ಸೈನಿಕ ಅಕಾಡೆಮಿಯಲ್ಲಿಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ

ಮೈಸೂರು: ಸೈನಿಕ ಅಕಾಡೆಮಿಯಲ್ಲಿ ಸಂವಿಧಾನ ದಿನದ ಆಚರಣೆ ಜೊತೆಗೆ ಮುಂಬೈ ಅಟ್ಯಾಕ್ ನಲ್ಲಿ ಮಡಿದ ಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಬೆಳವಾಡಿಯಲ್ಲಿ ರಕ್ಷಣಾ ಇಲಾಖೆಗೆ ಸೇರಲು ಬಯಸುವ ಯುವಜನತೆಗೆ ತರಬೇತಿ ನೀಡುತ್ತಿರುವ ಸೈನಿಕ ಅಕಾಡೆಮಿ, ತರಬೇತಿ ಕೇಂದ್ರದಿಂದ ಯೋದರನ್ನು ಸ್ಮರಿಸಲಾಯಿತು.

ಹಲವಾರು ಬಾಷೆ, ಸಂಸ್ಕೃತಿ, ಸಂಪ್ರದಾಯ, ಬಡವ ಶ್ರೀಮಂತರನ್ನೊಳಗೊಂಡಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯಿಂದ ಜೀವಸಲು ಹಕ್ಕನ್ನು ನೀಡಿರುವ ಭಾರತ್ನ ರತ್ನ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರವರನ್ನು ನೆನೆಸಿ ಸಂವಿಧಾನ ದಿನಾಚರಣೆನ್ನೂ ಆಚರಿಸಲಾಯಿತು.

ಜೊತೆಗೆ ಸಾವಿರಾರು ಜನರ ಪ್ರಾಣ ಕಾಪಾಡಲು ತಮ್ಮ ಜೀವ ಕಳೆದುಕೊಂಡ ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಸಹಪಾಠಿ ಕಮಾಂಡೋ ಗಜೇಂದ್ರ ಸಿಂಗ್, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಜೀವ ಕಳೆದುಕೊಂಡ ಅಮಾಯಕರನ್ನು ನೆನೆಸಿ ಶ್ರದ್ದಾನಂಜಲಿ ಸಲ್ಲಿಸಲಾಯಿತು.

ಸೇನೆಗೆ ಸೇರಲು ತಯಾರಾಗುತ್ತಿರುವ ಯುವ ಸೈನಿಕರಿಗೆ ಸತ್ಯ ಘಟನೆಗಳನ್ನು ವಿವರಿಸಿದ
ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿಯ ಸಂಸ್ಥಾಪಕರು ಶ್ರೀಧರ ಸಿ ಎಂ ಅವರು,ನಾನು ಕೂಡ ಎನ್ ಎಸ್ ಜಿ ಕಮಾಂಡೋನಲ್ಲಿ ಇದ್ದು ಪುಣ್ಯವಂತ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಂದ ತರಬೇತಿ ಪಡೆದುಕೊಂಡಿದ್ದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸಂತೋಷ ಮತ್ತು ಸೇನೆಗೆ ಸೇರಲು ತಯಾರಾಗುತಿರುವ ಯುವ ಸೈನಿಕರು ಉಪಸ್ಥಿತರಿದ್ದರು.

ಸೈನಿಕ ಅಕಾಡೆಮಿಯಲ್ಲಿಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ Read More

ಸೈನಿಕ ಅಕಾಡೆಮಿಯಲ್ಲಿ ಪುಲ್ವಾಮ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿಯಲ್ಲಿ ಪುಲ್ವಾಮ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ಮಾತನಾಡಿ ಪಾಪಿ ಪಾಕಿಸ್ತಾನಿ ಉಗ್ರರ ಕುತಂತ್ರದಿಂದ ನಮ್ಮ ವೀರ ಸೈನಿಕರನ್ನು ಕಳೆದುಕೊಂಡಿರುವುದು ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.

