ತೆಲಂಗಾಣದಲ್ಲಿ ಘೋರ ದುರಂತ;ನೀರಿನಲ್ಲಿ ಮುಳುಗಿ ನಾಲ್ವರ ಮರಣ

ತೆಲಂಗಾಣ: ಯುಗಾದಿ ಹಬ್ಬದ ದಿನದಂದೇ ತೆಲಂಗಾಣದಲ್ಲಿ ಘೋರ ದುರಂತ ಸಂಭವಿಸಿದೆ.

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಇಲ್ಲಿನ ಯಲ್ಲಾರೆಡ್ಡಿ ತಾಲೂಕಿನ ವೆಂಕಟಾಪುರ ಬಳಿ ಈ ದುರಂತ ಸಂಭವಿಸಿದೆ. ತಾಯಿ, ಇಬ್ಬರು ಪುತ್ರರು ಮತ್ತ ಪುತ್ರಿ ಸೇರಿ ನಾಲ್ವರು ನೀರುಪಾಲಾಗಿದ್ದಾರೆ.

ಕೆರೆಯಲ್ಲಿ ಬಟ್ಟೆ ತೊಳೆಯಲೆಂದು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.

ದೇಹಗಳನ್ನು ಹರತೆಗೆಯಲು ಪ್ರಯತ್ನಿಸಲಾಗುತ್ತಿದೆ.

ತೆಲಂಗಾಣದಲ್ಲಿ ಘೋರ ದುರಂತ;ನೀರಿನಲ್ಲಿ ಮುಳುಗಿ ನಾಲ್ವರ ಮರಣ Read More

ಆನ್ ಲೈನ್ ಬೆಟ್ಟಿಂಗ್: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮೈಸೂರು: ನಿನ್ನೆ ತಾನೆ ಉದ್ಯಮಿಯೊಬ್ಬರು ಪತ್ನಿ ಮಗ ಹಾಗೂ ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಆನ್ ಲೈನ್ ಬೆಟ್ಟಿಂಗ್ ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜೋಶಿ ಆಂಟೋನಿ, ಸಹೋದರ ಜೋಬಿ ಆಂಟೋನಿ ಮತ್ತು ಈತನ ಪತ್ನಿ ಸ್ವಾತಿ @ ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆನ್ನೆ ಅಣ್ಣ ಮೃತಪಟ್ಟರೆ ಇಂದು ತಮ್ಮ ಹಾಗೂ ತಮ್ಮನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಆನ್ ಲೈನ್ ಗೇಮ್, ಹಣ ಡಬ್ಲಿಂಗ್ ಆಸೆಗೆ ಇಡೀ ಕುಟುಂಬವೇ ಬಲಿಯಾದಂತಾಗಿದೆ.

ಮೃತರು ಮೈಸೂರಿನ ವಿದ್ಯಾನಗರ ಹಾಗೂ ಯರಗನಹಳ್ಳಿ ನಿವಾಸಿಗಳಾಗಿದ್ದು, ಜೋಬಿ ಆಂಟೋನಿ ಹಾಗು ಜೋಷಿ‌ ಆಂಟೋನಿ ಅವಳಿ-ಜವಳಿ.

ಜೋಬಿ ಆಂಟೋನಿ ದಂಪತಿ ಆನ್ ಲೈನ್ ಬೆಟ್ಟಿಂಗ್ ಗಾಗಿ 80 ಲಕ್ಷ ರೂ ಸಾಲ‌ ಮಾಡಿಕೊಂಡಿದ್ದರು. ಸಾಲಗಾರರ ಕಾಟ ತಾಳಲಾರದೆ ನಿನ್ನೆ ಅಣ್ಣ ಜೋಷಿ ಆಂಟೋನಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.

ಸಾವಿಗೆ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ತಂಗಿಗೆ ಕಳುಹಿಸಿದ್ದ.ತಂಗಿ‌ ಮೇರಿ‌ ಶರ್ಲೈನ್ ಗೂ ಆತ್ಮಹತ್ಯೆ ಮಾಡಿಕೊ, ಮಗುವನ್ನು ಕೊಲ್ಲು ಎಂದು ಆತ್ಮಹತ್ಯೆಗೂ ಮುನ್ನ ಜೋಷಿ ಆಂಟೋನಿ ಪ್ರಚೋದಿಸಿದ್ದ ಎನ್ನಲಾಗಿದೆ.

ಈ ಕಾರಣಕ್ಕೆ ತಂಗಿ ಮೇರಿ ಶರ್ಲೈನ್ ಅವರು ಜೋಬಿ ಆಂಟೋನಿ ಹಾಗೂ ಸ್ವಾತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಿಸಿದ್ದರು. ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಿನ್ನೆ‌ ಜೋಬಿ ಹಾಗೂ ಸ್ವಾತಿ ವಿರುದ್ಧ ಕೇಸು ದಾಖಲಾಗಿತ್ತು.

ಕೇಸ್ ಗೆ ಭಯಪಟ್ಟು ಜೋಬಿ ಹಾಗೂ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ತನಿಖೆಯ ನಂತರ ನಿಖರ ಕಾರಣ ಗೊತ್ತಾಗಲಿದೆ.

ಆನ್ ಲೈನ್ ಬೆಟ್ಟಿಂಗ್: ಒಂದೇ ಕುಟುಂಬದ ಮೂವರು ಆತ್ಮಹತ್ಯೆ Read More

ಸಾಂಸ್ಕೃತಿಕ ನಗರಿಯಲ್ಲಿ ಘೋರ ದುರಂತ:ಒಂದೇ ಕುಟುಂಬದ 4 ಮಂದಿ ಸಾವು

ಮೈಸೂರು: ಸಾಂಸ್ಕೃತಿಕ ನಗರಿ
ಮೈಸೂರಿನಲ್ಲಿ ಘೋರ ದುರಂತ ನಡೆದಿದೆ.

ನಗರದ ವಿಶ್ವೇಶ್ವರ ನಗರದ ಅಪಾರ್ಟ್‌ಮೆಂಟ‌ನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಚೇತನ್ (45) ರೂಪಾಲಿ (43) ಪ್ರಿಯಂವಧ (62) ಕುಶಾಲ್ (15) ಸಾವನ್ನಪ್ಪಿದ ದುರ್ದೈವಿಗಳು.

ಚೇತನ್ ಅವರು ಮೊದಲು ಪತ್ನಿ, ತಾಯಿ,ಹಾಗೂ ಮಗನಿಗೆ ವಿಷ ನೀಡಿ ನಂತರ ತಾನು ನೇಣು ಬಿಗಿದುಕೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾನ್ಹವಿ,ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ಮೋಹಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸಾಂಸ್ಕೃತಿಕ ನಗರಿಯಲ್ಲಿ ಘೋರ ದುರಂತ:ಒಂದೇ ಕುಟುಂಬದ 4 ಮಂದಿ ಸಾವು Read More