ಕಾಯಕದಲ್ಲಿ ನಿಷ್ಠೆ ,ಶ್ರದ್ಧೆ, ಶತತ ಪರಿಶ್ರಮದಿಂದ ಅಭಿವೃದ್ಧಿ ಸಾಧ್ಯ: ಬಸವಯೋಗಿಪ್ರಭುಗಳು

ನಂಜನಗೂಡು: ಕಾಯಕದಲ್ಲಿ ನಿಷ್ಠೆ ,ಶ್ರದ್ಧೆ, ಶತತ ಪರಿಶ್ರಮದಿಂದ ಮನುಷ್ಯ ಅಭಿವೃದ್ಧಿಯತ್ತ ಸಾಗಬಹುದು ಎಂದು
ಶ್ರೀ ಬಸವಯೋಗಿಪ್ರಭುಗಳು ನುಡಿದರು.

ನಂಜನಗೂಡಿನ ಆರ್ ಪಿ ರಸ್ತೆಯಲ್ಲಿ ನೂತನ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸಸ್ ಅನ್ನು ಶ್ರೀ ಬಸವಯೋಗಿಪ್ರಭುಗಳು ಅದ್ದೂರಿ,ಆಡಂಬರವಿಲ್ಲದೆ ಸರಳವಾಗಿ ಉದ್ಘಾಟಿಸಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.

ಲಿಂಗಾಯತ ಧರ್ಮದಲ್ಲಿ ಯಾವುದೇ ಮೂಢನಂಬಿಕೆ ಇಲ್ಲದೆ ಪ್ರತಿಯೊಬ್ಬ ಲಿಂಗಾಯತರು ಬಸವಾದಿ ಶರಣರ ನಿಜಾಚರಣೆಯನ್ನು ಆಚರಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಈ ವೇಳೆ ಎಲ್ಲರಿಗೂ ವಿಭೂತಿ ಧಾರಣೆ ಮಾಡುವುದರ ಮೂಲಕ ಆಶೀರ್ವಚನ ನೀಡಿದರು.

ಬಸವ ಭಕ್ತರಾದ ಬಸವೇಶ್ವರ ಸೂಪರ್ ಮಾರ್ಕೆಟ್ ಮಾಲಿಕ ಮಹದೇವಸ್ವಾಮಿ ಅವರು ಆರ್ ಪಿ ರಸ್ತೆಯಲ್ಲಿ ನೂತನವಾಗಿ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸಸ್ ಪ್ರಾರಂಭಿಸಿದ್ದಾರೆ.

ಯಾವುದೇ ಆಡಂಬರ ಮತ್ತು ಮೂಢನಂಬಿಕೆ ಇಲ್ಲದೆ ಶ್ರೀ ಬಸವಯೋಗಿಪ್ರಭುಗಳು ಬಸವೇಶ್ವರ ಮತ್ತು ಅಕ್ಕಮಹಾದೇವಿ ಅವರುಗಳ ಭಾವಚಿತ್ರಕ್ಕೆ ವಿಭೂತಿ ಧಾರಣೆ ಪುಷ್ಪ ನಮನ ಸಲ್ಲಿಸಿ, ಬಸವಾದಿ ಶರಣರ ವಚನ ಪಠಣ ಮಾಡುವುದರ ಮೂಲಕ ಅಂಗಡಿ ಉದ್ಘಾಟನೆ ನೆರವೇರಿಸಿದರು.

ಈ ವೇಳೆ ಮಹದೇವಸ್ವಾಮಿ ,ಮಹೇಶ್ವರಿ, ರತ್ನಮ್ಮ ,ಸಿದ್ದಾರ್ಥ,ವಚನ,ಸ್ವಾಮಿ ಹಸಗೂಲಿ,ಡೈರಿ ಶಿವಕುಮಾರ್ ,ಆನಂದ್ ಸಿದ್ದಮಲ್ಲು ಮತ್ತಿತರ ಹಲವಾರು ಭಕ್ತರು ಉಪಸ್ಥಿತರಿದ್ದರು.

