ಬಲವಂತವಾಗಿ ಕರೆದೊಯ್ದು ಗೃಹಿಣಿಗೆ ಲೈಂಗಿಕ ಕಿರುಕುಳ
ಮೈಸೂರು: ತನ್ನ ಜೊತೆ ಸಹಕರಿಸದಿದ್ದರೆ ನಿನ್ನ ಹೆಸರು ಬರೆದಿಟ್ಟು ಬಿಲ್ಡಿಂಗ್ ನಿಂದ ಹಾರಿ ಸಾಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿ
ಗೃಹಿಣಿಯನ್ನ ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮೈಸೂರಿನ ಪಾಪಣ್ಣ ಲೇಔಟ್ ನಲ್ಲಿ ನಡೆದಿದೆ.
ಈ ಕೀಚಕನ ಕಿರುಕುಳದಿಂದ ನೊಂದ ಗೃಹಿಣಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬಾಡಿಗೆ ನೀಡಿದ ಮನೆ ಮಾಲೀಕನ ವಿರುದ್ದ ಗೃಹಿಣಿ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾಪಣ್ಣ ಲೇಔಟ್ ನ ಮೋಹನ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಮೋಹನ್ ಅವರ ಮನೆಯಲ್ಲಿ 4 ವರ್ಷಗಳಿಂದ ನೊಂದ ಗೃಹಿಣಿ ಸಂಸಾರ ಸಮೇತ ಬಾಡಿಗೆಗೆ ಇದ್ದಾರೆ. ಕಳೆದ ವರ್ಷದಿಂದ ಮಾಲೀಕ ಮೋಹನ್ ಗೃಹಿಣಿಗೆ ಮೆಸೇಜ್ ಮಾಡುವಂತೆ ದುಂಬಾಲು ಬಿದ್ದಿದ್ದಾನೆ.
ಮೋಹನ್ ನೀಡುತ್ತಿದ್ದ ಕಿರುಕುಳ ಗಂಡನಿಗೆ ಗೊತ್ತಾಗಿದೆ.ಈ ವಿಚಾರದಲ್ಲಿ ಗಲಾಟೆ ಆಗಿದೆ.ಎರಡು ದಿನಗಳ ಹಿಂದೆ ಗೃಹಿಣಿ ದೇವಸ್ಥಾನದ ಬಳಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ಮೋಹನ್ ಗಾಡಿ ಹತ್ತುವಂತೆ ಒತ್ತಾಯಿಸಿದ್ದಾನೆ.ಬರದೇ ಇದ್ದರೆ ಬಿಲ್ಡಿಂಗ್ ನಿಂದ ಬಿದ್ದು ಸಾಯುವುದಾಗಿ ಬೆದರಿಸಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.ಮೋಹನ್ ವರ್ತನೆಗೆ ಬೇಸತ್ತ ಗೃಹಿಣಿ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈಗ ಪ್ರಕರಣ ದಾಖಲಾಗಿದೆ,ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೊ ಕಾದು ನೋಡಬೇಕಿದೆ.