಿನಾಯಕನನ್ನು 11 ದಿನ ಶ್ರದ್ಧಾ ಭಕ್ತಿಯಿಂದ ಪೂಜೆ ಪುನಸ್ಕಾರಗಳು, ಹೋಮ ಹವನಗಳು ನಡೆಸಿ ಶನುವಾರ ಬೃಹತ್ ಶೋಭಾ ಯಾತ್ರೆ ಮಾಡಲಾಯಿತು.

ಶ್ರೀರಂಗಪಟ್ಟಣದ ವೇದಬ್ರಹ್ಮ ಶ್ರೀ ಡಾ. ಭಾನುಪ್ರಕಾಶ್ ಶರ್ಮ ಗುರೂಜಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಗುರೂಜಿ ಅವರು,ಗಣೇಶ ಹಬ್ಬದ ಮಹತ್ವ ತಿಳಿಸಿಕೊಟ್ಟರು.

ದಿವಾನ್ ಪೂರ್ಣಯ್ಯ ಬೀದಿಯ ಮೂಲಕ ಹಾದು ಪೇಟೆ ಬೀದಿಯಲ್ಲಿ ಸಾಗಿ ಶ್ರೀರಂಗಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿ ಪ್ರಸಾದ ವಿನಿಯೋಗವನ್ನು ಮಾಡಿ ನಂತರ ಗಣಪತಿಯನ್ನ ವಿಸರ್ಜಿಸಲಾಯಿತು.

ಶ್ರೀರಂಗಪಟ್ಟಣದ ನಾಗರಿಕರು ಹಾಗೂ ಸಮಸ್ತ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಡೊಳ್ಳು ಕುಣಿತ ನಗಾರಿ ವೀರಗಾಸೆ ಮತ್ತಿತರ ಕಲಾತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು.

ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಕ್ಕೂ ಮೊದಲು ಗಣೇಶ ಹಬ್ಬವನ್ನು ಜಾತಿ ಭೇದ ಭಾವವಿಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪನೆ ಮಾಡಿ ಹಿಂದುಗಳನ್ನ ಒಗ್ಗೂಡಿಸಬೇಕೆಂದು ಆಚರಣೆಯನ್ನು ಜಾರಿಗೆ ತಂದರು.

ಶ್ರೀರಂಗಪಟ್ಟಣದಲ್ಲಿ ಗಣಪತಿ ಬೃಹತ್ ಶೋಭಾ ಯಾತ್ರೆ Read More

ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ

ಶ್ರೀರಂಗಪಟ್ಟಣ: ಮಂಡ್ಯದ ನಾಗಮಂಗಲ ತಾಲೂಕಿನಲ್ಲಿ ಗಣಪತಿ ವಿಸರ್ಜನೆ ವೇಳೆ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಹಿಂದು ಸಂಘಟನೆಯವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶ್ರೀರಂಗಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗಣಪತಿ ಸೇವಾ ಸಮಿತಿಯವರು ಹಾಗೂ ಹಿಂದೂ ಕಾರ್ಯಕರ್ತರು ಸಾರ್ವಜನಿಕರು ಒಗ್ಗೂಡಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ದುರುಳರ ವಿರುದ್ಧ ದಿಕ್ಕಾರ ಕೂಗಿದರು.

ಇದೇ ರೀತಿ ಹಿಂದುಗಳ ಮೇಲೆ ಅಟ್ಟಹಾಸ ಮೆರೆದರೆ ಉಗ್ರ ಹೋರಾಟಕ್ಕೆ ನಾವು ಸಿದ್ಧವಾಗಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ನಾನು ಬ್ರಾಹ್ಮಣ, ನಾನು ಲಿಂಗಾಯಿತ, ನಾನು ಶೂದ್ರ, ನಾನು ವೈಶ್ಯ ಎಂದು ಕಿತ್ತಾಡಿಕೊಂಡರೆ
ನಮ್ಮ ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲ
ಆದ್ದರಿಂದ ನಮ್ಮ ಮನೆಯ ನಾಲ್ಕು ಗೋಡೆ ಮಧ್ಯ ಮಾತ್ರ ನಮ್ಮ ಜಾತಿ ಸೀಮಿತವಾಗಿರಬೇಕು ಮನೆಯಿಂದ ಹೊರಗೆ ಬಂದರೆ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಹೇಳಿದರು.

ಗಲಭೆ ವೇಳೆ ದುರುಳರು ಹಿಂದೂ ಧಾರ್ಮಿಕ ಮನೋಭಾವನೆಗಳ ಮೇಲೆ ಧಕ್ಕೆ ಮಾಡಿದ್ದಾರೆ, ಕಲ್ಲು ಗುಂಡುಗಳು ಮಚ್ಚು ತಲ್ವಾರ್ ಗಳಿಂದ ಹಲ್ಲೆ ನಡೆಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಅಲ್ಲದೆ ಪೊಲೀಸರ ಮೇಲೂ ದಾಳಿ ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದು ಪ್ರತಿಭಟನಾ ನಿರತರು ಆಕ್ರೋಶ‌ ವ್ಯಕ್ತಪಡಿಸಿದರು.

ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ Read More