ಗಣಪತಿ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಣೆ

ಮೈಸೂರು: ನಾಡಿನಾದ್ಯಂತ ದತ್ತಾತ್ರೇಯ ಜಯಂತಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು,ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ
ಸ್ವಾಮೀಜಿಯವರು ದತ್ತಾತ್ರೇಯ ಮಹಿಮೆ ಹಾಗೂ ಪುರಾಣಗಳಲ್ಲಿ ದತ್ತನ ಇರುವಿಕೆಯ ಬಗ್ಗೆ ತಿಳಿಸಿದರು.
ದತ್ತಾತ್ರೇಯ ಮಹಾವಿಷ್ಣುವಿನ ಆರನೇ ಅವತಾರ. ಅತ್ರಿ ಮತ್ತು ಅನುಸೂಯೆಯರಿಗೆ ಮಗನಾಗಿ ಬಂದವನು. ಆ ಕಾಲದ ರಾಜರುಗಳಿಗೆ ಮತ್ತು ಜನಸಾಮಾನ್ಯರಿಗೆ ಅದ್ಭುತವಾದ ಬೋಧನೆಗಳನ್ನು ಮಾಡಿದ ಜ್ಞಾನಸಾಗರ ಈ ದತ್ತಾತ್ರೇಯ ಎಂದು ಬಣ್ಣಿಸಿದರು.
ವೇದ-ಪುರಾಣಗಳಲ್ಲಿ ದತ್ತನ ಇರುವಿಕೆ:
ದತ್ತಾತ್ರೇಯರು ಕೇವಲ ದತ್ತ ಪರಂಪರೆಗೆ ಸೀಮಿತರಲ್ಲ, ಅವರು ವೇದ, ಮಹಾಭಾರತ ಮತ್ತು ರಾಮಾಯಣ ಕಾಲಘಟ್ಟದಲ್ಲೂ ಇದ್ದರು ಎಂದು ಶ್ರೀಗಳು ವಿವರಿಸಿದರು.
ದತ್ತಾತ್ರೇಯರು ಸಂಚಾರಿಗಳು, ಅವರಿಗೆ ಇಂಥದ್ದೇ ನೆಲೆ ಅಂತಿಲ್ಲ. ಅವರು ಎಲ್ಲೆಡೆ ಇರುತ್ತಾರೆ. ರಾಮಾಯಣದಲ್ಲಿ ರಾಮನಿಗೆ ದತ್ತಾತ್ರೇಯರು ಕಾಣಿಸಿಕೊಳ್ಳುತ್ತಾರೆ, ಎಂದು ಪೌರಾಣಿಕ ಹಿನ್ನೆಲೆಯನ್ನು ತೆರೆದಿಟ್ಟರು.
ಸೀತೆಯ ಆಭರಣ ಮತ್ತು ಅನುಸೂಯೆ
ರಾಮಾಯಣದ ಸ್ವಾರಸ್ಯಕರ ಪ್ರಸಂಗವೊಂದನ್ನು ಉಲ್ಲೇಖಿಸಿದ ಶ್ರೀಗಳು, ರಾಮ ವನವಾಸಕ್ಕೆ ಹೋದಾಗ ಮೊದಲು ಭೇಟಿ ನೀಡಿದ್ದು ಅತ್ರಿ ಮಹರ್ಷಿಗಳ ಆಶ್ರಮಕ್ಕೆ. ಅಲ್ಲಿ ಅತಿಥಿ ಸತ್ಕಾರದ ನಂತರ ಅನುಸೂಯೆ ಸೀತೆಗೆ ದಿವ್ಯವಾದ ಆಭರಣಗಳು ಮತ್ತು ಬಾಡದ ಹೂವುಗಳನ್ನು ನೀಡುತ್ತಾಳೆ. ಆಗ ರಾಮ, ‘ಎಲ್ಲವನ್ನೂ ತ್ಯಜಿಸಿ ಬಂದ ನಮಗೆ ಈ ಒಡವೆಗಳು ಏಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಅನುಸೂಯೆ, ‘ಇವು ಸಾಮಾನ್ಯ ಒಡವೆಗಳಲ್ಲ, ಅರಣ್ಯದಲ್ಲಿ ಸಂಚರಿಸುವಾಗ ಇವುಗಳ ಅವಶ್ಯಕತೆ ಇದೆ’ ಎಂದು ಹೇಳುತ್ತಾಳೆ.