ಕಾಯಕದಲ್ಲಿ ನಿಷ್ಠೆ ,ಶ್ರದ್ಧೆ, ಶತತ ಪರಿಶ್ರಮದಿಂದ ಅಭಿವೃದ್ಧಿ ಸಾಧ್ಯ: ಬಸವಯೋಗಿಪ್ರಭುಗಳು Read More

ಬಸವಣ್ಣನವರ ಬಗ್ಗೆ ಯತ್ನಾಳ್ ಹೇಳಿಕೆಖಂಡಿಸಿದ:ಬಸವಯೋಗಿ ಪ್ರಭು ಸ್ವಾಮೀಜಿ

ಮೈಸೂರು: ಬಸವನಗೌಡ ಪಾಟೀಲ್ ಯತ್ನಾಳ ಎಂದು ಹೆಸರಿಟ್ಟುಕೊಂಡು ಬಸವಣ್ಣನವರ ಆಳ ಗೊತ್ತಿಲ್ಲದೆ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶ್ರೀ ಬಸವಯೋಗಿಪ್ರಭುಸ್ವಾಮೀಜಿ ಎಚ್ಚರಿಸಿದ್ದಾರೆ.

ಪುರೋಹಿತ ಷಾಹಿಗಳ ಹಿಂಬಾಲಕರಂತೆ ಕಲ್ಯಾಣದ ಶರಣರಿಗೆ ಹಿಂಸೆ ಕೊಟ್ಟವರೊಂದಿಗೆ ಸೇರಿಕೊಂಡು ಲಿಂಗಾಯತ ಧರ್ಮದ ವಿರೋಧಿ ಬಸವನಗೌಡ ಪಾಟೀಲ್ ಯತ್ನಾಳ ರಾಜಕೀಯ ತೆವಲಿಗಾಗಿ ದ್ವೇಷದ ಹೇಳಿಕೆಗಳನ್ನು ನೀಡಿ ಮಾನವರ ನಡುವೆ ಸಂಘರ್ಷ ಹುಟ್ಟಿಸುವ ಮತ್ತು ಪ್ರಚೋದನಾ ಹೇಳಿಕೆ ನೀಡುತ್ತಿರುವ ಯತ್ನಾಳ ಬಸವಣ್ಣನವರ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯುವ ಮೂಲಕ ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು
ಸ್ವಾಮೀಜಿ ಆಗ್ರಹಿಸಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್ ರ ನಾಲಿಗೆ ಜೊತೆ ಮೆದುಳು ಹಾಳಾಗಿರಬಹುದು ಎನಿಸುತ್ತಿದೆ, ಆದ್ದರಿಂದಲೇ ವಿಶ್ವಗುರು ಬಸವಣ್ಣನವರು ನದಿಗೆ ಜಿಗಿದರು ಎಂಬಂತೆ ಬುದ್ದಿಹೀನನಾಗಿ ಮಾತನಾಡಿದ್ದಾರೆ ಎಂದು
ಶ್ರೀ ಬಸವಯೋಗಿ ಪ್ರಭುಸ್ವಾಮೀಜಿ ಕಿಡಿಕಾರಿದ್ದಾರೆ.

ನಿಮ್ಮ ನಿಮ್ಮ ದ್ವೇಷದ ರಾಜಕಾರಣಕ್ಕಾಗಿ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವುದು ಯತ್ನಾಳರಿಗೆ ಶೋಭೆ ತರುವುದಿಲ್ಲ, ಅಹಂಕಾರ ಹೆಚ್ಚಾದಾಗ ಜ್ಞಾನ ಹಾಳಾಗುತ್ತದೆ ಯಾತ್ನಾಳರಿಗೂ ನಾನತ್ವ ಹೆಚ್ಚಾಗಿ ಜ್ಞಾನ ಕೆಟ್ಟು ಅಜ್ಞಾನ ತುಂಬಿದೆ ಎನಿಸುತ್ತಿದೆ,ಕೂಡಲೆ ತಮ್ಮ ತಪ್ಪನ್ನು ತಿದ್ದಿಕೊಂಡು ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

ಬಸವಣ್ಣನವರ ಬಗ್ಗೆ ಯತ್ನಾಳ್ ಹೇಳಿಕೆಖಂಡಿಸಿದ:ಬಸವಯೋಗಿ ಪ್ರಭು ಸ್ವಾಮೀಜಿ Read More