ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್‌:ವಿಶ್ವನಾಥ್ ಆಕ್ರೋಶ

ಮೈಸೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ಹೇಳಿಕೆ ನೀಡಿ, ಕ್ಷಮೆಯಾಚಿಸಿದರೂ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್‌ ದಾಖಲಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಹೇಳಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಚಂದ್ರಶೇಖರ್ ಸ್ವಾಮಿ ವಿರುದ್ಧ ಎಫ್ ಐ ಆರ್ ಹಾಕಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.

ಬಾಯಿತಪ್ಪಿನಿಂದ ಮಾತನಾಡಿದ್ದೇನೆ ಎಂದು ಸ್ವಾಮೀಜಿ ಪತ್ರ ಬರೆದಿದ್ದಾರೆ. ಕ್ಷಮೆಯನ್ನೂ ಕೇಳಿದ್ದಾರೆ. ಆದರೂ ಎಫ್‌ ಐ ಆರ್ ಹಾಕಲಾಗಿದೆ ಇದು ಸಹಿಸಲಾಗದು ಎಂದರು.

ಸಿದ್ದರಾಮಯ್ಯ ಎಷ್ಟೋ ಭಾಷಣದಲ್ಲಿ ಬಾಯಿತಪ್ಪಿ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್ ಮುಗಿಸುವುದೆ ನನ್ನ ಗುರಿ ಅಂದಿದ್ದಾರೆ‌. ಕಾಂಗ್ರೆಸ್ ನವರು ಅವರನ್ನ ಹೊರ ಹಾಕಿದ್ರ. ಬಾಯಿತಪ್ಪಿ ಹಾಡಿದ ಮಾತಿಗೆ ಎಫ್ ಐ ಆರ್ ಹಾಕಿದ್ದಾರೆ. ಇದನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಡಾ ಕಮಿಷನರ್ ಮತ್ತು ಅಧ್ಯಕ್ಷರ ವಿರುದ್ಧ ದೂರು ದಾಖಲಿಸಿ ಮುಡಾ ಆಸ್ತಿಗೆ ಮಾಲೀಕ ಅಂದ್ರೆ ಮುಡಾ ಅಧ್ಯಕ್ಷ ಕಮಿಷನರ್ ಇದೀಗ ಜಿಲ್ಲಾಧಿಕಾರಿಯೆ ಆಗಿದ್ದಾರೆ. ಅಧ್ಯಕ್ಷರಾದ ಮೇಲೆ ಯಾಕಾಗಿ ಕಂಪ್ಲೆಂಟ್ ಮಾಡಿಲ್ಲ. ಐಎಎಸ್ ಮಾಡಿದವರು ಬುದ್ದಿವಂತ ದೈರ್ಯವಂತರು. ಆದರೂ ದೂರು ಕೊಡುವ ಕೆಲಸ ಮಾಡ್ತಿಲ್ಲ ಎಂದು ಕಿಡಿಕಾರಿದರು.

ಈ ಬಗ್ಗೆ ಸಭೆಯಲ್ಲಿ ಕೇಳಿದ್ರೆ ದೂರು ಕೊಡುತ್ತೇವೆ ಅಂತ ಹೇಳ್ತಾರೆ. ನಂತರ ಲೀಗಲ್ ಅಡ್ವೈಸ್ ಕೇಳ್ತೇವೆ ಅಂತಾರೆ.ಹಿಂದಿನ ಮುಡಾ ಕಮಿಷನರ್ ಮತ್ತು ಅಧ್ಯಕ್ಷರ ವಿರುದ್ಧ ದೂರು ದಾಖಲಿಸಬೇಕು.ಮುಡಾದಲ್ಲಿ 50-50 ಹಂಚಿಕೆಯಾದ ನಿವೇಶನ ಸಂಖ್ಯೆ ಎಷ್ಟು ಎಂಬುದು ಲೆಕ್ಕ ಸಿಕ್ಕಿಲ್ಲ‌. ಮುಡಾದ ಬಗ್ಗೆ ಈಗಲೇ ಕ್ರಮ ತೆಗೆದುಕೊಳ್ಳದಿದ್ದರೆ ಬಹಳ ಜನರಿಗೆ ಹಾನಿಯಾಗುತ್ತದೆ ಎಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.