ಇಂತಹ ಉಗ್ರರನ್ನು ಸದೆಬಡಿಯ ಬೇಕೆಂದರೆ ಪ್ರತಿಯೊಂದು ಕುಟುಂಬದಲ್ಲಿ ಒಬ್ಬ ಸೈನಿಕ ಇರಬೇಕು ಅದಕ್ಕೆ ಅಗ್ನಿವೀರ್ 4 ವರ್ಷ ಸ್ಕೀಮ್ ಅನುಕೂಲವಾಗಿದೆ ಎಂದು ತಿಳಿಸಿದರು.

ಮುಂದೊಂದು ದಿನ ಈ ಅಗ್ನಿಪತ್ ಸ್ಕೀಮ್ ನಿಂದ ಮನೆಯಲ್ಲೊಬ್ಬ ಸೈನಿಕ ಇರುತ್ತಾನೆ ಇದರಿಂದ ಗುಂಡಾಗಿರಿ, ದುಶ್ಚಟ, ಮೋಸ, ವಂಚನೆ, ವಿಂಗಡಣೆ, ಭ್ರಷ್ಟಾಚಾರ, ಸೋಂಬೇರಿತನ ಎಲ್ಲವು ಕಡಿಮೆ ಆಗುತ್ತದೆ ಜೊತೆಗೆ ನಿವೃತ್ತಿಯ ನಂತರವೂ ನಮ್ಮ ಸೇನೆಯ ಬೆನ್ನೆಲಾಬಾಗಿ ನಮ್ಮ ಅಗ್ನಿವೀರರು ಇರುತ್ತಾರೆ ನಮ್ಮ ದೇಶ ಬಲಿಷ್ಠವಾದ ದೇಶ ಆಗುತ್ತದೆ ಎಂದು ಹೇಳಿದರು.

ಇದೆ ಸಂಧರ್ಭದಲ್ಲಿ 4 ನೇ ತರಗತಿಯ ಅಭ್ಯರ್ಥಿ ಶಾಶ್ವಿತ್ ಅವರು ಹುತಾತ್ಮ ಪುಲ್ವಾಮ ಸೈನಿಕರ ಬಗ್ಗೆ ಮಾತನಾಡಿದರು.

ಸೈನಿಕ ಅಕಾಡೆಮಿಯಲ್ಲಿ ಪುಲ್ವಾಮ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ Read More

ಸೈನಿಕ ಅಕಾಡೆಮಿಯಲ್ಲಿ ನಿವೃತ್ತ ಸೇನಾಧಿಕಾರಿಗೆ ಹೂಮಳೆ ಸುರಿಸಿ ಸನ್ಮಾನ

ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿ ಸಂಸ್ಥಯಿಂದ ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಕಠಿಣ ಪ್ರದೇಶಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿ ನಿವೃತ್ತರಾದ ವೀರ ಯೋಧರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಜಮ್ಮು ಕಾಶ್ಮೀರ, ಚೀನಾ ಗಡಿ,ಅಸ್ಸಾಂ, ರಾಜಸ್ಥಾನ ಗಡಿ, ಪಂಜಾಬ್, ವಿದೇಶ ಶಾಂತಿ ಸೇನೆ (ವಿಶ್ವ ಶಾಂತಿ ಸೇನಾ ಜೊತೆಗೆ ದಕ್ಷಿಣ ಸುಡಾನ್) ತಮಿಳುನಾಡು, ಕರ್ನಾಟಕ ಮತ್ತಿತರ ಕಠಿಣ ಪ್ರದೇಶಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿ ಸಿಪಾಯಿ ಆಗಿ ಸೇನೆಗೆ ಆಯ್ಕೆ ಆಗಿದ್ದ ಮಹದೇವಸ್ವಾಮಿ ಅವರು ನಿವೃತ್ತರಾಗುವ ಸಮಯದಲ್ಲಿ ಗೌರಾನ್ವಿತ ಕ್ಯಾಪ್ಟನ್ ಸೇನಾ ಅಧಿಕಾರಿ ಆಗಿ ಇದೇ ಜನವರಿ 1 ರಂದು ನಿವೃತ್ತರಾಗಿದ್ದಾರೆ.

