ಡೆಲಿವರಿ ನೆಪದಲ್ಲಿ ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ:ಆರೋಪಿ ಅರೆಸ್ಟ್

ಬೆಂಗಳೂರು: ಆರ್ಡರ್ ಮಾಡಿದ ವಸ್ತು ತಲುಪಿಸಲು ಬಂದ ಡೆಲಿವರಿ ಬಾಯ್ ಬ್ರೆಜಿಲ್ ಮೂಲದ ಮಾಡೆಲ್‌ಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಆರ್‌ಟಿ ನಗರದಲ್ಲಿ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ದಿನಸಿ ವಸ್ತುಗಳನ್ನು ತಲುಪಿಸಲು ಬಂದ ಬ್ಲಿಂಕಿಟ್ ಡೆಲಿವರಿ ಏಜೆಂಟ್, 21 ವರ್ಷದ ಬ್ರೆಜಿಲ್ ಮೂಲದ ಮಾಡೆಲ್‌ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಸಂತ್ರಸ್ತೆಯ ಉದ್ಯೋಗದಾತರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕುಮಾರ್ ರಾವ್ ಪವಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೆಯೂ ಮುಂಬಯಯಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್‌ ಹಣ ಪಡೆಯುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿತ್ತು.

ಬ್ರೆಜಿಲ್ ಮಾಡೆಲ್‌ಗೆ ಲೈಂಗಿಕ ಕಿರುಕುಳ ನೀಡಿದ ಅರೆಕಾಲಿಕ ಬ್ಲಿಂಕಿಟ್ ಡೆಲಿವರಿ ಏಜೆಂಟ್ ನನ್ನು ಪೊಲೀಸರು ಬಂಧಿಸಿದ್ದಾರೆ‌.

ಮಾಡೆಲ್ ತಂಗಿದ್ದ
ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಡೆಲಿವರಿ ಬಾಯ್ ವರ್ತನೆ ಸೆರೆಯಾಗಿದ್ದು,ಆರ್.ಟಿ.ನಗರ ಪೊಲೀಸರು ಆತನನ್ನು ಬಂಧಿಸಿ ಪರಪ್ಪನ ಜೈಲಿಗೆ ಅಟ್ಟಿದ್ದಾರೆ‌

ಆರೋಪಿ ಕುಮಾರ್ ರಾವ್ ಪವಾರ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಬ್ಲಿಂಕಿಟ್‌ನಲ್ಲಿ ಅರೆಕಾಲಿಕ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಾಬಾಸಾಹೇಬ್ ನೇಮಗೌಡ ತಿಳಿಸಿದ್ದಾರೆ.

ಡೆಲಿವರಿ ನೆಪದಲ್ಲಿ ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ:ಆರೋಪಿ ಅರೆಸ್ಟ್ Read More

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಅರೆಸ್ಟ್

ಮೈಸೂರು: ಮಕ್ಕಳಿಗೆ‌ ಬುದ್ದಿ ಹೇಳಿ‌ ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಬೇಕಾದ ನಾವು ದೇವರೆಂದೇ ಪೂಜಿಸುವ ಶಿಕ್ಷಕ ಬುದ್ದಿಗೇಡಿ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೈಸೂರು ವಿಜಯನಗರ ಠಾಣೆ ಪೊಲೀಸರು ಶಿಕ್ಷಕನೊಬ್ಬನನ್ನು ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳದ ಬಗ್ಗೆ ಬರೋಬ್ಬರಿ 20 ವಿದ್ಯಾರ್ಥಿನಿಯರು ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮೂಲತಃ ತಿ.ನರಸೀಪರ ನಿವಾಸಿ ಹಾಗೂ ನಗರದ ವಿಜಯನಗರದಲ್ಲಿನ ಖಾಸಗಿ ಅನುದಾನಿತ ಪ್ರೌಢಶಾಲೆಯಲ್ಲಿ ತೋಟಗಾರಿಕೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಎಂ.ಶಿವಮೂರ್ತಿ ಎಂಬಾತನನ್ನು ಬಂಧಿಸಲಾಗಿದೆ.