ಸೈಟ್ ಗಳನ್ನ ಮಾರಿದ್ದಾರೆ. ಕೊಂಡುಕೊಂಡವರ ಕಥೆ ಏನಾಗಬೇಕು. ಮೈಸೂರು ಮುಡಾ ಕಳ್ಳತನವಾಗಿದೆ ಆದ್ರು ಸಿಎಂ ಉಸಿರು ಎತ್ತುತ್ತಿಲ್ಲ. 140 ಫೈಲ್ಸ್‌ ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಯುಕ್ತದ ಟಿಪ್ಪಣಿಯಲ್ಲಿ ಇದೆ. ಅದು ಯಾರ ಸೈಟ್,ಯಾವ ಪಾರ್ಟಿಯವರದು ಎಷ್ಟು ಎಲ್ಲವನ್ನು ತಿಳಿಸಿ. ಸರ್ಕಾರಿ ಪೈಲ್ ಗಳನ್ನ ರದ್ದಿ ಅಂದುಕೊಂಡಿದ್ದಾರ. ಎಲ್ಲಾ ಪೈಲ್ ಗಳನ್ನ ಬೈರತಿ ಹೊತ್ತುಕೊಂಡು ಹೋಗಿದ್ದಾರೆ. ಯಾಕೆ ಪೊಲೀಸ್ ಕಂಪ್ಲೆಂಟ್ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಡಾ ದೂರ ಕೊಟ್ಟಿಲ್ಲ ಇದರ ಹಿಂದೆ ಕೇಸ್ ಕ್ಲೋಸ್ ಮಾಡುವ ಪ್ಲಾನ್ ಇದೆ,ಈ ವಿಚಾರವಾಗಿ ಸಿದ್ದರಾಮಯ್ಯ ಮಾದರಿಯಾಗಬೇಕಿತ್ತು,ಏನೂ ಆಗ್ಲಿಲ್ಲ ಎಂದು ವಿಶ್ವನಾಥ್ ಟೀಕಿಸಿದರು.

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್‌:ವಿಶ್ವನಾಥ್ ಆಕ್ರೋಶ Read More

ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯವರ ಮೇಲೆ ಎಫ್ಐಆರ್ ಖಂಡಿಸಿ ಪ್ರತಿಭಟನೆ

ಮೈಸೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯವರ ಮೇಲೆ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸಿರುವದನ್ನು ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ‌ ನಡೆಸಿದವು.

ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ ರಾಜ್ಯ ಒಕ್ಕಲಿಗರ ಸಂಘ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸದಸ್ಯರು ಹಾಗೂ ಒಕ್ಕಲಿಗ ಮುಖಂಡರು ಪ್ರತಿಭಟನೆ ನಡೆಸಿ ಕೂಡಲೇ ರಾಜ್ಯ ಸರ್ಕಾರ ಸ್ವಾಮೀಜಿಯವರ ಮೇಲಿನ ಕೇಸನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಒಬ್ಬ ಮುಸ್ಲಿಂ ಮಹಿಳೆ, ನಮಗೆ ಕುರಾನ್ ಮೊದಲ ಸಂವಿಧಾನ. ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನು ನಾವು ಸ್ವೀಕರಿಸಲ್ಲ, ಎಂದು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಹೇಳಿದ್ದಕ್ಕೆ, ಶ್ರೀ ಚಂದ್ರಶೇಖರ್ ಸ್ವಾಮೀಜಿ ರವರು ಇವರಿಗೆ ಸಂವಿಧಾನ ಬೇಡ ಎಂದ ಮೇಲೆ, ಮತದಾನದ ಹಕ್ಕು ಏತಕ್ಕೆ ಎಂದು ಹೇಳಿದ್ದಾರೆ.

