ವೃದ್ದಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ ಹೊಸಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷೆ ಗೀತಾ
ಮೈಸೂರು: ಮೈಸೂರಿನ ಹೊಸ ಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷೆ ಗೀತಾ ಅವರು ಜನ್ಮ ದಿನಾಚರಣೆಯನ್ನು ವೃದ್ದಾಶ್ರಮದಲ್ಲಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ಗೀತಾ ಅವರು ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ಉತ್ತರ ಬೃಂದಾವನ ಆಶ್ರಮದ ವೃದ್ದರ ಜೊತೆ ಹಣ್ಣು ಹಂಪಲು ಅಂಚುವ ಮುಖಾಂತರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡರು.
ಜತೆಗೆ ಎಲ್ಲ ವೃದ್ದರ ಜೊತೆ ಕಾಲ ಕಳೆದು ಅವರಿಗೆ ಸಂತಸ ನೀಡಿದರು.ಮುಂದಿನ ದಿನಗಳಲ್ಲಿ ನಿರಂತರವಾಗಿ ಅವರ ಶಕ್ತಿಯಾನುಸಾರ ಸಹಾಯ ಹಸ್ತ ನೀಡುವುದಾಗಿ ಗೀತಾ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಪಿಜಿಆರ್ಎಸ್ಎಸ್ ಅಧ್ಯಕ್ಷರಾದ ಯಾದವ ಹರೀಶ್ ಹೆಚ್.ಎ, ಖಜಾಂಚಿ ಮಂಜುಳಾ ಎಸ್, ರಾಜ್ಯ ಸಂಚಾಲಕ ರಕ್ತದಾನಿ ಮಂಜು, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನ ಗೌಡ ಮತ್ತು ಹರಿಣಿ ಬಿ, ಹರ್ಷ ಮತ್ತು ಎಲ್ಲಾ ಹಿರಿಯ ತಾಯಂದಿರು ಹಾಜರಿದ್ದರು.
ವೃದ್ದಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ ಹೊಸಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷೆ ಗೀತಾ Read More