ಕೃತ್ಯದ ಬಗ್ಗೆ ಕೂಡಲೇ ಇಲಾಖೆಯ ಗಮನಕ್ಕೆ ತರದೆ ತಡ ಮಾಡಿದ ಆರೋಪದಲ್ಲಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧವೂ ದೂರು ದಾಖಲಾಗಿದೆ.

ಪ್ರೌಢಶಾಲೆ ವ್ಯಾಸಂಗಕ್ಕಾಗಿ ಬಿಸಿಎಂ ಹಾಗೂ ಇನ್ನಿತರ ಸರ್ಕಾರಿ ಹಾಸ್ಟೆಲ್ಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಉಳಿದುಕೊಂಡಿದ್ದ ವಿದ್ಯಾರ್ಥಿನಿಯರು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರು.

ಕಳೆದ ಕೆಲ ದಿನಗಳ ಹಿಂದಿನಿಂದಲೂ ಶಿಕ್ಷಕ ಶಿವಮೂರ್ತಿ, ಮಕ್ಕಳಿಗೆ ಆಗಿಂದಾಗ್ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈ ಸಂಬಂದ ಮಾರ್ಚ್ 14 ರಂದು ಅಲ್ಲಿನ ಸುಮಾರು 20 ವಿದ್ಯಾರ್ಥಿನಿಯರು ಶಾಲೆಯ ಶಿಕ್ಷಕಿಯೊಬ್ಬರಿಗೆ ಮಾಹಿತಿ ನೀಡಿದ್ದಾರೆ.

ಅವರು ತಕ್ಷಣವೇ ಮುಖ್ಯ ಶಿಕ್ಷಕರಿಗೆ ವಿಚಾರ ತಿಳಿಸಿದ್ದಾರೆ.ಈ ಸಂಬಂದ ಸಂತ್ರಸ್ತ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ವರದಿ ನೀಡುವಂತೆ ಅವರು ಶಿಕ್ಷಕಿಯರಿಗೆ ಜವಾಬ್ದಾರಿ ನೀಡಿದ್ದಾರೆ.

ಅವರು ಮಾ.17 ರಂದು ಮುಖ್ಯ ಶಿಕ್ಷಕರಿಗೆ ವರದಿ ನೀಡಿದ್ದಾರೆ.ಆದರೆ ಶಿಕ್ಷಕ ಶಿವಮೂರ್ತಿ ವಿದ್ಯಾರ್ಥಿನಿಯರ ಆರೋಪವನ್ನು ನಿರಾಕರಿಸಿದ್ದಾರೆ.

ಆದರೂ ಈ ಸಂಬಂದ ಮುಖ್ಯ ಶಿಕ್ಷಕರು ಸಂಸ್ಥೆಯ ಆಡಳಿತ ಮಂಡಳಿಗೆ ಮಕ್ಕಳು ಬರೆದಿದ್ದ ದೂರು ಪತ್ರ ಹಾಗೂ ಶಿಕ್ಷಕಿಯರು ನೀಡಿದ್ದ ವರದಿಯನ್ನು ಸಲ್ಲಿಸಿದ್ದಾರೆ.

ಈ ನಡುವೆ ಅಲ್ಲಿನ ಮಕ್ಕಳಲ್ಲಿ ಕೆಲವರು ಮಕ್ಕಳ ಸಹಾಯವಾಣಿಗೆ ವಿಚಾರ ಮುಟ್ಟಿಸಿದ್ದಾರೆ.

ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಡಿಡಿಪಿಐಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರೌವೃತ್ತರಾದ ಡಿಡಿಪಿಐ ಜವರೇಗೌಡ ಅವರು ಸಂಬಂದಪಟ್ಟ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅವರಿಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.

ಕೂಡಲೇ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಸರಿಯಾದ ಸಮಯಕ್ಕೆ ವಿಚಾರ ಮುಟ್ಟಿಸದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ಏ.4 ರಂದು ಶಿಕ್ಷಕ ಶಿವಮೂರ್ತಿ ಹಾಗೂ ಮುಖ್ಯ ಶಿಕ್ಷಕ ವಿರುದ್ಧ ದೂರು ದಾಖಲಿಸಿದ್ದಾರೆ.

