ಹಬ್ಬಗಳ ಆಚರಣೆಯ ಮಹತ್ವವನ್ನ ಯುವಪೀಳಿಗೆಗೆ ತಿಳಿಸಿ: ಲಕ್ಷ್ಮೀದೇವಿ

ಮೈಸೂರು: ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ನಡೆಸಿಕೊಂಡು ಬರುವಂತಹ ಅತಿ ದೊಡ್ಡ ಹಬ್ಬ ಶ್ರೀ ವರಮಹಾಲಕ್ಷ್ಮಿ ವ್ರತ ಎಂದು ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ ಹೇಳಿದರು.

ಹಿಂದೂ ಧರ್ಮ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು ‌

ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಜೊತೆ ಫೋಟೋ ಆನ್ಲೈನ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು,ಅಲ್ಲದೆ ನಮ್ಮ ಧರ್ಮದ
ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ತಿಳಿಸಿದರು

ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು,ಈ ಮೂಲಕ ಹಿಂದೂ ಸನಾತನ ಸಂಸ್ಕೃತಿ ರಕ್ಷಿಸಬೇಕು ಎಂದು ಲಕ್ಷ್ಮೀದೇವಿ ಕರೆ ನೀಡಿದರು.

ಆನ್ಲೈನ್ ಮೂಲಕ 500ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ತಮ್ಮ ಮನೆಯಲ್ಲಿ ಅಲಂಕರಿಸಿ ಕೂರಿಸಿದ ಶ್ರೀ ವರಮಹಾಲಕ್ಷ್ಮಿ ಜೊತೆ ಫೋಟೋವನ್ನು ಆನ್ಲೈನ್ ಮೂಲಕ ಕಳಿಸಿದ್ದರು.

ವರಮಹಾಲಕ್ಷ್ಮಿ ಫೋಟೋ ಸ್ಪರ್ಧೆಯಲ್ಲಿ 10 ಅತ್ಯುತ್ತಮ ಅಲಂಕರಿಸಿದ ಚಿತ್ರಗಳ ವಿಜೇತರಾದ

ಲತಾ ಹೆಗಡೆ,
ಚೈತ್ರ B,
ರಕ್ಷಿತಾ,
ಹೇಮಂತ್ ಕುಮಾರ್ ,ಚಂದನ್,
ಸುನೀತಾ, ಪ್ರೀತಿ .ಕೆ.ಮಂಜುಳ,ರೀಶು ಪುರುಷೋತ್ತಮ್ ,ಜ್ಯೋತಿ
ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ಆನಂತರ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು

ಕಾರ್ಯಕ್ರಮ ದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,
ಸಂದ್ಯಾರಾಣಿ, ಕಾವ್ಯ, ಸಹನಾ, ತಾರಾ, ಜ್ಯೋತಿ , ಸವಿತಾ ಘಾಟ್ಕೆ, ಜಯಶ್ರೀ, ಶೃತಿ, ರಾಘವೇಂದ್ರ ಮತ್ತಿತರು ಉಪಸ್ಥಿತರಿದ್ದರು.

ಹಬ್ಬಗಳ ಆಚರಣೆಯ ಮಹತ್ವವನ್ನ ಯುವಪೀಳಿಗೆಗೆ ತಿಳಿಸಿ: ಲಕ್ಷ್ಮೀದೇವಿ Read More

ಚಾಮುಂಡೇಶ್ವರಿ ವರ್ಧಂತಿ: ಪೌರಕಾರ್ಮಿಕರು,ತೃತಿಯ ಲಿಂಗಿಗಳಿಗೆ ಬಾಗಿನ

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವತಿಯಿಂದ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ
ಪೌರಕಾರ್ಮಿಕ ಮಹಿಳೆಯರು,
ತೃತೀಯಲಿಂಗಗಳಿಗೆ ಬಾಗಿನ ವಿತರಿಸಲಾಯಿತು.

ಚಾಮುಂಡಿ ಬೆಟ್ಟದ ಪಾದದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಹಾಗೂ ತೃತೀಯಲಿಂಗಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಅವರು ಸೀರೆ, ಕುಂಕುಮ, ಅರಿಶಿಣ, ಬಳೆ ಸಹಿತ ಬಾಗಿನ ವಿತರಿಸಿ ಶುಭ ಕೋರಿದರು.

