ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯ ರಥೋತ್ಸವ

ಶ್ರೀರಂಗಪಟ್ಟಣ: ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ರಥಸಪ್ತಮಿ ಆಚರಿಸಲಾಯಿತು.

ರಥಸಪ್ತಮಿ ಪ್ರಯುಕ್ತ ಶ್ರೀರಂಗನಾಥ ರಥೋತ್ಸವ ವೈಭವದಿಂದ ನೆರವೇರಿತು.ಸಾವಿರಾರು ಭಕ್ತರು ಪಾಲ್ಗೊಂಡು ‌ಸ್ವಾಮಿಯ ದರ್ಶನ ಪಡೆದರು.


ಸನಾತನ ಧರ್ಮದಲ್ಲಿ ರಥ ಸಪ್ತಮಿ ಹಬ್ಬಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.

ನಂಬಿಕೆಗಳ ಪ್ರಕಾರ, ಈ ದಿನದಂದು ಸೂರ್ಯನ ಏಳು ಕುದುರೆಗಳು ಅವನ ರಥವನ್ನು ಎಳೆಯಲು ಪ್ರಾರಂಭಿಸುತ್ತವೆ. ರಥ ಸಪ್ತಮಿಯ ದಿನದಂದು ಸೂರ್ಯ ದೇವರು ಇಡೀ ಪ್ರಪಂಚದ ಜ್ಞಾನವನ್ನು ಹೆಚ್ಚಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ.

ಆದ್ದರಿಂದ ಈ ದಿನವನ್ನು ಸೂರ್ಯ ದೇವರ ಜನ್ಮದಿನವೆಂದು ಆಚರಿಸಲಾಗುತ್ತದೆ. ರಥ ಸಪ್ತಮಿಯ ದಿನದಿಂದ ಬೇಸಿಗೆ ಕಾಲ ಪ್ರಾರಂಭವಾಗುವುದು.

ರಥ ಸಪ್ತಮಿ ಹಬ್ಬವನ್ನು ರೈತರಿಗೆ ಸುಗ್ಗಿಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಿಂದಲೇ ಬೇಸಿಗೆಯೂ ಪ್ರಾರಂಭವಾಗುತ್ತದೆ. ಈ ದಿನವನ್ನು ದಾನ – ಧರ್ಮ ಮಾಡುವುದಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.

ಈ ದಿನದಂದು ದಾನ ಮಾಡುವುದರಿಂದ ಹಿಂದೆ ಮಾಡಿದ ಎಲ್ಲಾ ಪಾಪಗಳು ಮತ್ತು ರೋಗಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.

ಈ ದಿನ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವ ಸಂಪ್ರದಾಯವಿದೆ. ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರೋಗಗಳು, ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ.

ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯ ರಥೋತ್ಸವ Read More

ಬನ್ನಹಳ್ಳಿ ಗ್ರಾಮದಲ್ಲಿ ವೈಕುಂಠಾಧಿಪತಿ ದರ್ಶನ ಪಡೆದ ಸಾವಿರಾರು ಭಕ್ತರು

ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ಅಂಗವಾಗಿ ಶ್ರೀರಂಗಪಟ್ಟಣ ತಾಲೂಕಿನ ಬನ್ನಹಳ್ಳಿ ಗ್ರಾಮದಲ್ಲಿರುವ ತಿರುಮಲ ದೇವಾಲಯದಲ್ಲಿ ವೈಕುಂಠಾಧಿಪತಿ ಮಹಾ ವಿಷ್ಣುವಿಗೆ ಹೂವಿನ ಅಲಂಕಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಮುಂಜಾನೆ 2 ಗಂಟೆಯಿಂದ ತ್ರಿಭಂಗಿ ಸ್ವರೂಪದ ತಿರುಮಲ ದೇವರಿಗೆ ಪೂಜಾ ಕೈಂಕರ್ಯಗಳು ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನೆರವೇರಿತು.

ಸಿ.ಪಿ. ವಿದ್ಯಾಶಂಕರ್ ಮತ್ತು ಎಸ್.ಸಿ. ಬಸವರಾಜು ತಂಡಗಳಿಂದ ಭಕ್ತಿ ಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಅಲಂಕೃತ ಗೊಂಡಿರುವ ಶ್ರೀ ವೆಂಕಟೇಶ್ವರ ಮೂರ್ತಿಯನ್ನು ಭಕ್ತಾದಿಗಳು ಕಣ್ತುಂಬಿಕೊಂಡು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿ ತಮ್ಮ ಕೈಯಲ್ಲಾದ ಸೇವೆಯನ್ನು ಸಲ್ಲಿಸಿದರು.ನಂತರ ಎಲ್ಲರಿಗೂ ಪ್ರಸಾದ‌ ವಿನಿಯೋಗ ಮಾಡಲಾಯಿತು.

ಬನ್ನಹಳ್ಳಿ ಗ್ರಾಮದಲ್ಲಿ ವೈಕುಂಠಾಧಿಪತಿ ದರ್ಶನ ಪಡೆದ ಸಾವಿರಾರು ಭಕ್ತರು Read More