ಶಿವಕುಮಾರ ಸ್ವಾಮಿಗಳ ಹುಟ್ಟು ಹಬ್ಬ: ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ

ಮೈಸೂರು,ಏ.1: ಮೈಸೂರಿನ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಪೂಜ್ಯ ಪದ್ಮಭೂಷಣ, ಸಿದ್ದಗಂಗೆಯ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಬೋಗಾದಿ, ರವಿಶಂಕರ್ ಲೇಔಟ್ ಉದ್ಯಾನವನದಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಆನಂತರ ಉದ್ಯಾನವನದ ಮರಗಳಲ್ಲಿ
ಪಕ್ಷಿಗಳಿಗಾಗಿ ಗುಟುಕು ನೀರಿನ ಅರವಟ್ಟಿಗೆ
ಅಳವಡಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡರುಗಳಾದ ರಾಘವೇಂದ್ರ, ಯೋಗೇಶ್,ಅನಿತಾ,ಪ್ರಕಾಶ್,ರಾಜೇಶ್, ಮಂಜು,ವಿಶ್ವಣ್ಣ,ಮರಿಸ್ವಾಮಿ, ಮಂಜಣ್ಣ ಶ್ರೀಕಾಂತ್,ಕಿರಣ್ ಮಾಯ, ಮಲ್ಲೇಶ್, ಚಂದ್ರು, ರಾಮಮೂರ್ತಿ ಶಾಸ್ತ್ರಿ ಮತ್ತು ಸ್ಥಳೀಯ ನಿವಾಸಿಗಳು ಹಾಜರಿದ್ದರು.

ಶಿವಕುಮಾರ ಸ್ವಾಮಿಗಳ ಹುಟ್ಟು ಹಬ್ಬ: ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ Read More