ಚಿಕ್ಕ ವಯಸ್ಸಲ್ಲೇ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿದ್ದ ಶಂಕರರು:ರಾಕೇಶ್ ಭಟ್
ಮೈಸೂರು: ಶಂಕರಾಚಾರ್ಯರು 8ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ 16ನೇ ವಯಸ್ಸಿಗೆ ಉಪನಿಷತ್ತುಗಳ ಮೇಲೆ ಭಾಷ್ಯ, ಸ್ತೋತ್ರಗಳು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದರು ಎಂದು ರಾಮಕೃಷ್ಣ ಶಾರದಾದೇವಿ ವಿಪ್ರ ವೃಂದದ ಅಧ್ಯಕ್ಷ ರಾಕೇಶ್ ಭಟ್ ನುಡಿದರು.
ಅತೀ ಚಿಕ್ಕ ವಯಸ್ಸಿನಲ್ಲೇ ದೇಶವನ್ನು ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿದವರು ಎಂದು ಬಣ್ಣಿಸಿದರು.
ರಾಮಕೃಷ್ಣ ಶಾರದಾದೇವಿ ವಿಪ್ರವೃಂದದ ವತಿಯಿಂದ ರಾಮಕೃಷ್ಣನಗರದಲ್ಲಿ ಶಂಕರ ಜಯಂತಿ ಪ್ರಯುಕ್ತ ಭಾನುವಾರ ಸಂಜೆ ಶಂಕರಾಚಾರ್ಯರ ಪ್ರತಿಮೆಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ರಾಕೇಶ್ ಭಟ್,ಅದ್ವೈತ ತತ್ವದ ಮೂಲಕ ಎಲ್ಲಾ ಮನುಷ್ಯರು ಬ್ರಹ್ಮನ ಭಾಗವೇ ಆಗಿರುವುದರ ಬಗ್ಗೆ ಅರಿವು ಮೂಡಿಸಿದ್ದರು. ಭಾರತದ ಆಧ್ಯಾತ್ಮ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಧಾರ್ಮಿಕವಾಗಿಯೂ ದೊಡ್ಡ ಕೊಡುಗೆ ಅವರದ್ದಾಗಿದೆ. ಅನ್ಯ ಮತಗಳ ಪ್ರಭಾವ ತಗ್ಗಿಸಲು ಸಾಕ್ಷಾತ್ ಶಿವನೇ ಶಂಕರನಾಗಿ ಧರೆಗಿಳಿದಿರುವ ನಂಬಿಕೆ ಹಿಂದೂಗಳಲ್ಲಿದೆ ಎಂದು ನುಡಿದರು.
ಸಾಯಿಬಾಬಾ ದೇವಸ್ಥಾನದ ಮುಂಭಾಗ ಶಂಕರಾಚಾರ್ಯರ ಮೂರ್ತಿ ಹೊತ್ತ ವಾಹನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ನಂ. ಶ್ರೀಕಂಠಕುಮಾರ್,ನವೀನ್ ಕುಮಾರ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ ಚಾಲನೆ ನೀಡಿದರು.
ರಾಮಕೃಷ್ಣ ನಗರದ ದಕ್ಷಿಣೇಶ್ವರ ಮುಖ್ಯ ರಸ್ತೆಯಲ್ಲಿ ಹರ ಹರ ಶಂಕರ ಜಯ ಜಯ ಶಂಕರ ಘೋಷಣೆಯೊಂದಿಗೆ ಮೆರವಣಿಗೆ ಸಾಗಿ, ಒಳ ರಸ್ತೆಗಳಲ್ಲಿ ಚಲಿಸಿ ಯೋಗ ಉದ್ಯಾನವನದಲ್ಲಿ ಪ್ರಸಾದ ವಿನಿಯೋಗದೊಂದಿಗೆ ಅಂತ್ಯಗೊಂಡಿತು.
ವಿಪ್ರ ಮಹಿಳಾ ಸಂಗಮ, ನಾಗಲಕ್ಷ್ಮಿ, ಶ್ರೀದೇವಿ, ವೇದವ್ಯಾಸ ಭಜನಾ ಮಂಡಳಿಗಳು ಹಾಗೂ ಶನಿಮಹಾತ್ಮ ದೇವಸ್ಥಾನದ ಭಕ್ತ ಮಹಿಳೆಯರು ಶಂಕರಾಚಾರ್ಯ ವಿರಚಿತ ಭಜನೆಗಳನ್ನು ಹಾಡಿದರು.
ರಾಮಕೃಷ್ಣ ಶಾರದಾದೇವಿ ವಿಪ್ರ ವೃಂದದ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಕಾರ್ಯದರ್ಶಿ ಎ.ರಾಘವೇಂದ್ರ, ಮಹಿಳಾ ಮುಖಂಡರಾದ ವಿಜಯಾ ಮಂಜುನಾಥ್, ಶಾಂತ, ಸೌಭಾಗ್ಯಮೂರ್ತಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ರಾಮಾನುಜ ಸಹಕಾರ ಬ್ಯಾಂಕಿನ ನಿರ್ದೇಶಕ ಟಿ.ಎಸ್. ಅರುಣ್, ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ
ಕೃಷ್ಣ ಹೆಗ್ಡೆ, ಕೊಕ್ಕಡ ವೆಂಕಟರಮಣ ಭಟ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ಎಸ್.ರಂಗನಾಥ್, ಬ್ರಾಹ್ಮಣ ಮುಖಂಡರಾದ ಸತ್ಯನಾರಾಯಣ, ಮಿರ್ಲೆ ಫಣೀಶ್, ಆನಂದ್ ಶರ್ಮಾ, ಶ್ರೀಕಾಂತ್ ಕಶ್ಯಪ್, ಕುಂಚಿಟಿಗರ ಸಂಘದ ನಿರ್ದೇಶಕ ಎನ್.ದೀಪಕ್, ಬಿಜೆಪಿ ಮುಖಂಡರಾದ ಚಂದ್ರಶೇಖರ ಸ್ವಾಮಿ, ಸಿದ್ದೇಶ್, ತ್ಯಾಗರಾಜ್ ನಾಯಕ್, ರಂಗೇಶ್, ದೇವರಾಜ್, ಕಾಂತರಾಜ ಅರಸು, ಗೋಪಾಲ್, ಪುಟ್ಟಮ್ಮಣ್ಣಿ, ಮಂಜುಳಾ, ವಿಜಯಾ ನಂಜುಂಡಯ್ಯ, ವಿಶ್ವ ಹಿಂದೂ ಪರಿಷತ್ ನಗರ ಉಪಾಧ್ಯಕ್ಷರಾದ ಜಗದೀಶ್ ಹೆಬ್ಬಾರ್, ಕಾಂಗ್ರೆಸ್ ಮುಖಂಡ ರಾಜೇಶ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ರವಿ ಉತ್ತಪ್ಪರವರು ರಥದ ಸಾರಥಿಯಾಗಿ ಸೇವೆ ಸಲ್ಲಿಸಿದರು.
ಚಿಕ್ಕ ವಯಸ್ಸಲ್ಲೇ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿದ್ದ ಶಂಕರರು:ರಾಕೇಶ್ ಭಟ್ Read More