ಈ ವೀರ ಯೋಧರಿಗೆ ಸೈನಿಕ ಅಕಾಡೆಮಿ ವತಿಯಿಂದ ಭವಿಷ್ಯದ ಸೈನಿಕರ ಸಮ್ಮುಖದಲ್ಲಿ ಹೂವಿನ ಸುರಿಮಳೆ ಸುರಿಸಿ ಜೈಯಘೋಷದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ‌ ಸಂದರ್ಭದಲ್ಲಿ ಸೇನಾಧಿಕಾರಿ ಗೌರವಾನ್ವಿತ ಕ್ಯಾಪ್ಟನ್ ಮಹಾದೇವ ಸ್ವಾಮಿ ಅವರು ಮಾತನಾಡಿ, ನಾನು ಭಾರತೀಯ. ನನ್ನ ಧರ್ಮ ರಾಷ್ಟ್ರ ರಕ್ಷಣೆ ಮಾಡುವುದು, ಇದು ಪ್ರತಿಯೊಬ್ಬ ಭಾರತೀಯನ ಹೊಣೆ ಎಂದು ಹೇಳಿದರು.

ನಾನು ಮೈಸೂರು ಜಿಲ್ಲೆ, ಗಾವಡಗೆರೆ ನಿವಾಸಿ ಆಗಿದ್ದು, ಸುಮಾರು 10 ವರ್ಷಗಳಿಂದ ಮೈಸೂರಿನ ವಿಜಯಲಕ್ಷ್ಮೀ ಪುರಂನಲ್ಲಿ ನನ್ನ ಕುಟುಂಬದ ಜೊತೆ ವಾಸವಾಗಿದ್ದೇನೆ ಎಂದು ತಿಳಿಸಿದರು.

ನಾನು ಭಾರತೀಯ ಸೇನೆಗೆ 1994 ರಲ್ಲಿ ಹುಣಸೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆ ಆಗಿದ್ದು, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರ್ ಗ್ರೂಪ್ ಗೆ ಆಯ್ಕೆ ಆಗಿದ್ದೆ. ನನಗೆ ಭಾರತೀಯ ಸೇನೆಯ ಯುದ್ಧ ಮಾಡುವ ಸೇನಾ ಪಡೆಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುವ ಗುಂಪಿನಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದರು.

ನಾನು ಕಾರ್ಗಿಲ್ ಯುದ್ಧದ (ಆಪರೇಷನ್ ವಿಜಯ್) ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದೇನೆ, ಹಲವಾರು ಗಡಿ ಪ್ರದೇಶ, ಶಾಂತಿ ಸೇನೆ, ಕಠಿಣ ಪ್ರದೇಶಗಳಲ್ಲೂ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿತು. ಸಿಪಾಯಿ ಆಗಿ ಸೇನೆ ಸೇರಿದ ನಾನು ಇವಾಗ ಗೌರವಾನ್ವಿತ ಕ್ಯಾಪ್ಟನ್ ಆಗಿ ನಿವೃತ್ತಿ ಆಗಿರುವುದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ನನ್ನ ಭಾರತೀಯ ಸೇನೆ ನನ್ನ ದೇವರಿಗೆ ಸಮಾನ, ನನಗೆ ಪ್ರಾಮಾಣಿಕತೆ, ಧೈರ್ಯ, ವಿದ್ಯೆ, ಬುದ್ಧಿ, ಶಕ್ತಿ, ವಿಶ್ವಾಸ, ಶಿಸ್ತು, ಆರೋಗ್ಯ ಎಲ್ಲವನ್ನೂ ನನ್ನ ಸೇನೆ ಕೊಟ್ಟಿದೆ, ಪ್ರತಿಯೊಬ್ಬ ಭಾರತೀಯ ನಾಗರಿಕರು ಸೇನೆಯಲ್ಲಿ 4 ವರ್ಷಗಳು ಸೇವೆ ಸಲ್ಲಿಸಿ ಬಂದರೆ ದೇಶದೊಳಗೆ ಇರುವ ತಾರತಮ್ಯಗಳು ನಿಂತು ಹೋಗುತ್ತವೆ, ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟು ಹೆಚ್ಚುತ್ತದೆ, ನನ್ನ ದೇಶದ ಬಗ್ಗೆ ಗೌರವ, ಪ್ರೀತಿ ಹೆಚ್ಚುತ್ತದೆ ಎಂದು ನುಡಿದರು.

