ಮೈಸೂರು: ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83 ನೆ ಜನ್ಮದಿನಾಚರಣೆ ವಿಶೇಷವಾಗಿ ನೆರವೇರಿದ್ದು,ಆರ್ ಬಿ ಐ ನಾಣ್ಯ ಬಿಡುಗಡೆ ಮಾಡುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಿದೆ.
ಶ್ರೀಗಳ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಬೆಳಿಗ್ಗೆ 8ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರ ಹೋಮ, ಆಯುಷ್ಯ ಹೋಮ, ರುದ್ರ ಅಭಿಷೇಕ ನೆರವೇರಿಸಲಾಯಿತು.ಇದೇ ವೇಳೆ ಸಚ್ಚಿದಾನಂದೇಶ್ವರ ಸ್ವಾಮಿ ಮುಂದೆ ಮಂತ್ರಪಠಣಗಳು ನೆರವೇರಿದವು.
ನಂತರ ಗಣಪತಿ ಶ್ರೀಗಳನ್ನು ಅಲಂಕೃತ ಸಾರೋಟ್ ನಲ್ಲಿ ಪ್ರಾರ್ಥನಾ ಮಂದಿರದಿಂದ ನಾದಮಂಟಪದ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ನಾದ ಮಂಟಪದಲ್ಲಿ ಶ್ರೀ ಚಕ್ರ ಪೂಜೆ ನೆರವೇರಿಸಿ,ನಂತರ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಪ್ರತ್ಯಕ್ಷ ಪಾದ ಪೂಜೆಯನ್ನು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ನೆರವೇರಿಸಿ,ಪುಷ್ಪ ನಮನ ಸಲ್ಲಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜನುಮದಿನದ ಸಂದರ್ಭವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶ್ರೀಗಳ ಚಿತ್ರವುಳ್ಳ ನಾಣ್ಯವನ್ನು ಬಿಡುಗಡೆ ಮಾಡಿ ಗೌರವ ಸಮರ್ಪಿಸಿದ್ದು ನಿಜಕ್ಕೂ ವಿಶೇಷವಾಗಿದ್ದು,ನಾಣ್ಯವನ್ನು ಈ ವೇಳೆ ಭಕ್ತರಿಗೆ ಪ್ರದರ್ಶಿಸಲಾಯಿತು.
ಆರ್ ಬಿ ಐ ಹೈದರಾಬಾದ್ ಶಾಖೆಯ ಮ್ಯಾನೇಜರ್ ವಿಜಯಲಕ್ಷ್ಮೀ ಅವರು ನಾಣ್ಯಗಳನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಗಣಪತಿ ಶ್ರೀಗಳು,ಹರೀಃಓಂ ನಮಃಶಿವಾಯ ಮಂತ್ರ ಪಠಣ ಮಾಡಿದರೆ ಎಲ್ಲರಿಗೂ ಒಳಿತಾಗಲಿದೆ ಬೇರೆಯವರಿಗೆ ಅನ್ಯಾಯ ಮಾಡಬಾರದು ಎಂದು ತಿಳಿಹೇಳಿದರು.
ನಾವೆಲ್ಲ ಸನಾತನ ಧರ್ಮವನ್ನು ರಕ್ಷಿಸಬೇಕು,ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಭಗವಂತ ರಕ್ಷಿಸುತ್ತಾನೆ ಅಧರ್ಮ ಮಾಡುವವರನ್ನ ಶಿಕ್ಷಿಸುತ್ತಾನೆ ಎಂದು ಶ್ರೀಗಳು ನುಡಿದರು.
ನಿನ್ನೆಯಷ್ಟೇ ಭಾರತ ಸೇನೆಗೆ 25 ಲಕ್ಷ ಕಾಣಿಕೆ ಸಮರ್ಪಿಸಿದ್ದೇವೆ,ಕಷ್ಟ ಗಳು ಬರುತ್ತವೆ ಹಾಗೇ ಹೋಗುತ್ತದೆ ಆ ಭಗವಂತನನ್ನ ನಂಬಿ ಪ್ರಾರ್ಥಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ತಿಳಿಸಿದರು.