ಈಗ ಶಿವಮೂರ್ತಿ ಅವರ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಅನುದಾನಿತ ಶಾಲೆಯಾದ ಕಾರಣ ನಾವು ನೇರವಾಗಿ ಕ್ರಮ ತಗೆದುಕೊಳ್ಳಲು ಬರುವುದಿಲ್ಲ. ಬಿಇಒ ನೀಡಿರುವ ವರದಿಯ ಅನ್ವಯ ಶಿವಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳವಂತೆ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆಯಲಾಗುವುದು,ಅವರು ಆತನ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ನಮಗೆ ವರದಿ ಮೂಲಕ ತಿಳಿಸಲಿದ್ದಾರೆ ಎಂದು ಡಿಡಿಪಿಐ ಎಸ್.ಟಿ.ಜವರೇಗೌಡ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಅರೆಸ್ಟ್ Read More

ಅಪ್ರಾಪ್ತ ಕ್ರೀಡಾಪಟು ಮೇಲೆ ಐದು ವರ್ಷಗಳಿಂದ 60 ಮಂದಿಯಿಂದ ಲೈಂಗಿಕ ದೌರ್ಜನ್ಯ

ಕೇರಳ: ಅಪ್ರಾಪ್ತ ಕ್ರೀಡಾಪಟು ಮೇಲೆ 5 ವರ್ಷಗಳಿಂದ 60ಕ್ಕೂ ಹೆಚ್ಚು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ಕೇರಳದ ಪಥನಾಂತಿಟ್ಟದಲ್ಲಿ ನಡೆದಿದೆ.

18 ವರ್ಷದ ಯುವತಿಯೊಬ್ಬಳು ತನ್ನ ಮೇಲೆ ಕಳೆದ ಐದು ವರ್ಷಗಳಲ್ಲಿ 60ಕ್ಕೂ ಹೆಚ್ಚು ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾಳೆ.

ಕ್ರೀಡಾಪಟು ಯುವತಿ ತನ್ನ ಕೋಚ್​ಗಳು, ಸಹಪಾಠಿಗಳು ಸೇರಿದಂತೆ 64 ಜನ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದಾಳೆ. ಆರೋಪಿಗಳ ಫೋನ್‌ಗಳಿಂದ ವಶಪಡಿಸಿಕೊಂಡ ಫೋಟೋಗಳಿಂದ 15 ಜನರನ್ನು ಬಂಧಿಸಲಾಗಿದೆ, 40 ಆರೋಪಿಗಳನ್ನು ಯುವತಿ ಗುರುತಿಸಿದ್ದಾಳೆ.

ಯುವತಿ ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಆಕೆಯ ಸಹಪಾಠಿಗಳು ಮತ್ತು ಆಕೆಯ ತರಬೇತುದಾರರು ಸೇರಿದಂತೆ 64 ವ್ಯಕ್ತಿಗಳ ವಿರುದ್ಧ 4 ಎಫ್​ಐಆರ್​ ದಾಖಲಿಸಿದ್ದಾರೆ.

5 ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಕೋಚ್​ಗಳಿಂದ ಹಾಗೂ ಸ್ವಿಮ್ಮಿಂಗ್ ಕ್ಲಾಸ್​ಗೆ ಬರುತ್ತಿದ್ದವರಿಂದ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆಕೆ ಹೇಳಿದ್ದಾಳೆ.

ಪೊಲೀಸರ ಪ್ರಕಾರ, ಅಪ್ರಾಪ್ತ ಯುವತಿ ಹೇಳಿದಂತೆ 60ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಈ ಪ್ರಕರಣದ ಐವರು ಆರೋಪಿಗಳು ಪಥನಾಂತಿಟ್ಟ ನಿವಾಸಿಗಳಾಗಿದ್ದಾರೆ.

ಆಕೆಯ ತರಬೇತುದಾರರು, ಸಹ ಕ್ರೀಡಾಪಟುಗಳು ಮತ್ತು ಸಹಪಾಠಿಗಳು ಸೇರಿದಂತೆ ಹಲವು ವ್ಯಕ್ತಿಗಳು ಆ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದಕ್ಕೆ ಪುರಾವೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪಥನಾಂತಿಟ್ಟದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪಥನಾಂತಿಟ್ಟ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪಥನಾಂತಿಟ್ಟ ಜಿಲ್ಲೆಯ ಹೊರಗಿನ ವ್ಯಕ್ತಿಗಳು ಸಹ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಹೇಳಿದೆ.

ಸಿಡಬ್ಲ್ಯೂಸಿ ಅಧ್ಯಕ್ಷರ ಪ್ರಕಾರ, ಆ ಹುಡುಗಿಗೆ 13ನೇ ವಯಸ್ಸಾದಾಗಿನಿಂದಲೂ ಆಕೆ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾಳೆ. ಇದು ಅಸಾಮಾನ್ಯ ಪ್ರಕರಣವಾದ್ದರಿಂದ, ಹೆಚ್ಚಿನ ಸಮಾಲೋಚನೆಗಾಗಿ ಅವಳನ್ನು ಮನಶ್ಶಾಸ್ತ್ರಜ್ಞರ ಬಳಿಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದಾರೆ.

ಅಪ್ರಾಪ್ತ ಕ್ರೀಡಾಪಟು ಮೇಲೆ ಐದು ವರ್ಷಗಳಿಂದ 60 ಮಂದಿಯಿಂದ ಲೈಂಗಿಕ ದೌರ್ಜನ್ಯ Read More

ವೈದ್ಯ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ:ಮನೆ ಓನರ್ ವಿರುದ್ದ ಎಫ್ಐಆರ್

ಮೈಸೂರು: ಜೆಎಸ್ ಎಸ್ ಮೆಡಿಕಲ್ ಕಾಲೇಜು ವಿಧ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮನೆ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ

ಬಾಡಿಗೆ ನೀಡಿದ್ದ ಮನೆ ಮಾಲೀಕನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಬನ್ನಿಮಂಟಪ ಜೆ ಎಸ್ ಎಸ್ ನಗರದ ನಿವಾಸಿ ಅಮಾನುಲ್ಲಾ ಖಾನ್ ವಿರುದ್ದ ಎಫ್ಐಆರ್ ದಾಖಲಾಗಿದೆ.

ಕೇರಳ ಮೂಲದ ವಿಧ್ಯಾರ್ಥಿನಿ ಅಮಾನುಲ್ಲಾ ಖಾನ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಜೂನ್ ನಲ್ಲಿ ಅಮಾನುಲ್ಲಾಖಾನ್ ಅವರ ಮನೆಯಲ್ಲಿ ಕೊಠಡಿ ಬಾಡಿಗೆ ಪಡೆದು ವೈದ್ಯ ವಿಧ್ಯಾರ್ಥಿನಿ ತಂಗಿದ್ದಳು.ಆಕೆ ಒಂಟಿಯಾಗಿದ್ದ ವೇಳೆ ಅಮಾನುಲ್ಲಾಖಾನ್ ಕೊಠಡಿಗೆ ನುಗ್ಗಿ ವಿಧ್ಯಾರ್ಥಿನಿಯ ಬಟ್ಟೆ ಹಿಡಿದು ಎಳೆದಾಡಿ ಮೊಬೈಲ್ ಕಿತ್ತು ಬಿಸಾಕಿ ನನ್ನ ಜೊತೆ ಸೆಕ್ಸ್ ಮಾಡಲು ಸಹಕರಿಸದಿದ್ದರೆ ಸಾಯಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ.

ಕೂಡಲೇ ವಿಧ್ಯಾರ್ಥಿನಿ ಅಮಾನುಲ್ಲಾ ಖಾನ್ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಮನೆಯಿಂದ ಹೊರಗೆ ಬಂದು ಆಕೆಯ ಪ್ರಿಯಕರನಿಗೆ ವಿಷಯ ತಿಳಿಸಿ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ವೈದ್ಯ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ:ಮನೆ ಓನರ್ ವಿರುದ್ದ ಎಫ್ಐಆರ್ Read More

ಸ್ವಪಕ್ಷದ ನಾಯಕಿ ಮೇಲೆ ಲೈಂಗಿಕ ದೌರ್ಜನ್ಯ: ಶಾಸಕ ಸಸ್ಪೆಂಡ್

ಆಂದ್ರಪ್ರದೇಶ: ತಮ್ಮದೇ ಪಕ್ಷದ ನಾಯಕಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶಾಸಕ ಕೊನೇಟಿ ಆದಿಮೂಲಂ ಅವರನ್ನು ಅಮಾನತು ಗೊಳಿಸಲಾಗಿದೆ.

