ಹುರುಳಿ ಸೆತ್ತೆಗೆ ಸಿಲುಕಿ ಕಾರು ಭಸ್ಮ
ಮೈಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಮಧ್ಯೆ ರಾಗಿ,ಹುರುಳಿ ಸೆತ್ತೆ ಹಾಕುವುದರಿಂದ ವಾಹನಸವಾರರ ಪ್ರಾಣಕ್ಕೆ ಕುತ್ತು ತಂದಿರುವ ಅನೇಕ ಪ್ರಕರಣ ನಡೆದಿದ್ದರೂ ಕೂಡಾ ಮತ್ತೆ,ಮತ್ತೆ ಅವಘಡಗಳು ನಡೆಯುತ್ತಲೇ ಇರುವುದು ದುರ್ದೈವದ ಸಂಗತಿಯಾಗಿದೆ.
ಹೀಗೊಂದು ಪ್ರಕರಣ ಸರಗೂರು ತಾಲೂಕಿನಲ್ಲಿ ನಡೆದಿದೆ.
ನಡುರಸ್ತೆಯಲ್ಲಿ ಕಾರು ಸುಟ್ಟು ಕರುಕಲಾದ ಘಟನೆ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.
ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು,ಕೆ.ಆರ್.ನಗರಕ್ಕೆ ಸೇರಿದ ಕಾರು ಎಂದು ಗೊತ್ತಾಗಿದೆ.
ರಸ್ತೆ ಮಧ್ಯೆ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿರುವುದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಾರಿಗೆ ಒಕ್ಕಣೆ ಮಾಡುವ ಸತ್ತೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ,ಮಧ್ಯರಾತ್ರಿ ವೇಳೆ ಘಟನೆ ನಡೆದ ಕಾರಣ ಕಾರಿನಲ್ಲಿದ್ದ ಪ್ರಯಾಣಿಕರು ಅಸಹಾಯಕರಾಗಿದ್ದಾರೆ.ಬೆಂಕಿ ಇಡೀ ಕಾರನ್ನೇ ಸುಟ್ಟು ಭಸ್ಮ ಮಾಡಿದೆ.
ಘಟನೆ ನಡೆದ ನಂತರ ಒಕ್ಕಣೆ ಮಾಡಿರುವ ಕುರುಹನ್ನ ಅಳಿಸಿಹಾಕುವ ಯತ್ನ ನಡೆದಿದೆ.
ಸಧ್ಯ ರಾಜ್ಯ ಹೆದ್ದಾರಿಯಲ್ಲಿ ಕಾರು ಅನಾಥವಾಗಿ ಸುಟ್ಟು ಕರುಕಲಾದ ಸ್ಥಿತಿಯಲ್ಲಿ ನಿಂತಿದೆ,ಆದರೆ ಕಾರಿನಲ್ಲಿದ್ದವರು ಬಚಾವಾಗಿದ್ದಾರೆ.
ಹುರುಳಿ ಸೆತ್ತೆಗೆ ಸಿಲುಕಿ ಕಾರು ಭಸ್ಮ Read More