ಪಾದಪೂಜೆ ನಂತರ ಚೈತನ್ಯ ಅರ್ಚನ-ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು. ವೇದ ನಿಧಿ-ಶ್ರೀ. ವಿಷ್ಣುಭಟ್ಲ ಲಕ್ಷ್ಮೀ ನಾರಾಯಣ ಘನಪಾಠಿ. ಶಾಸ್ತ್ರ ನಿಧಿ-ಶ್ರೀ ಕುಪ್ಪ ವಿಶ್ವನಾಥ ಶಾಸ್ತ್ರಿ. ನಾದ ನಿಧಿ-ಪಂ. ವಿನಾಯಕ ತೊರವಿ, ನಾದ ನಿಧಿ- ವಿದ್ವಾನ್ ಶಶಾಂಕ್ ಸುಬ್ರಮಣ್ಯಂ ನಾಟ್ಯ ನಿಧಿ-ವಿದುಷಿ ಟಿ ಎಸ್ ಶ್ರೀ ಲಕ್ಷ್ಮಿ ಆಸ್ಥಾನ ಶಿಲ್ಪಿ- ಶ್ರೀ. ಕೃಷ್ಣ ಮೂರ್ತಿ. ಜಯಲಕ್ಷ್ಮಿ ಪುರಸ್ಕಾರ-ಶ್ರೀಮತಿ ಗಂಗಾವರಂ ವೇದಾವತಿ ಮತ್ತು ಶ್ರೀಮತಿ ಗೀತಾ ಪುಂಜಾಲ ದತ್ತ ಪೀಠ ಬಂಧು-ಶ್ರೀ. ಕಮಲ್ ಕಪೂರ್,ಸಂಪತ್ ಕುಮಾರ್ ಆಚಾರ್, ಶ್ರೀ ಕಂಟೇಟಿ ಶ್ರೀನಿವಾಸ್ ಹಾಗೂ ಮೈಸೂರಿನ ಎಸ್.ನಾಗರಾಜ್ ಸಸ್ಯ ಬಂಧು- ಶ್ರೀಮತಿ ಸುಚಿತಾ ರೆಡ್ಡಿ ಅವರಿಗೆ ಬಿರುದು ಪ್ರದಾನ ಮಾಡಿ ಶ್ರೀಗಳು ಆಶೀರ್ವದಿಸಿದರು.
ಇದೇ ಪ್ರಥಮ ಬಾರಿಗೆ ಶ್ರೀಗಳು ನಾಟ್ಯನಿಧಿ ಪ್ರಶಸ್ತಿಯನ್ನು ಕೂಡಾ ಪ್ರಾರಂಬಿಸುವ ಮೂಲಕ ತಾವು ಕಲಾ ಪೋಶಕರು ಎಂಬುದನ್ನು ತಿಳಿಸಿದ್ದಾರೆ.
ಕೊನೆಯಲ್ಲಿ ಆಶ್ರಮದ ಭಕ್ತರು ಕೇಕ್ ತಂದು ಶ್ರೀಗಳಿಂದ ಕಟ್ ಮಾಡಿಸಿ ಸಂಭ್ರಮಿಸಿದರು.
ಮೈಸೂರು: ನಮ್ಮ ನಡಿಗೆ ಆರೋಗ್ಯವಂತ ವಿಶ್ವದೆಡೆಗೆ ಎಂಬ ಘೋಷವಾಖ್ಯದಡಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಮಾ.17 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ
ಅಂದು ಬೆಳಿಗ್ಗೆ 5.30ಕ್ಕೆ ದತ್ತಪೀಠಾಧಿಪತಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಈ ಪಾದಯಾತ್ರೆ ಸಾಗಲಿದೆ.
