ಸರ್ವರಿಗೂ ಶಿಕ್ಷಣ ಸಿಗುವಂತೆ ಮಾಡಿದ ಸಾವಿತ್ರಿ ಬಾಯಿ ಪುಲೆ: ರಘುರಾಮ್ ವಾಜಪಾಯಿ

ಮೈಸೂರು: ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಹೇಳಿದರು.

ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಮೂಲಕ ಮಹಿಳಾ ಶಿಕ್ಷಣ ಪದ್ಧತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತ ಮಾಡಿದ ಕಾಲದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಪರಿಣಾಮ ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆ ಮಾಡಲು ಕಾರಣವಾಗಿದೆ ಎಂದು ಬಣ್ಣಿಸಿದರು.

ಸಮುದಾಯ ಕಲಿಕಾ ಕೇಂದ್ರದ ಶಿಕ್ಷಕ ಸತೀಶ್ ಮೇತ್ರಿ ಮಾತನಾಡಿ,
ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುತ್ತವೆ ಎಂಬ ಘೋಷಣೆಯೊಂದಿಗೆ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಸಾಕಷ್ಟು ಹೋರಾಟ ಮಾಡಿದರು. ಪ್ರತಿವರ್ಷ ಫುಲೆ ಅವರ ಜನ್ಮದಿನವನ್ನು ‘ಶಿಕ್ಷಕಿಯರ ದಿನ’ವನ್ನಾಗಿ ಆಚರಿಸಿದಲ್ಲಿ ಹೆಚ್ಚಿನ ಅರ್ಥ ಸಿಗಲಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ನಿರೂಪಕ ಅಜಯ್ ಶಾಸ್ತ್ರಿ, ಹಿರಿಯ ಶಿಕ್ಷಕಿ ಸುಶೀಲ ರಾವ್, ಶಿಕ್ಷಕರಾದ ಸತೀಶ್ ಮೇತ್ರಿ, ಸುಚಿಂದ್ರ, ಜಿ ರಾಘವೇಂದ್ರ, ಮಹಾನ್ ಶ್ರೇಯಸ್, ಮಂಜುನಾಥ್ ಹಾಗೂ ವಿವಿಧ ಶಾಲೆಯ ಶಿಕ್ಷಕಿಯರು ಹಾಜರಿದ್ದರು.

ಸರ್ವರಿಗೂ ಶಿಕ್ಷಣ ಸಿಗುವಂತೆ ಮಾಡಿದ ಸಾವಿತ್ರಿ ಬಾಯಿ ಪುಲೆ: ರಘುರಾಮ್ ವಾಜಪಾಯಿ Read More

ಗೊಂಬೆ ಕೂರಿಸುವ ಮೂಲಕ ಗೃಹಿಣಿಯರು ನಮ್ಮ ಪರಂಪರೆ ಬೆಳೆಸುತ್ತಿದ್ದಾರೆ:ರಘುರಾಮ್

ಮೈಸೂರು: ಮನೆ,ಮನೆಗಳಲ್ಲಿ ಗೊಂಬೆ ಕೂರಿಸುವ ಮೂಲಕ ಗೃಹಿಣಿಯರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದು ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಆಯೋಜಿಸಿದ್ದ ಮೈಸೂರು ದಸರಾ ಮಹೋತ್ಸವದ ದಸರಾ
ಮನೆ ಮನೆ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ
ಗೆದ್ದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ.ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಒಗ್ಗಟ್ಟಾಗಿ ಶ್ರಮಿಸಿ,ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂದು ಕರೆ ನೀಡಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ
ನವರಾತ್ರಿಯು ಮೈಸೂರು ಪರಂಪರೆಯಲ್ಲಿ ಅತ್ಯಂತ ಪವಿತ್ರವಾದದ್ದು, ದಸರಾ ಗೊಂಬೆ ಪ್ರದರ್ಶನಕ್ಕೆ ಅತ್ಯಂತ ಮಹತ್ವವಿದೆ ಎಂದು ತಿಳಿಸಿದರು.