ತಮ್ಮದೇ ಪಕ್ಷದ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವೀಡಿಯೊ ವೈರಲ್ ಆದ ಬೆನ್ನಲ್ಲೇ ಆದಿಮೂಲಂ ಮೇಲೆ ಪಕ್ಷ ಶಿಸ್ತಿನ ಕ್ರಮ ತೆಗೆದುಕೊಂಡಿದೆ.

ಕಳೆದ ಜುಲೈನಲ್ಲಿ ತಿರುಪತಿಯ ಹೋಟೆಲ್‌ನಲ್ಲಿ ತನ್ನ ಮೇಲೆ ಮೂರು ಬಾರಿ ಶಾಸಕ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

ಕೃತ್ಯ ಬಹಿರಂಗಪಡಿಸಿದರೆ ನನ್ನ ಮತ್ತು ನನ್ನ ಕುಟುಂಬದವರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಕೂಡಾ ಹಾಕಿದ್ದ ಎಂದು ಸಂತ್ರಸ್ತೆ ದೂರಿದ್ದಾಳೆ.

ಪ್ರಕರಣ ವೈರಲ್ ಆಗುತ್ತಿದ್ದಂತೆ ರಾಜಕೀಯ ಆರೋಪ, ಪ್ರತ್ಯಾರೋಪಗಳು ಪ್ರಾರಂಭವಾಗಿವೆ.ಆದರೆ ಈವರೆಗೆ ಎಫ್ಐಆರ್ ದಾಖಲಾಗಿಲ್ಲ ಮುಂದೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಸ್ವಪಕ್ಷದ ನಾಯಕಿ ಮೇಲೆ ಲೈಂಗಿಕ ದೌರ್ಜನ್ಯ: ಶಾಸಕ ಸಸ್ಪೆಂಡ್ Read More

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ

ಮೈಸೂರು: ಪತ್ನಿಯ ಮೇಲೆ ಬೇರೆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯಗಳನ್ನ ಪತಿಯೇ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಸಹ್ಯಕರ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಇಂತಹ ಹೇಯ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ

ಘಟನೆ ಸಂಬಂಧ ಪತ್ನಿ ಮುನ್ನಿ(ಹೆಸರು ಬದಲಿಸಲಾಗಿದೆ) ಪತಿ ಅಬ್ದುಲ್ ಫಾರೂಖ್,ನಜೀರ್ ಮಹಮದ್ ಹನೀಫಾ ಸೇರಿದಂತೆ 9 ಮಂದಿ ವಿರುದ್ದ ದೂರು ನೀಡಿದ್ದು‌ ಎಪ್ಐಆರ್ ದಾಖಲಾಗಿದೆ.

19 ವರ್ಷಗಳ ಹಿಂದೆ ಮುನ್ನಿ ಹಾಗೂ ಅಬ್ದುಲ್ ಫಾರೂಖ್ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅಬ್ದುಲ್ ಫಾರೂಖ್ ಮತ್ತೊಬ್ಬ ಮಹಿಳೆ ಜೊತೆ ಸಂಭಂಧ ಬೆಳೆಸಿ ಪತ್ನಿಯನ್ನ ನಿರ್ಲಕ್ಷಿಸಿದ್ದಾನೆ.

ಜೀವನೋಪಾಯಕ್ಕಾಗಿ ಮುನ್ನಿ ಹೈದರಾಬಾದ್ ಗೆ ತೆರಳಿ ನಂತರ ಮೈಸೂರಿಗೆ ಹಿಂದಿರುಗಿ ಕಲ್ಯಾಣಗಿರಿಯಲ್ಲಿ ಮನೆ ಬಾಡಿಗೆ ಪಡೆದು ಜೀವಿಸುತ್ತಿದ್ದಾರೆ.