ಪ್ರತಿಯೊಬ್ಬ ಮನುಷ್ಯನ ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬ ಕುರಿತು ವಿಶ್ವ ಜನ ಜಾಗೃತಿ ಮೂಡಿಸುವ ಸಲಯವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಮೈಸೂರು: ಈ ವರ್ಷ ಕಠಿಣವಾದ ದಿನಗಳನ್ನು ದೇಶ ಎದುರಿಸ ಬೇಕಾಗುತ್ತದೆ,ಪ್ರಾಕೃತಿಕ ಅನಾಹುತಗಳು ಸಂಭವಿಸುತ್ತದೆ ಹಾಗಾಗಿ ದೈವೀಕ ಭಾವನೆ ಹೊಂದಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜನತೆಗೆ ತಿಳಿಸಿದ್ದಾರೆ.
ಈ ವರ್ಷ ಪ್ರಾಕೃತಿಕ ವಿಕೋಪಗಳು, ಯುದ್ಧಗಳು,ಅಪಮೃತ್ಯುಗಳು ಸಂಭವಿಸಲಿವೆ. ಹರಿ,ಶಿವನ ಕೃಪೆ ಇರುವುದರಿಂದ ಇವು ಕಡಿಮೆಯಾದರೂ ಜನತೆ ಕೂಡಾ ದೈವದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ತಿಳಿಹೇಳಿದರು.
ಈ ಬಾರಿಯ ಕುಂಭ ಮೇಳ ಅತ್ಯಂತ ಶುಭ,ಅದರಲ್ಲೂ ಆಧ್ಯಾತ್ಮಿಕ ಪ್ರಪಂಚಕ್ಕೆ ಶುಭಕರವಾಗಿದೆ,ದೇಶದ ಜನತೆ ಧಾರ್ಮಿಕತೆ ಬಗ್ಗೆ ಅತ್ಯಂತ ಶ್ರದ್ಧೆ ತೋರಿದ್ದಾರೆ ,ಇದು ಅದೃಷ್ಟವೇ ಸರಿ ಎಂದು ತಿಳಿಸಿದರು.
ಅತೀ ದೊಡ್ಡ ಸಂಖ್ಯೆಯಲ್ಲಿ ಯುವಜನರು ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದು ಅವರಲ್ಲಿ ನಮ್ಮ ದರ್ಮದ ಬಗ್ಗೆ ಜಾಗೃತಿ ಮೂಡುತ್ತಿದೆ ಇದು ಒಳ್ಳೆಯದು ಎಂದು ಶ್ರೀಗಳು ಸಂತಸಪಟ್ಟರು.
ಇಡೀ ಕುಂಭಮೇಳದ ದಿನಗಳಲ್ಲಿ ನಮ್ಮ ದೇಶ ಅಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಒಳ್ಳೆಯದಾಗಲಿ ಎಂದು ನಮ್ಮ ಭಾರತ ಪ್ರಾರ್ಥಿಸಿದೆ ನಮ್ಮ ವೇದ ಪದ್ಧತಿಯು ಸಹ ಇದನ್ನೇ ಬೋಧಿಸುತ್ತದೆ ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ಹೇಳಿದರು.
