ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರು,ರಸ್ತೆ ಸಮಸ್ಯೆ ಬಗರಿಸಲು ಜಿ.ಟಿ.ಡಿ ಸೂಚನೆ

ಮೈಸೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರಿನ ಸಮಸ್ಯೆ ಹಾಗೂ ರಸ್ತೆಯ ಸಮಸ್ಯೆ ಕೂಡಲೇ ಬಗರಿಸುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡರು ಖಡಕ್ ಸೂಚನೆ ನೀಡಿದರು.

ಪೊಲೀಸ್ ಗೃಹ ನಿರ್ಮಾಣ ಸಂಘದ ಅಧ್ಯಕ್ಷ, ನಾಗೇಶ್, ಉಪಾಧ್ಯಕ್ಷ ಮರಿಗೌಡ ಹಾಗೂ ಯುವ ಮುಖಂಡ ಗಗನ್ ಅವರುಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದರು.

ಶಾಸಕರು ಬಡಾವಣೆಗೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿದರು,ಮತ್ತು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿ ಬಡಾವಣೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ರಸ್ತೆಯ ಸಮಸ್ಯೆ ಕೂಡಲೇ ಬಗರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಡವಣಿಗೆ ಮೂರು ಬೋರ ಗಳನ್ನು ಹಾಕಿಸಬೇಕು ಕಾವೇರಿ ನೀರನ್ನು ಒಂದೂವರೆ ತಿಂಗಳಲ್ಲಿ ಕೊಡಬೇಕು ಮತ್ತು ಎರಡು ರಸ್ತೆಗಳನ್ನು ಮಾಡಿ ಮೂರು ಹೈಮಾಸ್ಟ್ ದೀಪಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಜಿಟಿಡಿ ಸೂಚಿಸಿದರು.

ಇದೇ ವೇಳೆ ಜಿ ಟಿ ಗೌಡರ 75ನೇ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಪೆಟಲ್ಸ್ ಶಾಲೆಯ ಮಕ್ಕಳು ಹಾಡು ಹೇಳುವ ಮೂಲಕ ಆಚರಿಸಿ ಶಾಸಕರಿಗೆ ಶುಭ ಕೋರಿದರು.

ಈ ವೇಳೆ ಮಕ್ಕಳ ಜೊತೆ ಕೇಕ್ ಕತ್ತರಿಸಿ, ಗಿಡಗಳನ್ನು ನೆಡುವ ಮೂಲಕ ಜಿ ಟಿ ದೇವೇಗೌಡರು ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಯುವ ಮುಖಂಡ ಗಗನ್ ಅವರು ಮಾಡುತ್ತಿರುವ‌‌ ಸಮಾಜ ಸೇವೆಯನ್ನು ಗುರುತಿಸಿ ಬಡಾವಣೆ ಜನರು ಹಾಗೂ ಶಾಸಕರು ಸನ್ಮಾನ ಮಾಡಿದರು.

ಪೊಲೀಸ್ ಬಡಾವಣೆಯ ಜನತೆಯ ಕಷ್ಟಗಳಿಗೆ ತಕ್ಷಣ ಪರಿಹಾರ ಮಾಡಿಕೊಟ್ಟ ಶಾಸಕ ಜಿ.ಟಿ.ದೇವೇಗೌಡರಿಗೆ ಬಡಾವಣೆಯ ಮುಖಂಡರು, ಹಿರಿಯರು ಹಾಗೂ ನಾಗರಿಕರು ವಂದನೆಗಳನ್ನು ಸಲ್ಲಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನೀರು,ರಸ್ತೆ ಸಮಸ್ಯೆ ಬಗರಿಸಲು ಜಿ.ಟಿ.ಡಿ ಸೂಚನೆ Read More

ಸರ್ಕಾರ ಸೀಜ್ ಮಾಡಿದ್ದ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಖದೀಮರು

ಮೈಸೂರು: ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಮನೆಯಲ್ಲಿ ಕಿಡಿಗೇಡಿಗಳು ನುಗ್ಗಿ‌ ದಾಂಧಲೆ‌ ನಡೆಸಿರುವ ಘಟನೆ ನಡೆದಿದೆ.

ಬಾಗಿಲು ಮುರಿದ ಖದೀಮರು 14 ವರ್ಷಗಳ ಹಿಂದೆ ಸೀಜ್ ಮಾಡಲಾಗಿದ್ದ ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈ.ಲಿ.ಗೆ ಸೇರಿದ ಮನೆಯಲ್ಲಿ ನುಗ್ಗಿ ಈ ಕೃತ್ಯ ಎಸಗಿದ್ದಾರೆ.

ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ ಮಾಡಿರುವ ಕಿಡಿಗೇಡಿಗಳು ಯಾವುದೋ‌ ಮುಖ್ಯವಾದ ಪದಾರ್ಥ ದೋಚಲು ಯತ್ನಿಸಿದ್ದಾರೆ.

ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿ ಗ್ರೀನ್ ಬಡ್ಸ್ ಆಗ್ರೋ ಪ್ರೈ ಲಿ.ಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲಿರುವ ಚರಾಸ್ಥಿಗಳನ್ನ ಸ್ಥಳಾಂತರಿಸುವ ಉದ್ದೇಶದಿಂದ ತಹಸೀಲ್ದಾರ್ ಶಿರೀನ್ ತಾಜ್,ಕಾನೂನು ಅಧಿಕಾರಿ ರಕ್ಷಿತ್ ಹಾಗೂ ರಾಜಸ್ವ ನಿರೀಕ್ಷಕರಾದ ಹೇಮಂತ್ ಕುಮಾರ್ ಸೀಜ್ ಆದ ಮನೆಗೆ ಭೇಟಿ ಕೊಟ್ಟಿದ್ದಾರೆ.

ಸೀಜ್ ಮಾಡಿದ ಬಾಗಿಲು ತೆಗೆಯಲು ಸಾಧ್ಯವಾಗದೆ ಹಿಂಬದಿ ಸೀಜ್ ಮಾಡದಿರುವ ಬಾಗಿಲ ಬಳಿ ಹೋದಾಗ ಅದು ತೆರೆದಿರುವುದು ಕಂಡು ಚಿಕಿತರಾಗಿದ್ದಾರೆ.

ದುಷ್ಕರ್ಮಿಗಳು ಬಾಗಿಲು ಒಡೆದು ಒಳ ನುಗ್ಗಿರುವುದು ಗೊತ್ತಾಗಿ‌ ಅಧಿಕಾರಿಗಳು ತಕ್ಷಣ ಆಲನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದು.ಪೊಲೀಸರ ಮಾಹಿತಿ ಪ್ರಕಾರ ಸೀಜ್ ಆಗಿದ್ದ ಮನೆಗೆ ಯಾವುದೇ ಭದ್ರತೆ ಒದಗಿಸಿರಲಿಲ್ಲ.ಇದನ್ನೇ ಬಳಸಿಕೊಂಡ ದುಷ್ಕರ್ಮಿಗಳು ಬಾಗಿಲು ಮುರಿದು ಮನೆಯಲ್ಲಿದ್ದ ವಸ್ತುಗಳನ್ನು ಜಾಲಾಡಿದ್ದಾರೆ.

ಸರ್ಕಾರ ಸೀಜ್ ಮಾಡಿದ್ದ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಖದೀಮರು Read More

ಮೋದಕ ಪ್ರಿಯ ಗಣೇಶ ಜ್ಞಾನದ ಪ್ರತೀಕ-ಜಿ ಟಿ ದೇವೇಗೌಡ

ಮೈಸೂರು, ಸೆಪ್ಟೆಂಬರ್.1: ಮೋದಕ ಪ್ರಿಯ ಗಣೇಶ ಜ್ಞಾನದ ಪ್ರತೀಕ ಎಂದು ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದರು.

ಮೈಸೂರಿನ ಸರ್ದಾರ್ ವಲ್ಲಭಾ ಭಾಯ್ ಪಟೇಲ್ ನಗರದಲ್ಲಿ ಎಸ್ ವಿ ಪಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದ ಸಾಂಸ್ಕೃತಿಕ ಸಂಭ್ರಮಾಚರಣೆ‌ ಉದ್ಘಾಟಿಸಿ ಅವರು ಮಾತನಾಡಿದರು.

ಮೋದಕ ಪ್ರಿಯ ಗಣೇಶ ಜ್ಞಾನದ ಪ್ರತೀಕ, ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಮತ್ತು ಪೌರಾಣಿಕ ಕಥೆಯನ್ನು ಕೇಳಿ ಇಂದಿನ ಯುವಕರು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶುಭ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ಗಣೇಶನಿಗೆ ಪೂಜೆ ಮಾಡುತ್ತಾರೆ ಕಾರಣ ಗಣೇಶನನ್ನು ಪ್ರಥಮ ವಂದಿತ,ವಿಘ್ನಹರ ಎಂದು ಕರೆಯುತ್ತಾರೆ ಇದರಿಂದ ಯಾವುದೇ ಕಾರ್ಯದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ, ಆದ್ದರಿಂದ ಗಣೇಶನ ಪೂಜೆ ಮಾಡಿದ ನಂತರ ಇತರ ದೇವತೆಗಳ ಪೂಜೆ ಮಾಡಲಾಗುತ್ತದೆ ಎಂದು ಜಿ ಟಿ ದೇವೇಗೌಡ ತಿಳಿಸಿದರು

ಈ ಸಂದರ್ಭದಲ್ಲಿ ಸಂಘದ ವತಿಯಿಂದ ಜಿ ಟಿ ದೇವೇಗೌಡರನ್ನು ಸನ್ಮಾನಿಸಲಾಯಿತು.

ಈ‌ ವೇಳೆ ಸಂಘದ ಅಧ್ಯಕ್ಷ ಗಗನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಸಿದ್ದರಾಜು, ಮಧುಸೂದನ್, ಹರ್ಷಗೌಡ, ಅಂತರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್, ನಂಜುಂಡಸ್ವಾಮಿ,ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.

ಮೋದಕ ಪ್ರಿಯ ಗಣೇಶ ಜ್ಞಾನದ ಪ್ರತೀಕ-ಜಿ ಟಿ ದೇವೇಗೌಡ Read More