ಈ ವೇಳೆ ನಾಗಲಕ್ಷ್ಮಿ ಅವರು ಸಮಸ್ತ ನಾಡಿನ ಜನತೆಗೆ ಚಾಮುಂಡೇಶ್ವರಿ ವರ್ಧಂತಿ ಶುಭಾಶಯ ಕೋರಿದರು.

ವಿಶೇಷವಾಗಿ ಮಹಿಳೆಯರಿಗೆ ಚಾಮುಂಡೇಶ್ವರಿ ತಾಯಿ ಹೆಚ್ಚು ಶಕ್ತಿ ನೀಡಲಿ, ಪೌರಕಾರ್ಮಿಕರು ಹಾಗೂ ತೃತೀಯ ಲಿಂಗಗಳನ್ನು ಗುರುತಿಸಿ ಬಾಗಿನ ನೀಡುವ ಸೌಭಾಗ್ಯ ಕಲ್ಪಿಸಿಕೊಟ್ಟ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ಗಳಿಗೆ ಧನ್ಯವಾದ ತಿಳಿಸಿದರು,

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿವಿನು, ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಚಿಕ್ಕಮಂಗಳೂರು
ಮುರಾಜಿ ಶಾಲೆಯ ಪ್ರಾಂಶುಪಾಲರಾದ ದೀಪ, ಅಶ್ವಿನಿ ಗೌಡ, ಸುಶೀಲ, ಸರಸ್ವತಿ ಹಲಸಗಿ, ರಾಣಿ ಪ್ರಭ ಮತ್ತಿತರರು ಹಾಜರಿದ್ದರು.

ಚಾಮುಂಡೇಶ್ವರಿ ವರ್ಧಂತಿ: ಪೌರಕಾರ್ಮಿಕರು,ತೃತಿಯ ಲಿಂಗಿಗಳಿಗೆ ಬಾಗಿನ Read More

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆಬಾಗಿನ ವಿತರಣೆ

ಮೈಸೂರು: ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ವಿತರಿಸಿ ಶ್ರೀ ದುರ್ಗಾ ಫೌಂಡೇಶನ್ ಮಾದರಿಯಾಗಿದೆ.

ಶ್ರೀದುರ್ಗಾ ಫೌಂಡೇಶನ್ ವತಿಯಿಂದ ಆಷಾಡ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ಸಮರ್ಪಣೆ ಮಾಡಲಾಯಿತು,

ಈ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್
ಮಾತನಾಡಿ, ಪುರಾಣಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಆಷಾಡ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪ್ರಾರ್ಥನೆ ಪೂಜಾ ಕೈಂಕರ್ಯ ಸೇವೆ ಸಲ್ಲಿಸಲು ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತಾ ಸ್ವಚ್ಛತಾ ಸಿಬ್ಬಂದಿಗಳನ್ನ ಗೌರವಿಸಿ ಬಾಗಿನ ಸಮರ್ಪಣೆ ಮಾಡುತ್ತಿರುವುದು ಅರ್ಥಪೂರ್ಣವಾದುದು ಎಂದು ಹೇಳಿದರು.