ಮುಂದೆ ಆಗುವ ಅನಾಹುತಗಳು ಕಷ್ಟಗಳು ತಪ್ಪಬೇಕಾದರೆ ಯುವಜನರು ಸೇರಿದಂತೆ ಇಡೀ ದೇಶದ ಜನತೆ ಮತ್ತು ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದಿರಬೇಕು ಆದಷ್ಟು ದೇವಸ್ಥಾನಗಳನ್ನು ದರ್ಶಿಸಬೇಕು, ಪುರಾತನ ಆಲಯಗಳನ್ನು ದರ್ಶನ ಮಾಡಬೇಕು ದೇವಸ್ಥಾನಗಳ ಜೀರ್ಣೋದ್ಧಾರಗಳು ಆದರೆ ಇನ್ನೂ ಒಳಿತಾಗಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದುವ ಜೊತೆಗೆ ಎಲ್ಲಾ ಮಠಗಳು ಉಪಾಸನೆಗಳು ಒಂದೇ ಎಂಬುದನ್ನು ಅರಿಯಬೇಕು. ನಮ್ಮ ಆಚಾರ್ಯರು ಕೂಡ ಮಹತ್ವದ ಸಂದೇಶಗಳನ್ನು ನೀಡಿದ್ದಾರೆ ಅವರ ಆಶಯಗಳನ್ನು ಸಂದೇಶಗಳನ್ನು ಪಾಲಿಸಬೇಕು ನಾವೆಲ್ಲರೂ ಸಾತ್ವಿಕ ಜೀವನ ನಡೆಸಿದರೆ ಖಂಡಿತ ಕಷ್ಟಕೋಟಲೆಗಳಿಂದ ಸ್ವಲ್ಪವಾದರೂ ಪಾರಾಗಬಹುದು ಎಂದು ತಿಳಿಸಿದರು
ಮುಂದಿನ ದಿನಗಳಲ್ಲಿ ಅನಾಹುತಗಳು ಇದ್ದೇ ಇರುತ್ತದೆ. ಮೊದಲು ಜನರಲ್ಲಿರುವ ಅತೃಪ್ತಿ ಭಾವನೆ ಹೋಗಬೇಕು ಸದಾ ಹರಿಹೀ ಓಂ, ಓಂ ನಮಃ ಶಿವಾಯ ಜಪಿಸಬೇಕು, ಇಂದು ಅತ್ಯಂತ ಶುಭದಿನ, ಎಲ್ಲಾ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿರುತ್ತದೆ ಎಂದು ಶ್ರೀಗಳು ತಿಳಿಸಿದರು.
ಈ ಮಹಾಶಿವರಾತ್ರಿಯಂದು ಇಡೀ ನಾಡಿನ ಜನತೆಗೆ ಶುಭವಾಗಲಿ ಎಲ್ಲರೂ ತಪ್ಪದೇ ಶಿವ ಸ್ಮರಣೆ ಮಾಡಿ ಹರಾ,ಜರಾ ಮಹಾದೇವ ಎಂದು ಹೇಳಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಒಂದು ಚೊಂಬು ನೀರಿನ ಅಭಿಷೇಕ ಮಾಡಿ ಆ ಶಿವನೇ ಎಲ್ಲರನ್ನು ಆಶೀರ್ವದಿಸುತ್ತಾನೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸಿತರಿದ್ದರು.
ಮೈಸೂರು: ಕೇವಲ ಸ್ಮರಣೆ ಮಾತ್ರದಿಂದ ದತ್ತಾತ್ರೆಯ ಸ್ವಾಮಿಗಳು ಸಂತುಷ್ಟರಾಗುತ್ತಾರೆ, ಜಗತ್ತಿನ ಎಲ್ಲಾ ಕಷ್ಟ ನಿವಾರಣೆಗೆ ದತ್ತಾತ್ರೇಯ ಸ್ಮರಣೆ ಮಾಡಬೇಕು ಎಂದು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ನುಡಿದರು.
ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಕಳೆದ 55 ವರ್ಷಗಳಿಂದ ದತ್ತಾತ್ರೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಕೂಡ ಆಚರಿಸಲಾಗುತ್ತಿದೆ.
ಬೆಳಿಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೈಲಾಭಿಷೇಕ ನೆರವೇರಿಸಿ, ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಇಡೀ ವಿಶ್ವದಲ್ಲಿ ಯುದ್ಧ ಭಯ ಕಾಡುತ್ತಿದೆ ಎಲ್ಲೆಲ್ಲೂ ನೆಮ್ಮದಿ ಇಲ್ಲದಂತಾಗಿದೆ ಹಾಗಾಗಿ ಶ್ರೀ ದತ್ತಾತ್ರೇಯ ಸ್ವಾಮಿ ಇಡೀ ಪ್ರಪಂಚವನ್ನು ರಕ್ಷಣೆ ಮಾಡಲಿ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ದತ್ತಾತ್ರೇಯ ಸ್ವಾಮಿಗಳು ತೃತಯುಗದ ಅವತಾರ ಪುರುಷರು. ದೇವತೆಗಳು ರಾಕ್ಷಸರು ಮತ್ತು ಮನುಷ್ಯರಿಗೂ ಕೂಡ ಅವರು ಗುರುಗಳು. ಮನುಷ್ಯನಿಗೆ ಬುದ್ಧಿ ಕೆಟ್ಟಾಗ ಆರೋಗ್ಯ ಹದಗೆಟ್ಟಾಗ, ದಿಕ್ಕು ತಪ್ಪಿದಾಗ ದತ್ತಾತ್ರೆಯರ ಸ್ಮರಣೆ ಮಾಡುವುದು ಒಳ್ಳೆಯದು ಎಂದು ಶ್ರೀಗಳು ಸಲಹೆ ನೀಡಿದರು.
ದತ್ತಾತ್ರೇಯರು ಪೂರ್ಣ ವಿಷ್ಣು ಸ್ವರೂಪ. ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಿದರೆ ವಿಷ್ಣುವಿನ ಆರಾಧನೆ ಮಾಡಿದಂತೆ, ಶಿವನನ್ನು ಆರಾಧನೆ ಮಾಡಿದಂತೆ, ಬ್ರಹ್ಮ ಅಂದರೆ ಜ್ಞಾನವನ್ನು ಆರಾಧನೆ ಮಾಡಿದಂತೆ ಎಂದು ಬಣ್ಣಿಸಿದರು.
ಇಂದು ನಮ್ಮ ಆಶ್ರಮದಲ್ಲಿರುವ ಪುರಾತನ ಶ್ರೀ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮತ್ತು ಸುಗಂಧದ್ರವ್ಯ ಅಭಿಷೇಕವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.
ಇಡೀ ವಿಶ್ವ ಮತ್ತು ಪ್ರಜೆಗಳು ಪ್ರಜಾಪ್ರತಿನಿಧಿಗಳು ಮಕ್ಕಳಾದಿಯಾಗಿ ಎಲ್ಲ ರಂಗದಲ್ಲಿರುವವರಿಗೂ ದತ್ತಾತ್ರೇಯರು ಆಶೀರ್ವಾದ ಮಾಡಲೆಂದು ಲೋಕ ಕಲ್ಯಾಣಾರ್ಥವಾಗು ಈ ಅಭಿಷೇಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಇಂದು ಬೆಳಿಗ್ಗೆ ಪೌರ್ಣಮಿ ಹಾಗೂ ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ಪವಮಾನ ಹೋಮ ಮತ್ತು ದತ್ತಾತ್ರೇಯ ವಜ್ರ ಮಂತ್ರ ಹೋಮ ನೆರವೇರಿತು.
ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಶ್ರೀ ಚಕ್ರ ಪೂಜೆ ಮತ್ತು ಪೂರ್ಣಾಹುತಿ ನೆರವೇರಿತು. ಸಾವಿರಾರು ಭಕ್ತರು ದತ್ತಾತ್ರೇಯನ ದರ್ಶನ ಪಡೆದರು
ನಂತರ ಶ್ರೀ ದತ್ತಾತ್ರೇಯ ಸ್ವಾಮಿಗೆ ಭಕ್ತರಿಂದ ಸಹಸ್ರ ಕಳಶ ತೈಲಾಭಿಷೇಕ ಮಾಡಲಾಯಿತು. ಕೊಚ್ಚಿ ಆಶ್ರಮ ಭಜನಾ ತಂಡದಿಂದ ಶ್ರೀ ದತ್ತಾತ್ರೇಯ ಸ್ವಾಮಿ ನಾಮ ಸಂಕೀರ್ತನೆ ಹಾಗೂ ಅನಘ ವ್ರತ ಕೂಡಾ ಹಮ್ಮಿಕೊಳ್ಳಲಾಗಿತ್ತು.
ಪೂಜಾ ಕಾರ್ಯಗಳು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೆರವೇರಿತು.