ಸಮೃದ್ಧಿ ಟ್ರಸ್ಟ್ ನಿಂದ ಮಾವುತರ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ

ಮೈಸೂರು: ಸಮೃದ್ಧಿ ಟ್ರಸ್ಟ್ ವತಿಯಿಂದ ಮಾವುತರ ಮಕ್ಕಳಿಗಾಗಿ ವಿಶಿಷ್ಟ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಜೀವನ ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರನ್ನು ಸಾಮಾಜಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ಮನೋವಿಜ್ಞಾನಿ ಡಾ.ರೇಖಾ ಮನಃಶಾಂತಿ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಜೀವನ ಕೌಶಲ್ಯಗಳ ಮಹತ್ವವನ್ನು ವಿವರಿಸಿ, ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಆಟಗಳ ಮೂಲಕ ಆಸಕ್ತಿದಾಯಕ ತರಬೇತಿಯನ್ನು ನೀಡಿದರು.

ಜೀವನವನ್ನು ಹೇಗೆ ನಡಿಸಬೇಕು, ಭಾವನಾತ್ಮಕ ಸಮತೋಲನ ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಅವರು ಪ್ರಾಯೋಗಿಕವಾಗಿ ಬೋಧನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.ಈ ವೇಳೆ
ಸುಮಾರು 50 ಮಕ್ಕಳಿಗೆ ಅಧ್ಯಯನ ಸಾಮಗ್ರಿಗಳನ್ನು (ಸ್ಟೇಷನರಿ ಕಿಟ್) ವಿತರಿಸಲಾಯಿತು.

ಜೊತೆಗೆ ಮಾವುತರು ಮತ್ತು ಕವಾಡಿಗರಿಗೆ ಹೊದಿಕೆಗಳನ್ನೂ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಾಗೌಡ,ಯೋಗ ತಜ್ಞೆ ಡಾ. ಸೌಮ್ಯಾ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸ್ಥಾಪಕರಾದ ವಿಕ್ರಮ್ ಆಯಂಗಾರ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ, ಶ್ರೀರಂಗ, ಅನಿಲ್ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಸಮೃದ್ಧಿ ಟ್ರಸ್ಟ್ ನಿಂದ ಮಾವುತರ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ Read More

ಫೆ.26 ರಂದು ಶಿವರಾತ್ರಿ ಉತ್ಸವ: ಮಹಿಳೆಯರಿಗೆ ರಂಗೋಲಿ ಸ್ಪರ್ಧೆ

ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ಮಹಿಳೆಯರಿಗೆ ರಂಗೋಲೆ ಸ್ಪರ್ಧೆ
ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮೃದ್ಧಿ ಟ್ರಸ್ಟ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಜೆಸಿಐ ಮೈಸೂರು ಕಿಂಗ್ಸ್ ಲೇಡೀಸ್ ವಿಂಗ್ಸ್ ವತಿಯಿಂದ
ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಫೆ. 26 ರಂದು ಬೆಳಗ್ಗೆ 9 ಗಂಟೆಗೆ ಈ ಎಲ್ಲಾ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊಬೈಲ್ 9591350267 ಸಂಪರ್ಕಿಸಿ ಸ್ಪರ್ಧೆಗೆ ಹೆಸರು ನೋಂದಾಯಿಸಬಹುದು ಎಂದು ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಗೌಡ ತಿಳಿಸಿದ್ದಾರೆ.

ಫೆ.26 ರಂದು ಶಿವರಾತ್ರಿ ಉತ್ಸವ: ಮಹಿಳೆಯರಿಗೆ ರಂಗೋಲಿ ಸ್ಪರ್ಧೆ Read More

ಹಬ್ಬಗಳ ಆಚರಣೆಯಿಂದ ಸಾಮರಸ್ಯ ಹೆಚ್ಚಳ: ಕೆ ಬಿ ಲಿಂಗರಾಜು

ಮೈಸೂರು: ಸಮೃದ್ಧಿ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಆನ್ಲೈನ್ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಆನ್ಲೈನ್ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ, ವಿಮಲಾ, ವಿಜಯ, ಪುಟ್ಟಮನ್ನಿ, ಗೌರಿ, ಭಾಗ್ಯ, ಅರ್ಪಿತ ಸಂದೀಪ್, ಶಕುಂತಲಾ, ಕವಿತಾ ವೀರಭದ್ರ, ದರ್ಶಿನಿ ಎಸ್ ಗೌಡ ಅವರುಗಳಿಗೆ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಲಿಂಗರಾಜು ಬಹುಮಾನ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಜನರಲ್ಲಿ ಭಕ್ತಿ ಕಡಿಮೆಯಾಗುತ್ತಿದೆ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಲು ಜನ ಹಿಂದೆಮುಂದೆ ನೋಡುವ ಸ್ಥಿತಿಯಿದೆ ಎಂದು ಅಭಿಪ್ರಾಯ ಪಟ್ಟರು.

ನಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯಗಳನ್ನು ಯುವ ಪೀಳಿಗೆ ಮರೆಯಬಾರದು. ಹಬ್ಬ ಹರಿದಿನಗಳನ್ನು ಸರ್ವ ಧರ್ಮದವರು ಜತೆಯಾಗಿ ಸೇರಿ ಆಚರಿಸಬೇಕು,ಶ್ರದ್ಧಾ ಭಕ್ತಿಯಿಂದ ಹಬ್ಬಗಳನ್ನು ಆಚರಿಸುವದರಿಂದ ಜನರಲ್ಲಿ ಸಾಮರಸ್ಯ ಹೆಚ್ಚುತ್ತದೆ,ಜನರ ಒಗ್ಗೂಡುವಿಕೆಯಿಂದ ದೇಶವು ಪ್ರಗತಿ ಕಾಣುತ್ತದೆ ಎಂದು ಲಿಂಗರಾಜು ತಿಳಿಸಿದರು.

ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷೆ ಹೇಮನಂದೀಶ್ ಮಾತನಾಡಿ, ರಂಗ ಅಂದರೆ ವಿಷ್ಣು,ರಂಗವಲ್ಲಿ ಮೂಲಕ ವಿಷ್ಣುವನ್ನು ಬರಮಾಡಿಕೊಳ್ಳುವುದೇ ರಂಗೋಲಿ ಎಂದು ತಿಳಿಸಿದರು.

ಅನ್ನಪೂರ್ಣ ಐ ಆಸ್ಪತ್ರೆಯ ಎಂ ಡಿ ಅಶ್ವತ್ ಕುಮಾರ್ ಮಾತನಾಡಿ,ಹೆಣ್ಣಿಗೆ ಹಣೆಯಲ್ಲಿ ಕುಂಕುಮ ಸಿಂಧೂರ ಎಷ್ಟು ಮುಖ್ಯವೋ ಅದೇ ರೀತಿ ಮನೆಗೆ ರಂಗೋಲಿಯೂ ಅಷ್ಟೇ ಮುಖ್ಯ ರಂಗೋಲಿ ನಮ್ಮ ಭಾರತೀಯ ಸಂಪ್ರದಾಯದ ಪ್ರತೀಕ ಎಂದು ನುಡಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷೆ ಪುಷ್ಪ, ಸಮೃದ್ಧಿ ಟ್ರಸ್ಟ್, ಅಧ್ಯಕ್ಷೆ ಸಹನಗೌಡ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಮತ್ತಿತರರು ಹಾಜರಿದ್ದರು.

ಹಬ್ಬಗಳ ಆಚರಣೆಯಿಂದ ಸಾಮರಸ್ಯ ಹೆಚ್ಚಳ: ಕೆ ಬಿ ಲಿಂಗರಾಜು Read More