ಬೆಟ್ಟಕ್ಕೆ ಬರುವ ಭಕ್ತಧಿಗಳು ಭಕ್ತಿಯ ಜೊತೆಯಲ್ಲೆ ಪ್ಲಾಸ್ಟಿಕ್ ತರದ ಹಾಗೇ ಪರಿಸರ ಸಂರಕ್ಷಣೆ ಕಾಳಜಿ ಸಂಕಲ್ಪ ತೊಡಬೇಕು, ಧಾರ್ಮಿಕ ಪರಂಪರೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆಯೂ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಮಹಿಳೆಯರಲ್ಲಿ ಧರ್ಮ ಜಾಗೃತಿ ಮತ್ತು ಧಾರ್ಮಿಕ ಸಾಮರಸ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಬಾಗಿನ ಅರ್ಪಣೆ ಆಯೋಜಿಸುತ್ತಾ ಬಂದಿದ್ದಿದೇವೆ ಮುಂದಿನ ದಿನದಲ್ಲಿ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಮಹಿಳಾ ಕಾರ್ಮಿಕರಲ್ಲಿ ಅರಿಶಿನ ಕುಂಕುಮದ ಮಹತ್ವ ಮತ್ತು ಪುರಾಣ ಪ್ರಸಿದ್ಧ ಹಬ್ಬಗಳ ಪರಂಪರೆ ಮತ್ತು ಆಚರಣೆಯ ಮಹತ್ವ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಚಾಮುಂಡಿ ಬೆಟ್ಟದ ಪರಿಸರ ಸೌಂದರ್ಯ ಕಾಪಾಡಲು ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣ ನಿಷೇಧಿಸಿದೆ ಅದರ ನಿಯಮಗಳನ್ನ ಸಾರ್ವಜನಿಕರು ಪಾಲಿಸಿ ಕೈಜೋಡಿಸಿದರೇ ಮಾತ್ರ ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ವಲಯವಾಗುತ್ತದೆ ಎಂದು ರೇಖಾ ಶ್ರೀನಿವಾಸ್ ತಿಳಿಸಿದರು.

ಈ ಸಂದರ್ಭದಲ್ಲಿ ಕೆ ವಿ ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್,ರೂಪ, ವಿದ್ಯಾ, ಸಮಾಜ ಸೇವಕರಾದ ಶಾಂತಮ್ಮ ಮತ್ತಿತರರು ಹಾಜರಿದ್ದರು.

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆಬಾಗಿನ ವಿತರಣೆ Read More

ನಿಸ್ವಾರ್ಥ ಸೇವೆ ನೀಡುವ ಶುಶ್ರೂಷಕರನ್ನ ಗೌರವಿಸಿ-ನಜರ್ಬಾದ್ ನಟರಾಜ್

ಮೈಸೂರು: ಮಾರಕ ಕೊರೊನಾ ಆತಂಕದ ನಡುವೆಯೂ ನಿಷ್ಠೆ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಎಲ್ಲರೂ ಗೌರವಿಸಬೇಕು ಎಂದು ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಹೇಳಿದರು.

ನಗರದ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ
ದಾದಿಯರ ಜೊತೆ ಫ್ಲಾರೆನ್ಸ್‌ ನೈಟಿಂಗೆಲ್‌ ಅವರ ಜನ್ಮದಿನದ ಪ್ರಯುಕ್ತ ವಿಶ್ವ ದಾದಿಯರ ದಿನ ಆಚರಿಸಿದ ವೇಳೆ ನಜರಬಾದ್ ನಟರಾಜ್ ಮಾತನಾಡಿದರು.

ಪ್ರತಿಯೊಬ್ಬ ರೋಗಿಗೂ ತಾವೊಬ್ಬ ತಾಯಿಯಂತೆ ಸೇವೆ ಸಲ್ಲಿಸುವ ನರ್ಸ್‌ಗಳು ಧನ್ಯರು ಎಂದು ಹೇಳಿದರು.

ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿ ಯಾದ ಶುಶ್ರೂಷಾ ವಿಭಾಗಕ್ಕೆ ದಾದಿಯರದೇ ನೇತೃತ್ವ. ವೈದ್ಯರ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ದಾದಿಯರು ಸಹಕರಿಸುತ್ತಾರೆ, ವಿಶ್ವ ದಾದಿಯರ ದಿನಾಚರಣೆಯ ನಿಮಿತ್ತ ಶುಶ್ರೂಷಾ ಸೇವೆಯ ಬಗ್ಗೆ ಉಲ್ಲೇಖೀಸುವುದು ಔಚಿತ್ಯದಾಯಕ, ಅವರಿವರೆನ್ನದೆ ಎಲ್ಲರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಅವರ ಔದಾರ್ಯ ದೊಡ್ಡದು ಎಂದು ಶ್ಲಾಘಿಸಿದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತಮಾಡಿ,ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಧರ್ಮ,ಪಕ್ಷ, ಯಾವ ಊರು ಎಂಬುದನ್ನೆಲ್ಲ ನೋಡುವುದಿಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿ ಎಂದು ಹೇಳಿದರು.

