ನಾಳೆ ಸಿಎಂ ಕಾರ್ಯಕ್ರಮ: ಸ್ಥಳ ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳು

ಮೈಸೂರು: ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ನ‌ ಕೆಳ ಅಂತಸ್ತಿನ ನವಿಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನಡೆಯಲಿದೆ.

ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ಡಿಸಿಪಿಗಳಾದ ಕೆ ಎಸ್ ಸುಂದರ್ ರಾಜ, ಬಿಂದುಮಣಿ ಅವರು ಭದ್ರತಾ ದೃಷ್ಟಿಯಿಂದ ಸ್ಥಳ ಪರಿಶೀಲನೆ ಮಾಡಿದರು.

ಎಸಿಪಿ ರಮೇಶ್ ಕುಮಾರ್, ಕೆ. ಆರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನರಾಜ್,
ಹಾಗೂ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ನಿರ್ದೇಶಕರುಗಳಾದ ನo ಸಿದ್ದಪ್ಪ, ಎಂ. ಡಿ ಪಾರ್ಥಸಾರಥಿ, ನವೀನ್ ಕುಮಾರ್, ಹೆಚ್ ವಿ ಭಾಸ್ಕರ್, ಗಣೇಶ್ ಮೂರ್ತಿ ಮತ್ತಿತರರು ಹಾಜರಿದ್ದರು.

ನಾಳೆ ಸಿಎಂ ಕಾರ್ಯಕ್ರಮ: ಸ್ಥಳ ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳು Read More