“ಮುಂದೆ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ಸೀತೆ ಇದೇ ಆಭರಣಗಳನ್ನು ಗುರುತುಗಾಗಿ ಕೆಳಗೆ ಎಸೆಯುತ್ತಾಳೆ. ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕುವಾಗ ಈ ದಿವ್ಯ ಆಭರಣಗಳೇ ದಾರಿದೀಪವಾಗುತ್ತವೆ. ಇದು ದತ್ತಾತ್ರೇಯರ ಕೃಪೆಯಿಂದಲೇ ನಡೆದಿದ್ದು ಎಂದು ಶ್ರೀಗಳು ವಿವರಿಸಿದರು.
ಪಟ್ಟಾಭಿಷೇಕ ಮತ್ತು ಪಿಂಗಳ ನಾಗ:
ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದ ಮತ್ತೊಂದು ಅಪರೂಪದ ಕಥೆಯನ್ನು ಶ್ರೀಗಳು ಹಂಚಿಕೊಂಡರು. “ಪಟ್ಟಾಭಿಷೇಕದ ಸಮಯದಲ್ಲಿ ರಾಮ ಎಲ್ಲೋ ನೋಡುತ್ತಾ ಅನ್ಯಮನಸ್ಕನಾಗಿರುತ್ತಾನೆ. ಆಗ ಹನುಮಂತ (ಪಿಂಗಳ ನಾಗ) ರಾಮನನ್ನು ಪ್ರಶ್ನಿಸಿದಾಗ, ‘ನನ್ನ ಭಕ್ತನೊಬ್ಬ ಪಿಂಗಳ ನಾಗನ ರೂಪದಲ್ಲಿ ಬಂದಿದ್ದಾನೆ, ಅವನ ದರ್ಶನವಾಗುವರೆಗೂ ಪಟ್ಟಾಭಿಷೇಕ ಬೇಡ’ ಎಂದು ರಾಮ ಹೇಳುತ್ತಾನೆ. ಆ ಭಕ್ತನ ದರ್ಶನವಾದ ನಂತರವೇ ಪಟ್ಟಾಭಿಷೇಕ ನೆರವೇರುತ್ತದೆ,” ಎಂದು ದತ್ತ ತತ್ವದ ಗೂಢಾರ್ಥವನ್ನು ತಿಳಿಸಿಕೊಟ್ಟರು.
ವಿಶ್ವಶಾಂತಿಗಾಗಿ ಪ್ರಾರ್ಥನೆ: ದತ್ತ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ನಡೆದಿವೆ, ಪ್ರಪಂಚಕ್ಕೆ ಶಾಂತಿಯಾಗಲಿ, ಜನರಿಗೆ ಸದ್ಬುದ್ಧಿ ಸಿಗಲಿ ಎನ್ನುವುದು ನಮ್ಮ ಆಶಯ,” ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ನಂತರ ಭಕ್ತರು ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮಾಡಿದರು.
ಇದೇ ಸಂದರ್ಭದಲ್ಲಿ ಫೆಬ್ರವರಿ 14 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಶ್ರಮದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಹನುಮಾನ್ ಚಾಲೀಸಾ ಪಾರಾಯಣದ ಪೋಸ್ಟರ್ ಗಳನ್ನು ಶ್ರೀಗಳು ಬಿಡುಗಡೆ ಮಾಡಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಉದ್ಯಮಿ ರಾಮೇಗೌಡ ಉಪಸ್ಥಿತರಿದ್ದರು.

ಗಣಪತಿ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಣೆ Read More

ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಕ್ಕಾಗಿಹಮ್ಮಿಕೊಂಡಿದ್ದ ಸಹಸ್ರ ಚಂಡೀಯಾಗ ಸಂಪನ್ನ

ಮೈಸೂರು: ಮೈಸೂರಿನ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜೂನ್ 6 ರಿಂದ ಹಮ್ಮಿಕೊಂಡಿದ್ದ ವನ ದುರ್ಗಾ ವೃಕ್ಷ ಶಾಂತಿ ಮಹಾಯಜ್ಞ
ಮತ್ತು ಸಹಸ್ರ ಚಂಡೀಯಾಗ ಇಂದು ಸಂಪನ್ನಗೊಂಡಿತು.

ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಸನಾತನ ವೈದಿಕ ವಿಧಿಗಳು ಮತ್ತು ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಜೂನ್ 6 ರಿಂದ ಸಹಸ್ರ ಚಂಡೀ ಯಾಗವನ್ನು ವಿಶ್ವ ರಕ್ಷಣೆ, ಸಮೃದ್ಧಿ ಹಾಗೂ ಸಾಮರಸ್ಯಕ್ಕಾಗಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಗಣಪತಿ ಶ್ರೀಗಳು ಪ್ರಾರಂಭಿಸಿದ್ದರು.

ಇದು ವಿಶ್ವದಲ್ಲೇ ಮೊಟ್ಟ ಮೊದಲ ಮಹಾ ಯಾಗವೆಂಬುದು ವಿಶೇಷ.ಇತ್ತೀಚೆಗೆ ನಡೆದ ಅವಘಡಗಳು‌,ಯುದ್ದಗಳು,ಸಾವು,ನೋವುತಿಳಿದು ಗಣಪತಿ ಶ್ರೀ ಗಳು ಬಹಳ ಬೇಸರಗೊಂಡಿದ್ದರು.

ಹಾಗಾಗಿ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ,ಲೋಕ ಕಲ್ಯಾರ್ಥವಾಗಿ ಈ ಮಹಾ ಯಾಗವನ್ನು ಜೂನ್ 6 ರಿಂದ ಪ್ರಾರಂಭಿಸಿ ಜೂನ್ 15 ಅಂದರೆ ಇಂದಿನವರೆಗೆ ಎಲ್ಲೂ ಯಾವುದೇ ಲೋಪವಾಗದಂತೆ ಸಂಪನ್ನಗೊಳಿಸಿದ್ದಾರೆ.

ಗಣಪತಿ ಶ್ರೀಗಳಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಬೆನ್ನೆಲುಬಾಗಿ ನಿಂತು ಎಲ್ಲಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಪ್ರಕೃತಿ ವಿಕೋಪ, ಪರಿಸರ ಅಸಮತೋಲನ ತಡೆಯುವ ದೃಷ್ಟಿ ಇಟ್ಟುಕೊಂಡು ಶ್ರೀಗಳು‌ ವೃಕ್ಷ ಶಾಂತಿ ಮಹಾಯಜ್ಞವನ್ನು ಹಮ್ಮಿಕೊಂಡರು.

ಪರಿಸರ ಸಮತೋಲನ ಸೂಚಕವಾಗಿಯೇ ಈ ವನದುರ್ಗ ವೃಕ್ಷ ಮಹಾಯಜ್ಞವನ್ನು ಕೈಗೊಂಡ ಗಣಪತಿ ಶ್ರೀಗಳು 8000 ಪವಿತ್ರ ಬೋನ್ಸಾಯ್ ವೃಕ್ಷ ಗಳನ್ನು ಪೂಜಿಸಿ ಸಮರ್ಪಿಸಿದ್ದಾರೆ.

ಇಡೀ ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯ್ ವೃಕ್ಷಗಳನ್ನು ಹೊಂದಿರುವ ಖ್ಯಾತಿ ಕೂಡಾ ಅವಧೂತ ದತ್ತ ಪೀಠಕ್ಕೆ ಸಂದಿದೆ.ಹಾಗಾಗಿ ಗಿನ್ನೀಸ್ ವರ್ಡ್ ರೆಕಾರ್ಡ್ ಕೂಡಾ ಅವಧೂತ ದತ್ತಪೀಠಕ್ಕೆ ಸಂದಿದೆ.