ಈ ವೇಳೆ ಮೇಣದ ಬತ್ತಿ ಹಚ್ಚಿ ಫ್ಲಾರೆನ್ಸ್‌ ನೈಟಿಂಗೆಲ್‌ ರನ್ನು ಸ್ಮರಿಸಲಾಯಿತು.

ಆನಂತರ ಹಲವು ವರ್ಷದಿಂದ ದಾದಿಯರಾಗಿ ಸೇವೆ ಸಲ್ಲಿಸಿದ
ರಶ್ಮಿ, ರಶೀದ, ಕೋಮಲಾ,ಪೂರ್ಣಿಮಾ
ಅವರುಗಳನ್ನು ಸನ್ಮಾನಿಸಿ ಶುಭಕೋರಲಾಯಿತು.

ಈ ಸಂದರ್ಭದಲ್ಲಿ ಮಹದೇವ್, ರಮೇಶ್ ರಾಮಪ್ಪ, ರವಿಚಂದ್ರ, ಸುಜಾತ ಮತ್ತಿತರರು ಹಾಜರಿದ್ದರು.

ನಿಸ್ವಾರ್ಥ ಸೇವೆ ನೀಡುವ ಶುಶ್ರೂಷಕರನ್ನ ಗೌರವಿಸಿ-ನಜರ್ಬಾದ್ ನಟರಾಜ್ Read More

ಹಿರಿಯ ಪತ್ರಿಕಾ ವಿತರಕಿ ರಮಾದೇವಿ ಅವರಿಗೆ ಸನ್ಮಾನ

ಮೈಸೂರು: ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಸಂತೆಪೇಟೆಯಲ್ಲಿ 50 ವರ್ಷದಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ರಮಾದೇವಿ ರವರಿಗೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಜನಸಾಮಾನ್ಯರಿಗೆ ಮುಂಜಾನೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವಿತರಕರು ಬಿಸಿಲು, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸವ ಕಾರ್ಯ ಮಾಡುತ್ತಾರೆ, ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ ಅವರುಗಳಿಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದು ತಿಳಿಸಿದರು.

ಜನರು ಪತ್ರಿಕಾ ವಿತರಕರನ್ನು ಕೀಳು ಮಟ್ಟದಲ್ಲಿ ನೋಡುವುದು ಬದಲಾವಣೆಯಾಗಬೇಕು, ಪತ್ರಿಕಾ ವಿತರಕರನ್ನೂ ಕೂಡ ಗೌರವಿಸುವಂತಾಗಬೇಕು ಎಂದು ರೇಖಾ ಶ್ರೀ ನಿವಾಸ್ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಿಕಾ ವಿತರಕರಾದ ರಮಾದೇವಿ ಅವರು,
ಮಳೆ ಚಳಿ ಎನ್ನದೆ ವರ್ಷವಿಡಿ ಕೆಲಸ ಮಾಡಬೇಕು, ನಮಗೆ ರಜೆಯೂ ಇಲ್ಲ, ಇಷ್ಟಾದರೂ ಸಾಮಾಜಿಕ ಭದ್ರತೆ ಇಲ್ಲ,ಸಾಮಾಜಿಕ ಭದ್ರತೆ ಇಲ್ಲ, ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಸಾಮಾಜಿಕ ಭದ್ರತೆ ಕೊಡಬೇಕು, ಕಾರ್ಮಿಕ ಇಲಾಖೆಯಿಂದ
ಗುರುತಿನ ಚೀಟಿ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಜಿ ರಾಘವೇಂದ್ರ, ಎಸ್. ಎನ್ ರಾಜೇಶ್, ರಾಕೇಶ್, ಅಶ್ವಿನಿ ಗೌಡ, ಪಾಂಡು ಮತ್ತಿತರರು ಹಾಜರಿದ್ದರು.

