ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ‌

ಮೈಸೂರು: ಮೈಸೂರಿನ ಸರಸ್ವತಿಪುರಂ
ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ‌ ಆಯೋಜಿಸಿ,ಮಕ್ಕಳಿಗೆ ವ್ಯಾಪಾರ,
ವ್ಯವಹಾರಗಳ ಬಗ್ಗೆ ತಿಳುವಳಿಕೆ ಬರುವಂತೆ‌ ಮಾಡಲಾಯಿತು.

ಈ ವೇಳೆ ಸಂಸ್ಥೆಯ ಎಲ್ಲಾ ಮುಖ್ಯಸ್ಥರುಗಳಾದ ಗುರುಸ್ವಾಮಿ ಎಂ, ಶಿವಮೂರ್ತಿ,ಕವಿತ ಡಿ. ಆರ್. ಮತ್ತು ಸರ್ವಮಂಗಳ ಅವರುಗಳು ಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಕ್ಕಳ ಸಂತೆ ಉದ್ಘಾಟನೆ ಮಾಡಲಾಯಿತು.

ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ವ್ಯಾಪಾರ ಕೌಶಲ್ಯತೆ ಮತ್ತು ಪಠ್ಯ ಚಟುವಟಿಕೆಗಳ ಜೊತೆಗೆ ಮಕ್ಕಳು ಸಂತೋಷವಾಗಿ ಕಲಿಯುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜೆಎಸ್ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ‌ Read More

ಎಸ್ ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆವಿದ್ಯಾರ್ಥಿ ಸಂಘದ ಉದ್ಘಾಟನೆ

ಮೈಸೂರು, ಜು.2: ಜೆ ಎಸ್ ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆ ಸರಸ್ವತಿಪುರಂನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭ ನೆರವೇರಿಸಿತು.

ಮುಖ್ಯ ಶಿಕ್ಷಕರು ಗುರುಸ್ವಾಮಿ ಎಂ.ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಯಸ್ಕರ ಸಂಪನ್ಮೂಲ, ಭಾರತ್ ಸ್ಕೌಟ್ ಅಂಡ್ ಗೈಡ್ ಜಿಲ್ಲಾ ಆಯುಕ್ತರಾದ
ಡಾ. ಬಿ.ಕೆ. ಅಜಯ್ ಕುಮಾರ್ ಜೈನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಶಿಕ್ಷಣ ಸಂಯೋಜನಾಧಿಕಾರಿಗಳಾದ ಮೋಹನ್ ಕುಮಾರ್ ಬಿ.ಎಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್ ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆವಿದ್ಯಾರ್ಥಿ ಸಂಘದ ಉದ್ಘಾಟನೆ Read More

ಶಿವಯೋಗ ಪ್ರಾತ್ಯಕ್ಷಿಕೆ, ಲಿಂಗಾಯತ ಸಿದ್ದಾಂತ ಕುರಿತು ನಡೆದ ಶಿಬಿರ ಯಶಸ್ವಿ

ಮೈಸೂರು: ಮೈಸೂರಿನ ಸರಸ್ವತಿ ಪುರಂನಲ್ಲಿ ಶಿವಯೋಗ ಪ್ರಾತ್ಯಕ್ಷಿಕೆ, ಲಿಂಗಾಯತ ಸಿದ್ದಾಂತ ಮತ್ತು ಲಿಂಗಾಯತ ಧರ್ಮ ಕುರಿತು ಶಿವಯೋಗ ಮತ್ತು ನಿಜಾಚರಣೆ ಅನುಷ್ಠಾನ ಸಮಿತಿ ವತಿಯಿಂದ ಶಿಬಿರ ಏರ್ಪಡಿಸಲಾಗಿತ್ತು.

ಪೂಜ್ಯ ಬಸವಯೋಗಿಪ್ರಭು ಸ್ವಾಮೀಜಿಗಳು ಕಾರ್ಯಕ್ರಮ ನಡೆಸಿಕೊಟ್ಟರು.ಒಟ್ಟು 22 ಶಿಬಿರಾರ್ಥಿಗಳು ಭಾಗವಹಿಸಿದ್ದರು .

ಶಿವಯೋಗ ಅನುಷ್ಠಾನ ಮಾಡುವುದು ಹೇಗೆ , ಇಷ್ಟಲಿಂಗ ಯಾವ ಪದಾರ್ಥಗಳಿಂದ ಮಾಡಿದೆ , ಇಷ್ಟಲಿಂಗವನ್ನು ಹೇಗೆ ನಿರೀಕ್ಷಣೆ ಮಾಡಬೇಕು,ಶಿವಯೋಗನ್ನು ಮಾಡಿದರೆ ಏನು ಪರಿಣಾಮ ಉಂಟಾಗುತ್ತದೆ, ಶಿವಯೋಗದ ವೈಜ್ಞಾನಿಕತೆ ಮತ್ತು ಶಿವಯೋಗವನ್ನು ಯಾವ ಸಮಯದಲ್ಲಿ ಮಾಡಬೇಕೆಂದು ತಿಳಿಸಿಕೊಟ್ಟರು.

ನಂತರ ಲಿಂಗಾಯತ ಸಿದ್ದಾಂತವಾದ ಅಷ್ಟಾವರಣ ,ಪಂಚಾಚಾರ ಮತ್ತು ಷಟ್ ಸ್ಥಳದ ಬಗ್ಗೆ ತಿಳಿಸಿದರು.

ಲಿಂಗಾಯತ ಧರ್ಮದ ಬಗ್ಗೆ ವಿವಿರ ನೀಡಿದ ಸ್ವಾಮೀಜಿ, ಲಿಂಗಾಯತ ಧರ್ಮವನ್ನು ಬಸವಣ್ಣನವರು ಏಕೆ ಕೊಟ್ಟರು ಮತ್ತು ಅದರ ಉದ್ದೇಶವೇನು ಎಂದು ತಿಳಿಸಿ, ಲಿಂಗಾಯತ ಸಮುದಾಯ ಶರಣ ಸಂಸ್ಕೃತಿಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗ ಬೇಕೆಂದು ತಿಳಿಹೇಳಿದರು.

ಪ್ರತಿಯೊಬ್ಬ ಲಿಂಗಾಯತ ತನ್ನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ ಲಿಂಗಾಯತ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಸಾದದ ನಂತರ ಶಿವಯೋಗ ಮತ್ತು ನಿಜಾಚಾರಣೆ ಅನುಷ್ಠಾನ ಸಮಿತಿಯ ಉದ್ದೇಶದ ಬಗ್ಗೆ ಸಂವಾದ ನಡೆಯಿತು.

ಶಿವಯೋಗ ಪ್ರಾತ್ಯಕ್ಷಿಕೆ, ಲಿಂಗಾಯತ ಸಿದ್ದಾಂತ ಕುರಿತು ನಡೆದ ಶಿಬಿರ ಯಶಸ್ವಿ Read More