ನಾನು ಮದುವೆ ಆದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಸಮಯವಾಗಿದ್ದ ಕಾರಣ ಮದುವೆ ಆದ ಮರು ದಿನವೇ ಡ್ಯೂಟಿಗೆ ಹೋಗುವ ಪರಿಸ್ಥಿತಿ ಬಂತು ಎಂದು ಮಹದೇವಸ್ವಾಮಿ ಸ್ಮರಿಸಿದರು.

ಸೇನೆ ಸೇರಲು ಸೈನಿಕ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ, ನಮ್ಮ ದಕ್ಷಿಣ ಭಾರತದಲ್ಲಿ ಸೈನಿಕರು ಕಡಿಮೆ ಇರೋದನ್ನು ನಾವು ನೋಡುತ್ತಿದ್ದೇವೆ, ನಿಮ್ಮಂತ ಯುವಪೀಳಿಗೆ ಎತ್ತೆಚ್ಚುಕೊಳ್ಳಬೇಕು, ಹೆಚ್ಚಿನ ಮಕ್ಕಳು ಸೇನೆಗೆ ಸೇರಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ ರವರು ಮಾತನಾಡಿ, ಸೈನಿಕರಿಗೆ 3 ಜೀವ, ಸೇನೆಗೆ ಹೋಗುವ ಮುಂಚೆ ಒಂದು, ಸೇನೆಗೆ ಹೋದ ನಂತರ ಮತ್ತೊಂದು, ಜೀವಂತವಾಗಿ ಮರಳಿ ನಿವೃತ್ತನಾಗಿ ಬಂದರೆ 3 ನೆ ಜೀವ ಆಗಿರುತ್ತದೆ ಎಂದು ಹೇಳಿದರು.

ಸೈನಿಕರು ಸಮಾಜದಲ್ಲಿ ಬೆರೆಯುವುದು ಬಹಳ ಕಷ್ಟಕರ, ಸಮಾಜವೇ ನಿವೃತ್ತ ಸೈನಿಕರಿಗೆ ಸಹಕರಿಸಬೇಕು ಎಂದು ಕೋರಿದರು.

ಮುಂದೊಂದು ದಿನ ಸೇನೆಯಿಂದ ನಮ್ಮ ಕ್ಷೇತ್ರದಲ್ಲಿ ಯಾರಾದರೂ ನಿವೃತ್ತರಾದರೇ ಮತ್ತು ಹುತಾತ್ಮರಾಗಿದ್ದರೆ ನಮ್ಮ ಸೈನಿಕ ಅಕಾಡೆಮಿಗೆ ತಿಳಿಸಿ ನಾವು ಅಂತಹ ಮಹಾನ್ ವ್ಯಕ್ತಿಗೆ ಗೌರವಿಸುತ್ತೇವೆ ಎಂದು ಮನವಿ ಮಾಡಿದರು.

ಈ‌ ವೇಳೆ ಸಹ ಸಂಸ್ಥಾಪಕರಾದ ಅನಿತಾ ಶ್ರೀಧರ, ಅಧ್ಯಾಪಕರಾ್ ಪ್ರಫುಲ್ಲ ಕುಮಾರ್, ಸಿಬ್ಬಂದಿಗಳು, ಸಹ ಸಿಬ್ಬಂದಿಗಳು ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಸೈನಿಕ ಅಕಾಡೆಮಿಯಲ್ಲಿ ನಿವೃತ್ತ ಸೇನಾಧಿಕಾರಿಗೆ ಹೂಮಳೆ ಸುರಿಸಿ ಸನ್ಮಾನ Read More

ನಿರಂತರ ಪ್ರಯತ್ನ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ:ಮಾಜಿ ಕಮಾಂಡೊ ಶ್ರೀಧರ

ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ತರಬೇತಿ ಪಡೆದು ಭಾರತೀಯ ಅರೆ ಸೇನಾಪಡೆಗೆ ಆಯ್ಕೆ ಆಗಿ ಡ್ಯೂಟಿಗೆ ಹೊರಡಲು ತಯಾರಾಗಿರುವವರನ್ನು‌ ಸನ್ಮಾನಿಸಿ ಗೌರವಿಸಲಾಯಿತು.