ಪಟ್ಟದ ಗೊಂಬೆಗಳನ್ನು ಲಕ್ಷ್ಮಿನಾರಾಯಣ ಸ್ವರೂಪದಲ್ಲಿ ಪೂಜಿಸಿ ಪುರಾಣ ಪುಣ್ಯಕಥೆಗಳನ್ನು ಗೊಂಬೆಗಳ ಮೂಲಕ ರೂಪಕವಾಗಿ ಪ್ರಚುರಪಡಿಸಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಇದರ ಮೂಲ ಉದ್ದೇಶ, ಮನೆಮನೆಗಳಲ್ಲಿ ಗೊಂಬೆ ಕೂರಿಸುವ ಮೂಲಕ ಗೃಹಿಣಿಯರು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದು ಬಣ್ಣಿಸಿದರು.

ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಮಾತನಾಡಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕಾರ, ಸಂಸ್ಕೃತಿ ಹಾಗೂ ನಮ್ಮ ಮೈಸೂರಿನ ಹಿರಿಮೆ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

80ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಎನ್ ಐ ಇ ಕಾಲೇಜಿನ ಪ್ರೊ.ಡಾಕ್ಟರ್ ಸಿ.ಕೆವನಮಾಲ,
ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ ಗ್ರಾಜಿಯೇಟ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ವರಲಕ್ಷ್ಮಿ ಅಜಯ್, ಚಕ್ರಪಾಣಿ, ಮಹಾನ್ ಶ್ರೇಯಸ್, ಜಯಶ್ರೀ ಶಿವರಾಂ ಮತ್ತಿತರರು ಹಾಜರಿದ್ದರು.

ಗೊಂಬೆ ಕೂರಿಸುವ ಮೂಲಕ ಗೃಹಿಣಿಯರು ನಮ್ಮ ಪರಂಪರೆ ಬೆಳೆಸುತ್ತಿದ್ದಾರೆ:ರಘುರಾಮ್ Read More

ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆ: ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ನಾಡಹಬ್ಬ ಮೈಸೂರು ದಸರಾ 2024ರ ಮನೆಮನೆ ಗೊಂಬೆ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು.

ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹಾಗೂ ಶಿಕ್ಷಣ ಇಲಾಖೆ ಸಚಿವ
ಮದು ಬಂಗಾರಪ್ಪ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ವೇಳೆ ಸ್ಪರ್ಧೆ ಕುರಿತು ಮಾಹಿತಿ ನೀಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್,ಸ್ಪರ್ಧೆಯಲ್ಲಿ ಭಾಗವಹಿಸುವವರು 200 ರೂ ನೋಂದಣಿ ಶುಲ್ಕ ನೀಡಬೇಕಿದೆ ಎಂದು ತಿಳಿಸಿದರು.

ದಸರಾ ಗೊಂಬೆ ಸ್ಪರ್ಧೆಯಲ್ಲಿ
ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡಂತೆ ಗೊಂಬೆಗಳನ್ನು ಕೂರಿಸಿ ದವರಿಗೆ ಮೊದಲನೇ ಬಹುಮಾನ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ 1000 ರೂ ನಗದು ಹಾಗೂ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಲಾಗುವುದು.

ಎರಡನೇ ಬಹುಮಾನ 500 ರೂ ನಗದು
ಪಾರಿತೋಷಕ ಹಾಗೂ ಪ್ರಮಾಣಪತ್ರ,ಮೂರನೇ ಬಹುಮಾನ 300ರೂ ನಗದು ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು.

10 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣಪತ್ರನೀಡಲಾಗುವುದು ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು.

