ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘಕ್ಕೆರವಿಚಂದ್ರ ಆಯ್ಕೆ

ಮೈಸೂರು: ಮೈಸೂರಿನ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ 2025-30ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ ದೇವರಾಜ ಮೊಹಲ್ಲಾ ನಿವಾಸಿ ರವಿಚಂದ್ರ ಅವರು ಜಯ ಗಳಿಸಿದ್ದಾರೆ.

ರವಿಚಂದ್ರ ಅವರು ಜಯ ಗಳಿಸಿದ ಹಿನ್ನೆಲೆಯಲ್ಲಿ ನಗರದ 23ನೇ ವಾರ್ಡಿನ ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮುಖಂಡರಾದ ಆರ್.ಪರಮೇಶ್ ಗೌಡ,ಪ್ರಮೋದ್,ಸಂದೇಶ್, ಅಭಿಷೇಕ್, ಶ್ರೀನಿವಾಸ್, ಕಿರಣ್, ಶ್ರವಣ್ ಮಾಲಿ, ವಿನೋದ್ ಅರಸ್ ಮತ್ತಿತರರು ರವಿಚಂದ್ರ ಅವರನ್ನು ಅಭಿನಂದಿಸಿದರು.

ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘಕ್ಕೆರವಿಚಂದ್ರ ಆಯ್ಕೆ Read More

ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಚುನಾವಣೆ: ರವಿಚಂದ್ರ ನಾಮಪತ್ರ ಸಲ್ಲಿಕೆ

ಮೈಸೂರು: ಮೈಸೂರಿನ ದೇವರಾಜ ಮೊಹಲ್ಲದಲ್ಲಿರುವ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನ. 16ರಂದು ಹಾರ್ಡ್ವಿಕ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ.

ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘಕ್ಕೆ ಸಾಮಾನ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗಿ ರವಿಚಂದ್ರ ಎಂ ಸ್ಪರ್ಧಿಸಿದ್ದು,ಅವರು
ಚುನಾವಣಾಧಿಕಾರಿ ರಾಜು ರವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ‌ ವೇಳೆ ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್ , ಗೋಕುಲಂ ರಾಮಣ್ಣ, ಆಶ್ರಯ ಸಮಿತಿ ಸದಸ್ಯರಾದ ಸೋಮಶೇಖರ್, ವಾರ್ಡ್ ಅಧ್ಯಕ್ಷರಾದ ಆನಂದ್, ಕನಕಗಿರಿ ದೀಪಕ ,ಜ್ಞಾನೇಶ್, ಪವನ್ ಹಾಜರಿದ್ದರು.

ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಚುನಾವಣೆ: ರವಿಚಂದ್ರ ನಾಮಪತ್ರ ಸಲ್ಲಿಕೆ Read More