ಶರಣ್, ಸೋಮರಪೇಟೆ (ಸಿ ಆರ್ ಪಿ ಎಫ್), ನಟೇಶ್, ನೆಲಮಂಗಲ (ಬಿ ಎಸ್ ಎಫ್), ಸುಜಿತ್, ಹುಣಸೂರು (ಸಿ ಐ ಎಸ್ ಎಫ್), ಶ್ರೇಯಸ್, ಹುಣಸೂರು (ಸಿ ಐ ಎಸ್ ಎಫ್)ಈ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ ಅವರು ಮಾತನಾಡಿ, ಇತ್ತೀಚಿನ ಆಕಾಂಕ್ಷಿಗಳು ಸುಲಭವಾಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಅದು ಅಸಾಧ್ಯ, ಮೊದಲು ರಾಷ್ಟ್ರ ಭಕ್ತಿ ಇರಬೇಕು, ಎರಡನೆಯದು ಸೇವಾ ಮನೋಭಾವನೆ ಇರಬೇಕು, ಮೂರನೆಯದು ನಿರಂತರ ಪ್ರಯತ್ನ ಪರಿಶ್ರಮ ಪಡಬೇಕು ಆಗಲೇ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.

ಅರೆ ಸೇನಾಪಡೆಗೆ ಆಯ್ಕೆ ಆಗಿ ಸೇವೆಗೆ ತೆರಳುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರುಗಳಾದ ಸ್ವಾಮಿ ಗೌಡ, ಪ್ರಫುಲ್ಲ ಕುಮಾರ್ ಸಿಬ್ಬಂದಿಗಳು, ಸಹ ಸಿಬ್ಬಂದಿಗಳು ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ನಿರಂತರ ಪ್ರಯತ್ನ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ:ಮಾಜಿ ಕಮಾಂಡೊ ಶ್ರೀಧರ Read More

ಸೈನಿಕ ಅಕಾಡೆಮಿಯಲ್ಲಿಮೇಜರ್ ಸಂದೀಪ್ ಉನ್ನಿಕೃಷ್ಣನ್‌ ಸ್ಮರಣೆ

ಮೈಸೂರು: ಮೈಸೂರು ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತನ್ನ ಕುಟುಂಬ, ಸ್ನೇಹಿತರು, ಬಂದುಗಳು ಎಲ್ಲವನ್ನೂ ತೊರೆದು ಪಾಕಿಸ್ತಾನಿ ಉಗ್ರರರನ್ನು ಹೊಡೆದುರುಳಿಸಿ, ನೂರಾರು ಜನರನ್ನು ರಕ್ಷಣೆ ಮಾಡಿದ ವೀರ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಸ್ಮರಿಸಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ ಅವರು ಮಾತನಾಡಿ, ನಾನು
ಎನ್ ಎಸ್ ಜಿ ಬ್ಲ್ಯಾಕ್ ಕ್ಯಾಟ್‌ ಕಮಾಂಡೊ ನಲ್ಲಿ ಇದ್ದಾಗ ಸಂದೀಪ್ ಉನ್ನಿಕೃಷ್ಣನ್ ಅವರು ನಮಗೆ ಟ್ರೈನಿಂಗ್ ಆಫೀಸರ್ ಆಗಿದ್ದರು ಎಂದು ಸ್ಮರಿಸಿದರು.