ಹಿಂದೆ ನಮಗೆ ಸ್ವಾತಂತ್ರ್ಯ ಸಿಕ್ಕಿ ಪಾಕಿಸ್ತಾನ ಬೇರೆಯಾದ ಮೇಲೆ, ಸಂವಿಧಾನದ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಭಾರತದಲ್ಲಿರುವ ಮುಸ್ಲಿಮರಿಗೆ ಪಾಕಿಸ್ತಾನ ಪ್ರತ್ಯೇಕ ದೇಶವಾದ ಮೇಲೆ ಮತದಾನದ ಹಕ್ಕು ಬೇಡ ಎಂದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು ಎಂದು ಒಕ್ಕಲಿಗ ಸಂಘದವರು ತಿಳಿಸಿದರು.

ಜೊತೆಗೆ ಸ್ವಾಮೀಜಿ ಅವರು ಮಾತನಾಡುವಾಗ ಮುಸ್ಲಿಂ ರಾಷ್ಟ್ರ ಪಾಕಿಸ್ತಾನದ ವಿಸ್ತೀರ್ಣಕ್ಕಿಂತ ನಮ್ಮ ದೇಶದಲ್ಲಿರುವ ವರ್ಕ್ಫ್ ಆಸ್ತಿ ವಿಸ್ತಿರ್ಣವೇ ಹೆಚ್ಚಿದೆ. ಆದ್ದರಿಂದ ಒಂದು ಭಾರತದಲ್ಲಿರುವ ಮುಸ್ಲಿಮರಿಗೆ ಮತದಾನದ ಹಕ್ಕು ಬೇಡ ಅಥವಾ ವಕ್ಫ್ ಬೋರ್ಡ್ ರದ್ದು ಮಾಡಿ ಎಂದು ಹೇಳಲು ಹೋಗಿರುವುದು ಅಷ್ಟೇ ವಿನಹಾ ಬೇರೇನೂ ಉದ್ದೇಶದಿಂದ ಹೇಳಿಲ್ಲ,ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ಪ್ರತಿಭಟನಾ ನಿರತರು ಹೇಳಿದರು.

ಕಳೆದ ತಿಂಗಳು ಸಚಿವ ಜಮೀರ್ ಅಹಮದ್ ಕೇಂದ್ರ ಮಂತ್ರಿ ಕುಮಾರಸ್ವಾಮಿಯವರ ಬಣ್ಣದ ಬಗ್ಗೆ ಮಾತನಾಡಿದ್ದರು,ಆದರೂ ಸಹ ಅವರ ಮೇಲೆ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸದೆ, ಸ್ವಾಮೀಜಿಯವರ ಮೇಲೆ ಕೇಸು ದಾಖಲಿಸಿರುವುದನ್ನು ನೋಡಿದರೆ ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ತಕ್ಷಣ ಸ್ವಾಮೀಜಿಯವರ ಮೇಲೆ ದಾಖಲಿಸಿರುವ ಎಫ್ಐಆರ್ ವಾಪಾಸು ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಒಕ್ಕಲಿಗ ಸಂಘಟನೆಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಲತ ರಂಗನಾಥ್, ಶಿವಲಿಂಗಯ್ಯ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಚೇತನ್, ಮಂಜುನಾಥ್, ರಘುರಾಂ, ಚರಣ್ ರಾಜ್, ನಾಗಣ್ಣ, ವರಕೂಡು ಕೃಷ್ಣೇಗೌಡ, ರಾಮಕೃಷ್ಣ, ಆಟೋ ಮಹದೇವು, ನಾಗರಾಜು, ಆನಂದ್ , ಲಕ್ಷ್ಮೀ, ಕೆ ಎಸ್ ಆರ್ ಟಿ ಸಿ ಬಸವರಾಜು, ಪ್ರಕಾಶ್, ಹನುಮಂತಯ್ಯ, ಗಿರೀಶ, ಮಂಜುಳಾ,ಭಾಗ್ಯಮ್ಮ, ನೇಹಾ, ರಾಮಣ್ಣ, ರವಿ ಒಲಂಪಿಯಾ, ಪ್ರದೀಪ್, ಚಂದ್ರಶೇಖರ್, ಪರಿಸರ ಚಂದ್ರು, ಕುಮಾರ್ ಗೌಡ, ಹೊಂಬೇಗೌಡ, ಸ್ವಾಮಿ, ದರ್ಶನ್ ಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯವರ ಮೇಲೆ ಎಫ್ಐಆರ್ ಖಂಡಿಸಿ ಪ್ರತಿಭಟನೆ Read More