ಜೀವನಾಂಶಕ್ಕಾಗಿ ಮುನ್ನಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅಬ್ದುಲ್ ಫಾರೂಖ್ ಪಾಲಿಸಿಲ್ಲ.

ಜೀವನೋಪಾಯಕ್ಕಾಗಿ ಮುನ್ನಿ ಸಾಕಷ್ಟು ಸಾಲ ಮಾಡಿದ್ದು,ಎರಡು ತಿಂಗಳ ಹಿಂದೆ ಸಾಲದ ಹಣ ಪಡೆಯಲು ಹರ್ಷದ್ ಖಾನ್ ಎಂಬಾತ ಮನೆಗೆ ಬಂದಿದ್ದಾನೆ.

ಈ ವೇಳೆ ಮನೆಗೆ ನುಗ್ಗಿದ ಅಬ್ದುಲ್ ಫಾರೂಖ್,ನಾಸಿರ್,ಮಹಮದ್ ಹನೀಫ್ ಹಾಗೂ ಇತರರು ಮುನ್ನಿ ಹಾಗೂ ಹರ್ಷದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ ಮುನ್ನಿಯ ಬಟ್ಟೆಗಳನ್ನ ಹರಿದುಹಾಕಿ ವಿಡಿಯೋ ಚಿತ್ರೀಕರಿಸಿದ್ದಾರೆ.ಅಬ್ದುಲ್ ಫಾರೂಖ್ ಜೊತೆ ಬಂದಿದ್ದ ನಾಜಿರ್ ಎಂಬಾತ ಮುನ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ದೃಶ್ಯಗಳನ್ನ ಪತಿ ಅಬ್ದುಲ್ ಫಾರೂಖ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಕೆಲ ಸಮಯದಲ್ಲಿ ವಿಡಿಯೋ ಡಿಲೀಟ್ ಮಾಡಿ ನಂತರ ಎಡಿಡ್ ಮಾಡಿ ಮತ್ತೆ ಅಪ್ ಲೋಡ್ ಮಾಡಿ ಪತ್ನಿಯನ್ನ ತೇಜೋವಧೆ ಮಾಡಿದ್ದಾನೆ.

ಇದೆಲ್ಲದರಿಂದ ನೊಂದ ಮುನ್ನಿ ಉದಯಗಿರಿ ಠಾಣೆಗೆ ದೂರು ನೀಡಿದ್ದಾರೆ.
ಉದಯಗಿರಿ ಠಾಣೆ ಪೊಲೀಸರು ಅಬ್ದುಲ್ ಫಾರೂಕ್, ನಾಜೀರ್,ಮಹಮದ್ ಹನೀಫ್ ಸೇರಿ 6 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ Read More

ಯೋಗ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ: ಯೋಗ ಗುರು ಅರೆಸ್ಟ್

ಚಿಕ್ಕಮಗಳೂರು: ಪ್ರತಿದಿನ ಒಂದಲ್ಲಾ ಒಂದು ಲೈಂಗಿಕ ದೌರ್ಜನ್ಯದ ಬಗ್ಗೆ ಸುದ್ದಿ ಬರುತ್ತಲೇ ಇರುತ್ತದೆ,ಆದರೂ ವಿದ್ಯಾವಂತ ಮಹಿಳೆಯರೂ ಕೂಡ ಹೀಗೆ‌ ಮೋಸ ಹೋಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ದುರ್ಧೈವದ ಸಂಗತಿಯಾಗಿದೆ.

ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಯೋಗ ಕಲಿಯಲು ಬಂದ ಎನ್ ಆರ್ ಐ ವೈದ್ಯೆಯ ಮೇಲೆ ಯೋಗ ಗುರು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಆಶ್ರಮವೊಂದರಲ್ಲಿ ಈ ಕೃತ್ಯ ನಡೆದಿದ್ದು, ಸಂತ್ರಸ್ತೆ ವೈದ್ಯೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಯೋಗಗುರು ಪ್ರದೀಪ್ ನನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

3 ತಿಂಗಳ ಹಿಂದೆ ಆಶ್ರಮಕ್ಕೆ ಯೋಗ, ಧ್ಯಾನ ಕಲಿಯಲು ಬಂದಿದ್ದ ಅಮೆರಿಕ ಪೌರತ್ವ ಪಡೆದಿರುವ ಪಂಜಾಬ್ ಮೂಲದ ವೈದ್ಯೆ ಮೇಲೆ ಯೋಗಗುರು ಪ್ರದೀಪ್​ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಲಾಗಿದೆ.

ಯೋಗಗುರು ಪ್ರದೀಪ್ ವಿರುದ್ಧ ಎನ್ಆರ್​ಐ ವೈದ್ಯೆ ಟ್ವಿಟರ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರದೀಪನ ಆಶ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದುಕೊಂಡಿದ್ದ ವೈದ್ಯೆ, 3 ತಿಂಗಳ ಹಿಂದೆ ಆಶ್ರಮಕ್ಕೆ ಬಂದು ನೆಲೆಸಿದ್ದರು.

ಯೋಗಗುರು ಪ್ರದೀಪ್ ಕೇವಲ ಫೌಂಡೇಷನ್‌ ಮೂಲಕ ಯೋಗ ತರಬೇತಿ ನೀಡುತ್ತಿದ್ದು, ಇಲ್ಲಿಗೆ ದೇಶ, ವಿದೇಶದ ಅನೇಕ ಮಂದಿ ಬಂದು ಯೋಗ ಶಿಕ್ಷಣ ಪಡೆಯುತ್ತಾರೆ.

ಆನ್ ಲೈನ್ ಮೂಲಕವೂ ಯೋಗ ತರಬೇತಿ ನೀಡಲಾಗುತ್ತದೆ,ಪಂಜಾಬ್‌ ಮೂಲದ ವೈದ್ಯೆ 2020ರಲ್ಲಿ ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದ ಸಂದರ್ಭದಲ್ಲಿ ಅವರ ಸ್ನೇಹಿತರಿಂದ ಈ ಯೋಗ ಕೇಂದ್ರದ ಬಗ್ಗೆ ಮಾಹಿತಿ ಪಡೆದು ಆನ್ಲೈನ್‌ ತರಗತಿಗೆ ಸೇರಿಕೊಂಡಿದ್ದರು.

ನಂತರ ಇಲ್ಲಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳುವಂತೆ ಪ್ರದೀಪ್‌ ಹೇಳಿದ್ದರಿಂದ ಆಕೆ ಚಿಕ್ಕಮಗಳೂರಿಗೆ ಬಂದು ಆತನ ಕೇಂದ್ರಕ್ಕೆ ಭೇಟಿ ನೀಡಿ 20 ದಿನ ತರಗತಿಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಆ ವೈದ್ಯೆಯ ಜತೆಗೆ ಸಲುಗೆ ಬೆಳೆಸಿಕೊಂಡ ಗುರು ಆತ್ಮೀಯನಾದ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ‌

ನಂತರ 2020-21ರಲ್ಲೂ ಇಲ್ಲಿಗೆ ಬಂದು ಯೋಗ ತರಗತಿಯಲ್ಲಿ ಆಕೆ ಭಾಗಿಯಾಗಿದ್ದಾರೆ.ಆಗ ಕೂಡಾ ಯೋಗದ ಜತೆಗೆ ದೈಹಿಕ ಸಂಬಂಧ ಬೆಳೆಸಿದ್ದ‌ ಗುರು.

ಯೋಗಗುರು ಪ್ರದೀಪ್ ಇತರರ ಜತೆಗೂ ಇದೇ ರೀತಿ ಸಂಬಂಧ ಹೊಂದಿದ್ದಾನೆ ಎಂಬುದು ವೈದ್ಯಗೆ ಗೊತ್ತಾಗಿದೆ.

ನೊಂದ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು,ಈಗ ಯೋಗಗುರು ಪ್ರದೀಪ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಯೋಗ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ: ಯೋಗ ಗುರು ಅರೆಸ್ಟ್ Read More