ಅವರ ಜೊತೆ ಇದ್ದು ತರಬೇತಿ ಪಡೆದಿದ್ದು ನನಗೆ ಅತ್ಯಂತ ಖುಷಿಯ ವಿಚಾರ. 26/11 ಮುಂಬೈ ತಾಜ್ ಹೋಟೆಲ್ ನಲ್ಲಿ ನಾನು ಒಂದು ಟೀಂ ನಲ್ಲಿ ಕಾರ್ಯಾಚರಣೆ ಮಾಡಿದ್ದು ಹೆಮ್ಮೆ ಎನಿಸಿದೆ, ಇಂತಹ ನಿಜವಾದ ವೀರರನ್ನು ನಾವು ನೆನೆಸುವುದರಿಂದ ನಮಗೆಲ್ಲರಿಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕರು ಅನಿತಾ ಶ್ರೀಧರ, ಅಧ್ಯಾಪಕರು ರವಿ ಎಸ್ ಎಸ್, ಸಿಬ್ಬಂದಿಗಳು, ಸಹ ಸಿಬ್ಬಂದಿಗಳು ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಉಪಸ್ಥಿತತ ರುದ್ದರು.

ಸೈನಿಕ ಅಕಾಡೆಮಿಯಲ್ಲಿಮೇಜರ್ ಸಂದೀಪ್ ಉನ್ನಿಕೃಷ್ಣನ್‌ ಸ್ಮರಣೆ Read More

ಸೈನಿಕ ಅಕಾಡೆಮಿಯಲ್ಲಿ ಮಕ್ಕಳ ದಿನಾಚರಣೆ: ಮಕ್ಕಳಿಗೆ ಪುಸ್ತಕ ವಿತರಣೆ

ಮೈಸೂರು: ಮೈಸೂರಿನ ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಇಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.

ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ
ತರಬೇತಿ ಪಡೆದುಕೊಳ್ಳುತ್ತಿರುವ ಎಲ್ಲಾ ಮಕ್ಕಳಿಗೂ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಪುಸ್ತಕಗಳನ್ನು ವಿತರಿಸಲಾಯಿತು.

ಈಗಿನ ಮಕ್ಕಳಿಗೆ ಅವಶ್ಯಕತೆ ಇರುವ ಪುಸ್ತಕಗಳನ್ನು ವಿತರಿಸಲಾಯಿತು, ಇದೆ ಸಂದರ್ಭದಲ್ಲಿ 25 ವರ್ಷಗಳಿಂದ ಹೂಟಗಳ್ಳಿ ಪ್ರದೇಶದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಜನರ ಆರೋಗ್ಯ ಕಾಪಾಡಿರುವ ಡಾ. ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೈನಿಕ ಅಕಾಡೆಮಿಯ ಸಂಸ್ಥಾಪಕರು ಹಾಗೂ ಕಮಾಂಡೋ ಶ್ರೀಧರ ಸಿ ಎಂ ಅವರು ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು, ಭಾರತದೇಶದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಆಗಿ ಸುಮಾರು 17 ವರ್ಷಗಳ ಕಾಲ ದೇಶ ಸೇವೆ ಜನ ಸೇವೆ ಮಾಡಿದ ಭಾರತ ರತ್ನ ಜವಾಹರ್ ಲಾಲ್ ನೆಹರು ಜೀ ಅವರು ಮಕ್ಕಳನ್ನು ಅಪಾರ ಪ್ರೀತಿ ಮಾಡುತಿದ್ದರು. ಮಕ್ಕಳನ್ನು ಸುಂದರವಾದ ಹೂವಿನ ತೋಟಕ್ಕೆ ಹೋಲಿಕೆ ಮಾಡುತಿದ್ದರು, ಅವರ ಜನ್ಮದಿನದ ನೆನಪಿಗೆ ಈ ಮಕ್ಕಳ ದಿನಾಚಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಸೈನಿಕ ಅಕಾಡೆಮಿಯಲ್ಲಿ ಮಕ್ಕಳ ದಿನಾಚರಣೆ: ಮಕ್ಕಳಿಗೆ ಪುಸ್ತಕ ವಿತರಣೆ Read More

ಜಲ ಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೈನಿಕ ಅಕಾಡೆಮಿಯಿಂದ ಗೌರವ

ಮೈಸೂರು: ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಯಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆ ವತಿಯಿಂದ ಭಾರತೀಯ ಜಲ ಸೇನೆಗೆ ಆಯ್ಕೆ ಆಗಿರುವ ಸೈನಿಕ ಅಕಾಡೆಮಿ ಅಭ್ಯರ್ಥಿಗಳಿಗೆ ಗೌರವ ಸಲ್ಲಿಸಲಾಯಿತು.