ಇಂದು ಮುಂಜಾನೆ ಎಂದರೆ ಗಣಪತಿ ಶ್ರೀಗಳು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮಿಗಳು ಸಹಸ್ರ ಚಂಡೀಯಾಗದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಶ್ರಮದ ಆವರಣದಲ್ಲಿ ಈ ಮಹಾ ಯಾಗಕ್ಕಾಗಿ ನಿರ್ಮಿಸಿದ್ದ 11 ಹೋಮ ಕುಂಡಗಳ ಬಳಿಯೂ ಪೂರ್ಣಹುತಿಯನ್ನು ನೆರವೇರಿಸಿದರು. ತದನಂತರ ಪ್ರಧಾನ ಹೋಮಕುಂಡದಲ್ಲಿ ಅತಿ ಪ್ರಮುಖವಾದ ಪೂರ್ಣಾಹುತಿಯನ್ನು ನೆರವೇರಿಸಿ ಯಾಗವನ್ನು ಸಂಪನ್ನಗೊಳಿಸಿದರು.

ನಂತರ ಸಪ್ತ ಋಷಿ ಸರೋವರದಲ್ಲಿ ದೇವಿಯನ್ನು ಉತ್ಸವದಲ್ಲಿ ಕೊಂಡೊಯ್ದು ಅವಭೃತ ಸ್ನಾನ ನೆರವೇರಿಸುವ ಮೂಲಕ ಇಡೀ ಯಾಗವನ್ನು ಸಂಪನ್ನಗೊಳಿಸಲಾಯಿತು.

ಇದೇ‌ ವೇಳೆ ನೂರಾರು ಭಕ್ತರು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಪಠಿಸಿದರು. ಆಶ್ರಮದ ಆವರಣದಲ್ಲಿ ಸಂಜೆ ವನದುರ್ಗ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇಶಾದ್ಯಂತ ಹಲವಾರು ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೃಕ್ಷ ಶಾಂತಿ ಮಹಾ ಯಜ್ಞ ಮತ್ತು ವಿಶ್ವದ ಮೊಟ್ಟಮೊದಲ ಸಹಸ್ರ ಚಂಡೀಯಾಗವನ್ನು ಕಣ್ತುಂಬಿಕೊಂಡು ಪುನೀತರಾದರು.

ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಕ್ಕಾಗಿಹಮ್ಮಿಕೊಂಡಿದ್ದ ಸಹಸ್ರ ಚಂಡೀಯಾಗ ಸಂಪನ್ನ Read More

ಮಧುಮೇಹದ‌ ಬಗ್ಗೆ ಜಾಗೃತಿ ಗಾಗಿ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಪಾದಯಾತ್ರೆಪ್ರಾರಂಭಿಸಿದ ದತ್ತ ವಿಜಯಾನಂದ ಶ್ರೀಗಳು