ಹಿರಿಯ ಪತ್ರಿಕಾ ವಿತರಕಿ ರಮಾದೇವಿ ಅವರಿಗೆ ಸನ್ಮಾನ Read More

ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸಿದ ಚಿಣ್ಣರು

ಮೈಸೂರು:ಮಂಚೇಗೌಡನ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಜೀವ ಗಣೇಶ ಮೂರ್ತಿಗಳನ್ನು ತಯಾರಿಸುವಲ್ಲಿ ಮಕ್ಕಳು ಉತ್ಸಾಹದಿಂದ‌‌ ಪಾಲ್ಗೊಂಡರು.

ಶ್ರೀ ದುರ್ಗಾ ಫೌಂಡೇಶನ್ ಮಂಚೇಗೌಡನ ಕೊಪ್ಪಳಿನಲ್ಲಿರುವ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗಾಗಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಜೀವ ಗಣೇಶ ಮೂರ್ತಿ ತಯಾರಿಸುವ ಶಿಬಿರ ಹಮ್ಮಿಕೊಂಡಿತ್ತು.

ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ವಿಭಿನ್ನ ಶೈಲಿಯ ಗಣಪತಿ ಮೂರ್ತಿ ತಯಾರಿಸಿ, ಸಂಭ್ರಮಿಸಿದರು. ಮೂರ್ತಿಯೊಳಗೆ ಬೀಜ ಇಟ್ಟು ಜೀವ ಗಣಪತಿ ತಯಾರಿಸಿ ಖುಷಿಪಟ್ಟು ಮನೆಗಳಿಗೆ ತೆಗೆದುಕೊಂಡು ಹೋದರು.

ಈ ವೇಳೆ ಕಲಾವಿದರಾದ ಆರ್.ಲಕ್ಷೀ ಚಲಪತಿ ಮಾತನಾಡಿ,ಭಗವಂತನಿಗೆ ಭಕ್ತಿಯಿಂದ ನೆರವೇರಿಸುವ ಪೂಜೆ ಮುಖ್ಯವೇ ಹೊರತು ವಿಜೃಂಭಣೆ, ಆಡಂಬರವಲ್ಲ, ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕ ಜತೆಗೆ ಜಲಮಾಲಿನ್ಯ ಉಂಟಾಗುತ್ತಿದೆ, ಜೀವ ಜಂತುಗಳಿಗೂ ಹಾನಿ ಸಂಭವಿಸುತ್ತಿದೆ. ಶುದ್ಧ ಜೇಡಿಮಣ್ಣಿನಿಂದ ತಯಾರಿಸಿದ ಚಿಕ್ಕ ಗಣೇಶ ಮೂರ್ತಿಗಳನ್ನು ಇಟ್ಟು ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು.

ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಜೇಗೌಡನ ಕೊಪ್ಪಲು ರವಿ ಮಾತನಾಡಿ ಶಾಸ್ತ್ರಗಳ ಪ್ರಕಾರ ಕಲ್ಲು,ಮಣ್ಣು ಮತ್ತು ಲೋಹ ದಿಂದ ವಿಗ್ರಹವನ್ನು ತಯಾರಿಸ ಬೇಕು, ಇವುಗಳಲ್ಲಿ ಮಾತ್ರ ದೈವತ್ವದ ಶಕ್ತಿ ಇರುತ್ತದೆ, ಪಿಒಪಿಯಿಂದ ತಯಾರಿಸಿದ ಗಣೇಶಮೂರ್ತಿಗಳಲ್ಲಿ ದೈವಶಕ್ತಿ ಇರುವುದಿಲ್ಲ ಕೇವಲ ಪ್ರದರ್ಶನಕಷ್ಟೇ ಸೀಮಿತ ಎಂದು ತಿಳಿಸಿದರು.

ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪೂಜಿಸಿ ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಂತೋಷ್ ಕಿರಾಲು, ಅಶ್ವಿನಿ ಗೌಡ, ಶಾಲೆಯ ಮುಖ್ಯೋಪಾಧ್ಯಾಯರಾದ ಶುಭ, ಹಾಗೂ ಶಿಕ್ಷಕರು ಹಾಜರಿದ್ದರು.

ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸಿದ ಚಿಣ್ಣರು Read More