ಬೆಳವಾಡಿ ಗ್ರಾಮದ ಅಬಿನ್, ಹುಣಸೂರಿನ ನಿಜಾಮ್ ಎಂ ಐ, ಕುಶಾಲನಗರದ ಅಂಟೊರೊಸ್ ಅವರಿಗೆ ‌ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಕಮಾಂಡೋ ಶ್ರೀಧರ ಸಿ ಎಂ ಅವರು ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶ್ರೀಧರ್, ನಮ್ಮ ದೇಶದ ಸೈನಿಕರು ಅಂದರೆ ಭೂ ಸೇನೆಯ ಸೈನಿಕರೆಂದು ತಿಳಿಯುತ್ತಾರೆ, ಆದರೆ ಸೇನೆಯಲ್ಲಿ 3 ವಿಭಾಗದ ಸೈನಿಕರು ಇರುತ್ತಾರೆ ಎಂದು ಹೇಳಿದರು.

ಭೂ ಸೇನೆ, ವಾಯು ಸೇನೆ ಮತ್ತು ಜಲ ಸೇನೆ. ಈ 3 ವಿಭಾಗಕ್ಕೂ ಸೇನೆ (ಮಿಲಿಟರಿ) ಎಂದು ಕರೆಯಲಾಗುತ್ತದೆ, ಸೈನಿಕ ಅಕಾಡೆಮಿಯಲ್ಲಿ ನೀಡುತ್ತಿರುವ ತರಬೇತಿಯಿಂದ ಈ ಬಾರಿ ಜಲ ಸೇನೆಗೂ ಆಯ್ಕೆ ಆಗಿರುವುದು ಬಹಳ ಸಂತೋಷ ತಂದಿದೆ, ದೇಶ ಸೇವೆ ಈಶ ಸೇವೆ ಎಂದು ಸೇವೆಗೆ ತೆರಳುತ್ತಿರುವ ಯುವ ಸೈನಿಕರಿಗೆ ಗೌರವ ಸನ್ಮಾನ ಮಾಡವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರುಗಳು, ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಜಲ ಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೈನಿಕ ಅಕಾಡೆಮಿಯಿಂದ ಗೌರವ Read More

ಸೈನಿಕ ಅಕಾಡೆಮಿ ವತಿಯಿಂದ ರಾಜ್ಯೋತ್ಸವ

ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಿಲಿಕಾನ್ ವ್ಯಾಲಿ ಬಡಾವಣೆ ಸದಸ್ಯರು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳ ಸಮ್ಮುಖದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರೂ ಕಮಾಂಡೋ ಶ್ರೀಧರ ಸಿ ಎಂ ಅವರು ಧ್ವಜಾರೋಹಣ ನೆರವೇರಿಸಿದರು.

ಬೆಳವಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಜೈಕಾರ ಕೂಗಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾ ಪಟುಗಳಿಗೆ ಪದಕ ಮತ್ತು ಬಹುಮಾನ ವಿತರಣೆ ಮಾಡಿ ಭವಿಷ್ಯದ ಸೈನಿಕರನ್ನು ಪ್ರೋತ್ಸಾಹಿಸಲಾಯಿತು.

ಸಮಾರಂಭದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರಾದ ಸಂತೋಷ ಕುಮಾರ್, ಸ್ವಾಮಿಗೌಡ, ಸಹ ಸಿಬ್ಬಂದಿಗಳು, ಬಡಾವಣೆಯ ಸದಸ್ಯರು ಬೊರೇಗೌಡರು, ಪ್ರಭುದೇವ್, ದೀಪು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಮತ್ತು ನಾಡ ಪ್ರೇಮಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸೈನಿಕ ಅಕಾಡೆಮಿ ವತಿಯಿಂದ ರಾಜ್ಯೋತ್ಸವ Read More