ಸೈನಿಕ ಅಕಾಡೆಮಿಯಲ್ಲಿ ಕನಕ ದಾಸರ ಜಯಂತಿ ಆಚರಣೆ
ಮೈಸೂರು: ಮೈಸೂರಿನ ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ಕನಕ ದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕನಕ ದಾಸರು ಕೀರ್ತನೆಗಳ ಮೂಲಕ, ಮಾನವ ಕುಲದ ಬೇಧ ಬಾವದ ಬಗ್ಗೆ ಕುರಿತು 15, 16 ನೇ ಶತಮಾನದಲ್ಲಿಯೇ ನುಡಿದ ಮಾತುಗಳು ಪ್ರಸ್ತುತ ದಿನಗಳಲ್ಲೂ ಎಷ್ಟುಅವಶ್ಯಕ ಎಂಬುದನ್ನು ತಿಳಿಸಿಕೊಡಲಾಯಿತು.
ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ವ್ಯತಿರಿಕ್ತ ಪರಿಸ್ಥಿತಿಗಳನ್ನು ತಿಳಿಸುವ ಮೂಲಕ ಕನಕರ ದಾಸವಾಣಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಎಲ್ಕರಿಗೂ ಮನದಟ್ಟು ಮಾಡುವ ಮೂಲಕ ಕನಕ ದಾಸರ ಜಯಂತಿಯನ್ನು ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ, ಅಧ್ಯಾಪಕರು ವಿಜಯ್ ಕುಮಾರ್, ರವಿ ಎಸ್ ಎಸ್ ಹಾಗೂ ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
ಸೈನಿಕ ಅಕಾಡೆಮಿಯಲ್ಲಿ ಕನಕ ದಾಸರ ಜಯಂತಿ ಆಚರಣೆ Read More