ಅಕ್ಟೋಬರ್ 13 ರ ಒಳಗೆ 8971389539 ದೂರವಾಣಿ ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ಗೊಂಬೆ ಜೋಡಣೆ ಮಾಡಿರುವ ಚಿತ್ರ ಹಾಗೂ 3ನಿಮಿಷದ ವೀಡಿಯೊವನ್ನು ಕಳಿಸಿಕೊಡಬೇಕು ಎಂದು ರೇಖಾ ತಿಳಿಸಿದರು.

ಆನಂತರ ನುರಿತ ತೀರ್ಪುಗಾರರು ಅವರ ನಿವಾಸಕ್ಕೆ ತೆರಳಿ ವೀಕ್ಷಿಸಿ ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡ ಅದ್ಭುತವಾಗಿ ಗೊಂಬೆ ಜೋಡಣೆ ಮಾಡಿದಂತಹ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು

ವಿಧಾನ ಪರಿಷತ್ ಸದಸ್ಯೆ
ಬಲ್ಕಿಷ್ ಬಾನು, ಶಾಸಕ ಜಿ.ಎಸ್ ಶ್ರೀ ನಿವಾಸ್, ವೈದ್ಯಧಿಕಾರಿಗಳಾದ
ಶ್ರೀನಿವಾಸ್ ಆಚಾರ್ಯ, ಅಶ್ವಿನಿ ಗೌಡ, ರೇಣುಕಾ ಹೊರಕೇರಿ,
ಯಶವಂತ್ ಮತ್ತಿತರರು ಈ ವೇಳೆ ಹಾಜರಿದ್ದರು.

ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆ: ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು Read More

ಗುರು, ಗುರಿ ಇದ್ದರೆ ಯಶಸ್ಸು ಸಾಧ್ಯ-ಫ್ರೊ.ವನಮಾಲ ಸಿ ಕೆ

ಮೈಸೂರು: ಗುರು ಮತ್ತು ಗುರಿ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಮೈಸೂರಿನ ಎನ್ ಐ ಇ ಕಾಲೇಜಿನ ಪ್ರೋ.ಡಾ.ವನಮಾಲ ಸಿ.ಕೆ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೀ ದುರ್ಗಾ ಫೌಂಡೇಶನ್ ಆಯೋಜಿಸಿದ್ದ
ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಪ್ರೊ.ವನಮಾಲ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನೇತಾರರು, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ನೈತಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ಹೇಳಿದರು.

ಸಮಾಜ ಸೇವಕಿ ಶಾಂತಮ್ಮ ಮಾತನಾಡಿ,
ಶಿಕ್ಷಕರದ್ದು ಒಂದು ಪವಿತ್ರ ವೃತ್ತಿ ಇದರಲ್ಲಿ ಸಿಗುವ ಆತ್ಮಶಾಂತಿ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ. ಶಿಕ್ಷಕ ವೃತ್ತಿಯನ್ನು ಕೇವಲ ನೌಕರಿ ಎಂದು ಭಾವಿಸದೇ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಡಾಕ್ಟರ್ ವನಮಾಲ ಸಿ. ಕೆ,
ರಾಂಪುರ ಶ್ರೀನಾಥ್, ನಂದಿನಿ ರಾಜ್, ಜಿ ಪುಷ್ಪವತಿ ಅವರುಗಳನ್ನು ಈ ವೇಳೆ ಸನ್ಮಾನಿಸಿ ಶುಭ ಕೋರಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ರೂಪದರ್ಶಿ ರೇಣುಕಾ, ಶೋಭಾ, ಅಶ್ವಿನಿ ಗೌಡ,
ದಿ ಗ್ರಾಜುಯೇಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ವರಲಕ್ಷ್ಮಿ ಅಜಯ್, ರಂಜಿತ, ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ,
ಮತ್ತಿತರರು ಉಪಸ್ಥಿತರಿದ್ದರು.

ಗುರು, ಗುರಿ ಇದ್ದರೆ ಯಶಸ್ಸು ಸಾಧ್ಯ-ಫ್ರೊ.ವನಮಾಲ ಸಿ ಕೆ Read More