ಮೈಸೂರು: ಇತ್ತೀಚಿನ ದಿನಗಳಲ್ಲಿ ಮಧುಮೇಹದ ಬಗ್ಗೆ ಅತಿ ಹೆಚ್ಚು ನಾವು ಕೇಳುತ್ತಿದ್ದೇವೆ, ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಪಾದಯಾತ್ರೆ ಹೊರಟಿರುವುದಾಗಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ನಮ್ಮ ನಡಿಗೆ ಆರೋಗ್ಯವಂತ ವಿಶ್ವದೆಡೆಗೆ ಎಂಬ ಘೋಷವಾಖ್ಯದಡಿ
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಶ್ರೀಗಳು ಇಂದು ಬೆಳಿಗ್ಗೆ ಪಾದಯಾತ್ರೆ ಕೈಗೊಂಡಿದ್ದು,ಈ ವೇಳೆ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಹಾಗಾಗಿ ಪ್ರತಿದಿನ ಎಲ್ಲರೂ ಯಾವುದಾದರೂ ಒಂದು ವ್ಯಾಯಾಮವನ್ನು ಮಾಡಬೇಕು, ಉತ್ತಮ ಸಮಾಜಕ್ಕಾಗಿ ನಾವೆಲ್ಲ ಕೃಷಿ ಮಾಡಬೇಕು.ಜನರಲ್ಲಿ ತಿಳುವಳಿಕೆ ಮೂಡಿಸಲು ಈ ಪಾದಯಾತ್ರೆ ಕೈಗೊಂಡಿದ್ದೇವೆ, ನಮ್ಮ ಜೊತೆ ಭಕ್ತರು ಸೇರಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಧರ್ಮ ಮಾರ್ಗದಲ್ಲಿ ನಡೆಯಲು ಬೇಕಾದ ಆರೋಗ್ಯ ದಯಪಾಲಿಸು, ನಮಗೆ ಬೇಕಾದ ಉತ್ತಮ ಬುದ್ಧಿ, ಒಳ್ಳೆಯ ಆರೋಗ್ಯ ಅನುಗ್ರಹಿಸು ಎಂದು ಸ್ವಾಮಿ ಶ್ರೀಕಂಠೇಶ್ವರ ನಲ್ಲಿ ಪ್ರಾರ್ಥಿಸಿ ಈ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಪ್ರತಿ ದಿನ ಜನರು ತಾವಿರುವ ಜಾಗದಲ್ಲೇ ಯಾವುದಾದರೂ ಆಶ್ರಮ ಅಥವಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಪ್ರದಕ್ಷಿಣೆ ಹಾಕಬೇಕು ಇದರಿಂದ ಭಕ್ತಿ ಹೆಚ್ಚಾಗುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು. ದೇವರ ದರ್ಶನ ಮಾಡುವುದು ಪ್ರದಕ್ಷಿಣೆ ಹಾಕುವುದು ನಮ್ಮ ಸನಾತನ ಧರ್ಮದ ಸಂಪ್ರದಾಯವೂ ಆಗಿದೆ ಹಾಗಾಗಿ ಮಕ್ಕಳಿಗೂ ಕೂಡ ಪ್ರದಕ್ಷಿಣೆ ಮಾಡುವುದನ್ನು ಕಲಿಸಬೇಕು ಎಂದು ಶ್ರೀ ದತ್ತ ವಿಜಯಾನಂದ ತೀರ್ಥ ಶ್ರೀಗಳು ಸಲಹೆ ನೀಡಿದರು.

ಪ್ರತಿಯೊಬ್ಬ ಮನುಷ್ಯನ ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬ ಕುರಿತು ವಿಶ್ವ ಜನ ಜಾಗೃತಿ ಮೂಡಿಸುವ ಸಲಯವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದತ್ತಪೀಠಾಧಿಪತಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಈ ಪಾದಯಾತ್ರೆ ಪ್ರಾರಂಭಿಸಿದರು‌. ಶ್ರೀಗಳೊಂದಿಗೆ ನೂರಾರು ಭಕ್ತರು ಕೂಡ ಪಾದಯಾತ್ರೆಯಲ್ಲಿ ಸಾಗಿ ಬಂದರು.

ಶ್ರೀ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯನ್ನು ತಲುಪಿದ ಕೂಡಲೇ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಶ್ರೀಗಳು ನೆರವೇರಿಸಿ ನಂತರ ಮಹಾಮಂಗಳಾರತಿ ಸ್ವೀಕರಿಸಿದರು.

ಮಧುಮೇಹದ‌ ಬಗ್ಗೆ ಜಾಗೃತಿ ಗಾಗಿ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಪಾದಯಾತ್ರೆಪ್ರಾರಂಭಿಸಿದ ದತ್ತ ವಿಜಯಾನಂದ ಶ್ರೀಗಳು Read More